rtgh

ಯುವನಿಧಿ ಚಾಲನೆಗೆ ಕ್ಷಣಗಣನೆ! 4 ಸಾವಿರಕ್ಕೂ ಹೆಚ್ಚು ಪದವೀಧರರರಿಗೆ ಇಂದು ಹಣ ಜಮೆ

ಹಲೋ ಸ್ನೇಹಿತರೇ ನಮಸ್ಕಾರ, ನಿಮಗೆಲ್ಲರಿಗೂ ನಮ್ಮ ಲೇಖನಕ್ಕೆ ಸ್ವಾಗತ, ಕರ್ನಾಟಕ ಸರ್ಕಾರವು 5 ಗ್ಯಾರಂಟಿ ಯೋಜನೆಗಳನ್ನು ಕೂಡ ಜಾರಿಗೆ ತಂದಿದೆ. ಇದೀಗ ಯುವನಿಧಿ ಯೋಜನೆಗೆ ಚಾಲನೆ ನೀಡಲು ಶಿವಮೊಗ್ಗ ಜಿಲ್ಲೆಯಲ್ಲಿ ವೇದಿಕೆ ಸಿದ್ದವಾಗಿದೆ. ಇಂದು ಹಲವಾರು ಯುವ ಪದವೀಧರರು ಇದರ ಲಾಭ ಪಡೆಯಲಿದ್ದಾರೆ. ಈ ಕುರಿತು ಸಂಪೂರ್ಣ ಮಾಹಿತಿಯನ್ನು ನಾವು ಇಂದಿನ ಲೇಖನದಲ್ಲಿ ತಿಳಿಸಿದ್ದೇವೆ.

Yuva nidhi scheme launched today

ಶಿವಮೊಗ್ಗದ ಫ್ರೀಡಂ ಪಾರ್ಕ್‌ ನಲ್ಲಿ ಯುವನಿಧಿ ಯೋಜನೆಗೆ ಚಾಲನೆ ನೀಡಲು ಕ್ಷಣಗಣನೆ ಪ್ರಾರಂಭವಾಗಿದೆ. ಮುಖ್ಯಮಂತ್ರಿ ಮತ್ತು ಉಪಮುಖ್ಯಮಂತ್ರಿಯವರು ಹಾಗೂ ಸಂಬಂಧಪಟ್ಟ ನಾಯಕರು ಕೂಡ ಈ ಕಾರ್ಯ ಕ್ರಮದಲ್ಲಿ ಭಾಗಿಯಾಗಲಿದ್ದಾರೆ. ಹಾಗೆಯೇ ಬೇರೆ ಬೇರೆ ಜಿಲ್ಲೆಗಳಿಂದ ಹಲವಾರು ಜನರು, ಯುವ ಪಧವೀಧರರು ಭಾಗಿಯಾಗುವ ನಿರೀಕ್ಷೆಯಿದೆ. ಕಾಂಗ್ರೆಸ್‌ನ 5 ನೇ ಗ್ಯಾರಂಟಿ ಇಂದು ಅಧಿಕೃತವಾಗಿ ಲೋಕಾರ್ಪಣೆಯಾಗಲಿದೆ. ಲಕ್ಷಾಂತರ ಯುವ ಪದವೀಧರರು ಇದರಲ್ಲಿ ಇಂದು ಬಾಗಿಯಾಗಲಿದ್ದಾರೆ. 4 ಸಾವಿರಕ್ಕೂ ಹೆಚ್ಚಿನ ಪದವೀಧರರಿಗೆ ಇಂದು ಹಣ ಜಮೆ ಆಗಲಿದೆ.

ಇದನ್ನೂ ಸಹ ಓದಿ: ಈ ಕಾರ್ಯಕರ್ತರಿಗೆ ಇನ್ಮುಂದೆ ವೇತನ ನೇರವಾಗಿ ಬ್ಯಾಂಕ್‌ ಖಾತೆಗೆ! ಕೇಂದ್ರದಿಂದ ಆದೇಶ

ಅರ್ಹತೆಗಳು:

  • ಡಿಗ್ರಿ ಹಾಗೂ ಡಿಪ್ಲೋಮಾ ಆಗಿದ್ದು, ಉದ್ಯೋಗ ಸಿಗದೇ ಇದ್ದವರಿಗೆ ಈ ಯೋಜನೆಯ ಲಾಭ ಸಿಗಲಿದೆ.
  • 5 ಲಕ್ಷ 29 ಸಾವಿರ ನಿರುದ್ಯೋಗಿಗಳು ಅರ್ಹರಾಗಿದ್ದಾರೆ.
  • 2022-23 ನೇ ಸಾಲಿನಲ್ಲಿ ಪಾಸಾಗಿರಬೇಕು
  • ಅರ್ಹ ಪದವೀದರರು ಕೆಲಸ ಸಗದೇ ಇದ್ದವರು ಯುವನಿಧಿ ಫಲಾನುಭವಿಗಳಾಗುತ್ತಾರೆ.
  • ಸ್ವಯಂ ಉದ್ಯೋಗ ಹೊಂದಿಲ್ಲದೇ ಇದ್ದವರು ಹಾಗೂ ಸರ್ಕಾರದ ಯಾವುದೇ ಯೋಜನೆಯಡಿ ಲಾಭ ಪಡೆದಿರಬಾರದು.
  • ಉನ್ನತ ವ್ಯಾಸಂಗವನ್ನು ಮುಂದುವರೆಸಿರಬಾರದು.
  • SSLC, PUC, Digree ಪ್ರಮಾಣಪತ್ರ ಕಡ್ಡಾಯವಾಗಿ ಬೇಕು.

ಸೇವಾ ಸಿಂಧು ಮೂಲಕ ಅರ್ಜಿ ಸಲ್ಲಿಸಬೇಕು. ಹಾಗೂ ಆನ್ಲೈನ್‌ ಮೂಲಕ ಬೆಂಗಳೂರು ಒನ್‌, ಗ್ರಾಮ ಒನ್‌, ಕರ್ನಾಟಕ ಒನ್‌ ಕೇಂದ್ರಗಳಲ್ಲಿ ಅರ್ಜಿ ಸಲ್ಲಿಸಬಹುದಾಗಿದೆ.


ಇತರೆ ವಿಷಯಗಳು:

ರೈಲ್‌ ಕೌಶಲ್‌ ವಿಕಾಸ್‌ ನೋಂದಣಿ ಶುರು! ಉಚಿತ ತರಬೇತಿ ಪಡೆಯಿರಿ

ಭಾರತೀಯ ರೈಲ್ವೆ ಹೊಸ ನಿಯಮ: ಪ್ರಯಾಣಿಕರಿಗೆ ಹೊಸ ಸೌಲಭ್ಯ

Leave a Comment