ಹಲೋ ಸ್ನೇಹಿತರೇ, ಕನಸು ಕಾಣುವುದು ಸಹಜ. ಆದರೆ ಅದನ್ನು ಈಡೇರಿಸಿಕೊಳ್ಳಲು ಸಾಕಷ್ಟು ಶ್ರಮ ಬೇಕು. ಅದರಲ್ಲೂ ಒಂದು ಸ್ವಂತ ಮನೆ ನಿರ್ಮಾಣ ಮಾಡಿಕೊಳ್ಳಬೇಕು ಅಂದ್ರೆ, ಅದಕ್ಕೆ ಸಾಕಷ್ಟು ಆರ್ಥಿಕ ನೆರವು ಕೂಡ ಬೇಕಾಗುತ್ತದೆ.
ಬಡವರಿಗೆ ಹೋಮ್ ಲೋನ್ ಮಾಡಿ ಮನೆ ಕಟ್ಟಿಕೊಳ್ಳಲು ಸಾಧ್ಯವಾಗದೇ ಇರುವ ಕಾರಣ ಸ್ವಂತ ಸೂರು ನಿರ್ಮಾಣ ಮಾಡಿಕೊಳ್ಳುವ ಅವರ ಕನಸು ಹಾಗೆಯೆ ಉಳಿದುಬಿಡುತ್ತದೆ.
ಪ್ರಧಾನ ಮಂತ್ರಿ ಆವಾಸ್ ಯೋಜನೆ
ಬಡವರ ಸ್ವಂತ ಮನೆ ಎನ್ನುವುದು ಕೇವಲ ಅವರ ಕನಸು ಮಾತ್ರವಲ್ಲ ಇದೊಂದು ಮೂಲಭೂತ ಅವಶ್ಯಕತೆಯಾಗಿದ್ದು, ದೇಶದಲ್ಲಿ ವಾಸಿಸುವ ಪ್ರತಿಯೊಬ್ಬ ವ್ಯಕ್ತಿ ಕೂಡ ಈ ಮೂಲಭೂತ ಅವಶ್ಯಕತೆಯನ್ನು ಪೂರೈಸಿಕೊಳ್ಳಲು ಹಕ್ಕುದಾರನಾಗಿರುತ್ತಾನೆ. ಸರ್ಕಾರ ಪ್ರಧಾನಮಂತ್ರಿ ಆವಾಸ್ ಯೋಜನೆಯ ಅಡಿಯಲ್ಲಿ ಅತಿ ಕಡಿಮೆ ಬೆಲೆಗೆ ಮನೆ ನಿರ್ಮಾಣ ಮಾಡಿಕೊಳ್ಳಲು ಬಡವರಿಗೆ ಅವಕಾಶ ನೀಡಿದೆ.
ಸ್ವಂತ ಮನೆ ಜೀವನಕ್ಕೆ ಭದ್ರ ಬುನಾದಿಯನ್ನು ಒದಗಿಸುತ್ತದೆ. ಇಂದು ಎಲ್ಲೆಲ್ಲೂ ಗುಡಿಸಲುಗಳಲ್ಲಿ ಸಣ್ಣ ಪುಟ್ಟ ಮನೆಗಳಲ್ಲಿ ಬಾಡಿಗೆ ಪಡೆದುಕೊಂಡು ಉಳಿದುಕೊಳ್ಳುವ ಕುಟುಂಬಗಳಿಗಾಗಿ ಪ್ರಧಾನಮಂತ್ರಿ ಅವಾಸ್ ಯೋಜನೆಯನ್ನು ಆರಂಭಿಸಲಾಗಿದೆ.
ಚಾಲ್ತಿಯಲ್ಲಿ ಇದ್ದ ಇಂದಿರಾ ಆವಾಸ್ ಯೋಜನೆಯನ್ನು 2018ರಿಂದ ಪ್ರಧಾನಮಂತ್ರಿಯ ಆವಾಸ್ ಯೋಜನೆ ಎಂದು ಮರುನಾಮಕರಣ ಮಾಡಲಾಗಿದ್ದು, ಹಳೆ ಯೋಜನೆಗಿಂತ ಹೊಸ ಯೋಜನೆಯಲ್ಲಿ ಸಾಕಷ್ಟು ಹೆಚ್ಚಿನ ಪ್ರಯೋಜನಗಳನ್ನು ಸೇರಿಸಲಾಗಿದೆ.
ಪ್ರಧಾನ ಮಂತ್ರಿ ಆವಾಸ್ ಯೋಜನೆಯ ಪ್ರಯೋಜನಗಳು
ಪ್ರಸ್ತುತ ಯೋಜನೆಯ ಅಡಿಯಲ್ಲಿ ಸಿಗುವ ಸಹಾಯಧನದ ಮೊತ್ತವನ್ನು ನೋಡೋಣ. ಬಯಲು ಪ್ರದೇಶಗಳಲ್ಲಿ ಮನೆ ನಿರ್ಮಾಣ ಮಾಡಿಕೊಳ್ಳುವುದಕ್ಕೆ ರೂ.1,20,000 ಹಾಗೂ ಗುಡ್ಡಗಾಡು ಪ್ರದೇಶದಲ್ಲಿ ಮನೆ ನಿರ್ಮಾಣ ಮಾಡಿಕೊಳ್ಳುವುದಕ್ಕೆ 1,30,000 ರೂಪಾಯಿಗಳನ್ನು ಸರ್ಕಾರ ಒದಗಿಸುತ್ತದೆ.
ಶ್ರೀರಾಮ ಮಂದಿರ ಫೋಟೋ ಇರೋ 500 ರ ನೋಟು ! ನಿಮಗೂ ಬೇಕಿದ್ದರೆ ಕ್ಲಿಕ್ ಮಾಡಿ
ಯೋಜನೆ ಅಡಿಯಲ್ಲಿ ನೀಡಲಾಗುತ್ತಿರುವ ಸಹಾಯಧನದ ಮೊತ್ತವನ್ನು ಹೆಚ್ಚಿಸಬೇಕು ಎನ್ನುವ ಕೂಗು ಕೇಳಿ ಬರುತ್ತಿದೆ. ಇನ್ನೊಂದೆಡೆ ಒಂದು ಲಕ್ಷ ರೂಪಾಯಿಗಳನ್ನು ಸರ್ಕಾರ ಹೆಚ್ಚಿಸಿದೆ ಎನ್ನುವ ಮಾಹಿತಿ ಇದೆ, ಆದರೆ ಇದರ ಬಗ್ಗೆ ಕೇಂದ್ರ ಸರ್ಕಾರದಿಂದ ಅಧಿಕೃತ ಅಧಿಸೂಚನೆ ಹೊರಬಿದ್ದಿಲ್ಲ.
ಪ್ರಧಾನ್ ಮಂತ್ರಿ ಆವಾಸ್ ಪ್ಲಸ್ ಯೋಜನಾ
ಪಿಎಂ ಆವಾಸ್ ಪ್ಲಾಸ್ ಯೋಜನೆಯು 2018-19ರ ಸಮೀಕ್ಷೆಯೊಂದರ ಪ್ರಕಾರ ಎರಡು ಕೋಟಿ ತೊಂಬತ್ತೈದು ಲಕ್ಷ (2,95,00,000) ಜನರು ಈ ಯೋಜನೆಯ ಪ್ರಯೋಜನ ಪಡೆದುಕೊಂಡಿದ್ದಾರೆ.
ಪ್ರಧಾನ ಮಂತ್ರಿ ಆವಾಸ್ ಯೋಜನೆ ಅಪ್ಲೈ ಮಾಡುವುದು ಹೇಗೆ?
ಪ್ರಧಾನ ಮಂತ್ರಿ ಆವಾಸ್ ಪ್ಲಸ್ ಯೋಜನೆಯ ಅಡಿಯಲ್ಲಿ ಸ್ವಲ್ಪ ಸೂರು ಪಡೆದುಕೊಳ್ಳಲು ಅಗತ್ಯ ಇರುವ ದಾಖಲೆಗಳನ್ನು ಅರ್ಜಿ ಫಾರಂ ಭರ್ತಿ ಮಾಡುವುದರ ಮೂಲಕ ಹತ್ತಿರದ ಗ್ರಾಮ ಪಂಚಾಯತ್ ಗೆ ಕೊಡಿ.
ನಿಮ್ಮ ಅರ್ಜಿಯನ್ನು ಸಂಬಂಧಪಟ್ಟ ಅಧಿಕಾರಿಗಳು ಪರಿಶೀಲನೆ ಮಾಡಿಸಿ, ಸ್ಥಳಕ್ಕೆ ಆಗಮಿಸಿ ನಿಮ್ಮ ಸ್ವಂತ ಮನೆ ನಿರ್ಮಾಣ ಮಾಡಿಕೊಡುವ ಅಗತ್ಯ ಇದೆ ಎಂಬುದನ್ನು ಖಚಿತಪಡಿಸಿಕೊಂಡರೆ, ಈ ಯೋಜನೆಯ ಹಣವನ್ನು ಮಂಜೂರನ್ನು ಮಾಡಲಾಗುತ್ತದೆ.
ಹಾಗಾಗಿ ಜೀವನದಲ್ಲಿ ಒಮ್ಮೆಯಾದರೂ ಸ್ವಂತ ಮನೆಯಲ್ಲಿ ವಾಸಿಸಬೇಕು ಎಂದುಕೊಳ್ಳುವ ಬಡವರ್ಗದ ಜನರು ಕೂಡ ಪ್ರಧಾನಮಂತ್ರಿಯ ಆವಾಸ್ ಯೋಜನೆ ಅಡಿಯಲ್ಲಿ ಸ್ವಂತ ಮನೆ ನಿರ್ಮಾಣ ಮಾಡಿಕೊಳ್ಳಲು ಅವಕಾಶವಿದೆ. ಇಂದೇ ಅಪ್ಲೈ ಮಾಡಿ.
ಇತರೆ ವಿಷಯಗಳು:
ಕೋಚಿಂಗ್ ಸಂಸ್ಥೆಗಳಿಗೆ ಹೊಸ ಮಾರ್ಗಸೂಚಿ; ಈ ವಿದ್ಯಾರ್ಥಿಗಳನ್ನು ದಾಖಲು ಮಾಡುವಂತಿಲ್ಲ!
ರಾಮ ಮಂದಿರ ಉದ್ಘಾಟನೆ ಪ್ರಯುಕ್ತ, ಜನವರಿ 22 ರಂದು ಎಲ್ಲಾ ಶಾಲೆಗಳಿಗೆ ರಜೆ ಆದೇಶ