ನಮಸ್ಕಾರ ಸ್ನೇಹಿತರೇ ಸರ್ಕಾರಿ ಉದ್ಯೋಗಗಳ ಬರ್ತಿಗೆ ಸಂಬಂಧಿಸಿದಂತೆ ಕರ್ನಾಟಕ ಸರ್ಕಾರವು ಮಹತ್ವದ ಬದಲಾವಣೆಯನ್ನು ತಂದಿದ್ದು ಇನ್ನು ಮುಂದೆ ಸರ್ಕಾರಿ ಉದ್ಯೋಗಗಳನ್ನು ರಾಜ್ಯದಲ್ಲಿ ಪಡೆಯಬೇಕಾದರೆ ಈ ಪ್ರಮಾಣ ಪತ್ರವನ್ನು ಕಡ್ಡಾಯವಾಗಿ ಹೊಂದಿರಲೇಬೇಕು. ಹಾಗಾದರೆ ಯಾವ ಪ್ರಮಾಣ ಪತ್ರ ಹೊಂದಿರಬೇಕು ಎಂಬುದರ ಬಗ್ಗೆ ಇದೀಗ ನೀವು ತಿಳಿದುಕೊಳ್ಳಬಹುದು.
ಎಸ್ ಎಸ್ ಎಲ್ ಸಿ ಶೈಕ್ಷಣಿಕ ಅರ್ಹತೆ ಕಡ್ಡಾಯ :
ಜವಾನ್ ದಲಾಯತ್ ಸೇರಿದಂತೆ ಕರ್ನಾಟಕ ಸರ್ಕಾರವು ಯಾವುದೇ ಗ್ರೂಪ್ ಡಿ ಹುದ್ದೆಗಳ ನೇಮಕಾತಿಗೆ ಇದೀಗ ಎಸ್ ಎಸ್ ಎಲ್ ಸಿ ಪ್ರಮಾಣ ಪತ್ರವನ್ನು ಕಡ್ಡಾಯಗೊಳಿಸಿದೆ. ಏನಿಟ್ಟಿನಲ್ಲಿ ಜೂನ್ ಒಂದರಂದು ರಾಜ್ಯಪಾತ್ರದಲ್ಲಿ ಹೊರಡಿಸಿದ ಅಧಿಸೂಚನೆಯಲ್ಲಿ ಕರ್ನಾಟಕ ನಾಗರೀಕ ಸೇವಾ ಕಾಯ್ದೆ 1978 ತಿದ್ದುಪಡಿ ಮಾಡಲಾಗಿದೆ. ಗ್ರೂಪ್ ಸಿ ಹುದ್ದೆಗಳ ನೇರ ನೇಮಕಾತಿಯ ಸಂದರ್ಶನವನ್ನು ರಾಜ್ಯ ನಾಗರಿಕ ಸೇವೆಗಳಲ್ಲಿ ರದ್ದುಗೊಳಿಸಲಾಗಿದ್ದು ರಾಜ್ಯ ಸರ್ಕಾರವು ಕಾಯಂ ನೇಮಕಾತಿ ಅಥವಾ ಭರ್ತಿಗೆ ಐದು ವರ್ಷಗಳ ಪ್ರವೇಶನರಿ ಅವಧಿಯನ್ನು ಮಾನದಂಡವಾಗಿ ಪರಿಗಣಿಸುವ ನಿಯಮವನ್ನು ಬದಲಾವಣೆಗೊಳಿಸಿದ್ದು ರಾಜ್ಯ ನಾಗರಿಕ ಸೇವೆಗಳಿಗೆ ಹಾಗೂ ಗ್ರೂಪ್ ಡಿ ಹುದ್ದೆಗಳಿಗೆ ನೇಮಕಾತಿಗಾಗಿ ಎಸ್ ಎಸ್ ಎಲ್ ಸಿ ಗಿಂತ ಕಡಿಮೆ ಶೈಕ್ಷಣಿಕ ಅರ್ಹತೆಯನ್ನು ರಾಜ್ಯ ಸರ್ಕಾರವು ಪರಿಗಣಿಸುವುದಿಲ್ಲ ಎಂದು ಸ್ಪಷ್ಟಪಡಿಸಿದೆ.
ಇದನ್ನು ಓದಿ : ಉಚಿತ ಬಸ್ ಪ್ರಯಾಣ ಮಾಡುವವರಿಗೆ ಹೊಸ ನಿಯಮ : ಸರ್ಕಾರದಿಂದ ಮಹತ್ವದ ಬದಲಾವಣೆ
ಶಾಲಾ ಶಿಕ್ಷಕರಿಗೆ ಬಿಗ್ ರಿಲೀಫ್ :
ಅಧಿವೇಶನ ಮುಗಿಯುವ ಮುನ್ನ ಕರ್ನಾಟಕ ಶಿಕ್ಷಣ ಸಚಿವ ರಾಧಾ ಮಧು ಬಂಗಾರಪ್ಪನವರು ಪ್ರೌಢ ಶಾಲಾ ಶಿಕ್ಷಕರ ಪದವಿ ಪೂರ್ವ ಕಾಲೇಜು ಉಪನ್ಯಾಸಕರ ಹುದ್ದೆಯ ಅರ್ಹತಾ ಪರೀಕ್ಷೆಯನ್ನು ರದ್ದುಪಡಿಸಲು ಸಭೆ ನಡೆಸಲಾಗುತ್ತದೆ ಎಂದು ತಿಳಿಸಿದ್ದಾರೆ. ಇದರಿಂದಾಗಿ ಶಾಲಾ ಶಿಕ್ಷಕರಿಗೆ ಬಿಗ್ ರಿಲೀಫ್ ಸಿಕ್ಕಿದಂತಾಗಿದೆ ಎಂದು ಹೇಳಬಹುದು. ಪ್ರೌಢಶಾಲಾ ನೇಮಕಾತಿ ಸಂದರ್ಭದಲ್ಲಿ ಶೇಕಡ 50ರಷ್ಟು ಹುದ್ದೆಗಳನ್ನು ನೇರ ನೇಮಕಾತಿಯಲ್ಲಿ ಹಾಗೂ ಪ್ರಾಥಮಿಕ ಶಾಲಾ ಶಿಕ್ಷಕರಿಗೆ ಉಳಿದ ಶೇಕಡ 50ರಷ್ಟು ಭಡ್ತಿ ನೀಡಿ ಭರ್ತಿ ಮಾಡಲಾಗುತ್ತದೆ ಎಂದು ತಿಳಿಸಿದರು. ಶೇಕಡ 75 ರಷ್ಟು ಹುದ್ದೆಗಳನ್ನು ಪ್ರೌಢಶಾಲಾ ಶಿಕ್ಷಕರಿಗೆ ಭರ್ತಿ ಮಾಡಲಾಗುತ್ತಿದೆ ಎಂದು ಹೇಳಿದರು.
ಹೀಗೆ ಇನ್ನು ಮುಂದೆ ಸರ್ಕಾರಿ ಉದ್ಯೋಗಗಳನ್ನು ಪಡೆದುಕೊಳ್ಳಬೇಕಾದರೆ ಎಸ್‍ಎಲ್‍ಸಿ ಪ್ರಮಾಣ ಪತ್ರ ಕಡ್ಡಾಯವಾಗಿದ್ದು ಈ ಪ್ರಮಾಣ ಪತ್ರ ಇಲ್ಲದಿದ್ದರೆ ಯಾವುದೇ ರೀತಿಯ ಸರ್ಕಾರಿ ಉದ್ಯೋಗಗಳು ಸಿಗುವುದಿಲ್ಲ. ಈ ಮಾಹಿತಿಯನ್ನು ಪ್ರತಿಯೊಬ್ಬರಿಗೂ ಕೂಡ ಶೇರ್ ಮಾಡಿ ಧನ್ಯವಾದಗಳು.
ಇತರೆ ವಿಷಯಗಳು :
- ರೈತರು ಸರ್ಕಾರದ ಹಣ ವಾಪಸ್ ಕೊಡಬೇಕು ಇಲ್ಲ ಅಂದ್ರೆ ನೋಟಿಸ್ ಮನೆಗೆ ಬರುತ್ತೆ
- ಕರ್ನಾಟಕದಲ್ಲಿ 2 ದಿನ ಭಾರಿ ಮಳೆ : ಸತತವಾಗಿ ಸುರಿಯಲಿದೆ ಮಳೆ