ಹಲೋ ಸ್ನೇಹಿತರೇ, ಇಂದು ಆಧಾರ್ ಕಾರ್ಡ್ ಅಷ್ಟೇ ಪ್ರಾಮುಖ್ಯತೆಯನ್ನು ರೇಷನ್ ಕಾರ್ಡ್ ಪಡೆದಿದೆ. ಸರ್ಕಾರದ ಯಾವುದೇ ಪ್ರಯೋಜನ ಪಡೆಯಬೇಕಾದರೂ ಆಧಾರ್ಕಾರ್ಡ್ ಜೊತೆ ರೇಷನ್ ಕಾರ್ಡ್ ಕೂಡ ಇಂಪಾರ್ಟೆಂಟ್. ಅಂತೆಯೇ ಇದೀಗ ಅನೇಕ ಮಂದಿ ಹೊಸ ರೇಷನ್ ಕಾರ್ಡ್(New Ration card) ಗೆ ಅರ್ಜಿ ಹಾಕಿದ್ದು, ಇದರ ವಿತರಣೆ ಬಗ್ಗೆ ಸರ್ಕಾರ ಬಿಗ್ ಅಪ್ಡೇಟ್ ನೀಡಿದ್ದು ಇಂತವರಿಗೆ ಮಾತ್ರ ಕಾರ್ಡ್ ವಿತರಿಸುವುದಾಗಿ ಹೇಳಿದೆ.
ಹೌದು, ಎಲ್ಲಾ ರೀತಿಯಿಂದಲೂ ಅನುಕೂಲ ಇದ್ದವರೂ ಕೂಡ ಸರ್ಕಾರದ ಸವಲತ್ತು ಪಡೆಯಲು BPL ಕಾರ್ಡ್ ಪಡೆಯಲು ಅರ್ಜಿ ಹಾಕಿದ್ದಾರೆ. ಆದರೆ ಇದನ್ನು ಮನಗಂಡಿರುವ ಸರ್ಕಾರ ಹೊಸ ಕಾರ್ಡ್ ಗಳನ್ನು ವಿತರಿಸಲು ಕೆಲವು ಹೊಸ ರೂಲ್ಸ್ ಜಾರಿಗೆ ತಂದಿದೆ. ಆಹಾರ ಇಲಾಖೆಯ ಅನೇಕ ಅಧಿಕಾರಿಗಳು ಸ್ಥಳಕ್ಕೆ ಬಂದು ಕುಟುಂಬದ ಪರಿಸ್ಥಿತಿಯನ್ನು ಪರಿಶೀಲಿಸಿ ನಂತರವಷ್ಟೇ ಜನರಿಗೆ ಹೊಸ ಪಡಿತರ ವಿತರಣೆ ಮಾಡಲಿದ್ದಾರೆ ಎನ್ನುವ ಮಾಹಿತಿ ತಿಳಿದುಬಂದಿದೆ. ಇದರಿಂದ ಅನೇಕರಿಗೆ ಹೊಸ ಕಾರ್ಡ್ ವಿತರಣೆಯಾಗದ ಸಾಧ್ಯತೆ ಉಂಟು ಎಂದಿದ್ದಾರೆ.
ಇಷ್ಟು ಮಾತ್ರವಲ್ಲದೆ ಈಗಾಗಲೇ ಸಲ್ಲಿಕೆ ಆಗಿರುವ ಅರ್ಜಿಗಳನ್ನು ಕೂಡ ಬಹಳ ಸೂಕ್ಷ್ಮವಾಗಿ ಪರಿಶೀಲಿಸಿ ನೂರಕ್ಕೆ ನೂರು ಪ್ರತಿಶತದಷ್ಟು ಅರ್ಹರು ಎನಿಸಿದ ಕುಟುಂಬದವರಿಗೆ ಮಾತ್ರ ಹೊಸ ಪಡಿತರ ಚೀಟಿ ವಿತರಣೆ ಮಾಡಲು ಸರ್ಕಾರ ಮುಂದಾಗಿದೆ. ಆದ್ರೆ ಆಹಾರ ಇಲಾಖೆ ಕೊಟ್ಟಿರುವ ಮಾಹಿತಿಯ ಪ್ರಕಾರ ಸದ್ಯದಲ್ಲಿಯೇ ಸುಮಾರು ಏಳು ಸಾವಿರ ಹೊಸ ಪಡಿತರ ಚೀಟಿಯನ್ನು ರೂಪಿಸುವುದುದಾಗಿ ಚಿಂತನೆ ನಡೆಸುತ್ತಿದೆ ಎಂದು ತಿಳಿಸಿದ್ದಾರೆ.
ಇತರೆ ವಿಷಯಗಳು:
ದಿಢೀರ್ ಬದಲಾವಣೆ ಕಂಡ ಚಿನ್ನ!! ಬೆಲೆಯಲ್ಲಿನ ಏರಿಳಿತ ನೋಡಿ ಜನರು ಮಾಡಿದ್ದೇನು?
ಶಬರಿಮಲೆ ಭಕ್ತರಿಗೆ ಸಿಹಿಸುದ್ದಿ!! KSRTC ಬೆಂಗಳೂರಿನಿಂದ ಹೊಸ ವೋಲ್ವೋ ಬಸ್ ಸೇವೆ, ಡಿಸೆಂಬರ್ 1 ರಿಂದ ಪ್ರಾರಂಭ