ಹಲೋ ಸ್ನೇಹಿತರೇ ನಮಸ್ಕಾರ, ನಿಮಗೆಲ್ಲರಿಗೂ ನಮ್ಮ ಲೇಖನಕ್ಕೆ ಸ್ವಾಗತ, ಕರ್ನಾಟಕ ರಾಜ್ಯ ಸರ್ಕಾರವು ಶಿಕ್ಷಕರ ನೇಮಕಾತಿ ಪ್ರಕ್ರಿಯೆ ನಡೆಸಲು ಮುಂದಾಗಿದೆ. ಪ್ರಾಥಮಿಕ ಹಾಗೂ ಪದವಿ ಕಾಲೇಜುಗಳಲ್ಲಿ ಕೆಲವು ಖಾಲಿ ಹುದ್ದೆಗಳಿದ್ದು ಅವುಗಳನ್ನು ಭರ್ತಿ ಮಾಡಲು ಸರ್ಕಾರ ನಿರ್ಧಾರ ಮಾಡಿದೆ. ಈ ಕುರಿತು ವಿವರವಾದ ಮಾಹಿತಿಯನ್ನು ನಾವು ಇಂದಿನ ಲೇಖನದಲ್ಲಿ ತಿಳಿಸಿದ್ದೇವೆ.
ಸರ್ಕಾರದ ಅನುದಾನಕ್ಕೆ ಸೇರಿದ ಪ್ರಾಥಮಿಕ, ಪ್ರೌಢಶಾಲೆ ಹಾಗೂ ಪದವಿಪೂರ್ವ ಕಾಲೇಜುಗಳಲ್ಲಿ 2023ರವರೆಗೂ ಖಾಲಿ ಇರುವ ಎಲ್ಲ ಹುದ್ದೆಗಳ ಭರ್ತಿಗೆ ಅನುಮತಿ ನೀಡಲಾಗುವ ಕುರಿತು ಶಾಲಾ ಶಿಕ್ಷಣ ಸಚಿವ ಮಧು ಬಂಗಾರಪ್ಪ ಭರವಸೆ ನೀಡಿದ್ದಾರೆ.ಅರ್ಹ ಅಭ್ಯರ್ಥಿಗಳಿಗೆ ಇದು ಸಿಹಿ ಸುದ್ದಿ ಎಂದೇ ಹೇಳಬಹುದು. ರಾಜ್ಯ ಸರ್ಕಾರವು ಇದೀಗ ಎಲ್ಲಾ ಶಿಕ್ಷಕ ವೃಂದದವರಿಗೆ ಗುಡ್ ನ್ಯೂಸ್ ನೀಡಿದೆ. ಹಲವಾರು ಖಾಲಿ ಹುದ್ದೆಗಳನ್ನು ಈ ವರ್ಷವೇ ಭರ್ತಿ ಮಾಡಲು ತೀರ್ಮಾನ ತೆಗೆದುಕೊಂಡಿದೆ.
ಇದನ್ನೂ ಸಹ ಓದಿ: ಪಿಎಂ ಸ್ವಾ ನಿಧಿ ಯೋಜನೆ 2023: ಯಾವುದೇ ಬಡ್ಡಿಯಿಲ್ಲದೇ ಉಚಿತ ಸಾಲ ಸೌಲಭ್ಯ!! ಅರ್ಜಿ ಪ್ರಕ್ರಿಯೆ ಆರಂಭ
ಬಿಜೆಪಿಯ ಶಶೀಲ್ ನಮೋಶಿ ಅವರ ಸೂಚನೆಗೆ ಮಧು ಬಂಗಾರಪ್ಪ ಅವರು ಪ್ರತಿಕ್ರಿಯೆ ನೀಡಿದ್ದು, 2015ರ ಮೊದಲು ಖಾಲಿಯಿದ್ದ ಬೋಧಕ, ಬೋಧಕೇತರ ಹುದ್ದೆಗಳ ಭರ್ತಿಗೆ ಈಗಾಗಲೇ ಅನುಮೋದನೆ ನೀಡಲಾಗಿದೆ. 2016ರಿಂದ 2020ರವರೆಗೆ ಖಾಲಿ ಇದ್ದ ಪ್ರೌಢಶಾಲೆಗಳ 4,521 ಬೋಧಕ, ಪಿಯು ಕಾಲೇಜುಗಳ 267 ಉಪನ್ಯಾಸಕರ ಹುದ್ದೆ ಭರ್ತಿ ಮಾಡಲು ಅನುಮೋದನೆ ಕೋರಿ ಈಗಾಗಲೇ ಆರ್ಥಿಕ ಇಲಾಖೆಗೆ ಪ್ರಸ್ತಾವನೆ ಸಲ್ಲಿಸಲಾಗಿದೆ. ಸದ್ಯ, ಶೈಕ್ಷಣಿಕ ವರ್ಷವನ್ನು ಪರಿಗಣಿಸಿ, ಖಾಲಿ ಇರುವ ಎಲ್ಲ ಹುದ್ದೆಗಳ ಭರ್ತಿಗೆ ಕ್ರಮಕೈಗೊಳ್ಳುವ ಭರವಸೆಯನ್ನು ಸಚಿವರು ನೀಡಿದ್ದಾರೆ.
ಇತರೆ ವಿಷಯಗಳು:
ಪ್ರತಿ ಗ್ರಾಮೀಣ ಕುಟುಂಬದವರಿಗೂ ಬಂತು ಹೊಸ ಯೋಜನೆ!! ಕೇಂದ್ರ ಸರ್ಕಾರದಿಂದ ಮತ್ತೊಂದು ಯೋಜನೆ ಜಾರಿ
ಆರ್ಥಿಕ ಸಂಕಷ್ಟದಲ್ಲಿರುವ ವಿದ್ಯಾರ್ಥಿಗಳಿಗೆ ಗುಡ್ ನ್ಯೂಸ್!! ಈ ಯೋಜನೆಗೆ ಅರ್ಜಿ ಸಲ್ಲಿಸಿ 80 ಸಾವಿರ ಹಣ ಪಡೆಯಿರಿ