ಹಲೋ ಸ್ನೇಹಿತರೇ, ರಾಜ್ಯಾದ್ಯಂತ ನಿರ್ಮಿಸಿರುವ 36,000 ಮನೆಯನ್ನು ಸಿಎಂ ಸಿದ್ದರಾಮಯ್ಯ ಹಸ್ತಾಂತರ ಮಾಡಲಿದ್ದಾರೆ. ಈ ಬಗ್ಗೆ ವಸತಿ ಸಚಿವರಾದ ಜಮೀರ್ ಅಹ್ಮದ್ ಮಾಹಿತಿಯನ್ನು ನೀಡಿದ್ದಾರೆ.ಇನ್ನು ಹೆಚ್ಚು ಮಾಹಿತಿಯನ್ನು ಲೇಖನದಲ್ಲಿ ತಿಳಿಯಿರಿ.
ಕೊಳಗೇರಿ ಅಭಿವೃದ್ಧಿ ಮಂಡಳಿಯ ವತಿಯಿಂದ ರಾಜ್ಯಾದ್ಯಂತ ಬಡ ಕುಟುಂಬಗಳಿಗೆ ನಿರ್ಮಿಸಲಾದ 1.82 ಲಕ್ಷ ಮನೆಗಳ ಪೈಕಿ 36,000 ಮನೆಯನ್ನು ಮುಂದಿನ ತಿಂಗಳು ಸಿಎಂ ಸಿದ್ದರಾಮಯ್ಯ ಅವರು ವಿತರಣೆಯನ್ನು ಮಾಡಲಿದ್ದಾರೆ.
ಈ ಹಿನ್ನೆಲೆ ಪೂರ್ವಭಾವಿಯಾಗಿ ಬೆಂಗಳೂರಿನಲ್ಲಿ ನಿರ್ಮಾಣವಾಗುತ್ತಿರುವ ಮನೆಗಳ ಕಾಮಗಾರಿಯನ್ನು ವಸತಿ ಸಚಿವ ಜಮೀರ್ ಅಹಮದ್ ಖಾನ್ ಬುಧವಾರ ಪರಿಶೀಲನೆಯನ್ನು ನಡೆಸಿದ್ದಾರೆ.
ಬೆಂಗಳೂರಿನ KR ಪುರದ ನಗರ ನಾಗೇನಹಳ್ಳಿಯಲ್ಲಿ ನಿರ್ಮಿಸುತ್ತಿರುವ 800 ಮತ್ತು ಸರ್ವಜ್ಞ ನಗರ ಕ್ಷೇತ್ರದ ಚಟ್ಟಪ್ಪ ಗಾರ್ಡನ್‌ನಲ್ಲಿ ನಿರ್ಮಾಣ ಮಾಡುತ್ತಿರುವ 209 ಮನೆಗಳ ಕಾಮಗಾರಿ ಪರಿಶೀಲನೆ ಮಾಡಿದ ಸಚಿವರು ಫೆಬ್ರವರಿ 20 ರೊಳಗೆ ಮೂಲ ಸೌಕರ್ಯ ಸಹಿತವಾಗಿ ಎಲ್ಲ ಕಾಮಗಾರಿ ಪೂರ್ಣಗೊಳಿಸಿ ಕಾಂಪೌಂಡ್ ಗೋಡೆಯನ್ನು ಸಹಿತ ನಿರ್ಮಿಸಬೇಕು ಎಂದು ಸೂಚಿನೆಯನ್ನು ನೀಡಿದ್ದಾರೆ.
ಈ ಸಮಯದಲ್ಲಿ ಮಾತನಾಡಿದ ಸಚಿವರು, ” ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಫೆ ತಿಂಗಳಲ್ಲಿ ಕೊಳಗೇರಿ ಅಭಿವೃದ್ಧಿ ಮಂಡಳಿ ಮತ್ತು ರಾಜೀವ್ ಗಾಂಧಿ ವಸತಿ ನಿಗಮದಿಂದ ಬಡವರಿಗೆ ನಿರ್ಮಾಣವಾಗುತ್ತಿರುವ 2.32 ಲಕ್ಷ ಮನೆಗಳ ಪೈಕಿ ಮೊದಲ ಹಂತದಲ್ಲಿ 40,000 ಮನೆ ಏಕ ಕಾಲದಲ್ಲಿ ವಿತರಣೆ ಮಾಡುತ್ತಾರೆ ” ಎಂದು ಮಾಹಿತಿ ನೀಡಿದ್ದಾರೆ.
ಫಲಾನುಭವಿಗಳಿಂದ ಒಂದು ಲಕ್ಷ ಮಾತ್ರ
10 ವರ್ಷಗಳಿಂದ ಸ್ವಂತ ಸೂರಿನ ಕನಸನ್ನು ಕಾಣುತ್ತಿದ್ದ ಕುಟುಂಬಗಳು ನೆಮ್ಮದಿಯನ್ನು ಕಾಣಲಿವೆ. 1 ಲಕ್ಷ ರೂ. ಫಲಾನುಭವಿ ಕೊಟ್ಟರೆ ಉಳಿದ ಮೊತ್ತವನ್ನು ಸರ್ಕಾರವೇ ಭರಿಸುತ್ತಿದೆ ಎಂದು ವಿವರಿಸಿದ್ದಾರೆ. ಕೊಳಗೇರಿ ಅಭಿವೃದ್ಧಿ ಮಂಡಳಿ ಅಧ್ಯಕ್ಷ ಪ್ರಸಾದ್ ಅಬ್ಬಯ್ಯ, ಆಯುಕ್ತ ವೆಂಕಟೇಶ್, ಪ್ರಧಾನ ಅಭಿಯಂತರ ಬಾಲರಾಜು ಇದರಲ್ಲಿ ಉಪಸ್ಥಿತರಿದ್ದರು.
ಇತರೆ ವಿಷಯಗಳು
ನಾಳೆಯಿಂದ ಈ ಐದು ರಾಶಿಯವರ ಭಾಗ್ಯ ಬೆಳಗಲಿದೆ.! ಇಟ್ಟ ಪ್ರತಿ ಹೆಜ್ಜೆಯಲ್ಲೂ ಜಯ
14ಕೆಜಿ ಎಲ್‌ಪಿಜಿ ಗ್ಯಾಸ್ ಬೆಲೆ 503 ರೂ.!! ನಾಳೆಯಿಂದ ಹೊಸ ಬೆಲೆ ಅನ್ವಯ