rtgh

ರಾಜ್ಯ ಸರ್ಕಾರದಿಂದ ಮೊದಲ ಕಂತಿನ ಬರ ಪರಿಹಾರ ಹಣ ಬಿಡುಗಡೆ!! ಹೊಸ ಪಟ್ಟಿಯಲ್ಲಿ ನಿಮ್ಮ ಹೆಸರನ್ನು ಪರೀಶಿಲಿಸಿ

ಹಲೋ ಸ್ನೇಹಿತರೇ, ರಾಜ್ಯದಲ್ಲಿ ಈ ಬಾರಿ ಉಂಟಾಗಿರುವ ಮುಂಗಾರು ಮಳೆ ಕೊರತೆಯಿಂದ ರೈತರಿಗೆ ತುಂಬಲಾರದ ನಷ್ಟ ಉಂಟಾಗಿರುತ್ತದೆ ಬೀಜ ಗೊಬ್ಬರಕ್ಕೆ ಖರ್ಚು ಮಾಡಿರುವ ಮೊತ್ತವು ಮರಳಿ ಬಂದಿರುವುದಿಲ್ಲ. ದೊಡ್ಡ ಮಟ್ಟದ ಪರಿಹಾರದ ನಿರೀಕ್ಷೆಯಲ್ಲಿದ ರೈತರಿಗೆ ರಾಜ್ಯ ಸರಕಾರವು ನಿರಾಸೆ ಮೂಡಿಸಿದೆ ಮೊದಲ ಕಂತಿನಲ್ಲಿ ಬರ ಪರಿಹಾರವನ್ನು ರೈತರಿಗೆ ವರ್ಗಾವಣೆ ಮಾಡಲು ರಾಜ್ಯ ಸರಕಾರ ನಿರ್ಣಯ ಕೈಗೊಂಡಿದ್ದು ಈ ಮೊತ್ತವು ತುಂಬಾ ಕಡಿಮೆ ಇರುವುದರಿಂದ ರೈತರಲ್ಲಿ ನಿರಾಸೆ ಮೂಡಿಸಿದೆ.

Release of drought relief funds

ಮೊದಲ ಕಂತಿನ ಹಣ ವರ್ಗಾವಣೆ ಕುರಿತು ಸುದೀರ್ಘ ವಿವರಣೆಯೊಂದಿಗೆ ಮಾಹಿತಿ ಹಂಚಿಕೊಂಡಿರುವ ಮುಖ್ಯಮಂತ್ರಿ ಸಿದ್ದರಾಮಯ್ಯ ನವರು ಬರ ಪರಿಹಾರ ಬಿಡುಗಡೆ ಕುರಿತು ಕೇಂದ್ರ ಸರಕಾರದಕ್ಕೆ ಅನೇಕ ಬಾರಿ ಬರೆದ ಪತ್ರಗಳಿಗೆ ಈವರೆಗೆ ಯಾವುದೇ ಮರುಉತ್ತರ/ಪ್ರತಿಕ್ರಿಯೆ ಮರಳಿ ಬಂದಿರುವುದಿಲ್ಲ.

ಈ ಹಿಂದೆ ರಾಜ್ಯದಿಂದ ಮೂರು ಸಚಿವರನ್ನು ದೆಹಲಿಗೆ ಕೇಂದ್ರ ಸರಕಾರದ ಸಚಿವರೊಂದಿಗೆ ಪರಿಹಾರ ಬಿಡುಗಡೆ ಕುರಿತು ಚರ್ಚೆಗೆ ಕಳುಹಿಸಿದರು ಸಕಾರಾತ್ಮಕ ಫಲಿತಾಂಶ ಸಿಕ್ಕಿಲ್ಲ ಎಂದು ಎಕ್ಸ್ ಖಾತೆಯಲ್ಲಿ ಮಾಹಿತಿ ಹಂಚಿಕೊಂಡಿದ್ದು ಈ ಕುರಿತು ಇನ್ನು ಹೆಚ್ಚುವರಿ ಮಾಹಿತಿ ತಿಳಿಸಿರುವ ಅವರು ಕೇಂದ್ರ ಸರಕಾರವು ರಾಜ್ಯದ ರೈತರಿಗೆ ಬರ ಪರಿಹಾರ ಹಣ ವರ್ಗಾವಣೆ ಕುರಿತು ಇನ್ನೂ ಸಹ ಪ್ರಾಥಮಿಕ ಸಭೆಯನ್ನೆ ನಡೆಸದಿರುವ ಹಿನ್ನೆಲೆಯಲ್ಲಿ. ರಾಜ್ಯ ಸರಕಾರದಿಂದ ರೈತರಿಗೆ ತುರ್ತು ಅರ್ಥಿಕವಾಗಿ ನೆರವು ನೀಡುವ ನಿಟ್ಟಿನಲ್ಲಿ ಮೊದಲ ಕಂತಿನಲ್ಲಿ ಅರ್ಹ ರೈತರಿಗೆ ತಲಾ ರೂ 2,000 ವರೆಗೆ ಬೆಳೆ ಹಾನಿ ಪರಿಹಾರದ ಹಣವನ್ನು ಬಿಡುಗಡೆ ಮಾಡುತ್ತಿದ್ದೇವೆ ಎಂದು ತಿಳಿಸಿದ್ದಾರೆ.

ರೈತರಿಗೆ ಮೊದಲನೇ ಕಂತಿನಲ್ಲಿ ಎಷ್ಟು ಹಣ ಸಿಗಲಿದೆ?

ಮೊದಲ ಕಂತಿನ ಬರ ಪರಿಹಾರದ ಹಣ ವರ್ಗಾವಣೆ ಕುರಿತು ಮುಖ್ಯಮಂತ್ರಿ ಸಿದ್ದರಾಮಯ್ಯ ರವರು ಹಂಚಿಕೊಂಡಿರುವ ಮಾಹಿತಿಯ ಪ್ರಕಾರ ಅರ್ಹ ರೈತರಿಗೆ ಮೊದಲ ಕಂತಿನಲ್ಲಿ ರೂ 2,000 ಹಣ ಸಿಗಲಿದೆ.


ಇದನ್ನೂ ಸಹ ಓದಿ : ಹಿರಿಯ ನಾಗರಿಕರಿಗೆ ಡಬಲ್ ಲಾಭ!! ಪ್ರತಿ ತಿಂಗಳು ಖಾತೆಗೆ ಸೇರುತ್ತೆ 5000 ರೂ.!

460 ಕೋಟಿ ಮಧ್ಯಂತರ ಬೆಳೆ ವಿಮೆ ಪರಿಹಾರ ಬಿಡುಗಡೆ:

ಬರ ಪರಿಹಾರದ ಹಣ ವರ್ಗಾವಣೆ ಮಾಹಿತಿ ಜೊತೆಗೆ ಬೆಳೆ ಮಧ್ಯಂತರ ಬೆಳೆ ವಿಮೆ ಪರಿಹಾರದ ಹಣ ವರ್ಗಾವಣೆ ಮಾಹಿತಿ ಹಂಚಿಕೊಂಡಿರುವ ಮುಖ್ಯಮಂತ್ರಿ ಸಿದ್ದರಾಮಯ್ಯ ರವರು ಇಲ್ಲಿಯವರೆಗೆ ಬಿತ್ತನೆ ವೈಫಲ್ಯ ಮತ್ತು ಮಳೆ ಕೊರತೆಯಿಂದ ಉಂಟಾದ ಬೆಳೆ ಹಾನಿಗೆ ಈಗಾಗಲೇ 6.5 ಲಕ್ಷ ರೈತರಿಗೆ ನೇರ ನಗದು ವರ್ಗಾವಣೆ ಮೂಲಕ ರೈತರ ಖಾತೆಗೆ ರೂ. 460 ಕೋಟಿ ಮಧ್ಯಂತರ ಬೆಳೆ ವಿಮೆ ಜಮಾ ಮಾಡಲಾಗಿದೆ ಎಂದು ಮಾಹಿತಿ ಹಂಚಿಕೊಂಡಿದ್ದಾರೆ.

ಜಾನುವಾರುಗಳಿಗೆ ಮೇವಿಗೆ ರೂ. 327 ಕೋಟಿ ಬಿಡುಗಡೆ:

ರಾಜ್ಯದ್ಯಂತ ಜಾನುವಾರುಗಳಿಗೆ ಬರದಿಂದಾಗಿ ಉಂಟಾಗುವ ಮೇವಿನ ಕೊರತೆಯನ್ನು ನೀಗಿಸಲು ಮೇವಿನ ಬೀಜದ ಕಿಟ್ ಮತ್ತು ಇತರೆ ಕಾರ್ಯಕ್ರಮ ಅನುಷ್ಥಾನಕ್ಕೆ ಎಲ್ಲಾ ಜಿಲ್ಲೆಗಳಿಗೆ ಸೇರಿ ಇಲ್ಲಿಯವರೆಗೆ ರೂ. 327 ಕೋಟಿ ಹಣ ಬಿಡುಗಡೆ ಮಾಡಲಾಗಿದೆ ಎಂದು ತಿಳಿಸಿದ್ದಾರೆ.

48.19 ಲಕ್ಷ ಹೆಕ್ಟೇರ್ ಪ್ರದೇಶದಲ್ಲಿ ಬೆಳೆ ನಷ್ಟ:

ಈ ಬಾರಿ ಉಂಟಾದ ಮುಂಗಾರು ಮಳೆ ಕೊರತೆಯಿಂದ ರಾಜ್ಯದ್ಯಂತ 48.19 ಲಕ್ಷ ಹೆಕ್ಟೇರ್ ಪ್ರದೇಶದಲ್ಲಿ ಬೆಳೆ ನಷ್ಟ ಅಗಿರುತ್ತದೆ ಕೇಂದ್ರದ ತಂಡವು ರಾಜ್ಯದಲ್ಲಿ ಅಧ್ಯಯನ ನಡೆಸಿದ ಬಳಿಕ ರಾಜ್ಯದಿಂದ ಕೇಂದ್ರಕ್ಕೆ ರೂ.4,663 ಕೋಟಿ ಬೆಳೆ ನಷ್ಟ ಪರಿಹಾರಕ್ಕೆ ಮನವಿ ಸಲ್ಲಿಸಲಾಗಿರುತ್ತದೆ.

ರಾಜ್ಯ ಸರಕಾರವು ಕೇಂದ್ರ ಸರಕಾರದ ಜೊತೆಗೆ ಸಮನ್ವಯ ಸಾಧಿಸಿ ಅದಷ್ಟು ಶೀಘ್ರವಾಗಿ ರಾಜ್ಯ ಮತ್ತು ಕೇಂದ್ರ ಸರಕಾರದ ಎರಡು ಪರಿಹಾರದ ಹಣವನ್ನು ಒಗ್ಗೂಡಿಸಿ ಇನ್ನು ಮುಂದಿನ ದಿನಗಳಲ್ಲಿ ಯಾದರು ರೈತರಿಗೆ ಹೆಚ್ಚಿನ ಮೊತ್ತದ ಬರ ಪರಿಹಾರದ ಹಣ ವರ್ಗಾವಣೆ ಮಾಡಿ ರೈತಾಪಿ ವರ್ಗದಲ್ಲಿ ಉಂಟಾಗಿರುವ ಅರ್ಥಿಕ ಸಂಕಷ್ಟಕ್ಕೆ ನೆರವಾಗುವಂತಾಗಲಿ. 

ಇತರೆ ವಿಷಯಗಳು:

ಅನ್ನದಾತರಿಗೆ ಸಿಹಿ ಸುದ್ದಿ: ಅತಿ ಕಡಿಮೆ ಬಡ್ಡಿದರದಲ್ಲಿ ಹೆಚ್ಚಿನ ಸಾಲ ಸೌಲಭ್ಯ!! ಇಂದೇ ಅಪ್ಲೇ ಮಾಡಿ ಅರ್ಜಿ ಪ್ರಕ್ರಿಯೆ ಪ್ರಾರಂಭ

ಗೃಹಿಣಿಯರ ಖಾತೆಗೆ ಉಚಿತವಾಗಿ ಬರಲಿದೆ ₹50,000 /-..!! ಗೃಹಲಕ್ಷ್ಮಿ ನಂತರ ಸರ್ಕಾರದ ಹೊಸ ಯೋಜನೆ

ಹೆಣ್ಣು ಮಕ್ಕಳ ಮದುವೆಗೆ ಸರ್ಕಾರದಿಂದ ಉಚಿತ ಹಣ!! ಕನ್ಯಾದಾನ ಯೋಜನೆಯಡಿ 51000 ರೂ. ಆರ್ಥಿಕ ನೆರವು

Leave a Comment