ಹಲೋ ಸ್ನೇಹಿತರೇ ನಮಸ್ಕಾರ, ನಿಮಗೆಲ್ಲರಿಗೂ ನಮ್ಮ ಲೇಖನಕ್ಕೆ ಸ್ವಾಗತ, ಭಾರತದ ಗ್ರಾಮೀಣ ಮತ್ತು ನಗರ ಪ್ರದೇಶದ ಸಾಂಪ್ರದಾಯಿಕ ಕುಶಲಕರ್ಮಿಗಳು ಮತ್ತು ಕರಕುಶಲಗಾರರನ್ನು ಸದೃಡಗೊಳಿಸುವ ಯೋಜನೆಯು ಇದಾಗಿದೆ. ಕೇಂದ್ರ ಸರ್ಕಾರದಿಂದ ಇವರಿಗೆ ಉಚಿತ ಟೂಲ್ ಕಿಟ್ ವಿತರಣೆ ಹಾಗೂ ಇದರ ಜೊತೆಗೆ 3 ಲಕ್ಷ ಸಹಾಯಧನ ಕೂಡ ಕೊಡಲಾಗುತ್ತದೆ. ಈ ಕುರಿತು ವಿವರವಾದ ಮಾಹಿತಿಯನ್ನು ನಾವು ಇಂದಿನ ಲೇಖನದಲ್ಲಿ ತಿಳಿಸಿದ್ದೇವೆ.
ವಿಶ್ವಕರ್ಮ ಯೋಜನೆ:
ಈ ಯೋಜನೆಯು 18 ರೀತಿಯ ಸಾಂಪ್ರದಾಯಕ ಕುಶಲಕರ್ಮಿಗಳು ಹಾಗೂ ಕರಕುಶಲಿಗಳಿಗೆ ಲಾಭ ಈ ಯೋಜನೆಯ ದೊರೆಯಲಿದೆ. ಮರಕೆಲಸಗಾರರು, ಗಾರೆಕೆಲಸಗಾರರು, ವಿಗ್ರಹ ತಯಾರಕರು, ಕಲ್ಲು ಒಡೆಯುವವರು, ಟೈಲರ್‌ಗಳು, ಅಕ್ಕಸಾಲಿಗರು, ಕ್ಷೌರಿಕರು, ಅಗಸರು, ಬುಟ್ಟಿ/ಚಾಪೆ/ಕಸಪೊರಕೆ ತಯಾರಕರು, ಕಮ್ಮಾರರು, ಕುಂಬಾರರು, ಹೂವಿನ ಹಾರ ತಯಾರಕರು, ಮೀನು ಬಲೆ ತಯಾರಕರು, ದೋಣಿ ತಯಾರಕರು, ಚರ್ಮಕಾರರು, ಆಯುಧ ತಯಾರಕರು, ಕಬ್ಬಿಣದ ಉಪಕರಣಗಾರರು, ಆಟಿಕೆ ತಯಾರಕರು ಇತ್ಯಾದಿ.
ಅರ್ಜಿ ಸಲ್ಲಿಸಲು ಬೇಕಾದ ದಾಖಲೆಗಳು:
- ಆಧಾರ್‌ಕಾರ್ಡ್
- ಬ್ಯಾಂಕ್ ಪಾಸ್ ಪುಸ್ತಕ
- ಆಧಾರ್ ಜೋಡಿತ ಮೊಬೈಲ್
- ರೇಷನ್ ಕಾರ್ಡ್
- ಕುಟುಂಬ ಸದಸ್ಯರ ಆಧಾರ್ ಕಾರ್ಡ್’ಗಳು
ಯೋಜನೆಯ ಪ್ರಯೋಜನಗಳು:
- ವಿಶ್ವಕರ್ಮ ಸಹೋದರ ಮತ್ತು ಸಹೋದರಿಯರಿಗೆ ರೂ. 3 ಲಕ್ಷದವರೆಗೆ ಆಧಾರರಹಿತ ಸಾಲ
- ಟೂಲ್ ಕಿಟ್ ಪ್ರೋತ್ಸಾಹಧನ: ರೂ 15,000 ಅನುದಾನ.
- ಕೌಶಲ್ಯಾಭಿವೃದ್ಧಿಗೆ ತರಬೇತಿ ಮತ್ತು ದಿನಕ್ಕೆ ರೂ. 500 ಸಂಭಾವನೆ
- ಸಂಪೂರ್ಣ ತಯಾರಾದ ಉತ್ಪನ್ನಗಳಿಗೆ ಕ್ವಾಲಿಟ ಸರ್ಟಿಫಿಕೇಶನ್, ಬ್ರಾಂಡಿಂಗ್ ಮತ್ತು ಜಾಹೀರಾತು ಮಾದರಿಯಲ್ಲಿ ಮಾರ್ಕೆಟಿಂಗ್’ಗಾಗಿ ಸರ್ಕಾರದಿಂದ ನೆರವು.
ಇದನ್ನೂ ಸಹ ಓದಿ: ಇನ್ಮುಂದೆ 50 ವರ್ಷ ಮೇಲ್ಪಟ್ಟವರಿಗೂ ಪಿಂಚಣಿ ಸೌಲಭ್ಯ! ಸರ್ಕಾರದ ದಿಢೀರ್ ಆದೇಶ
ಅರ್ಹತೆಯ ಮಾನದಂಡ:
- ಫಲಾನುಭವಿಯ ಕನಿಷ್ಠ ವಯಸ್ಸು ನೋಂದಣಿ ದಿನಾಂಕದಂದು 18 ವರ್ಷಗಳಾಗಿರಬೇಕು.
- ಫಲಾನುಭವಿಯು ನೋಂದಣಿ ದಿನಾಂಕದಂದು ಸಂಬಂಧಿಸಿದ ವ್ಯಾಪಾರದಲ್ಲಿ ತೊಡಗಿಸಿಕೊಂಡಿರಬೇಕು ಮತ್ತು ಸ್ವಯಂ ಉದ್ಯೋಗ/ವ್ಯಾಪಾರ ಅಭಿವೃದ್ಧಿಗಾಗಿ ಕೇಂದ್ರ ಸರ್ಕಾರ ಅಥವಾ ರಾಜ್ಯ ಸರ್ಕಾರದ ಇದೇ ರೀತಿಯ ಕ್ರೆಡಿಟ್ ಆಧಾರಿತ ಯೋಜನೆಗಳ ಅಡಿಯಲ್ಲಿ ಸಾಲವನ್ನು ಪಡೆದಿರಬಾರದು, ಉದಾ: PMEGP, PM SVANIdhi, ಮುದ್ರಾ, ಕಳೆದ 5 ವರ್ಷಗಳಲ್ಲಿ.
- ಯೋಜನೆಯಡಿಯಲ್ಲಿ ನೋಂದಣಿ ಮತ್ತು ಪ್ರಯೋಜನಗಳನ್ನು ಕುಟುಂಬದ ಒಬ್ಬ ಸದಸ್ಯರಿಗೆ ಸೀಮಿತಗೊಳಿಸಬೇಕು.
- ಸರ್ಕಾರಿ ಸೇವೆಯಲ್ಲಿರುವ ವ್ಯಕ್ತಿ ಮತ್ತು ಅವರ ಕುಟುಂಬದ ಸದಸ್ಯರು ಯೋಜನೆಯಡಿ ಅರ್ಹರಾಗಿರುವುದಿಲ್ಲ.
ಅರ್ಜಿ ಸಲ್ಲಿಸುವುದು ಹೇಗೆ?
- ಮೊದಲು ಅರ್ಜಿ ಸಲ್ಲಿಸಲು ಅಧಿಕೃತ ವೆಬ್ ಸೈಟ್ ಗೆ ಭೇಟಿ.
- ನಂತರ ಈ ಕೆಳಗಿನ ಹಂತಗಳನ್ನ ಪೂರ್ಣಗೊಳಿಸುವ ಮೂಲಕ ಅರ್ಜಿ ಸಲ್ಲಿಸಬಹುದಾಗಿದೆ.
- ಮೊಬೈಲ್ ಮತ್ತು ಆಧಾರ್ ಪರಿಶೀಲನೆ.
- ಕುಶಲಕರ್ಮಿಗಳ ನೋಂದಣಿ ಫಾರ್ಮ್ ಭರ್ತಿ ಮಾಡಿ.
- PM ವಿಶ್ವಕರ್ಮ ಡಿಜಿಟಲ್ ಐಡಿ ಮತ್ತು ಪ್ರಮಾಣಪತ್ರವನ್ನು ಡೌನ್‌ಲೋಡ್ ಮಾಡಿ.
- ಸ್ಕೀಮ್ ಘಟಕಗಳಿಗೆ ಅನ್ವಯಿಸಿ
ಇತರೆ ವಿಷಯಗಳು:
ಪಡಿತರ ಚೀಟಿದಾರರಿಗೆ ಬೃಹತ್ ಲಾಭ! APL BPL ಕಾರ್ಡುದಾರರಿಗೆ ಮಾತ್ರ ಈ ಅವಕಾಶ
1 ರಿಂದ 8ನೇ ತರಗತಿ ವಿದ್ಯಾರ್ಥಿಗಳಿಗೆ ಗುಡ್ ನ್ಯೂಸ್! ಜನವರಿ 15 ರವರೆಗೆ ಶಾಲೆಗಳಿಗೆ ರಜೆ