rtgh

ಪೊಲೀಸ್‌ ಇಲಾಖೆಯಲ್ಲಿ ಭರ್ಜರಿ ಜಾಬ್ ಆಫರ್! 4,547 ಹುದ್ದೆಗಳ ಭರ್ತಿ

ಹಲೋ ಸ್ನೇಹಿತರೇ ನಮಸ್ಕಾರ, ರಾಜ್ಯದಲ್ಲಿ ನಿರುದ್ಯೋಗಿಗಳು ಉದ್ಯೋಗಕ್ಕಾಗಿ ಕಾತುರದಿಂದ ಕಾಯುತ್ತಿದ್ದಾರೆ. ಇಂತಹ ಸಂದರ್ಭದಲ್ಲಿ ಕರ್ನಾಟಕ ಸರ್ಕಾರವು ಇದೀಗ ಪೋಲಿಸ್‌ ಇಲಾಖೆಯಲ್ಲಿ ಭರ್ಜರಿ ಹುದ್ದೆಗಳ ನೇಮಕಾತಿಗೆ ಅಧಿಸೂಚನೆ ಹೊರಡಿಸಿದೆ. ಎಷ್ಟು ಹುದ್ದೆಗಳನ್ನು ಶೀಘ್ರವೇ ಭರ್ತಿ ಮಾಡಲಾಗುತ್ತದೆ. ಈ ಕುರಿತು ವಿವರವಾದ ಮಾಹಿತಿಯನ್ನು ನಾವು ಇಂದಿನ ಲೇಖನದಲ್ಲಿ ತಿಳಿಸಿದ್ದೇವೆ.

Recruitment in Police Department

ಒಟ್ಟು 4547 ಹುದ್ದೆಗಳ ಭರ್ತಿ 6 ತಿಂಗಳೊಳಗೆ ಪೂರ್ಣಗೊಳಿಸಲು ಕ್ರಮ:

ಮುಂದಿನ 6 ತಿಂಗಳೊಳಗಾಗಿ 1547 ಪೊಲೀಸ್‌ ಸಬ್‌ಇನ್ಸ್‌ಪೆಕ್ಟರ್‌ ಹಾಗೂ 3000 ಪೊಲೀಸ್‌ ಕಾನ್ಸ್‌ಟೇಬಲ್‌ ಸೇರಿದಂತೆ ಒಟ್ಟು 4547 ಹುದ್ದೆಗಳನ್ನು ಪೊಲೀಸ್‌ ಇಲಾಖೆಗೆ ನೇಮಿಸಿಕೊಳ್ಳಲು ಕ್ರಮ ಕೈಗೊಳ್ಳಲಾಗಿದೆ ಎಂದು ಜಿ ಪರಮೇಶ್ವರ್ ತಿಳಿಸಿದ್ದಾರೆ. ಮುಂದಿನ ಆರು ತಿಂಗಳಲ್ಲಿ ನೇಮಕಾತಿ (PSI Recruitment) ನಡೆಯುವ ಕುರಿತು ಮಾಹಿತಿ ನೀಡಿದ್ದಾರೆ.

ಎಲ್ಲರನ್ನೂ ಒಮ್ಮೆಲೇ ಭರ್ತಿ ಮಾಡಿಕೊಂಡರೆ ಆರ್ಥಿಕ ಹೊರೆಯ ಜತೆಗೆ, ಅವರಿಗೆ ತರಬೇತಿ ನೀಡಲು ಸಮಸ್ಯೆಯಾಗಲಿದೆ. ರಾಜ್ಯದಲ್ಲಿನ 6 ಪೊಲೀಸ್‌ ತರಬೇತಿ ಶಾಲೆಗಳಲ್ಲಿ ಒಮ್ಮೆಗೆ ತಲಾ 200 ಮಂದಿಗೆ ತರಬೇತಿ ನೀಡಲು ಮಾತ್ರ ಸಾಧ್ಯ. ಹೀಗಾಗಿ ಎಲ್ಲರನ್ನೂ ಒಮ್ಮೆಲೇ ಭರ್ತಿ ಮಾಡಿಕೊಂಡರೆ ಅವರಿಗೆ ತರಬೇತಿ ನೀಡುವುದು ಕಷ್ಟವಾಗಲಿದೆ. ಎಲ್ಲವನ್ನೂ ಗಮನದಲ್ಲಿಟ್ಟುಕೊಂಡು ಕ್ರಮ ಕೈಗೊಳ್ಳಲಾಗುತ್ತಿದೆ ಎಂದು ವಿವರಿಸಿದರು.

ಇದನ್ನೂ ಸಹ ಓದಿ: ಸರ್ಕಾರದ ಬಜೆಟ್‌ ಅನ್ನು ಮೀರಿಸಿದ ಶಕ್ತಿ ಯೋಜನೆ!! 5 ತಿಂಗಳಲ್ಲಿ 100 ಕೋಟಿಗೂ ಹೆಚ್ಚಿನ ಫಲಾನುಭವಿಗಳಿಗೆ ಲಾಭ


ವಿಧಾನಸೌಧದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, 4,547 ಹುದ್ದೆಗಳಲ್ಲಿ 1547 ಮಂದಿ ಪಿಎಸ್‌ಐ ಹಾಗೂ 3 ಸಾವಿರ ಕಾನ್ಸ್‌ಟೇಬಲ್‌ಗಳು ಇರಲಿದ್ದಾರೆ. ಪಿಎಸ್‌ಐ ಹುದ್ದೆಗಳ ಪೈಕಿ ಸದ್ಯ ಹೈಕೋರ್ಟ್‌ ಸೂಚನೆಯಂತೆ 545 ಪಿಎಸ್‌ಐ ಹುದ್ದೆಗಳ ನೇಮಕಾತಿಗೆ ಡಿಸೆಂಬರ್‌ನಲ್ಲಿ ಪರೀಕ್ಷೆ ನಡೆಸಲಾಗುತ್ತಿದೆ.

ಅದಾದ ನಂತರ ಈಗಾಗಲೆ ನೋಟಿಫಿಕೇಷನ್‌ ಹೊರಡಿಸಿರುವ 402 ಪಿಎಸ್‌ಐ ಹುದ್ದೆ ಭರ್ತಿಗೆ ಚಾಲನೆ ನೀಡಲಾಗುವುದು. ತದನಂತರ 600 ಮಂದಿ ಪಿಎಸ್‌ಐ ಹುದ್ದೆ ಭರ್ತಿಗೆ ಅರ್ಜಿ ಆಹ್ವಾನಿಸಲಾಗುವುದು. ಒಟ್ಟು 6 ತಿಂಗಳಲ್ಲಿ 1,547 ಪಿಎಸ್‌ಐಗಳ ನೇಮಕ ಮಾಡಿಕೊಳ್ಳಲಾಗುವುದು. ಅದರ ಜತೆಗೆ ಎಎಸ್‌ಐ ಹುದ್ದೆಯಲ್ಲಿರುವವರಿಗೆ ಎಸ್‌ಐ ಹುದ್ದೆಗೆ ಬಡ್ತಿ ನೀಡುವ ಪ್ರಕ್ರಿಯೆಯನ್ನೂ ಆರಂಭಿಸಲಾಗಿದೆ ಎಂದರು.

ಎರಡು ವರ್ಷಗಳಿಗೊಮ್ಮೆ ವರ್ಗಾವಣೆ:

ಪೊಲೀಸ್‌ ಇಲಾಖೆಯಲ್ಲಿ ಪ್ರತಿ ವರ್ಷ ವರ್ಗಾವಣೆ ಪ್ರಕ್ರಿಯೆ ನಡೆಸಲಾಗುತ್ತಿದೆ. ಆದರೆ, ಅದನ್ನು ಬದಲಿಸುವ ನಿರ್ಧಾರಕ್ಕೆ ಬರಲಾಗಿದೆ. ಇನ್ನು ಮುಂದೆ ಒಂದೇ ಜಾಗದಲ್ಲಿ ಎರಡು ವರ್ಷಗಳು ಸೇವೆ ಸಲ್ಲಿಸಿದ ನಂತರ ವರ್ಗಾವಣೆ ಮಾಡಲಾಗುತ್ತದೆ. ಆ ಕುರಿತಂತೆ ಕಾನೂನನ್ನೂ ರೂಪಿಸಲಾಗುವುದು ಎಂದು ಡಾ. ಪರಮೇಶ್ವರ್‌ ಹೇಳಿದರು.

ಇತರೆ ವಿಷಯಗಳು:

ಬೆಂಗಳೂರಿನ ಅರಮನೆ ಮೈದಾನದಲ್ಲಿ ಕಂಬಳ ಕಲರವ: ನವೆಂಬರ್‌ 25 ರಿಂದ ವೀಕ್ಷಕರಿಗೆ ಉಚಿತ ಪ್ರವೇಶ!!

NEET ಯುಜಿ ಪಠ್ಯಕ್ರಮದಲ್ಲಿ ಸಂಪೂರ್ಣ ಬದಲಾವಣೆ! ಈ ದಿನಾಂಕದಿಂದ ನೋಂದಣಿ ಪ್ರಾರಂಭ

Leave a Comment