rtgh

BBK10- ದೊಡ್ಮನೆಯಲ್ಲಿ ಹೊಸ ಹೊಸ ಟಾಸ್ಕ್.!!‌ ಕಾರ್ತಿಕ್‌- ತುಕಾಲಿ ತಲೆ ಕೂದಲಿಗೆ ಬಿತ್ತು ಕತ್ತರಿ

ನಮಸ್ತೆ ಕರುನಾಡು, ಕನ್ನಡದಲ್ಲಿ ಕಿಚ್ಚ ಸುದೀಪ್ ನಡೆಸಿಕೊಡುವ ಜನಪ್ರಿಯ ರಿಯಾಲಿಟಿ ಶೋ ಎಂದರೆ ಅದು ‘ಬಿಗ್ ಬಾಸ್ ‘. ಇಲ್ಲಿ ದಿನಕ್ಕೊಂದು ಟ್ವಿಸ್ಟ್, ಹೊಸ ಹೊಸ ಕಥೆ, ಪ್ರೀತಿ ಪ್ರೇಮ, ಮನಸ್ತಾಪಗಳ ಮೂಲಕ ಸಿಕ್ಕಾಪಟ್ಟೆ ಮನರಂಜನೆ ಸಲುವಾಗಿ ಕಾರ್ಯಕ್ರಮ ಜನರ ಮನೆ ಮಾತಾಗುತ್ತಿದೆ. ಏಳನೇ ವಾರ ಇದೀಗ ಶುರುವಾಗಿದ್ದು, ‘ಬಿಗ್ ಬಾಸ್ ‘ ಪಟ್ಟ ಗೆಲ್ಲಲು ಪ್ರತಿಯೊಬ್ಬ ಸ್ಪರ್ಧಿಗಳು ಏನು ಬೇಕಾದರೂ ಮಾಡ್ತಾರೆ ಅನ್ನೋದಕ್ಕೆ ಇಂದಿನ ಸಂಚಿಕೆ ಸಾಕ್ಷಿಯಾಗಿರುವುದನ್ನು ನೀವು ನೋಡಿದ್ದೀರಿ.

Bigg Boss Kannda Today Updates

ಜಿಯೋ ಸಿನಿಮಾ ಬಿಡುಗಡೆ ಮಾಡಿದ ಪ್ರೋಮೋದಲ್ಲಿ ಕಾರ್ತಿಕ್ ಹಾಗೂ ತುಕಾಲಿ ಸಂತೋಷ್ ಅವರ ತಲೆ ಬೋಳಿಸುತ್ತಿರುವ ದೃಶ್ಯ ಕಂಡುಬಂದಿರುವುದನ್ನು ಗಮನಿಸಬಹುದು. ಬಿಗ್ ಬಾಸ್ ಮನೆ ಮಂದಿಯನ್ನು ‘ಗಜಕೇಸರಿ’ ಮತ್ತು ‘ಸಂಪತ್ತಿಗೆ ಸವಾಲ್’ ಎಂಬ ತಂಡಗಳನ್ನಾಗಿ ಮಾಡಲಾಗಿದೆ. ‘ಗಜಕೇಸರಿ’ ತಂಡದಲ್ಲಿ ವಿನಯ್ ಗೌಡ, ನಮ್ರತಾ ಗೌಡ ಹಾಗೂ ಸಂಗೀತಾ ಶೃಂಗೇರಿ, ಸ್ನೇಹಿತ್ , ಸಿರಿ ಮತ್ತು ಡ್ರೋನ್ ಪ್ರತಾಪ್ ಇದ್ದಾರೆ. ʼಸಂಪತ್ತಿಗೆ ಸವಾಲ್’ ತಂಡದಲ್ಲಿ ಮೈಕಲ್ , ನೀತು, ತನಿಷಾ, ವರ್ತೂರು ಸಂತೋಷ್ , ಕಾರ್ತಿಕ್ ಮತ್ತು ತುಕಾಲಿ ಸಂತೋಷ್ ಸ್ಪರ್ಧಿಗಳು ಇದ್ದರೆ.

ಇದನ್ನು ಓದಿ: ಸ್ವತಃ ಅಂಬಾನಿಯವರಿಂದ ಹೊಸ ಪ್ಲಾನ್‌ ಲಾಂಚ್..‌! ಜಿಯೋ ಪ್ರಿಪೇಯ್ಡ್ ಗ್ರಾಹಕರಿಗೆ ಬಂಪರ್ ರೀಚಾರ್ಜ್ ಕೊಡುಗೆ

ಇದೀಗ ಬಿಗ್ ಬಾಸ್ , ಒಂದು ತಂಡ ಎದುರಾಳಿ ತಂಡಕ್ಕೆ ಒಂದಾದ ಮೇಲೆ ಒಂದರಂತೆ ಸವಾಲು ಹಾಕುವ ಟಾಸ್ಕ್ ಅನ್ನು ನೀಡುತ್ತಿದ್ದಾರೆ. ಅದರ ಭಾಗವಾಗಿ ಸಂಗೀತಾ, ತಮ್ಮ ಅಪೋಸಿಟ್ ಟೀಂನ ಕಾರ್ತಿಕ್ ಮತ್ತು ತುಕಾಲಿ ಸಂತೋಷ್ ಅವರು ತಲೆ ಬೋಳಿಸಿಕೊಳ್ಳಬೇಕು ಎಂದು ಸವಾಲು ಹಾಕುತ್ತಾರೆ.


ಇದಕ್ಕೆ ಹೊರಗೆ ವಿರೋಧವೂ ವ್ಯಕ್ತವಾಗಿದೆ. ನಂತರದ ದೃಶ್ಯದಲ್ಲಿ ಕಾರ್ತಿಕ್ ಅವರು, ‘ಗೇಮ್ ಗಾಗಿ ಮತ್ತು ತಂಡಕ್ಕಾಗಿ ಏನು ಬೇಕಾದ್ರೂ ಮಾಡ್ತೀನಿ. ಬೋಳಿಸಿಕೊಂಡ್ರೆ ಕೂದಲು ಮತ್ತೆ ಬರುತ್ತೆ’ ಎಂದು ಹೇಳಿ ತಲೆ ಬೋಳಿಸಿಕೊಳ್ಳೋಕೆ ತುಕಾಲಿ ಸಂತೋಷ್ ಜೊತೆ ಕುಳಿತುಕೊಂಡಿರುತ್ತಾರೆ.

ಇತರೆ ವಿಷಯಗಳು:

ವಿದ್ಯಾರ್ಥಿಗಳ ಆರೋಗ್ಯ ರಕ್ಷಣೆಗೆ ಮುಂದಾದ ಸರ್ಕಾರ..! ನಾಳೆಯಿಂದ PUC ಮಕ್ಕಳಿಗೆ ರಕ್ತಹೀನತೆ ತಪಾಸಣೆ

ಪ್ರತಿ ತಿಂಗಳು ಚಾಮುಂಡೇಶ್ವರಿ ದೇವಿಗೂ ಸಲ್ಲಲಿದೆ ಗೃಹಲಕ್ಷ್ಮಿ ಕಂತಿನ ಹಣ..! ಮಹಿಳೆಯರಂತೆ ಮಾಸಿಕ ₹2000 ದೇವಿಯ ಖಾತೆಗೆ ಜಮಾ

Leave a Comment