rtgh

ಸರ್ಕಾರದ ಹೊಸ ಆದೇಶ.! ಈ ಎಲ್ಲಾ ಜನರ ರೇಷನ್‌ ಕಾರ್ಡ್‌ಗಳು ಇನ್ಮುಂದೆ ಚಾಲ್ತಿಯಲ್ಲಿರುವುದಿಲ್ಲ

ಹಲೋ ಸ್ನೇಹಿತರೇ, ಪಡಿತರ ಚೀಟಿ ಒಂದು ಗುರುತಿನ ಚೀಟಿಯಾಗಿದೆ. ಆದ್ದರಿಂದ ರೇಷನ್‌ ಕಾರ್ಡ್‌ನ ತಿದ್ದುಪಡಿ ಅಗತ್ಯವಾಗಿದೆ ಇದಕ್ಕೆ ಸರ್ಕಾರ ಈಗಾಗಲೇ ಅವಕಾಶವನ್ನು ನೀಡಿತ್ತು ಇದಲ್ಲದೆ ಅನ್ನಭಾಗ್ಯ ಯೋಜನೆ ಹಣ ಪಡೆದುಕೊಳ್ಳಲು ಮತ್ತು ಗೃಹಲಕ್ಷ್ಮಿ ಯೋಜನೆಯ ಹಣವನ್ನು ಪಡೆದುಕೊಳ್ಳಲು ರೇಷನ್‌ ಕಾರ್ಡ್‌ ಅತಿಮುಖ್ಯವಾಗಿದೆ. ಸರ್ವರ್‌ ಸಮಸ್ಯೆ ಉಂಟಾದ ಕಾರಣಕ್ಕೆ ರೇಷನ್‌ ಕಾರ್ಡ ತಿದ್ದುಪಡಿ ಆಗಿಲ್ಲ. ಆಗಲೇ ಸರ್ಕಾರದಿಂದ ಹೊಸ ಆದೇಶ ಪ್ರಕಟವಾಗಿದೆ. ಏನದು ಹೊಸ ಆದೇಶ.

ration card cancellation

ಇನ್ನು Ration Card ವಿತರಣೆ ಯಾವಾಗ:

ಸರ್ಕಾರ ಕಳೆದ 2 ವರ್ಷಗಳಿಂದ 2.96 ಲಕ್ಷ ಪಡಿತರ ಚೀಟಿಗೆ ಅರ್ಜಿ ಸಂದಾಯವಾಗಿದೆ ಆದರೆ Election ಮತ್ತು ಹಾಗೇ ಹೀಗೆ ಎನ್ನುವ ಕಾರಣವನ್ನು ಕೊಡುತ್ತ ಸರ್ಕಾರ ಪಡಿತರ ಚೀಟಿ ವಿತರಣೆಯನ್ನು ಮಾಡುವ ಕೆಲಸವನ್ನು ಮುಂದೂಡಿಕೊಂಡೆ ಬಂದಿದೆ. ಈಗ ಸರ್ಕಾರ ಇದರ ಬಗ್ಗೆ ಅಗತ್ಯ ಇರುವ ಫಲಾನುಭವಿಗಳ ಕುಟುಂಬಕ್ಕೆ ರೇಷನ್‌ ಕಾರ್ಡ್‌ ನೀಡಲು ಮುಂದಾಗಿದೆ. ಇಲ್ಲಿಯವರೆಗು ಯಾಗು ಹೊಸದಾಗಿ ರೇಷನ್‌ ಕಾರ್ಡ್‌ ಪಡೆದುಕೊಳ್ಳಲು ಅರ್ಜಿಯನ್ನು ಸಲ್ಲಿಸಿದ್ದಾರೊ ಅಂತಹ ಜನರಿಗೆ ರೇಷನ್‌ ಕಾರ್ಡ್‌ ನೀಡಬೇಕು ಎಂದು ನ. 29ಕ್ಕೆ ಆದೇಶವನ್ನು ಹೊರಡಿಸಲಾಗಿತ್ತು. ಹೀಗಾಗಿ ಡಿಸೆಂಬರ್‌ ಅಂತ್ಯದೊಳಗೆ ಹೊಸ ರೇಷನ್‌ ಕಾರ್ಡ್‌ ವಿತರಣೆಯಾಗುವ ನಿರೀಕ್ಷೆ ಇದೆ.

ಹೊಸದಾಗಿ ಅರ್ಜಿ ಸಲ್ಲಿಸಿದ ಹಳೆಯ ಪಡಿತರ ಫಲಾನುಭವಿಗಳಿಗೆ ಮಾತ್ರ ರೇಷನ್‌ ಕಾರ್ಡ್‌ ವಿತರಣೆ ಮಾಡಲಾಗುವುದು. ಹೊಸದಾಗಿ ರೇಷನ್‌ ಕಾರ್ಡ್ಗೆ ಅರ್ಜಿ ಸಲ್ಲಿಸುವವರಿಗೆ ಅವಕಾಶವಿಲ್ಲ. ಹೊಸ ಕಾರ್ಡ್ಗಳನ್ನು ವಿತರಣೆ ಮಾಡಿದ ಬಳಿಕ ಹೊಸ ಕಾರ್ಡ್‌ಗೆ ಅರ್ಜಿ ಆಹ್ವಾನದ ಬಗ್ಗೆ ಚಿಂತನೆ ನಡೆಸುತ್ತೇವೆ ಎಂದು ಆಹಾರ ಇಲಾಖೆ ತಿಳಿಸಿದೆ.

6 ತಿಂಗಳಿನಿಂದ ಪಡಿತರ ತೆಗೆದುಕೊಳ್ಳದೆ ಇದ್ರೆ ಕಾರ್ಡ್ ರದ್ದಾಗುತ್ತಾ?

ಸರ್ಕಾರ ಈ ವಿಷಯದ ಬಗ್ಗೆ ಸಾಕಷ್ಟು ಬಾರಿ ಮಾಹಿತಿಯನ್ನು ನೀಡಿದೆ. 6 ತಿಂಗಳುಗಳಿಂದ ರೇಷನ್‌ ಪಡೆಯದವರ ರೇಷನ್‌ ಕಾರ್ಡ್‌ಗಳನ್ನು ರದ್ದುಪಡಿಸುವುದಾಗಿ ಆದೇಶವನ್ನು ಬಿಡುಗಡೆ ಮಾಡಿತ್ತು. ಆದರೆ ಈಗ ಈ ನಿಯಮದಲ್ಲಿ ಸ್ವಲ್ಪ ಬದಲಾವಣೆಯನ್ನು ಮಾಡಲಾಗಿದೆ. ನೇರವಾಗಿ ರೇಷನ್‌ ಕಾರ್ಡ್ಗಳನ್ನು ರದ್ದುಗೊಳಿಸುವುದಿಲ್ಲ ಬದಲಾಗಿ ಅಮಾನತುಗೊಳಿಸುವುದು, ಅಂದರೆ ನಿಮ್ಮ ಹೆಸರಿನಲ್ಲಿ ರೇಷನ್‌ ಕಾರ್ಡ್‌ ಇದ್ದರು ಅದು ಚಾಲ್ತಿಯಲ್ಲಿ ಇರುವುದಿಲ್ಲ ಅದರಿಂದ ಯಾವುದೆ ಪ್ರಯೋಜನವಾಗುವುದಿಲ್ಲ ಒಂದು ವೇಳೆ 6 ತಿಂಗಳಿಂದ ಯಾಕೇ ರೇಷನ್‌ ಪಡೆದಿಲ್ಲ ಎನ್ನುವುದಕ್ಕೆ ಸರಿಯಾದ ಕಾರಣವನ್ನು ನೀಡಿದರೆ ಮಾತ್ರ ನಿಮಗೆ ಪಡಿತರ ಚೀಟಿಯನ್ನು ನೀಡಲಾಗುವುದು.


ಪರಿಶೀಲನೆ ಮಾಡಿ ಅಮಾನತ್ತು:

ಒಬ್ಬ ಸದಸ್ಯರು ಇರುವ ರೇಷನ್‌ ಕಾರ್ಡ್‌ನ್ನು ಹೊರತು ಪಡಿಸಿ ಬೇರೆ ಎಲ್ಲಾ ಪಡಿತರ ಚೀಟಿದಾರರ ಕುಟುಂಬದವರು ಕಳೆದ 6 ತಿಂಗಳಿನಿಂದ ರೇಷನ್‌ ಪಡೆಯದಿದ್ದಲ್ಲಿ ಅಂತಹವರನ್ನು ಗುರುತಿಸಿ ಅಂತವರ ಮನೆಗೆ ಹೋಗಿ ಪರಿಶೀಲನೆ ಮಾಡಿ ಯಾಕೆ 6 ತಿಂಗಳಿನಿಂದ ರೇಷನ್‌ ತೆಗೆದುಕೊಳ್ಳುತ್ತಿಲ್ಲ ಎಂದು ವಿಚಾರಿಸಿ ಚಾಲ್ತಿಯಿಂದ ಹೊರತೆಗೆಯಲಾಗುವುದು.

ಮತ್ತೆ Ration Card Active ಮಾಡುವುದು ಹೇಗೆ?

ಅಮಾನತ್ತು ಆದ ನಿಮ್ಮ ರೇಷನ್‌ ಕಾರ್ಡ್‌ನ್ನು ಮತ್ತೆ ಚಲಾವಣೆಗೆ ತರಲು ನೀವು 6 ತಿಂಗಳಿನಿಂದ ರೇಷನ್‌ ಪಡೆಯದ ಸಂದರ್ಭದಲ್ಲಿ ನಿಮ್ಮ ತನಿಖೆಗೆ ಆಹಾರ ಇಲಾಖೆ ಸಿಬ್ಬಂದಿ ಮನೆಗೆ ಬಂದ ಸಂದರ್ಭದಲ್ಲಿ ಸರಿಯಾದ ಕಾರಣವನ್ನು ನೀಡಿ ಕೇಳಿಕೊಳ್ಳಬಹುದು ಅಥವ ನ್ಯಾಯಬೆಲೆ ಅಂಗಡಿಗೆ ಹೋಗಿ ನಿಮ್ಮ ಬಯೋಮೆಟ್ರಿಕ್‌ ಮೂಲಕ ಆಹಾರ ಧಾನ್ಯಗಳನ್ನು ಪುನಂ ಪಡೆಯುವ ಮೂಲಕ ಆರಂಭಿಸಬಹುದಾಗಿದೆ. ಹೀಗೆ ಮಾಡಿದರೆ ಮತ್ತೆ ನಿಮ್ಮ ರೇಷನ್‌ ಕಾರ್ಡ್‌ ಆಕ್ಟಿವೇಟ್ ಆಗುತ್ತದೆ.

ಮೈಸೂರು ದಸರಾ ಪ್ರೀತಿಯ ಅರ್ಜುನ ಸಾವು: ಅರಮನೆ ಪುರೋಹಿತರಿಂದ ಅಂತಿಮ ವಿಧಿ ವಿಧಾನ

ಮುಂದಿನ ತಿಂಗಳಿನಿಂದ ಉಚಿತ ರೇಷನ್‌ ಸಿಗಲ್ಲ!! ಈ ಕಾರ್ಡ್‌ ಇದ್ದರೆ ಮಾತ್ರ ಉಚಿತ ಪಡಿತರ ಲಭ್ಯ

Leave a Comment