rtgh

ಬೆಳ್ಳುಳ್ಳಿ ಬೆಲೆ ಗಗನಕ್ಕೆ; ಜನಸಾಮಾನ್ಯರ ಕಿಸೆಗೆ ಕತ್ತರಿ.! ಎಲ್ಲೆಲ್ಲಿ ಎಷ್ಟೆಷ್ಟು ರೇಟ್

ಹಲೋ ಸ್ನೇಹಿತರೇ, ಬೆಳ್ಳುಳ್ಳಿ ದರ ಭಾರೀ ಹೆಚ್ಚಳ, ಗ್ರಾಹಕರು ದರ ಕೇಳಿ ಹೌಹಾರುವಂತಾಗಿದೆ. ಇಂದಿನ ದರ ಎಲ್ಲೆಲ್ಲಿ ಎಷ್ಟಿದೆ ಎಂಬುದನ್ನು ನಮ್ಮ ಲೇಖನದಲ್ಲಿ ತಿಳಿಯಿರಿ.

garlic price today

ಬೆಳ್ಳುಳ್ಳಿ ಆಮದು ಪ್ರಮಾಣ ತೀವ್ರ ಕಡಿಮೆಯಾಗಿರುವುದು ದರ ಹೆಚ್ಚಲು ಪ್ರಮುಖ ಕಾರಣವಾಗಿದೆ. ಇದರಿಂದ 250 ಗ್ರಾಂ ಬೆಳ್ಳುಳ್ಳಿ ದರ 100-120 ರೂ. ತಲುಪಿದ್ದು, ಕೆಜಿ ಬೆಳ್ಳುಳ್ಳಿಯನ್ನು 400 ರಿಂದ 500 ರೂ. ವ್ಯಾಪಾರಿಗಳು ಮಾರಾಟ ಮಾಡುಲಾಗುತ್ತಿದೆ.

ವಿಜಯಪುರ: ಬೆಳ್ಳುಳ್ಳಿಗೆ ಬಂಗಾರದ ಬೆಲೆ ಬಂದಿದೆ ಗ್ರಾಹಕರು ಕಂಗಾಲು. ತರಕಾರಿ ಮಾರುಕಟ್ಟೆಗಳಲ್ಲಿ ಬೆಳ್ಳುಳ್ಳಿ KGಗೆ 400 ರಿಂದ 500 ರೂ.ಗೆ ಮಾರಾಟವಾಗುತ್ತಿದೆ. ದಿನದಿಂದ ದಿನಕ್ಕೆ ಬೆಲೆ ಬಂಗಾರದ ಬೆಲೆ ಪಡೆಯುತ್ತಿದೆ, ಜನಸಮಾನ್ಯರ ಜೇಬಿಗೆ ಬಲು ಭಾರವಾಗುತ್ತಿದೆ.

ಹವಾಮಾನದ ವೈಪರಿತ್ಯ, ಮಳೆ ಕಡಿಮೆಯಿಂದ ಬೆಳ್ಳುಳ್ಳಿ ಇಳುವರಿ ಕಡಿಮೆ ಬಂದಿದೆ. ನಿತ್ಯ ಹೊಟೇಲ್‌, ರೆಸ್ಟೋರೆಂಟ್‌, ಡಾಬಾ, ಖಾನಾವಾಳಿಗಳಲ್ಲಿ ಬೆಳ್ಳುಳ್ಳಿ ಬಳಕೆ ಹೆಚ್ಚಾಗುತ್ತಿದೆ. ಆದರೆ ಈಗ ಬೆಲೆ ಹೆಚ್ಚಾಗಿರುವುದರಿಂದ ಅವುಗಳ ಮಾಲೀಕರು ಕೈ, ಕೈ ಹಿಚುಕಿಕೊಳ್ಳುವಂತಾಗಿದೆ.


ಬೆಲೆ ದುಪ್ಪಟ್ಟು

ಕರ್ನಾಟಕದಲ್ಲಿ ಹೆಚ್ಚಿಗೆ ಬೆಳ್ಳುಳ್ಳಿ ಬೆಳೆಯುವುದಿಲ್ಲ. ಮಹಾರಾಷ್ಟ್ರ, ಮಧ್ಯಪ್ರದೇಶ, ರಾಜಸ್ಥಾನದಲ್ಲಿ ಹೆಚ್ಚಿಗೆ ಆಮದು ಆಗುತ್ತಿದೆ. ಆದರೆ ಆಮದು ಪ್ರಮಾಣ ಬಹಳಷ್ಟು ಕಡಿಮೆಯಿದೆ. ವಿಶೇಷವಾಗಿ ಡಿಸೆಂಬರ್‌ ಅಂತ್ಯದಿಂದ ಜನವರಿವರೆಗೆ ದರ ಏರಿಕೆಯಲ್ಲಿರುತ್ತದೆ. ಆದರೆ ಈ ಸಲ ತಿಂಗಳಂತ್ಯದಲ್ಲಿ ಬೆಳ್ಳುಳ್ಳಿ ದರ ದ್ವಿಗುಣಗೊಂಡಿದ್ದು 200 ರಿಂದ 400 ರೂ.ಗೆ ಜಂಪ್‌ ಆಗಿದೆ. ಕಾಲು KG ಗೆ 100 ರಿಂದ 120ರವರೆಗೆ ದರ ಸಿಗುತ್ತಿದ್ದು, ಸಗಟು ವ್ಯಾಪಾರಿಗಳಲ್ಲಿಯೂ ಆತಂಕ ಸೃಷ್ಟಿ ಮಾಡಿದೆ.

ಸರ್ಕಾರ ಬೆಲೆ ನಿಯಂತ್ರಿಸಲಿ

ಬೆಳ್ಳುಳ್ಳಿ ದರ ಹೆಚ್ಚಾಗಿರುವುದರಿಂದ ಬೆಳೆ ಬೆಳೆದ ರೈತರಿಗೇನು ಲಾಭವಾಗುತ್ತಿಲ್ಲ. ಸಗಟು ವ್ಯಾಪಾರಿಗಳು ಬಹಳಷ್ಟು ದಾಸ್ತಾನು ಮಾಡಿಕೊಂಡು ಕೃತಕ ಅಭಾವ ಸೃಷ್ಠಿಮಾಡಿದ್ದಾರೆ ಎಂಬ ಗುಮಾನಿ ಮಾರುಕಟ್ಟೆಯಲ್ಲಿ ಸೃಷ್ಟಿಯಾಗಿದ್ದು. ದಲ್ಲಾಳಿಗಳ ಹೊಡೆತಕ್ಕೆ ವ್ಯಾಪಾರಿಗಳು ಹೊರೆಯನ್ನು ಅನುಭವಿಸುತ್ತಿದ್ದಾರೆ. ಸರ್ಕಾರ ತಕ್ಷಣವೇ ಮಧ್ಯೆ ಪ್ರವೇಶಿಸಿ ಬೆಳ್ಳುಳ್ಳಿ ದರವನ್ನು ನಿಯಂತ್ರಣಕ್ಕೆ ತರಬೇಕು . ಮಾರುಕಟ್ಟೆಯಲ್ಲಿ ಅನಧಿಕೃತವಾಗಿ ದಾಸ್ತಾನಾಗಿರುವುದನ್ನು ತಪ್ಪಿಸಲು APMC ಅಧಿಕಾರಿಗಳು ಮುಂದಾಗಬೇಕಿದೆ .

SSLC, PUC ಪರೀಕ್ಷೆ ವೇಳಾಪಟ್ಟಿ ಬಿಡುಗಡೆ.!‌ ವಿದ್ಯಾರ್ಥಿಗಳಿಗೆ ಸಜ್ಜಾಗಲು ಸೂಚನೆ

ಸ್ವಂತ ಮನೆ ಕಟ್ಟಲು ಸರ್ಕಾರದ ಸಹಾಯ ಹಸ್ತ.! ಕೂಡಲೇ ಅಪ್ಲೇ ಮಾಡಿ

Leave a Comment