ಹಲೋ ಸ್ನೇಹಿತರೇ, ಎಲ್ಲರಿಗು ಕೂಡ ಹೊಸ ವರ್ಷದ ಹಾರ್ದಿಕ ಶುಭಾಶಯಗಳು ಇಂದಿನಿಂದ ಪ್ರಸ್ತುತ ಜಾರಿಯಲ್ಲಿರುವ ಸರ್ಕಾರದ ಯೋಜನೆಗಳಲ್ಲಿ ಯಾವೆಲ್ಲ ಬದಲಾವಣೆ ಆಗಬವುದು & ಯಾವೆಲ್ಲ ವಸ್ತುಗಳ ಬೆಲೆಗಯಲ್ಲಿ ವ್ಯತ್ಯಾಸವಾಗಲಿದೆ ಎಂಬುದನ್ನು ತಿಳಿಯಿರಿ.

1) ಆಧಾರ್ ಕಾರ್ಡ್ ತಿದ್ದುಪಡಿಗೆ ಶುಲ್ಕ ಪಾವತಿ
ಇನ್ನು ಮುಂದೆ ನಿಮ್ಮ ಆಧಾರ್‌ಕಾರ್ಡ್‌ನಲ್ಲಿ ಯಾವುದೆ ತಿದ್ದುಪಡಿ ಮಾಡಿಕೊಳ್ಳುವುದ್ದಿದರೆ ಅದಕ್ಕೆ ಇಂದಿನಿಂದ ಬದಲಾವಣೆ ಮಾಡಬೇಕೆಂದಿದ್ದರೂ ತಲಾ 50 ರೂ. ಶುಲ್ಕ ಪಾವತಿಸಬೇಕಾಗುತ್ತದೆ.
(2) ನಕಲಿ ಸಿಮ್ ಬಳಕೆಗೆ ಬ್ರೇಕ್:
ಪ್ರಸ್ತುತ ಮಾರುಕಟ್ಟೆಯಲ್ಲಿ ನಕಲಿ ದಾಖಲೆಗಳನ್ನು ಸೃಷ್ಟಿ ಮಾಡಿ ಅನೇಕ ನಕಲಿ ಸಿಮ್ ಕಾರ್ಡ್ ಚಾಲ್ತಿಯಲ್ಲಿದೆ ಇದಕ್ಕೆ ಹೊಸ ಟೆಲಿಕಮ್ಯೂನಿಕೇಷನ್ ವಿಧೇಯಕವು ಇತ್ತೀಚೆಗೆ ಸಂಪುಟದಲ್ಲಿ ಅಂಗಿಕಾರವಾಗಿದೆ.
ಅದರಂತೆ, ಇನ್ನು ಮುಂದೆ ನಕಲಿ ಸಿಮ್ ಕಾರ್ಡ್ ಅನ್ನು ಖರೀದಿಸಿದರೆ ಕಾನೂನು ಕ್ರಮವನ್ನು ಎದುರಿಸಬೇಕಾಗುತ್ತದೆ. ತಪ್ಪು ಮಾಡಿದವರಿಗೆ 3 ವರ್ಷ ಜೈಲು ಶಿಕ್ಷೆ & 50 ಲಕ್ಷರೂ.ವರೆಗೆ ದಂಡವನ್ನೂ ವಿಧಿಸಲಾಗಿದೆ.
(3) ಸಿಮ್ ಕಾರ್ಡ್ ಖರೀದಿಸಲು ಬಯೋಮೆಟ್ರಿಕ್ ಕಡ್ಡಾಯ:
ಗ್ರಾಹಕರು ಇನ್ನು ಮುಂದೆ ಸಿಮ್ ಕಾರ್ಡ್ ಖರೀದಿಸಲು ಬಯೋಮೆಟ್ರಿಕ್ ದತ್ತಾಂಶವನ್ನು ದೂರಸಂಪರ್ಕ ಕಂಪನಿಗಳು ಕಡ್ಡಾಯವಾಗಿ ನೀಡಬೇಕಾಗುತ್ತದೆ.
ಸಿಮ್ ಕಾರ್ಡ್ ವಹಿವಾಟಿನಲ್ಲಿ ನಡೆಯುವ ವಂಚನೆಗಳನ್ನು ತಪ್ಪಿಸುವುದೇ ಈ ಯೋಜನೆಯ ಪ್ರಮುಖ ಉದ್ದೇಶವಾಗಿದೆ.
(4) ಬಳಕೆ ಮಾಡದ ಬ್ಯಾಂಕ್ ಖಾತೆಯ ಯುಪಿಐ ಐಡಿ ನಿಷ್ಕ್ರಿಯ:
ಬ್ಯಾಂಕ್ ಖಾತೆ, ಮೊಬೈಲ್ ಸಂಖ್ಯೆಗಳು 1 ವರ್ಷದಿಂದ ಬಳಕೆಯಾಗದೇ ಇದ್ದರೆ, ಅವುಗಳಿಗೆ ಲಿಂಕ್ ಆಗಿರುವ UPI ಐಡಿಗಳು 01 ಜನವರಿ 2024 ರಿಂದ ನಿಷ್ಕ್ರಿಯಗೊಳ್ಳುತ್ತವೆ.
ಈ ಕಾರಣದಿಂದಾಗಿ ಈ ಬ್ಯಾಂಕ್ ಖಾತೆಯ ಮೂಲಕ ಗೂಗಲ್ ಪೇ, Phonepe ಮೂಲಕ / ಇತರೆ ಯುಪಿಐ ಐಡಿ ಆಧಾರಿತ ಅಪ್ಲಿಕೇಶನ್ ಮೂಲಕ ಹಣ ಕಳುಹಿಸಲು & ಸ್ವೀಕರಿಸಲು ಸಾಧ್ಯವಾಗುವುದಿಲ್ಲ.
(5) ವಾಹನಗಳು ದುಬಾರಿ ಸಾಧ್ಯತೆ:
ಪ್ರಸ್ತುತ ಕಚ್ಚಾವಸ್ತುಗಳ ಬೆಲೆ ಏರಿಕೆ ಸೇರಿದಂತೆ ವಿವಿಧ ಕಾರಣಗಳಿಂದಾಗಿ ಹಲವು ವಾಹನ ಉತ್ಪಾದಕ ಕಂಪನಿಗಳು 1 2024ರ ನಂತರ ತಮ್ಮ ವಾಹನಗಳ ಬೆಲೆಯನ್ನು ಹೆಚ್ಚಿಗೆ ಮಾಡುವುದಾಗಿ ಘೋಷಿಸಿವೆ.
ಮಾರುತಿ ಸುಜುಕಿ, ಟಾಟಾ ಮೋಟಾರ್ಸ್ ಎಂಜಿ ಮೋಟಾರ್ಸ್, ಡಿಡಿ, ಮರ್ಸಿಡಿಸ್ ಬೆನ್ಸ್ ಕಾರುಗಳು ದುಬಾರಿಯಾಗುತ್ತವೆ.
(6) ಎಲ್‌ಪಿಜಿ ದರ ಪರಿಷ್ಕರಣೆ:
ಮನೆ ಬಳಕೆಯ LPG ಗ್ಯಾಸ್ ಸಿಲಿಂಡರ್ ದರ ಮತ್ತೊಷ್ಟು ಇಳಿಕೆಯಾಗುವ ಸಾಧತ್ಯೆ ಇದೆ ಎಂದು ಸಂಬಂಧಪಟ್ಟ ಇಲಾಕಖೆಗಳು ಮಾಹಿತಿ ತಿಳಿಸಿವೆ.
(7) ಪೆಟ್ರೋಲ್ & ಡಿಸೇಲ್ ದರ ಪರಿಷ್ಕರಣೆ:
ಪ್ರಸ್ತುತ ಬಹುತೇಕ ಎಲ್ಲಾ ಕಡೆ ಪೆಟ್ರೋಲ್ ಬಂಕ್ಗಳಲ್ಲಿ ಸಧ್ಯ ಲಭ್ಯವಿರುವ ಪೆಟ್ರೋಲ್ & ಡಿಸೇಲ್ ಖಾಲಿ ಮಾಡುತ್ತಿದ್ದು ಈ ಪ್ರಕಾರ ಪೆಟ್ರೋಲ್ & ಡಿಸೇಲ್ ಬೆಲೆಯು ಸಹ ಕಡಿಮೆಯಾಗುವ ಸಾಧ್ಯತೆ ಇದೆ.
ಇತರೆ ವಿಷಯಗಳು
16 ನೇ ಕಂತಿನ ಹಣ ಬಿಡುಗಡೆಗೆ ದಿನಾಂಕ ನಿಗದಿ: ಈ ಬಾರಿ 4000 ರೂ. ಫಲಾನುಭವಿಗಳ ಖಾತೆಗೆ..!
ರೈತರಿಗೆ 3HP, 5HP & 7.5HP ಸೋಲಾರ್ ಪಂಪ್ ಉಚಿತ! ಇಂದಿನಿಂದ ಅರ್ಜಿ ಸಲ್ಲಿಕೆ ಪ್ರಾರಂಭ