rtgh

ವಾಹನ ಸವಾರರಿಗೆ ಭರ್ಜರಿ ಗುಡ್ ನ್ಯೂಸ್, ಕೇಂದ್ರ ಸರ್ಕಾರದಿಂದ ಹೊಸ ಪ್ಲಾನ್

ಹಲೋ ಸ್ನೇಹಿತರೇ ನಮ್ಮ ಈ ಲೇಖನಕ್ಕೆ ಸ್ವಾಗತ ದೇಶದಲ್ಲಿ ದಿನೇ ದಿನೇ ಪೆಟ್ರೋಲ್‌ ಡೀಸೆಲ್‌ ಬಳಕೆ ದಿನೇ ದಿನೇ ಹೆಚ್ಚುತ್ತಿದೆ ಆದರೆ ದಿನೇ ದಿನೇ ಇದರ ಬೆಲೆಯು ಸಹ ಏರುತ್ತಿದೆ ಇದರಿಂದ ಪೆಟ್ರೋಲ್‌ ಮತ್ತು ಡೀಸೆಲ್‌ ಖರೀದಿಗೆ ಜನರು ತತ್ತರಿಸಿ ಹೋಗಿದ್ದಾರೆ ಇಂತಹ ಸಂದರ್ಭದಲ್ಲಿ ಸರ್ಕಾರವು ಜನರಿಗೆ ಸಿಹಿ ಸುದ್ದಿಯನ್ನು ನೀಡಿದ್ದಾರೆ ಇದರ ಬಗ್ಗೆ ಸಂಪೂರ್ಣ ಮಾಹಿತಿಯನ್ನು ತಿಳಿಯಲು ಈ ಲೇಖನವನ್ನು ಓದಿ.

New plan from Central Govt

ದೇಶದಲ್ಲಿ ದಿನದಿಂದ ದಿನಕ್ಕೆ ಪೆಟ್ರೋಲ್ ಹಾಗು ಡಿಸೇಲ್ ಬೆಲೆ ಏರಿಕೆ ಆಗುತ್ತಿದ್ದು, ಜನರು ಈ ಬೆಲೆ ಏರಿಕೆಯಿಂದ ಬೇಸತ್ತು ಹೋಗಿದ್ದಾರೆ. ಈಗ ಈ ವರ್ಷದ ಚುನಾವಣೆಯಾ ನಿಮಿತ್ತ ಪೆಟ್ರೋಲ್ ಹಾಗು ಡೀಸೆಲ್ ಬೆಲೆ ಇಳಿಕೆ ಆಗುತ್ತಿದೆ ಎನ್ನಬಹುದು. ತೈಲ ಕಂಪನಿಗಳಿಗೆ ಭಾರಿ ಲಾಭ ಹಿನ್ನೆಲೆಯಲ್ಲಿ ಪೆಟ್ರೋಲ್, ಡೀಸೆಲ್ ದರ ಶೀಘ್ರವೇ ಅತೀ ದೊಡ್ಡ ಪ್ರಮಾಣದಲ್ಲಿ ಇಳಿಕೆಯಾಗಲಿದೆ ಹಾಗಾದರೆ ಎಷ್ಟು ಪ್ರಮಾಣದಲ್ಲಿ ಇಳಿಕೆಯಾಗಬಹುದು ಎಂದು ಈ ಕೆಳಗಿನಂತೆ ತಿಳಿಯಿರಿ

ಇದನ್ನೂ ಸಹ ಓದಿ: ಪಡಿತರ ಚೀಟಿ ಕ್ಯಾನ್ಸಲ್ ಪಟ್ಟಿ ಬಿಡುಗಡೆ!!‌ ಇಲ್ಲಿ ಹೆಸರಿದ್ದವರಿಗೆ ಫೆ.10 ರಿಂದ ರೇಷನ್‌ ಸಿಗಲ್ಲ

ಪೆಟ್ರೋಲ್ ಹಾಗು ಡೀಸೆಲ್ ಬೆಲೆ ಇಳಿಕೆ

ಪೆಟ್ರೋಲ್ ಹಾಗು ಡೀಸೆಲ್ ಬೆಲೆ ಇಳಿಕೆಯ ಕುರಿತು ತೈಲ ಮಾರಾಟ ಕಂಪನಿಗಳು ಮೂರನೇ ತ್ರೈಮಾಸಿಕ ವರದಿ ಬಿಡುಗಡೆ ಮಾಡಿದ ನಂತರ ಖಚಿತ ಆಗಲಿದ್ದು, ವರದಿಯ ಪ್ರಕಾರ ತೈಲ ಮಾರಾಟ ಕಂಪನಿಗಳು ಮೂರನೇ ತ್ರೈಮಾಸಿಕ ವರದಿ ಬಿಡುಗಡೆ ಮಾಡಿದ ನಂತರ ಪೆಟ್ರೋಲ್, ಡೀಸೆಲ್ ದರ ಲೀಟರ್ ಗೆ 5ರಿಂದ 10 ರೂಪಾಯಿ ಕಡಿಮೆಯಾಗುವ ಸಾಧ್ಯತೆ ಇದೆ ಎನ್ನಲಾಗಿದೆ.ಈ ಬೆಲೆ ಇಳಿಕೆ ಬಗ್ಗೆ ತೈಲ ಮಾರಾಟ ಕಂಪನಿಗಳು ಯಾವುದೇ ಸ್ಪಷ್ಟ ಮಾಹಿತಿಯನ್ನು ಹೊರಹಾಕಿಲ್ಲ ಎನ್ನಬಹುದು.


ಬೆಲೆ ಇಳಿಕೆಗೆ ಕಾರಣವೇನು?

ಮೊದಲ ಮತ್ತು ಎರಡನೇ ತ್ರೈಮಾಸಿಕದಲ್ಲಿ ಗಣನೀಯವಾಗಿ ನಿವ್ವಳ ಲಾಭಗಳಿಸಿದ್ದ ಪ್ರಮುಖ ತೈಲ ಕಂಪನಿಗಳು ಮೂರನೇ ತ್ರೈಮಾಸಿಕದಲ್ಲಿಯೂ ಲಾಭದಲ್ಲಿ ಮುಂದುವರೆಯುವ ಸಾಧ್ಯತೆ ಇದೆ. ಕಂಪನಿಗಳಿಗೆ ನಿವ್ವಳ 75,000 ಕೋಟಿ ರೂ. ಲಾಭದ ಸಾಧ್ಯತೆ ಹಿನ್ನೆಲೆಯಲ್ಲಿ ಪೆಟ್ರೋಲ್, ಡೀಸೆಲ್ ದರ ಇಳಿಕೆ ಮಾಡಬಹುದು. ದರ ಇಳಿಕೆ ಹಣದುಬ್ಬರ ನಿವಾರಣೆ ಮತ್ತು ಮುಂದಿನ ಲೋಕಸಭಾ ಚುನಾವಣೆ ಹಿನ್ನೆಲೆಯಲ್ಲಿ ಪ್ರಮುಖ ಪಾತ್ರ ವಹಿಸಲಿದೆ ಎಂದು ಹೇಳಲಾಗಿದೆ.

ಇತರೆ ವಿಷಯಗಳು

Leave a Comment