ಹಲೋ ಸ್ನೇಹಿತರೇ ಇಂದಿನ ನಮ್ಮ ಲೇಖನಕ್ಕೆ ಸ್ವಾಗತ, ಕಾಂಗ್ರೆಸ್ ಸರ್ಕಾರ ಗ್ಯಾರೆಂಟಿ ಯೋಜನೆಯನ್ನ ಜಾರಿಗೆ ಬಂದು ಮಹಿಳೆಯರಿಗೆಲ್ಲ ಉಚಿತ ಬಸ್ ಪ್ರಯಾಣ ಯೋಜನೆಯನ್ನು ಜಾರಿಗೊಳಿಸಿದ ನಂತರ ಹಲವಾರು ಬದಲಾವಣೆಗಳು ಉಂಟಾಗುತ್ತಿದೆ ಬಸ್ ಗಳಲ್ಲಿ ರಶ್ ಆದನಂತರ ಕಂಡಕ್ಟರ್ ಬಳಿ ಜನರಿಗೆ ಟಿಕೆಟ್ ತೆಗೆದುಕೊಳ್ಳಲು ತುಂಬಾ ಕಷ್ಟದಾಯಕವಾಗಿದೆ ಇದನ್ನು ತಿಳಿದ ಇಲಾಖೆಯು ಬಸ್ ನಲ್ಲಿ ಟಿಕೆಟ್ ತೆಗೆದುಕೊಳ್ಳಲು ಹೊಸ ನಿಯಮ ಜಾರಿಗೆ ತರಲಾಗಿದೆ ಅದರ ಬಗ್ಗೆ ಸಂಪೂರ್ಣವಾಗಿ ತಿಳಿಯಲು ಈ ಲೇಖನವನ್ನು ಓದಿ.
ನಗದು ರಹಿತ ಟಿಕೆಟ್ ವ್ಯವಸ್ಥೆ ಜಾರಿಗೆ ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಸಂಸ್ಥೆಯು ಮುಂದಾಗಿದ್ದು, ಶೀಘ್ರವೇ ಟೆಂಡರ್ ಕರೆಯುವ ಸಾಧ್ಯತೆ ಇದೆ. ಬಾಡಿಗೆ ಆಧಾರದಲ್ಲಿ ಹತ್ತೂವರೆ ಸಾವಿರ ಸ್ಮಾರ್ಟ್ ಎಲೆಕ್ಟ್ರಾನಿಕ್ ಟಿಕೆಟ್ ನಗದು ರಹಿತ ಟಿಕೆಟ್ ವ್ಯವಸ್ಥೆ ಜಾರಿಗಾಗಿ ಬಾಡಿಗೆ ಆಧಾರದಲ್ಲಿ ಹತ್ತೂವರೆ ಸಾವಿರ ಸ್ಮಾರ್ಟ್ ಎಲೆಕ್ಟ್ರಾನಿಕ್ ಟಿಕೆಟ್ ಯಂತ್ರ (ಇಟಿಎಂ)ಗಳನ್ನು ಪಡೆಯಲು ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಸಂಸ್ಥೆ (ಕೆಎಸ್‌ಆರ್‌ಟಿಸಿ)ಯು ಮುಂದಾಗಿದ್ದು, ಶೀಘ್ರವೇ ಟೆಂಡರ್ ಕರೆಯುವ ಸಾಧ್ಯತೆ ಇದೆ.
ಬಸ್ ಭರ್ತಿಯಾದಾಗ ಎಲ್ಲರಿಗೂ ಟಿಕೆಟ್ ಹಾಗೂ ಚಿಲ್ಲರೆ ಕೊಡುವುದು ನಿರ್ವಾಹಕರಿಗೆ ಹೆಚ್ಚಿನ ಸಮಯ ಹಿಡಿಯುವುದಲ್ಲದೆ, ತ್ರಾಸದಾಯಕವಾಗಿದೆ. ಕೆಲವು ಬಾರಿ ಚಿಲ್ಲರೆ ವಿಷಯಕ್ಕೆ ಪ್ರಯಾಣಿಕರು ನಿರ್ವಾಹಕರೊಂದಿಗೆ ಜಗಳ ನಡೆದ ಘಟನೆಗಳೂ ಇವೆ. ಇದನ್ನು ತಪ್ಪಿಸಲು ಆನ್‌ಲೈನ್ ಮೂಲಕ ಟಿಕೆಟ್ ಪಡೆಯುವ ವ್ಯವಸ್ಥೆ ಜಾರಿಗೊಳಿಸಲು ಸಂಸ್ಥೆ ಮಹತ್ವದ ಹೆಜ್ಜೆ ಇರಿಸಿದ್ದು, ಏಪ್ರಿಲ್ ಅಥವಾ ಮೇನಲ್ಲಿ ಆರಂಭಿಸುವ ಸಾಧ್ಯತೆಯಿದೆ.
ಈಗಾಗಲೇ ಈ ವ್ಯವಸ್ಥೆಯನ್ನು ಬಿಎಂಟಿಸಿ ಜಾರಿಗೊಳಿಸಿದೆ. ಇದೇ ಮೊದಲ ಬಾರಿಗೆ ಆ್ಯಂಡ್ರಾಯ್ಡ್ ಸೌಲಭ್ಯದ ವಿದ್ಯುನ್ಮಾನ ಟಿಕೆಟ್ ಯಂತ್ರ (ಇಟಿಎಂ)ಗಳನ್ನು ನೀಡಲಾಗುತ್ತಿದ್ದು, ಇದಕ್ಕೆ ಗೂಗಲ್ ಪೇ, ಫೋನ್ ಪೇ, ಭೀಮ್‌ನಂತಹ ಯುಪಿಐ ವ್ಯವಸ್ಥೆ ಹಾಗೂ ಡೆಬಿಟ್, ಕ್ರೆಡಿಟ್, ಕೇಂದ್ರ ಸರಕಾರದ ಕಾಮನ್ ಮೊಬಿಲಿಟಿ ಸೇರಿದಂತೆ ಎಲ್ಲ ಬಗೆಯ ಕಾರ್ಡ್‌ಗಳಿಂದ ಟಿಕೆಟ್ ಪಡೆಯುವ ಸೌಲಭ್ಯ ಅಳವಡಿಸಲಾಗಿದೆ.
ಇದನ್ನೂ ಸಹ ಓದಿ: ಇಂದು ಈ 3 ರಾಶಿಯವರಿಗೆ ಅದೃಷ್ಟ ಖುಲಾಯಿಸುವುದು ಗ್ಯಾರಂಟಿ: ಇಂದಿನ ರಾಶಿಫಲ ಇಲ್ಲಿದೆ ನೋಡಿ
ಟ್ರ್ಯಾಕಿಂಗ್, ಮಾನಿಟರಿಂಗ್
ಈವರೆಗೆ ಕೆಎಸ್‌ಆರ್‌ಟಿಸಿ ಬಸ್‌ಗಳಲ್ಲಿ ಟ್ರ್ಯಾಕಿಂಗ್ ಮತ್ತು ಮಾನಿಟರಿಂಗ್ ವ್ಯವಸ್ಥೆ ಇಲ್ಲ. ಇದರಿಂದಾಗಿ ಬಸ್‌ಗಳು ಎಲ್ಲಿವೆ, ಯಾವ ರಸ್ತೆಗಳಲ್ಲಿ ಸಂಚರಿಸುತ್ತಿವೆ, ಎಷ್ಟು ಸಮಯದಲ್ಲಿ ನಿಗದಿತ ಸ್ಥಳ ತಲುಪುತ್ತವೆ ಎಂಬ ಮಾಹಿತಿ ಸಿಗುತ್ತಿಲ್ಲ. ಹೀಗಾಗಿ ಇಟಿಎಂ ಯಂತ್ರಗಳಲ್ಲಿ ಜಿಪಿಆರ್‌ಎಸ್ ಅಳವಡಿಸಿ ಆ ಕೊರತೆ ನೀಗಿಸಲು ಸಂಸ್ಥೆ ಮುಂದಾಗಿದೆ ಎಂದು ಕೆಎಸ್‌ಆರ್‌ಟಿಸಿ ಅಧಿಕಾರಿಗಳು ತಿಳಿಸಿದ್ದಾರೆ.
ಹೊಸ ಸ್ಮಾರ್ಟ್ ಎಲೆಕ್ಟ್ರಾನಿಕ್ ಟಿಕೆಟ್ ಯಂತ್ರವು ಟಚ್ ಸ್ಕ್ರೀನ್ ತಂತ್ರಜ್ಞಾನ ಹೊಂದಿದೆ. ಟಿಕೆಟ್ ಕೊಡುವುದು ಮಾತ್ರವಲ್ಲದೆ ವೈಫೈ ಸಂಪರ್ಕ, ಯುಪಿಐ, ಕ್ಯುಆರ್ ಕೋಡ್ ಪ್ರದರ್ಶನ ಸೌಲಭ್ಯ ಒಳಗೊಂಡಿದೆ. ಸ್ಮಾರ್ಟ್ ಎಲೆಕ್ಟ್ರಾನಿಕ್ ಟಿಕೆಟಿಂಗ್ ಯಂತ್ರಗಳನ್ನು ಪಡೆಯಲು ಸಾರಿಗೆ ಸಚಿವರು, ಸಂಸ್ಥೆಯ ಅಧಿಕಾರಿಗಳು ಹಲವು ಸುತ್ತಿನ ಸಭೆ ನಡೆಸಿದ್ದು, ಶೀಘ್ರವೇ ಟೆಂಡರ್ ಕರೆಯಲಿದ್ದಾರೆ. ಆ ಮೂಲಕ ಹತ್ತೂವರೆ ಸಾವಿರ ಯಂತ್ರಗಳನ್ನು ನಾಲ್ಕು ವರ್ಷಗಳಿಗೆ ಬಾಡಿಗೆ ಆಧಾರದಲ್ಲಿ ಪಡೆಯಲಿದ್ದಾರೆ. ಇವುಗಳ ಸಂಖ್ಯೆ ಮುಂದಿನ ಐದು ವರ್ಷಗಳಲ್ಲಿ ಇನ್ನೂ ಹೆಚ್ಚಾಗುವ ಸಾಧ್ಯತೆ ಇದೆ.
ಟಿಕೆಟ್ ಪಡೆಯುವುದು ಹೇಗೆ?
- ಇಟಿಎಂ ಸ್ಕ್ರೀನ್ ಮೇಲೆ ಟಚ್ ಮಾಡಿ
- ಪರದೆಯ ಮೇಲೆ ಮಾಹಿತಿ ಓಪನ್ ಆಗುತ್ತದೆ
- ಹತ್ತುವ ಇಳಿಯವ ನಿಲ್ದಾಣ ನಮೂದಿಸಿ
- ಸ್ಥಳ ನಮೂದಿಸಿದ ತಕ್ಷಣ ದರ ಕಾಣಿಸುತ್ತದೆ
- ಹಣ ಪಾವತಿಗೆ ನಗದು ಮತ್ತು ಯುಪಿಐಯ ಆಯ್ಕೆ ತೋರಿಸುತ್ತದೆ
- ಯುಪಿಐ ಆಯ್ಕೆ ಮಾಡಿದರೆ ಸ್ಕ್ರೀನ್ ಮೇಲೆ ಬಾರ್ ಕೋಡ್ ಬರುತ್ತದೆ
- ಬಾರ್‌ಕೋಡ್ ಸ್ಕ್ಯಾನ್ ಮಾಡಿ ಹಣ ಪಾವತಿಸಿದಾಗ ಯಂತ್ರದಿಂದ ಟಿಕೆಟ್ ಬರಲಿದೆ.
ಈ ನಿಯಮ ಜಾರಿ ಮಾಡುವ ಮಾರ್ಗ ಯಾವುವು?
- ತುಮಕೂರು
- ರಾಮನಗರ
- ಬೆಂಗಳೂರು ಸೆಂಟ್ರಲ್
- ಮಂಡ್ಯ
- ಮೈಸೂರು
- ಚಾಮರಾಜನಗರ
- ಮಂಗಳೂರು
- ಕೋಲಾರ
- ಚಿಕ್ಕಬಳ್ಳಾಪುರ
- ಹಾಸನ
- ಚಿತ್ರದುರ್ಗ
- ಶಿವಮೊಗ್ಗ
- ದಾವಣಗೆರೆ
ಇತರೆ ವಿಷಯಗಳು
- ಕಿಸಾನ್ ಸಾಲ ಪಡೆದವರಿಗೆ ಭರ್ಜರಿ ಗುಡ್ ನ್ಯೂಸ್!! ನಿಮ್ಮ ಎಲ್ಲಾ ಸಾಲ ಮನ್ನಾ ಮಾಡಲು ಸೂಚನೆ
- ಲೇಬರ್ ಕಾರ್ಡ್ ಹೊಸ ಅರ್ಜಿ ಮತ್ತೆ ಪ್ರಾರಂಭ : ಈ ಕಾರ್ಡ್ ಇದ್ರೆ ಏನೆಲ್ಲಾ ಬೆನಿಫಿಟ್ಸ್ ಇದೆ ಗೊತ್ತಾ?