ಹಲೋ ಸ್ನೇಹಿತರೇ, ಭೂರಹಿತ ಸಾಗುವಳಿದಾರರ ಜಮೀನನ್ನು ಸಕ್ರಮೀಕರಣಗೊಳಿಸುವಲ್ಲಿ ಸಾಕಷ್ಟು ಅಕ್ರಮಗಳು ನಡೆದಿರುವುದು ತಿಳಿದು ಬಂದಿರುವ ಹಿನ್ನೆಲೆಯಲ್ಲಿ, ಎಲ್ಲಾ ತಾಲೂಕುಗಳಲ್ಲೂ ಶೀಘ್ರದಲ್ಲಿಯೇ ಬಗರ್ ಹುಕುಂ ಸಮಿತಿಗಳನ್ನು ರಚಿಸುವ ಮೂಲಕ ಮುಂದಿನ 8 ತಿಂಗಳಲ್ಲಿ ಎಲ್ಲಾ ಪ್ರಕ್ರಿಯೆಗಳನ್ನು ಮುಗಿಸಲಾಗುವುದು ಎಂದು ಕಂದಾಯ ಸಚಿವರಾದ ಕೃಷ್ಣಬೈರೇಗೌಡರವರು ತಿಳಿಸಿದ್ದಾರೆ.
ಈ ಮೂಲಕ ಬಗರ್ ಹುಕುಂ ಜಮೀನು ಸಕ್ರಮ ನಿರೀಕ್ಷೆಯಲ್ಲಿದ್ದ ರೈತರಿಗೆ ಸಿಹಿಸುದ್ದಿ:
ನಗರದಲ್ಲಿ ಮಂಗಳವಾರ ಸುದ್ದಿಗೋಷ್ಠಿ ನಡೆಸಿ ಮಾತನಾಡಿದಂತ ಅವರು, ಬಗರ್ ಹುಕುಂ ಸಾಗುವಳಿದಾರರು ಸಕ್ರಮಕ್ಕಾಗಿ ಈವರೆಗೆ 9.29 ಲಕ್ಷ ಅರ್ಜಿ ಸಲ್ಲಿಸಿದ್ದಾರೆ. ಸಕ್ರಮೀಕರಣಗೊಳಿಸಲು ಪರಿಶೀಲನೆ ನಡೆಸಿದಾಗ ಹಲವು ಅಕ್ರಮಗಳು ಬಯಲಾಗಿವೆ ಎಂದು ತಿಳಿಸಿದ್ದಾರೆ.
ಒಬ್ಬನೇ 25 ಅರ್ಜಿಗಳನ್ನು ಹಾಕಿರುವುದು ಮತ್ತು ಸಾಗುವಳಿ ಮಾಡದೆ ಇರುವವರು ಅರ್ಜಿ ಹಾಕಿರುವುದು ಸೇರಿದಂತೆ ವ್ಯವಸ್ಥೆಯಲ್ಲಿ ಹಲವು ನ್ಯೂನ್ಯತೆಗಳಿದ್ದಾವೆ. ಹಾಗೂ ಅವುಗಳನ್ನು ಸರಿ ಪಡಿಸಲು ಹೊಸದಾಗಿ ಬಗರ್ ಹುಕುಂ ಸಮಿತಿಗಳನ್ನು ರಚನೆ ಮಾಡಲಾಗುವುದು. ಈಗಾಗಲೇ 50 ಪ್ರಸ್ತಾವನೆಗಳು ಬಂದಿದ್ದು, ಅಷ್ಟೂ ಸಮಿತಿಗಳ್ನು ರಚಿಸಲಾಗುವುದು ಎಂದು ತಿಳಿಸಿದ್ದಾರೆ.
ವಿದ್ಯಾರ್ಥಿಗಳಿಗೆ ಬಂಪರ್ ಲಾಟ್ರಿ!! ಡಿಸೆಂಬರ್‌ನಲ್ಲಿ ಇಷ್ಟೊಂದು ದಿನ ಶಾಲೆಗಳು ಕ್ಲೋಸ್, ರಜಾದಿನಗಳ ವಿವರ ಇಲ್ಲಿದೆ
ಅರ್ಹರನ್ನು ಗುರುತಿಸಿ ಸೂಕ್ತ ಕ್ರಮ ಕೈಗೊಳ್ಳಲಾಗುವುದು. ತಹಶೀಲ್ದಾರ್ ಅವರು ಜಮೀನು ಮಹಜರ್ ಮಾಡಿ ಸಾಗುವಳಿ ಖಾತ್ರಿಪಡಿಸಲಿದ್ದಾರೆ. ಇನ್ಮುಂದೆ ಬಗರ್ ಹುಕುಂ ಸಮಿತಿ ಸಭೆಗಳನ್ನು ಗಣಕೀಕೃತಗೊಳಿಸಲಾಗುತ್ತದೆ. ಹಾಜರಾತಿ ಬಯೋಮೆಟ್ರಿಕ್ ಮೂಲಕ ಖಾತ್ರಿ ಪಡಿಸಿಕೊಳ್ಳಲಾಗುತ್ತದೆ. ಅಕ್ರಮಗಳನ್ನು ತಡೆಯಲು ಈ ಕ್ರಮ ಅನುಸರಿಸಿಸಲಾಗುತ್ತದೆ ಎಂದರು.
ಇತರೆ ವಿಷಯಗಳು:
ಪಡಿತರ ಚೀಟಿದಾರರಿಗೆ ದೇಶಾದ್ಯಂತ ಹೊಸ ನಿಯಮ ಜಾರಿ!! ಹೆಸರು ಲಿಂಕ್ ಆದವರಿಗೆ ಮಾತ್ರ ಇಷ್ಟು ಹಣ ಜಮಾ
ಗೃಹಲಕ್ಷ್ಮಿ ಯೋಜನೆಯಲ್ಲಿ ಮತ್ತೊಂದು ಬಿಗ್ ಅಪ್ಡೇಟ್.! ಹಣ ಪಡೆಯದ ಮಹಿಳೆಯರು ತಕ್ಷಣ ಈ ಕೆಲಸ ಮಾಡಿ