ಹಲೋ ಸ್ನೇಹಿತರೇ, ದೇಶದಲ್ಲಿ ಹಲವಾರು ರೀತಿಯ ತೆರಿಗೆ ನಿಯಮಗಳಿವೆ. ಒಂದೊಂದು ಕ್ಷೇತ್ರಕ್ಕೆ ಅದರ ಆದಾಯಕ್ಕೆ ಅನುಗುಣವಾಗಿ ತೆರಿಗೆಯನ್ನು ಪಾವತಿ ಮಾಡಬೇಕಾಗುತ್ತದೆ. ಯಾವ ರೀತಿಯಾದ ಸೈಟ್, ಮನೆ, ಆಸ್ತಿ ಖರೀದಿ ಮಾಡುತ್ತೀರೋ ಅದಕ್ಕೆ ಅನುಗುಣವಾಗಿ ಟಿಡಿಎಸ್ ಕೂಡ ಕಟ್ಟಬೇಕು. ಇದರ ಬಗ್ಗೆ ಇನ್ನು ಹೆಚ್ಚಿನ ಮಾಹಿತಿ ತಿಳಿಯಲು ನಮ್ಮ ಲೇಖನವನ್ನು ಓದಿ.
ಆಸ್ತಿಯ ಮೇಲಿನ ತೆರಿಗೆ! (Tax on property)
ಅಸ್ತಿ ಮೇಲೆ ತೆರಿಗೆ ಕಟ್ಟುವ ಮುನ್ನ ಸಾಕಷ್ಟು ವಿಚಾರಗಳನ್ನು ತಿಳಿದಿರಬೇಕು ಇನ್ಮುಂದೆ ಆಸ್ತಿಯನ್ನು ಖರೀದಿ ಮಾಡಿದರೆ ಸರ್ಕಾರಕ್ಕೆ 1% ಟಿಡಿಎಸ್ ಕಟ್ಟಬೇಕು ಜೊತೆಗೆ ದಾಖಲೆಗಳನ್ನು ಕೂಡ ನೀಡಬೇಕಾಗುತ್ತದೆ. TDS ಪಾವತಿ ಮಾಡದೇ ಇದ್ದರೆ ತೆರಿಗೆ ಇಲಾಖೆಯಿಂದ ನೋಟಿಸ್ ಕೂಡ ಕಳುಹಿಸಲಾಗುತ್ತದೆ.
ಪಾವತಿ ಮಾಡಬೇಕು 1% ಬದಲು 20% TDS!
50 ಲಕ್ಷ ಅಥವಾ ಅದಕ್ಕಿಂತ ಹೆಚ್ಚಿಗೆ ಮೊತ್ತದ ಆಸ್ತಿಯನ್ನು ಖರೀದಿ ಮಾಡಿದ್ರೆ 1% ಟಿಡಿಎಸ್ ಕಟ್ಟಬೇಕು. ಇದನ್ನು ಕಟ್ಟದಿದ್ದಲ್ಲಿ 6 ತಿಂಗಳ ಬಳಿಕ ಆದಾಯ ತೆರಿಗೆ ಇಲಾಖೆಯಿಂದ ನೋಟಿಸ್ ಜಾರಿಗೊಳಿಸಲಾಗುತ್ತದೆ. ಆಗ ನೀವು 1% ಬದಲಿದೆ 20% ಹೆಚ್ಚುವರಿ ದಂಡವನ್ನು ಕಟ್ಟಬೇಕಾಗುತ್ತದೆ.
ಆಸ್ತಿ ಖರೀದಿಗು ನಂತರ ನೋಂದಣಿ ಮಾಡಿಕೊಳ್ಳಲು ಆಧಾರ್ ಕಾರ್ಡ್ ಮತ್ತು ಪ್ಯಾನ್ ಕಾರ್ಡ್ ಲಿಂಕ್ ಆಗಿರುಬೇಕು. 139ಆದಾಯ ತೆರಿಗೆ ಕಾಯ್ದೆ ಪ್ರಕಾರ ಆಧಾರ್ ಕಾರ್ಡ್ ಲಿಂಕ್ ಕಡ್ಡಾಯ. ಈ ಕೆಲಸ ಆಗದಿದ್ದಲ್ಲಿ ಹೆಚ್ಚುವರಿ ದಂಡ ಕಡ್ಡಾಯ, ಲಿಂಕ್ ಆಗದೆ ಇದ್ದರೆ ನೀವು ಆಸ್ತಿಯನ್ನು ಖರೀದಿ ಮಾಡಲು ಸಾಧ್ಯವಾಗುವುದಿಲ್ಲ. ಆಸ್ತಿಗಳನ್ನು ಖರೀದಿ ಮಾಡುವ ಮುನ್ನ ಈ ಎಲ್ಲಾ ನಿಯಮಗಳನ್ನು ಕಟ್ಟುನಿಟ್ಟಾಗಿ ಪಾಲಿಸಿ.
ಇತರೆ ವಿಷಯಗಳು
ಇನ್ನೂ ಹೆಚ್ಚುವರಿಯಾಗಿ 50 ಡಯಾಲಿಸಿಸ್ ಕೇಂದ್ರಗಳನ್ನು 57 ಹೊಸ ತಾಲೂಕುಗಳಲ್ಲಿ ತೆರೆಯಲು ಮುಂದಾದ ರಾಜ್ಯ ಸರ್ಕಾರ
2024 ರ ಬಜೆಟ್‌ನ ಮಹತ್ವದ ಸುಳಿವು ಬಿಟ್ಟ ವಿತ್ತೆ ಸಚಿವೆ!! ಈ ಬಜೆಟ್‌ನಲ್ಲಿ ಸರ್ಕಾರದ ಯೋಜನೆಗಳೇನು?