ನಮಸ್ಕಾರ ಸ್ನೇಹಿತರೇ, ಇಂದಿನ ನಮ್ಮ ಈ ಲೇಖನಕ್ಕೆ ನಿಮಗೆಲ್ಲರಿಗೂ ಆತ್ಮೀಯವಾದ ಸ್ವಾಗತ, ನಮ್ಮ ದೇಶದಲ್ಲಿ ನಿರುದ್ಯೋಗ ಸಮಸ್ಯೆಯು ದೊಡ್ಡ ಮಟ್ಟದಲ್ಲಿ ಕಾಡುತ್ತಿದೆ. ಪ್ರತಿ ವರ್ಷವು ಲಕ್ಷಾಂತರ ವಿದ್ಯಾರ್ಥಿಗಳು ತಮ್ಮ ಕಾಲೇಜು ವಿದ್ಯಾಭ್ಯಾಸ ಮುಗಿಸಿ ಕಾಲೇಜಿನಿಂದ ಹೊರಬರುತ್ತಿದ್ದಾರೆ. ಆದರೆ ಅವರಿಗೆ ತಾವು ಕಲಿತ ವಿದ್ಯಾಭ್ಯಾಸಕ್ಕೆ ಸರಿಯಾದ ಉದ್ಯೋಗ ಎಲ್ಲಿಯೂ ಸಿಗದೆ, ನಿರುದ್ಯೋಗಿಗಳಾಗಿ ಅಲೆದಾಡುತ್ತಿದ್ದಾರೆ.

ಸರ್ಕಾರವು ಈ ನಿರುದ್ಯೋಗ ಸಮಸ್ಯೆ (unemployment problems) ಬಗೆಹರಿಸಲು ಸಾಕಷ್ಟು ಪ್ರಯತ್ನ ಮಾಡುತ್ತಿದೆ. ಅನೇಕ ಕಡೆ ಉದ್ಯೋಗ ಸೃಷ್ಟಿಗೆ ಮುಂದಾಗಿದೆ. ಖಾಸಗಿ ಕಂಪನಿಗಳ ಜೊತೆಗೆ ಒಡಂಬಡಿಕೆ ಮಾಡಿಕೊಂಡು ಅವರ ಕಂಪನಿಗಳನ್ನು ನಮ್ಮ ರಾಜ್ಯದಲ್ಲೇ ಸ್ಥಾಪನೆ ಮಾಡುವಂತೆ ಅವರಲ್ಲಿ ವಿನಂತಿ ಮಾಡಲಾಗುತ್ತಿದೆ.
ಇದೆಲ್ಲದರ ಜೊತೆಗೆ ಸರ್ಕಾರ ನಿರುದ್ಯೋಗಿ ಯುವಕ ಯುವತಿಯರಿಗೆ ಪ್ರತಿ ತಿಂಗಳು ಉಚಿತ ಭತ್ಯೆ ನೀಡವ ಯುವ ನಿಧಿ ಯೋಜನೆ (Yuva Nidhi scheme) ಯನ್ನು ಘೋಷಣೆ ಮಾಡಿ ಜಾರಿಯನ್ನು ಸಹ ಮಾಡಿದೆ.
ಕಾಂಗ್ರೆಸ್ ಸರ್ಕಾರದ 5 ಗ್ಯಾರಂಟಿ ಯೋಜನೆಗಳಲ್ಲಿ ಯುವ ನಿಧಿ ಯೋಜನೆಯು ಒಂದಾಗಿದೆ. ಈ ಯೋಜನೆಯನ್ನು ಡಿಸೆಂಬರ್ 26 ರಿಂದಲೇ ಅರ್ಜಿ ಸಲ್ಲಿಕೆ ಆರಂಭವಾಗಿದೆ. ಈಗಾಗಲೇ 5 ಸಾವಿರ ಜನರು ಅರ್ಜಿ ಸಲ್ಲಿಸಿದ್ದಾರೆ. ಇನ್ನೇನು ಕೆಲವೇ ದಿನಗಳಲ್ಲಿ ಈ ಯೋಜನೆಯಡಿಯಲ್ಲಿ ಭತ್ಯೆ ನೀಡಲಾಗುತ್ತದೆ.
ಯುವ ನಿಧಿ ಫಲಾನುಭವಿಗಳಿಗೆ ಶುಭ ಸುದ್ದಿ
ಈ ಯೋಜನೆ ಲಾಭ ಪಡೆಯಲು 2022-23 ನೇ ಸಾಲಿನಲ್ಲಿ ಉತ್ತೀರ್ಣರಾಗಿ ಕಳೆದ 6 ತಿಂಗಳಿನಿಂದ ಉದ್ಯೋಗ ಇಲ್ಲದೆ ಮನೆಯಲ್ಲೇ ಇದ್ದವರಿಗೆ ಮಾತ್ರ ಯುವ ನಿಧಿ ನೀಡಲಾಗುತ್ತದೆ. ಇನ್ನೆರಡು ವರ್ಷ ಅವರು ಭತ್ಯೆ ಪಡೆಯಲು ಅರ್ಹರಾಗಿರುತ್ತಾರೆ.
ಈ ಯೋಜನೆಗೆ ಅರ್ಜಿ ಸಲ್ಲಿಸಿದ ನಂತರ ಅವರಿಗೆ ಉದ್ಯೋಗ ಸಿಕ್ಕರೆ ಯುವ ನಿಧಿ ಹಣ ಸಿಗುವುದಿಲ್ಲ. ಈ ಕುರಿತು ಸರ್ಕಾರಕ್ಕೆ ಅವರು ಮಾಹಿತಿ ನೀಡಬೇಕು. ಹಾಗೇನಾದರು ಕೇಲಸಕ್ಕೆ ತೆರಳುತ್ತ ಯುವನಿಧಿ ಹಣ ಪಡೆದುಕೊಂಡಿದ್ದು ತಿಳಿದಲ್ಲಿ ಭಾರೀ ಪ್ರಮಾಣದ ದಂಡ ವಿಧಿಸಲಾಗುತ್ತದೆ.
ಇದನ್ನೂ ಸಹ ಓದಿ: ಕೇವಲ ₹600 ಕ್ಕೆ ಗ್ಯಾಸ್ ಸಿಲಿಂಡರ್..! ಮೋದಿ ಸರ್ಕಾರದಿಂದ ಮತ್ತೊಮ್ಮೆ ಬೆಲೆ ಇಳಿಕೆ
ಯುವ ನಿಧೀ ಯೋಜನೆಗೆ ಯಾರೆಲ್ಲ ಅರ್ಜಿ ಸಲ್ಲಿಸಿದ್ದರೆ ಅವರಿಗೆ ಸರ್ಕಾರ ಒಂದು ಶುಭ ಸುದ್ದಿಯನ್ನು ನೀಡಿದೆ.
ರಾಜ್ಯದಲ್ಲಿರುವ ನಿರುದ್ಯೋಗಿ ಯುವತಿ ಯುವಕರಿಗೆ ಸಹಾಯವಾಗಲಿ ಎಂದು ಈ ಯೋಜನೆಯನ್ನು ಜಾರಿಗೆ ತರಲಾಗಿದೆ. ಈ ಯೋಜನೆ ಅಡಿಯಲ್ಲಿ ಭತ್ಯೆ ಪಡೆಯುವ ಫಲಾನುಭವಿಗಳಿಗೆ ಉದ್ಯಮ ಶೀಲತಾ ತರಬೇತಿ ನೀಡಲು ಸರ್ಕಾರ ಮಹತ್ವದ ನಿರ್ಧಾರ ಮಾಡಿದೆ.
ನಿರುದ್ಯೋಗಿಗಳಿಗೆ ಹಣ ನೀಡುವುದಷ್ಟೇ ಅಲ್ಲದೆ ಅವರಿಗೆ ಸರಿಯಾದ ಮಾರ್ಗದರ್ಶನವನ್ನು ನೀಡಿ ಅವರು ಸಹ ಉದ್ಯಮಿಗಳಾಗಬೇಕು. ಅವರು ಸಹ ತಮ್ಮ ಸ್ವಂತ ಉದ್ಯಮ ಪ್ರಾರಂಬಿಸಿ ನಿರುದ್ಯೋಗಿಗಳಿಗೆ ಅವರು ಉದ್ಯೋಗ ನೀಡುವಂತವರಾಗಬೇಕು ಎನ್ನುವುದು ಸರ್ಕಾರದ ಉದ್ದೇಶವಾಗಿದೆ.
ಈ ಕಾರಣೆಕ್ಕೆ ಸರ್ಕಾರ ಯುವ ನಿಧಿ ಯೋಜನೆಯ ಫಲಾನುಭವಿಗಳಿಗೆ ಉದ್ಯಮ ಶೀಲತಾ ತರಬೇತಿ ನೀಡಲು ಮುಂದಾಗಿದೆ ಎಂದು ತಿಳಿದು ಬಂದಿದೆ. ಇದು ಯಾವಾಗ ಜಾರಿಯಾಗಲಿದೆ, ಇದರ ರೂಪುರೇಷೆಗಳು ಏಣು ಎಂದು ಇನ್ನು ತಿಳಿದು ಬಂದಿಲ್ಲ. ಸದ್ಯದಲ್ಲಿಯೇ ರಾಜ್ಯ ಸರ್ಕಾರದಿಂದ ಇದರ ಬಗ್ಗೆ ಸಂಪೂರ್ಣ ಮಾಹಿತಿ ಲಭ್ಯವಾಗಬಹುದು.
ಇತರೆ ವಿಷಯಗಳು:
ಕಿಸಾನ್ ಸಾಲ ಪಡೆದವರಿಗೆ ಭರ್ಜರಿ ಗುಡ್ ನ್ಯೂಸ್!! ನಿಮ್ಮ ಎಲ್ಲಾ ಸಾಲ ಮನ್ನಾ ಮಾಡಲು ಸೂಚನೆ