ಹಲೋ ಸ್ನೇಹಿತರೇ ನಮಸ್ಕಾರ, ನಿಮಗೆಲ್ಲರಿಗೂ ನಮ್ಮ ಲೇಖನಕ್ಕೆ ಸ್ವಾಗತ, ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ಜನಸಾಮಾನ್ಯರಿಗೆ ಹಲವಾರು ಯೋಜನೆಗಳನ್ನು ಕಲ್ಪಿಸಿದ್ದು, ಈ ಎಲ್ಲಾ ಯೋಜನೆಗಳ ಲಾಭವನ್ನು ಈಗಾಗಲೇ ಪಡೆಯುತ್ತಿದ್ದಾರೆ. ಹಾಗೆಯೇ ಇದೀಗ ಸರ್ಕಾರದಿಂದ ಮತ್ತೊಂದು ಯೋಜನೆ ಜಾರಿಗೆ ಬಂದಿದ್ದು, 4 ಲಕ್ಷ ರೂಗಳ ಲಾಭವನ್ನು ಪಡೆಯಲಿದ್ದಾರೆ. ಈ ಕುರಿತು ವಿವರವಾದ ಮಾಹಿತಿಯನ್ನು ನಾವು ಇಂದಿನ ಲೇಖನದಲ್ಲಿ ತಿಳಿಸಿದ್ದೇವೆ.

ಯಾವೆಲ್ಲಾ ಫಲಾನುಭವಿಗಳಿಗೆ ಲಾಭ:
ಏನಿದು ರಾಜ್ಯ ಗಿಗ್ ಕಾರ್ಮಿಕರ ವಿಮಾ ಯೋಜನೆ, ಇದು ಸ್ವಿಗ್ಗಿ, ಜೊಮಾಟೋಗಳಂತಹ ಸಂಸ್ಥೆಗಳಲ್ಲಿ ಫುಡ್‌ಡೆಲಿವರಿ ಮಾಡುವ ಹಾಗೂ ಇ-ಕಾಮರ್ಸ್ ಸಂಸ್ಥೆಗಳಾದ ಅಮೆಜಾನ್, ಪ್ಲಿಫ್‌ಕಾರ್ಟ್, ಬಿಗ್‌ಬಾಸ್ಕೆಟ್, ಪೋರ್ಟರ್, ಫಾರ್ಮಸಿ, ಬ್ಲಿಂಕಿಟ್, ಜೆಪ್ಟೋ, ಬಿಗ್ ಬಾಸ್ಕೆಟ್, ಡಾಮಿನೋಜ್ ಮುಂತಾದ ಸಂಸ್ಥೆಗಳಲ್ಲಿ ಡೆಲಿವರಿ ವೃತ್ತಿಯಲ್ಲಿ ತೊಡಗಿಕೊಂಡ ಎಲ್ಲಾ ಅಸಂಘಟಿತ ಗಿಗ್ ಕಾರ್ಮಿಕರಾಗಿದ್ದಾರೆ. ಇವರು ಈ ಯೋಜನೆಗೆ ಅರ್ಜಿ ಸಲ್ಲಿಸಲು ಅರ್ಹರಾಗಿರುತ್ತಾರೆ.
ಈ ಯೋಜನೆಯ ಸೌಲಭ್ಯಗಳೇನು?
ಜೀವ ವಿಮಾ:
- ಫಲಾನುಭವಿಯ ಮರಣದ ನಂತರ ಕಾನೂನುಬದ್ಧ ವಾರಸುದಾರರಿಗೆ ರೂ. 2.00 ಲಕ್ಷಗಳ ಜೀವ ವಿಮಾ ಪರಿಹಾರ.
ಅಪಘಾತ ವಿಮಾ ಸೌಲಭ್ಯ:
- ಅಪಘಾತದಿಂದ ಮರಣ ಹೊಂದಿದಲ್ಲಿ ವಿಮಾ ಪರಿಹಾರ ರೂ 2.00 ಲಕ್ಷ ಹಾಗೂ ಜೀವ ವಿಮೆ ರೂ 2.00 ಲಕ್ಷ ಸೇರಿ ಒಟ್ಟು ರೂ 4.00 ಲಕ್ಷಗಳು.
- ಅಪಘಾತದಿಂದ ಶಾಶ್ವತ ದುರ್ಬಲತೆ ಹೊಂದಿದಲ್ಲಿ ರೂ.2.00 ಲಕ್ಷಗಳವರೆಗೆ
- ಆಸ್ಪತ್ರೆ ವೆಚ್ಚ ಮರುಪಾವತಿ ರೂ.1.00 ಲಕ್ಷಗಳವರೆಗೆ (ಅಪಘಾತ ಪ್ರಕರಣಗಳಿಗೆ ಮಾತ್ರ)
ಇದನ್ನೂ ಸಹ ಓದಿ: PUC ಪಾಸಾದವರಿಗೆ ಭಾರತೀಯ ನೌಕಾಪಡೆಯಲ್ಲಿ ನೇಮಕಾತಿ: ಅರ್ಜಿ ಸಲ್ಲಿಸಲು ಎರಡು ದಿನ ಬಾಕಿ
ನೋಂದಣಿಗೆ ಅರ್ಹತೆಗಳು:
- 18 ರಿಂದ 60 ವಯೋಮಾನದವರು ಅರ್ಹರು.
- ಆದಾಯ ತೆರಿಗೆ ಪಾವತಿದಾರರಾಗಿರಬಾರದು.
- ಭವಿಷ್ಯನಿಧಿ ಹಾಗೂ ಇ.ಎಸ್.ಐ ಫಲಾನುಭವಿಯಾಗಿರಬಾರದು.
- ಕರ್ನಾಟಕದಲ್ಲಿ ಗಿಗ್ ವೃತ್ತಿ (ಡೆಲಿವರಿ ಕಾರ್ಯ) ನಿರ್ವಹಿಸುತ್ತಿರುವವರಿಗೆ ಮಾತ್ರ.
ಅರ್ಜಿ ಸಲ್ಲಿಸಲು ಅವಶ್ಯಕ ದಾಖಲೆಗಳು:
- ಆಧಾರ್ ಸಂಖ್ಯೆ
- ವೃತ್ತಿ ನಿರ್ವಹಿಸುತ್ತಿರುವ ಸಂಸ್ಥೆಗಳು ವಿತರಿಸಿದ ಗುರುತಿನ ಚೀಟಿ
- ಇ-ಶ್ರಮ್ ನೋಂದಣಿ ಸಂಖ್ಯೆ
ಅರ್ಜಿ ಪ್ರಕ್ರಿಯೆ:
- ಮೊದಲು ಅಭ್ಯರ್ಥಿಗಳು Seva Sindhu 1 ವೆಬ್ ಸೈಟ್ ಗೆ ಬೆಟ್ ನೀಡಿ
- ನಂತರ ಅಲ್ಲಿ ‘Apply for Service’ ನಲ್ಲಿ ಸರ್ಚ್ ಬಾಕ್ಸ್ ನಲ್ಲಿ “ಕರ್ನಾಟಕ ರಾಜ್ಯ ಗಿಗ್ ಕಾರ್ಮಿಕರ ವಿಮಾ ಯೋಜನೆ” ಅಂತ ಸರ್ಚ್ ಮಾಡಿ.
- ಹಂತ 1 –ದೃಢೀಕರಣ
- ಹಂತ 2 – ಆಧಾರ್ ದೃಢೀಕರಣ
- ಹಂತ 3 – ಅರ್ಜಿದಾರರ ವಿವರಗಳು
- ಹಂತ 4 –ಕುಟುಂಬ ಸದಸ್ಯರ ವಿವರ
- ಹಂತ 5 – ಘೋಷಣೆ
- ಈ ಮೇಲಿನ ಎಲ್ಲಾ ಹಂತಗಳನ್ನ ಸರಿಯಾಗಿ ಭರ್ತಿ ಮಾಡಿ ನಂತರ ಅರ್ಜಿ ಸಲ್ಲಿಸಿ.
ಇತರೆ ವಿಷಯಗಳು:
ರಾಮ ಮಂದಿರ ಉದ್ಘಾಟನೆ ಪ್ರಯುಕ್ತ, ಜನವರಿ 22 ರಂದು ಎಲ್ಲಾ ಶಾಲೆಗಳಿಗೆ ರಜೆ ಆದೇಶ
ಶ್ರೀರಾಮ ಮಂದಿರ ಫೋಟೋ ಇರೋ 500 ರ ನೋಟು ! ನಿಮಗೂ ಬೇಕಿದ್ದರೆ ಕ್ಲಿಕ್ ಮಾಡಿ