rtgh

ತಮ್ಮದೇ ಆದ ಸ್ವಂತ ಸೂರು ನಿರ್ಮಿಸಿಕೊಳ್ಳಲು ಕೇಂದ್ರದಿಂದ ಆರ್ಥಿಕ ನೆರವು!

ಹಲೋ ಸ್ನೇಹಿತರೇ, ಹೊಸ ಲೇಖನಕ್ಕೆ ನಿಮಗೆ ಆತ್ಮೀಯವಾದ ಸ್ವಾಗತ. ಬಡ ಕುಟುಂಬಗಳು ಕೈಗುಟುಕುವಂತಹ ದರಗಳಲ್ಲಿ ಸಾಲವನ್ನು ಪಡೆದುಕೊಂಡು ಮನೆ ನಿರ್ಮಿಸುವುದು ಕನಸಿನ ಮಾತಾಗಿದೆ. ಅದಕ್ಕಾಗಿ ಸರ್ಕಾರದಿಂದ ಲಕ್ಷಾಂತರ ಕುಟುಂಬಗಳಿಗೆ ಮನೆ ನಿರ್ಮಿಸುವಂತಹ ಕನಸು ನನಸಾಗಬೇಕು ಎಂಬ ಉದ್ದೇಶದಿಂದ ಈ ವಸತಿ ಯೋಜನೆಯನ್ನು ಜಾರಿಗೆ ತರಲಾಗಿದೆ. ಇನ್ನು ಹೆಚ್ಚಿನ ಮಾಹಿತಿಯನ್ನು ಈ ಲೇಖನದಲ್ಲಿ ನೀಡಲಾಗಿದೆ. ಕೊನೆಯವರೆಗೂ ಓದಿ.

PM Awas Yojana

ತಮ್ಮದೇ ಆದ ಸ್ವಂತ ಸೂರು ನಿರ್ಮಿಸಿಕೊಳ್ಳಲು ಕೇಂದ್ರ ಸರ್ಕಾರವು ಕೆಲವು ಮುಖ್ಯ ಯೋಜನೆಗಳನ್ನು ಜಾರಿಗೊಳಿಸಿದೆ. ಈ ಯೋಜನೆಯ ಅಡಿಯಲ್ಲಿ ಬಡ ಕುಟುಂಬದವರಿಂದ ಹಿಡಿದು ಮಧ್ಯಮ ಕುಟುಂಬಗಳವರೆಗೆ ಕಡಿಮೆ ಬಡ್ಡಿಯಲ್ಲಿ ಸರ್ಕಾರ ಅವರಿಗೆ ಸಾಲ ಸೌಲಭ್ಯವನ್ನು ನೀಡಿದೆ. ತಮ್ಮದೇ ಆದ ವಸತಿ ನಿರ್ಮಿಸಲು ಸಾಧ್ಯವಾಗುತ್ತದೆ.

2015ರಲ್ಲಿ ಪಿಎಂ ಆದ ಮೋದಿಯವರ ನೇತೃತ್ವದಲ್ಲಿ ಬಿಜೆಪಿ ಸರ್ಕಾರವು ಪಿಎಂ ಆವಾಸ್‌ ಯೋಜನೆಯನ್ನು ಆರಂಭಿಸಿದೆ. ಇಂದಿರಾ ಗಾಂಧಿ ಆವಾಸ್‌ ಯೋಜನೆಯನ್ನು ಪ್ರಧಾನಮಂತ್ರಿ ಆವಾಸ್ ಯೋಜನೆ ಎಂದು ಮರು ನಾಮಕರಣವನ್ನು ಮಾಡಲಾಗಿದೆ. ಇದರ ಅಡಿಯಲ್ಲಿ ಬಡಬಗ್ಗರಿಗೆ ಮನೆಗಳನ್ನು ಕಲ್ಪಿಸುತ್ತಿದೆ.

ದೇಶದಲ್ಲಿ ಬಡ ಕುಟುಂಬದವರು ಕೈಗೆಟುಕುವಂತಹ ದರದಲ್ಲಿ ಸಾಲ ಸೌಲಭ್ಯ ಪಡೆದುಕೊಂಡು ಲಕ್ಷಾಂತರ ಕುಟುಂಬಗಳು ಮನೆ ಪಡೆದುಕೊಳ್ಳುವಂತೆ ಆಗಬೇಕು ಎನ್ನುವಂತಹ ಉದ್ದೇಶದಿಂದ ಇ ಯೋಜನೆಯನ್ನು ಜಾರಿಗೆ ತರಲಾಗಿತ್ತು. ಈ ಯೋಜನೆಯ ಅಡಿಯಲ್ಲಿ ಪಡೆದುಕೊಂಡು ಸುಮಾರು 2 ಕೋಟಿ ಮನೆಗಳನ್ನು ನಿರ್ಮಾಣ ಮಾಡುವಂತಹ ಗುರಿಯನ್ನು ಹೊಂದಿದೆ.


ಇದನ್ನು ಸಹ ಓದಿ: ಶಕ್ತಿ ಯೋಜನೆ ಶತಕೋಟಿ ದಾಟಿದ ಬೆನ್ನಲ್ಲೇ ಮಹಿಳೆಯರಿಗೆ ಸಿಹಿ ಸುದ್ದಿ..! ಸರ್ಕಾರದಿಂದ ಹೊಸ ಯೋಜನೆ ಜಾರಿ

ಆವಾಸ್‌ ಯೋಜನೆಯಡಿಯಲ್ಲಿ 6.50% ಬಡ್ಡಿದರಲ್ಲಿ ಸಾಲ ಸೌಲಭ್ಯ ದೊರೆಯಲಿದೆ. ಈ ಸಾಲ ತೀರಿಸಲು ಸರ್ಕಾರವು 20 ವರ್ಷಗಳ ಕಾಲವಧಿಯನ್ನು ನೀಡಿದೆ. ಅಪಾರ್ಟ್ಮೆಂಟ್‌ ರೀತಿಯಲ್ಲಿ ಮನೆಯನ್ನು ನಿರ್ಮಿಸಲಾಗುವುದು.

ನೆಲಮಹಡಿಯ ಮನೆಗಳಲ್ಲಿ ಅಂಗವೈಕಲ್ಯತೆಯನ್ನು ಹೊಂದಿದವರು ಹಾಗೂ ಹಿರಿಯ ನಾಗರೀಕರಿಗಾಗಿ ಮೀಸಲಿಡಲಾಗಿದೆ. ಗೃಹ ನಿರ್ಮಾಣಕ್ಕೆ ಸುಸ್ಥಿರ ಹಾಗೂ ಪರಿಸರ ಸ್ನೇಹಿ ತಂತ್ರಜ್ಞಾನವನ್ನು ಬಳಕೆ ಮಾಡಿ ಎಂದು ಸರ್ಕಾರವು ತಿಳಿಸಿದೆ. ಎಲ್ಲಾ ಗ್ರಾಮೀಣ ಹಾಗೂ ನಗರ ಭಾಗದ ಜನರಿಗೆ ಈ ಯೋಜನೆಯಡಿಯಲ್ಲಿ ಪ್ರಯೋಜನ ಪಡೆದುಕೊಳ್ಳಲು ಅವಕಾಶವಿದೆ. ನಗರಗಳಲ್ಲಿ 3 ಹಂತಗಳಲ್ಲಿ ಯೋಜನೆಯನ್ನು ಅನುಷ್ಠಾನಗೊಳಿಸಬಹುದಾಗಿದೆ.

ಪ್ರಯೋಜನಗಳು:

  • ಆರ್ಥಿಕವಾಗಿ ಹಿಂದುಳಿದ ವರ್ಗ (EWS) ಗಳಿಗೆ 3 ಲಕ್ಷ ಸಾಲವನ್ನು ನೀಡಲಾಗುವುದು.
  • ಕಡಿಮೆ ಆದಾಯದ ಗುಂಪು (LIG)ಗಳಿಗೆ 3 ಲಕ್ಷದಿಂದ 6 ಲಕ್ಷ ರೂ. ಸಾಲ ಕೊಡಲಾಗುತ್ತದೆ.
  • ಮಧ್ಯಮ ಆದಾಯ 1 ನೇ ವರ್ಗ (MIG1) ಕ್ಕೆ 6 ಲಕ್ಷದಿಂದ 12 ಲಕ್ಷ ರೂ ಸಾಲ ಸಿಗುತ್ತದೆ.
  • ಮಧ್ಯಮ ಆದಾಯ 2ನೇ ವರ್ಗ (MIG2)ಕ್ಕೆ 12 ರಿಂದ 18 ಲಕ್ಷ ರೂ ಸಾಲ ಸುಲಭವಾಗಿ ಪಡೆಯಬಹುದು.

ಇನ್ನು ಯಾವುದೇ ಫಲಾನುಭವಿಗಳು ಕ್ರೆಡಿಟ್ ಲಿಂಕ್ ಸಬ್ಸಿಡಿ ಘಟಕದ ಅಡಿಯಲ್ಲಿ ಸಾಲ ಸೌಲಭ್ಯವನ್ನು ಪಡೆಯುವುದಾದರೆ 2.67 ಲಕ್ಷ ರೂಪಾಯಿ ನೀಡುತ್ತದೆ ಹಾಗೂ ಬಡ್ಡಿಯ ಮೇಲೆ ಸಬ್ಸಿಡಿ ಕೂಡ ಪಡೆಯಬಹುದು. ಮನೆ ಖರೀದಿ ಅಥವಾ ಮನೆ ನಿರ್ಮಾಣದ ಸಮಯದಲ್ಲಿ ಈ ಹಣವನ್ನು ಸರ್ಕಾರವು ಪಾವತಿಸುತ್ತದೆ.

ಪ್ರಧಾನಮಂತ್ರಿಯ ಆವಸ್‌ ಯೋಜನೆಯಡಿಯಲ್ಲಿ ಗ್ರಾಮೀಣ ಹಾಗೂ ನಗರ ಪ್ರದೇಶದ ಯೋಜನೆ ಎಂದು 2 ವಿಭಾಗಗಳಾಗಿ ವಿಂಗಡಿಸಲಾಗಿದೆ. ಯೋಜನೆಯ ಪ್ರಯೋಜನವನ್ನು ಪಡೆದುಕೊಂಡರೆ 12% ನಷ್ಟು ಇರುವಂತಹ GST ಯನ್ನು 8% ಇಳಿಕೆ ಮಾಡಲಾಗುತ್ತದೆ. ಬಡವರಿಗೆ ಮನೆ ಮಾಡಿಕೊಳ್ಳಲು ಇರುವಂತಹ ಉಪಯುಕ್ತ ಯೋನೆಯಾಗಿದ್ದು ಕೂಡಲೇ ಪ್ರಯೋಜನ ಪಡೆಯಿರಿ

ಶಾಲಾ ಮಕ್ಕಳಲ್ಲಿ ಕಾಣಿಸಿಕೊಂಡ ನಿಗೂಢ ವೈರಸ್!!‌ ನೇರ ಶ್ವಾಸಕೋಶಕ್ಕೆ ಅಟ್ಯಾಕ್

ಸಂಗೀತಾ ಶೃಂಗೇರಿ ಸಾಮಾಜಿಕ ಮಾಧ್ಯಮದಲ್ಲಿ ಹಿನ್ನಡೆ; ಟೀಮ್‌ ಚೇಂಜ್‌ ಮಾಡಿದ್ದೆ ಮುಳುವಾಯ್ತಾ?

Leave a Comment