ಹಲೋ ಸ್ನೇಹಿತರೇ ನಮ್ಮ ಇಂದಿನ ಈ ಲೇಖನಕ್ಕೆ ಸ್ವಾಗತ, ಸರ್ಕಾರವು ಜನರಿಗಾಗಿ 5 ಗ್ಯಾರೆಂಟಿ ಯೋಜನೆಗಳನ್ನ ಜಾರಿಗೊಳಿಸಿದೆ ಇದರಿಂದ ರೇಷನ್ ಕಾರ್ಡ್ ಇರುವ ಎಲ್ಲರೂ ಸಹ ಎಲ್ಲಾ ಯೋಜನೆಯ ಲಾಭವನ್ನು ಪಡೆಯುತಿದ್ದಾರೆ ಹಾಗೆ ರೇಷನ್ ಕಾರ್ಡ್ ಇಲ್ಲದೇನೆ ಅನೇಕ ಜನರಿಗೆ ಈ ಯೋಜನೆಗಳಂತಹ ಅನೇಕ ಯೋಜನೆಗಳ ಲಾಭವನ್ನು ಪಡೆಯಲಾಗುತ್ತಿಲ್ಲ ಅಂತವರಿಗಾಗಿ ಸರ್ಕಾರ ಮತ್ತೊಂದು ಸಂತಸದ ಸುದ್ದಿಯನ್ನು ಹೊರಡಿಸಿದೆ ಅದೇನೆಂದು ತಿಳಿಯಲು ಈ ಲೇಖನವನ್ನು ಓದಿ.
ಪಡಿತರ ಚೀಟಿ ಇಲ್ಲದವರಿಗೆ 2024 ಹೊಸ ವರ್ಷಕ್ಕೆ ರಾಜ್ಯ ಸರ್ಕಾರ ಬಂಪರ್ ಗಿಫ್ಟ್ ಘೋಷಿಸಿದೆ. ಇನ್ನು ಮುಂದೆ ಸರ್ಕಾರದ ಪಡಿತರ ವಸ್ತು ಪಡೆದುಕೊಳ್ಳುವುದು ಮಾತ್ರವಲ್ಲದೆ ಸರ್ಕಾರದ ಇತರ ಯಾವುದೇ ಯೋಜನೆಯ ಪ್ರಯೋಜನ ಪಡೆದುಕೊಳ್ಳಲು ಅಗತ್ಯವಾಗಿರುವ ರೇಷನ್ ಕಾರ್ಡ್ ಅನ್ನು ಪ್ರತಿಯೊಬ್ಬರು ಹೊಂದಬಹುದು ಎಂದು ಸರ್ಕಾರ ತಿಳಿಸಿದೆ.
ರಾಜ್ಯ ಸರ್ಕಾರದ ಹೊಸ ಅಪ್ಡೇಟ್
ಆಹಾರ ಇಲಾಖೆ ಗೆ ಇದುವರೆಗೆ ಸಂದಾಯವಾಗಿರುವ ಸುಮಾರು ಮೂರು ಲಕ್ಷಕ್ಕೂ ಅಧಿಕ ರೇಷನ್ ಕಾರ್ಡ್ ಅರ್ಜಿಯನ್ನು ಹಂತ ಹಂತವಾಗಿ ಪರಿಶೀಲನೆ ಮಾಡಲಾಗುತ್ತಿದೆ. ಸುಮಾರು 20 ಸಾವಿರಕ್ಕೂ ಹೆಚ್ಚಿನ ಪಡಿತರ ಚೀಟಿ ಪರಿಶೀಲನೆ ನಡೆಸಲಾಗಿದ್ದು, ಜನವರಿ 15ರ ಒಳಗೆ ಫಲಾನುಭವಿಗಳಿಗೆ ಪಡಿತರ ಚೀಟಿ ವಿತರಣೆ ಮಾಡಲಾಗುವುದು. ಇನ್ನು ಇದರ ಜೊತೆಗೆ ಹೊಸದಾಗಿ ಪಡಿತರ ಚೀಟಿ ಪಡೆದುಕೊಳ್ಳಲು ಅರ್ಜಿ ಸಲ್ಲಿಸುವವರಿಗೆ ಸರ್ಕಾರ ಅವಕಾಶ ಮಾಡಿಕೊಟ್ಟಿದೆ. ಹೌದು, ರಾಜ್ಯದಲ್ಲಿ ಯಾರು ಪಡಿತರ ಚೀಟಿ ಹೊಂದಿಲ್ಲವೋ ಅಂತವರಿಗೆ ಪಡಿತರ ಚೀಟಿಗಾಗಿ ಅರ್ಜಿ ಸಲ್ಲಿಸಲು ಸರ್ಕಾರ ಮತ್ತೆ ಅವಕಾಶ ಕಲ್ಪಿಸಿಕೊಡಲಾಗುತ್ತಿದೆ. ಜನವರಿಯಲ್ಲಿ ಹೊಸ ಪಡಿತರ ಚೀಟಿ ಗಾಗಿ ಅರ್ಜಿ ಸಲ್ಲಿಸಬಹುದು. ಮುಂದಿನ ತಿಂಗಳು ಅಂದರೆ ಫೆಬ್ರುವರಿಯಲ್ಲಿಯೂ ಕೂಡ ಅರ್ಜಿ ಸಲ್ಲಿಕೆ ಪ್ರಕ್ರಿಯೆ ಮುಂದುವರಿಯಬಹುದು ಎಂದು ಹೇಳಲಾಗುತ್ತಿದೆ. ಆದರೆ ಬೇಕಾಬಿಟ್ಟಿಯಾಗಿ ಯಾರೂ ಕೂಡ ಪಡಿತರ ಚೀಟಿಗೆ ಅರ್ಜಿ ಸಲ್ಲಿಸುವಂತಿಲ್ಲ.
ಇದನ್ನೂ ಸಹ ಓದಿ: ಇ ಶ್ರಮ್ ಕಾರ್ಡ್‌ಗೆ ಇ ಕೆವೈಸಿ ಪ್ರಾರಂಭ! ಇಲ್ಲದಿದ್ರೆ ಪ್ರತಿ ತಿಂಗಳು ಕಂತಿನ ಹಣ ಖಾತೆಗೆ ಬರಲ್ಲ,
ಅರ್ಜಿ ಸಲ್ಲಿಸಲು ಇರಬೇಕಾದ ಅರ್ಹತೆ
- ಪಡಿತರ ಚೀಟಿ ಹೊಂದಿರುವವರು ಮತ್ತೆ ಅರ್ಜಿ ಸಲ್ಲಿಸುವಂತಿಲ್ಲ.
- ಎಪಿಎಲ್ ಕಾರ್ಡ್ (APL Card) ಇರುವವರು ಬಿಪಿಎಲ್ ಕಾರ್ಡ್ (BPL card) ಪಡೆದುಕೊಳ್ಳಲು ಅರ್ಜಿ ಸಲ್ಲಿಸುವ ಸಾಧ್ಯತೆ ಇರುತ್ತದೆ. ಆದರೆ ಈ ರೀತಿ ಮಾಡುವಂತಿಲ್ಲ.
- ನೀವು ಒಂದು ಪಡಿತರ ಚೀಟಿಯಲ್ಲಿ ಸದಸ್ಯರಾಗಿ ನಿಮ್ಮ ಹೆಸರು ಇದ್ದರೆ ಆ ಹೆಸರನ್ನು ಮೊದಲು ತೆಗೆಸಬೇಕು. ಆ ಕುಟುಂಬದಿಂದ ನೀವು ಹೊರಗೆ ಇದ್ದರೆ ಅರ್ಜಿ ಸಲ್ಲಿಸಬಹುದು.
- ಪಡಿತರ ಚೀಟಿ ಸಲ್ಲಿಕೆ ಮಾಡುವಾಗ ನೀವು ಎಪಿಎಲ್ ಕಾರ್ಡ್ ಗಾಗಿ ಅಥವಾ ಬಿಪಿಎಲ್ ಕಾರ್ಡ್ ಗಾಗಿ ಹಾಗೂ ಅಂತ್ಯೋದಯ ಕಾರ್ಡ್ ಗಾಗಿ ಮೂರು ವಿಭಾಗದಲ್ಲಿ ಯಾವುದಕ್ಕೆ ಅರ್ಜಿ ಸಲ್ಲಿಸುತ್ತಿದ್ದೀರಿ ಎಂಬುದನ್ನು ಸ್ಪಷ್ಟವಾಗಿ ನಮೂದಿಸಬೇಕು.
ಅರ್ಜಿ ಸಲ್ಲಿಸುವುದು ಹೇಗೆ?
ಅರ್ಜಿ ಸಲ್ಲಿಸಲು ಬೆಳಿಗ್ಗೆ 9:00 ರಿಂದ ಮಧ್ಯಾಹ್ನದ ವರೆಗೆ ಮಾತ್ರ ಅರ್ಜಿ ಸಲ್ಲಿಸಲು ಅವಕಾಶವಿದೆ. ಸಲ್ಲಿಸಲು ಬಯಸುವ ಫಲಾನುಭವಿಗಳು ಆಹಾರ ಇಲಾಖೆಯ ಅಧಿಕೃತ ವೆಬ್ಸೈಟ್ನಲ್ಲಿ ಅರ್ಜಿ ಸಲ್ಲಿಸಬಹುದು ಅಥವಾ ಇರುವ ದಾಖಲೆಗಳನ್ನು ಹತ್ತಿರದ ಸೇವಾ ಕೇಂದ್ರಗಳಿಗೆ ತೆಗೆದುಕೊಂಡು ಹೋಗಿ ಅರ್ಜಿ ಫಾರಂ ಭರ್ತಿ ಮಾಡಿ, ಅರ್ಜಿ ಸಲ್ಲಿಸಬಹುದಾಇದೆ
ಇತರೆ ವಿಷಯಗಳು
- ಹೊಸ ವರ್ಷದ ಮೊದಲ ವಾರದಲ್ಲೇ ಭರ್ಜರಿ ಗುಡ್ ನ್ಯೂಸ್: ಎಲ್ಲಾ ರೈತರ ಖಾತೆಗೆ 8000 ಜಮಾ!
- CBSE ಬೋರ್ಡ್ ಪರೀಕ್ಷೆ ವೇಳಾಪಟ್ಟಿ ಬದಲಾವಣೆ: ಹೊಸ ವೇಳಾಪಟ್ಟಿ ಇಲ್ಲಿ ನೋಡಿ
.