rtgh

ವಾಹನ ಸವಾರರಿಗೆ ಭರ್ಜರಿ ಗುಡ್‌ ನ್ಯೂಸ್!‌ ಭಾರತದಲ್ಲಿ 26 ತೈಲ ಬಾವಿ ಪತ್ತೆ, ಇನ್ಮುಂದೆ ಪೆಟ್ರೋಲ್‌ ಡೀಸೆಲ್‌ ಬೆಲೆ ಎಷ್ಟಾಗಲಿದೆ ಗೊತ್ತಾ?

ಹಲೋ ಸ್ನೇಹಿತರೇ ನಮ್ಮ ಈ ಲೇಖನಕ್ಕೆ ಸ್ವಗತ, ಇಂದಿನ ದಿನಗಳಲ್ಲಿ ಪ್ರತಿಯೊಬ್ಬರೂ ಕೂಡ ತನ್ನ ಕೆಲಸ ಕಾರ್ಯಗಳಿಗೆ ವಾಹನಗಳನ್ನು ಬಳಸುತಿದ್ದಾರೆ ಇದಕ್ಕೆ ಬೇಕಾದ ಪೆಟ್ರೋಲ್‌ ಡೀಸೆಲ್‌ ನಾವು ಬೇರೆ ದೇಶದಿಂದ ಆಮದು ಮಾಡಿಕೊಳ್ಳುತಿದ್ದೇವೆ ಇದರಿಂದ ಪೆಟ್ರೋಲ್‌ ಡೀಸೆಲ್‌ ಬೆಲೆಯು ಸಹ ದುಭಾರಿಯಾಗಿದೆ ಆದರೆ ಈಗ ನಮ್ಮ ಜನಸಾಮಾನ್ಯರಿಗೆ ಒಂದು ಸಿಹಿಸುದ್ದಿ ಬಂದಿದೆ ಮುಂದೆ ಪೆಟ್ರೋಲ್‌ ಡೀಸೆಲ್‌ ಬೆಲೆ ಇಳಿಕೆ ಸಾಧ್ಯತೆ ಇದೆ ಎಂದು ತಿಳಿದುಬರುತ್ತಿದೆ ಹಾಗಾಗಿ ಪೆಟ್ರೋಲ್‌ ಡೀಸೆಲ್‌ ಬೆಲೆ ಇಳಿಕೆಗೆ ಕಾರಣವೇನು ಇನ್ಮುಂದೆ ಪೆಟ್ರೋಲ್‌ ಡೀಸೆಲ್‌ ಎಲ್ಲಿ ಸಿಗುತ್ತೆ ಎಂಬ ಎಲ್ಲಾ ಮಾಹಿತಿ ತಿಳಿಯಲು ಈ ಲೇಖನವನ್ನು ಓದಿ.

Oil well discovered in India

ಭಾರತದಲ್ಲಿಯೇ ತೈಲ ಉತ್ಪಾದನೆ

ತೈಲ ಮತ್ತು ನೈಸರ್ಗಿಕ ಅನಿಲ ನಿಗಮ ಬಂಗಾಳ ಕೊಲ್ಲಿಯ ಕೃಷ್ಣ ಗೋದಾವರಿ ಜಲಾನಯನ ಪ್ರದೇಶದಲ್ಲಿನ ಆಳವಾದ ನೀರಿನ ಬ್ಲಾಕ್​ನಿಂದ ತೈಲ ಉತ್ಪಾದನೆಯನ್ನು ಪ್ರಾರಂಭಿಸಿದೆ. ಸರ್ಕಾರಿ ಸ್ವಾಮ್ಯದ ತೈಲ ಮತ್ತು ನೈಸರ್ಗಿಕ ಅನಿಲ ನಿಗಮ (ONGC-Oil and Natural Gas Corporation) ಬಂಗಾಳ ಕೊಲ್ಲಿಯ (Bay of Bengal) ಕೃಷ್ಣ ಗೋದಾವರಿ ಜಲಾನಯನ ( Krishna Godavari basin ) ಪ್ರದೇಶದಲ್ಲಿನ ಆಳವಾದ ನೀರಿನ ಬ್ಲಾಕ್​ನಿಂದ ತೈಲ ಉತ್ಪಾದನೆಯನ್ನು ಪ್ರಾರಂಭಿಸಿದೆ. KG-DWN-98/2 ಬ್ಲಾಕ್‌ನಲ್ಲಿ ಕ್ಲಸ್ಟರ್-2 ಬ್ಲಾಕ್​ನಲ್ಲಿ ತೈಲ ಉತ್ಪಾದನೆ ಆರಂಭವಾಗಿದೆ ಎಂದು ತೈಲ ಕಂಪನಿ ಸೋಮವಾರ ಖುಷಿ ಸುದ್ದಿಯನ್ನು ಹಂಚಿಕೊಂಡಿದೆ. ಕೇಂದ್ರ ಪೆಟ್ರೋಲಿಯಂ ಮತ್ತು ನೈಸರ್ಗಿಕ ಅನಿಲ ಸಚಿವರು ಮತ್ತು ವಸತಿ ಮತ್ತು ನಗರ ವ್ಯವಹಾರಗಳ ಸಚಿವ ಸಚಿವ ಹರ್ದೀಪ್ ಸಿಂಗ್ ಪುರಿ ಮತ್ತು ಪ್ರಧಾನಿ ನರೇಂದ್ರ ಮೋದಿ ಇದು ಒಎನ್‌ಜಿಸಿಯ ದೊಡ್ಡ ಗೆಲುವು ಎಂದು ಸಂತೋಷವನ್ನು ವ್ಯಕ್ತಪಡಿಸಿದ್ದಾರೆ.

ಮೇ ತಿಂಗಳಲ್ಲಿ ಉತ್ಪಾದನೆ

ONGC ಕ್ಲಸ್ಟರ್-II ತೈಲ ಉತ್ಪಾದನೆಯು ನವೆಂಬರ್ 2021 ರೊಳಗೆ ಪ್ರಾರಂಭವಾಗಬೇಕಿತ್ತು. ಆದರೆ ಕೋವಿಡ್ ಸಾಂಕ್ರಾಮಿಕ ರೋಗದಿಂದಾಗಿ ವಿಳಂಬವಾಗಿತ್ತು. ಇದು ನವೆಂಬರ್ 2021 ರ ಬದಲಿಗೆ ಜನವರಿ 2024 ರಲ್ಲಿ ಕಾರ್ಯರೂಪಕ್ಕೆ ಬಂದಿದೆ ಎಂದು ತಿಳಿಸಿದ್ದಾರೆ. ಒಎನ್‌ಜಿಸಿ ಸಾಧನೆಗೆ ಸಚಿವ ಹರ್‌ದೀಪ್ ಸಿಂಗ್ ಪುರಿ ಟ್ವೀಟ್ ಮಾಡಿ ಸಂತಸ ವ್ಯಕ್ತಪಡಿಸಿದ್ದಾರೆ.

ತೈಲವನ್ನು (ಒಎನ್‌ಜಿಸಿ) ಹೊರತೆಗೆಯಲಾಗಿದೆ. ಈ ಯೋಜನೆಯು 2016 ರಲ್ಲಿ ಪ್ರಾರಂಭಿಸಲಾಗಿತ್ತು ಮತ್ತು 2017 ರಲ್ಲಿ ಪೂರ್ಣಗೊಂಡಿತು. ಆದಾಗ್ಯೂ COVID ನಿಂದಾಗಿ ಗಮನಾರ್ಹ ವಿಳಂಬಗಳು ಕಂಡುಬಂದವು. 26 ವಾವಿಗಳಲ್ಲಿ ಪ್ರಸ್ತುತ 4ರಲ್ಲಿ ತೈಲ ಉತ್ಪಾದನೆ ಮಾಡಲಾಗುತ್ತಿದೆ. ಮೇ ಅಥವಾ ಜೂನ್​ ವೇಳೆಗೆ ಪ್ರತಿದಿನ ಸುಮಾರು 45000 ಬ್ಯಾರೆಲ್ಸ್ ಕಚ್ಛಾ ತೈಲವನ್ನು ಉತ್ಪಾದಿಸುವ ನಿರೀಕ್ಷೆಯಿದೆ ಮತ್ತು ಈ ಯೋಜನೆಯು ಪ್ರಸ್ತುತ ರಾಷ್ಟ್ರೀಯ ತೈಲ ಉತ್ಪಾದನೆಯನ್ನು ಶೇಕಡಾ 7 ರಷ್ಟು ಮತ್ತು ರಾಷ್ಟ್ರೀಯ ನೈಸರ್ಗಿಕ ಅನಿಲ ಉತ್ಪಾದನೆಯನ್ನು ಶೇಕಡಾ 7 ರಷ್ಟು ಹೆಚ್ಚಿಸುವ ನಿರೀಕ್ಷೆಯಿದೆ ” ಎಂದು ತಿಳಿಸಿದ್ದಾರೆ.


ಇದನ್ನೂ ಸಹ ಓದಿ: ಈ ಕಾರ್ಯಕರ್ತರಿಗೆ ಇನ್ಮುಂದೆ ವೇತನ ನೇರವಾಗಿ ಬ್ಯಾಂಕ್‌ ಖಾತೆಗೆ! ಕೇಂದ್ರದಿಂದ ಆದೇಶ

ಭಾರತವು ವಿಶ್ವದ ಮೂರನೇ ಅತಿದೊಡ್ಡ ತೈಲ ಗ್ರಾಹಕ ಮತ್ತು ಆಮದುದಾರ ರಾಷ್ಟ್ರವಾಗಿದೆ. ಪ್ರಸ್ತುತ ದೇಶೀಯ ಅಗತ್ಯಗಳಿಗೆ ಸರಿಹೊಂದುವಂತೆ ವಿವಿಧ ಮೂಲಗಳಿಂದ ಕಚ್ಚಾ ತೈಲಕ್ಕಾಗಿ ಜಾಗತಿಕ ಮಾರುಕಟ್ಟೆಯನ್ನು ಅವಲಂಬಿಸಿದೆ.

ONGC ಸಮುದ್ರತಳದಿಂದ ತೈಲವನ್ನು ಹೊರತೆಗೆಯಲು ಅರ್ಮಡಾ ಸ್ಟರ್ಲಿಂಗ್-ವಿ ಹೆಸರಿನ ‘ತೇಲುವ ನೌಕೆ’ಯನ್ನು ನಿಯೋಜಿಸಿದೆ. ಈ ಹಡಗು ಶಪೂರ್ಜಿ ಪಲ್ಲೊಂಜಿ ಆಯಿಲ್ ಅಂಡ್ ಗ್ಯಾಸ್ (70%) ಮತ್ತು ಮಲೇಷ್ಯಾದ ಬೂಮಿ ಅರ್ಮಡಾ ಕಂಪನಿ (30%) ಒಡೆತನದಲ್ಲಿದೆ. ಇದು ಜನವರಿ 2, 2023 ರಿಂದ ಕಾರ್ಯನಿರತವಾಗಿದೆ. ನಮ್ಮ ದೇಶದಲ್ಲಿ ತೈಲ ಉತ್ಪಾದನೆಯಾದರೆ ಇಲ್ಲಿ ಪೆಟ್ರೋಲ್‌ ಡೀಸೆಲ್‌ ಬೆಲೆ ಇಳಿಕೆಯಾಗುವ ಸಾದ್ಯತೆ ಕೂಡ ಹೆಚ್ಚಿದೆ ಎಂದು ಹೇಳಬಹುದಾಗಿದೆ.

ಇತರೆ ವಿಷಯಗಳು

Leave a Comment