rtgh

ಯುವನಿಧಿ ಫಲಾನುಭವಿಗಳ ಖಾತೆಗೆ ಹಣ ಜಮಾ.! ಈ ಪಟ್ಟಿಯಲ್ಲಿ ಹೆಸರಿದ್ದವರಿಗೆ ಮಾತ್ರ

ನಮಸ್ಕಾರ ಸ್ನೇಹಿತರೇ, ಇಂದಿನ ನಮ್ಮ ಈ ಲೇಖನಕ್ಕೆ ನಿಮಗೆಲ್ಲರಿಗೂ ಆತ್ಮೀಯವಾದ ಸ್ವಾಗತ, ರಾಜ್ಯ ಸರ್ಕಾರದ 5 ಗ್ಯಾರಂಟಿಗಳಲ್ಲಿ ಯುವನಿಧಿ ಯೋಜನೆಯು ಒಂದು. ಈ ಮಹತ್ವದ ಯೋಜನೆಯನ್ನು ಸಿಎಂ ಸಿದ್ದರಾಮಯ್ಯ ಅವರು ನಾಳೆ ಚಾಲನೆ ಮಾಡಲಿದ್ದಾರೆ. ಫಲಾನುಭವಿಗಳಿಗೆ ಮೊದಲ ತಿಂಗಳ ನಿರುದ್ಯೋಗ ಭತ್ಯೆ ಖಾತೆಗೆ ಜಮಾ ಆಗಲಿದೆ. ಇದರ ಬಗ್ಗೆ ಹೆಚ್ಚಿನ ಮಾಹಿತಿಯನ್ನು ನಾವು ನಿಮಗೆ ಈ ಲೇಖನದಲ್ಲಿ ನೀಡುತ್ತೇವೆ, ಮಿಸ್‌ ಮಾಡದೆ ಕೊನೆಯವರೆಗೂ ಓದಿ.

yuva nidhi yojana

ಸುದ್ದಿಗೋಷ್ಠಿಯಲ್ಲಿ ಈ ಕುರಿತು ಮಾತನಾಡಿದ ಸಚಿವ ಶರಣ ಪ್ರಕಾಶ್ ಪಾಟೀಲ, 2023 ರಲ್ಲಿ ಪದವಿ/ಡಿಪ್ಲೊಮಾ ಉತ್ತೀರ್ಣರಾದ ವಿದ್ಯಾರ್ಥಿಗಳಿಗೆ ಈ ಯೋಜನೆಯಡಿ 2 ವರ್ಷಗಳವರೆಗೆ ನಿರುದ್ಯೋಗ ಭತ್ಯೆಯನ್ನು ನೀಡಲಾಗುವುದು. ಅದರ ಜೊತೆಗೆ ಸ್ಕಿಲ್ ಕನೆಕ್ಟ್ ಪೋರ್ಟಲ್ ನಲ್ಲಿ ನೋಂದಣಿ ಮಾಡಿಕೊಂಡು ತರಬೇತಿಯನ್ನು ನೀಡಲಾಗುವುದು. ಈಗಿನ ಪರಿಸ್ಥಿತಿಯಲ್ಲಿ ನಿರುದ್ಯೋಗ ದೊಡ್ಡ ಸಮಸ್ಯೆಯಾಗಿದ್ದು ಉದ್ಯೋಗವನ್ನು ಒದಗಿಸುವುದು & ಉದ್ಯೋಗ ನೀಡುವುದು ಸರ್ಕಾರದ ಉದ್ದೇಶವಾಗಿದೆ ಎಂದರು.

ಪ್ರಸ್ತುತ 61,700 ಪದವಿ/ಡಿಪ್ಲೊಮಾ ಹೊಂದಿದ ವಿದ್ಯಾರ್ಥಿಗಳು ಈ ಯೋಜನೆಯಡಿ ಆನ್‌ಲೈನ್‌ನಲ್ಲಿ ನೋದಾಣಿ ಮಾಡಿಕೊಂಡಿದ್ದಾರೆ. 2022-23 ರಲ್ಲಿ ಒಟ್ಟು 5.29 ಲಕ್ಷ ವಿದ್ಯಾರ್ಥಿಗಳು ಪದವಿ/ಡಿಪ್ಲೊಮಾ ಮುಗಿಸಿದ್ದಾರೆ. ವಿದ್ಯಾರ್ಥಿಗಳ ವಿದ್ಯಾಭ್ಯಾಸ ಮುಗಿದು 6 ತಿಂಗಳಾದರೂ ಉದ್ಯೋಗ ಸಿಗದೆ ಮನೆಯಲ್ಲೇ ಇರುವವರು ಫಲಾನುಭವಿಗಳಾಗಲು ಅರ್ಹರಾಗಿರುತ್ತಾರೆ. ಹಾಗೆಯೇ ಇದರ ನೋದಾಣಿ ಪ್ರಕ್ರೀಯೆ ಉಚಿತ ಹಾಗೂ ಸರಳವಾಗಿದೆ ಎಂದು ಹೇಳಿದರು.

ಕಲಿಕೆ ಜೊತೆಗೆ ಕೌಶಲ್ಯಾಭಿವೃದ್ದಿ ಇಲಾಖೆ ಮೂಲಕ ಕೌಶಲ್ಯವನ್ನು ಕಲಿಸಲಾಗುತ್ತಿದ್ದು ಯುವಜನತೆಗೆ ನಿರುದ್ಯೋಗ ಸಮಸ್ಯೆ ಎದುರಿಸಲು ಸರ್ಕಾರ ಅವರಿಗೆ ಎಲ್ಲಾ ರೀತಿಯ ಸಹಕಾರ ನೀಡುತ್ತಿದೆ. ಇದರ ಸದುಪಯೋಗ ಎಲ್ಲಾ ಯುವಕರು ಪಡೆಯಬೇಕು ಎಂದರು.


ಇದನ್ನೂ ಸಹ ಓದಿ: ನಿರಾಶ್ರಿತರಿಗೆ ಸರ್ಕಾರದಿಂದ ಭರ್ಜರಿ ಗುಡ್‌ ನ್ಯೂಸ್!!‌ 1.2 ಲಕ್ಷ ನಿಮ್ಮ ಖಾತೆಗೆ ಜಮಾ

ಸಾಕ್ಷಾರತಾ ಇಲಾಖೆ ಮತ್ತು ಶಾಲಾ ಶಿಕ್ಷಣ ಹಾಗೂ ಜಿಲ್ಲಾ ಉಸ್ತುವಾರಿ ಸಚಿವರಾದ ಎಸ್.‌ ಮಧು ಬಂಗಾರಪ್ಪ ಮಾತನಾಡಿ, ಪದವಿ/ಡಿಪ್ಲೊಮಾ ಉತ್ತೀರ್ಣರಾದ ವಿದ್ಯಾರ್ಥಿಗಳು 6 ತಿಂಗಳಿನಿಂದ ಉದ್ಯೋಗ ಸಿಗದೆ ಮನೆಯಲ್ಲಿ ಇರುವವರು ಈ ಯೋಜನೆಯ ಫಲಾನುಭವಿಗಳಾಗುತ್ತಾರೆ. ಪದವಿ ಮುಗಿದ ನಂತರ ಮುಂದೇನು ಮಾಡುವುದು ಎಂದು ಯೋಚನೆ ಜೊತೆಗೆ ಆರ್ಥಿಕ ಇತ್ತಡವೂ ಇರುತ್ತದೆ. ಯುವನಿಧಿ ಯೋಜನೆಗೆ ನಿಮ್ಮ ಉದ್ಯೋಗಕ್ಕೆ ಸಹಾಯಕಾರಿ ಆಗುತ್ತದೆ. ಅರ್ಜಿ ಸಲ್ಲಿಸಲು ಈ ಯೋಜನೆಯ ಭತ್ಯೆ ಸಹಾಯ ಮಾಡುವುದರೊಂದಿಗೆ ಒಂದು ವಿಶ್ವಾಸ & ಭರವಸೆಯನ್ನು ಯುವಜನತೆಯಲ್ಲಿ ತುಂಬಲಿದೆ.

ಈ ಯೋಜನೆಯ ಅನುಷ್ಟಾನದ ಕುರಿತಾದ ವ್ಯವಸ್ಥೆಗಳು ಉತ್ತಮವಾಗಿ ನಡೆಯುತ್ತಿದೆ. ಅಕ್ಕಪಕ್ಕದ ಜಿಲ್ಲೆಗಳಾದ ಕಾರವಾರ, ಹಾವೇರಿ, ಚಿತ್ರದುರ್ಗ, ದಾವಣಗೆರೆ, ಚಿಕ್ಕಮಗಳೂರಿನಿಂದ ಸಹ ಯುವಕರು ಆಗಮಿಸಲಿದ್ದು 1.5 ಲಕ್ಷ ಜನ ಸೇರುವ ನಿರೀಕ್ಷೆ ಇದೆ.

ರಾಜ್ಯದಲ್ಲಿ ಗ್ಯಾರಂಟಿ ಯೋಜನೆಗಳು ಯಶಸ್ವಿಯಾಗಿ ಸಾಗುತ್ತಿವೆ. ಗೃಹಲಕ್ಷ್ಮಿ ಶೇ.93%, ಗೃಹಜ್ಯೋತಿ ಸುಮಾರು ಶೇ.90%, ಅನ್ನಭಾಗ್ಯ ಶೇ.96% ಬಳಕೆಯಾಗುತ್ತಿದ್ದು, ಶಕ್ತಿ ಯೋಜನೆ ಮುಕಾಂತರ 200 ಕೋಟಿ ಮಹಿಳೆಯರು ಕಳೆದ 5 ತಿಂಗಳಲ್ಲಿ ಉಚಿತ ಪ್ರಯಾಣ ಮಾಡಿದ್ದಾರೆ. ಈ ಯೋಜನೆಗಳಿಂದ ಒಂದು ಗ್ರಾಮ ಪಂಚಾಯಿತಿಗೆ ಒಂದು ತಿಂಗಳಿಗೆ ಸುಮಾರು 75 ಲಕ್ಷದವರೆಗೆ ಅನುದಾನ ಲಭ್ಯವಾಗುತ್ತಿದೆ. ಹಾಗೂ ವರ್ಷಕ್ಕೆ 8 ಕೋಟಿ ರೂ. ಕುಟುಂಬಗಳಿಗೆ ಸುಮಾರು 5000 ರೂ. ಭತ್ಯೆ ದೊರೆಯುತ್ತಿದ್ದು ಸಾಮಾನ್ಯ ಜನರಿಗೆ ಇದರಿಂದ ಅನುಕೂಲವಾಗುತ್ತಿದೆ.

ಕಷ್ಟದಲ್ಲಿರುವ ಜನಸಾಮನ್ಯರಿಗೆ ಸರ್ಕಾರ ಸ್ಪಂದಿಸುವ, ಜನಪರ ಯೋಜನೆಗಳನ್ನು ಜಾರಿ ಮಾಡುತ್ತಿದೆ. ಹಾಗೂ ಇತರೆ ಅಭಿವೃದ್ದಿ ಕೆಲಸಗಳನ್ನು ಕೈಗೊಳ್ಳುತ್ತಲಿದೆ ಎಂದರು

ವಾಹನ ಸವಾರರಿಗೆ ಭರ್ಜರಿ ಗುಡ್‌ ನ್ಯೂಸ್!‌ ಭಾರತದಲ್ಲಿ 26 ತೈಲ ಬಾವಿ ಪತ್ತೆ, ಇನ್ಮುಂದೆ ಪೆಟ್ರೋಲ್‌ ಡೀಸೆಲ್‌ ಬೆಲೆ ಎಷ್ಟಾಗಲಿದೆ ಗೊತ್ತಾ?

ಆದಾಯ ಇಲಾಖೆಯಲ್ಲಿ ಖಾಲಿ ಹುದ್ದೆಗಳ ಭರ್ತಿ! 1.42 ಲಕ್ಷ ಸಂಬಳ, ಇಂದೇ ಅಪ್ಲೇ ಮಾಡಿ

Leave a Comment