rtgh

ಮತ್ತೆ ಏರಿಕೆಯತ್ತ ನಂದಿನಿ ಹಾಲಿನ ದರ.! ಹೊಸ ದರ ನಿಗದಿಯ ಬಗ್ಗೆ ಸರ್ಕಾರದ ಚಿಂತನೆ

ಹಲೋ ಸ್ನೇಹಿತರೇ, ಎಲ್ಲಾ ಜನರಿಗು ನಂದಿನಿ ಹಾಲು ಅಗತ್ಯ ಬಳಕೆಯ ವಸ್ತುವಾಗಿದೆ. ಅತಿ ಹೆಚ್ಚಿನ ಜನರು ನಂದಿನಿ ಹಾಲನ್ನೆ ಖರೀದಿ ಮಾಡುತ್ತಾರೆ. ನಂದಿನಿ ಬ್ರಾಂಡ್ ಪ್ರತಿಯೊಬ್ಬ ಗ್ರಾಹಕರ ಮನೆಮಾತಾಗಿದೆ. ಆದರೆ ಈಗ ಕೆಎಂಎಫ್‌ ಉತ್ಪಾದಕರ ವೆಚ್ಚವನ್ನು ನಿಭಾಯಿಸುವ ಸಲುವಾಗಿ ರೈತರಿಗೆ ಸಹಾಯವಾಗುವಂತೆ ನಂದಿನಿ ಹಾಲಿನ ಬೆಲೆಯನ್ನು ಮತ್ತೆ ಏರಿಕೆ ಮಾಡಲು ನಿರ್ಧರಿಸಿದೆ. ಇದರ ಬಗ್ಗೆ ಇನ್ನು ಹೆಚ್ಚಿನ ಮಾಹಿತಿಯನ್ನು ತಿಳಿಯಲು ನಮ್ಮ ಲೇಖನವನ್ನು ಸಂಪೂರ್ಣವಾಗಿ ಕೊನೆಯವರೆಗು ಓದಿ.

milk federation karnataka

ಕೆಎಂಎಫ್ (KMF) ಗೆ ಮನವಿ ಮಾಡಿರುವ ಹಾಲು ಒಕ್ಕೂಟಗಳು:

ನಮ್ಮ ರಾಜ್ಯದ 14 ಹಾಲು ಒಕ್ಕೂಟಗಳು ಕೆಎಂಎಫ್‌ ಅಂದರೆ ಕರ್ನಾಟಕದ ಹಾಲು ಮಾರಾಟ ಮಹಾಮಂಡಳಿಗೆ ಮನವಿಯನ್ನು ಮಾಡಿದ್ದು ಈ ಕಾರಣದಿಂದಲೇ ಹಾಲಿನ ಬೆಲೆಯನ್ನು ಮತ್ತೆ ಏರಿಕೆ ಮಾಡಲು ಸರ್ಕಾರ ಮುಂದಾಗಿದೆ ಎನ್ನಲಾಗುತ್ತಿದೆ.

ಈ ಹಿಂದೆ ಹಾಲಿನ ಬೆಲೆಯಲ್ಲಿ 3 ರೂ ಏರಿಕೆ ಮಾಡಿದ್ದು ಈ ಹಣವನ್ನು ರೈತರಿಗೆ ನೀಡುವುದಾಗಿ ಹೇಳಿತ್ತು. ಇದರಿಂದಾಗಿ ಹಾಲು ಒಕ್ಕೂಟಗಳು ನಷ್ಟವನ್ನು ಅನುಭವಿಸುತ್ತಿದೆ ಎನ್ನಲಾಗುತ್ತದೆ. ಒಕ್ಕೂಟದ ಈ ಎಲ್ಲಾ ನಷ್ಟವನ್ನು ಬರಿಸುವ ಸಲುವಾಗಿ ಬೆಲೆ ಪರಿಷ್ಕರಣೆ ಮಾಡಲು ಮುಂದಾಗಿದ್ದು ಒಂದು ವೇಳೆ ರಾಜ್ಯ ಸರ್ಕಾರ ಗ್ರೀನ್‌ ಸಿಗ್ನಲ್‌ ಕೊಟ್ಟರೆ ಮತ್ತೆ ಹಾಲಿನ ದರದಲ್ಲಿ ಏರಿಕೆಯಾಗಲಿದೆ.

ಮುಂದಿನ ವರ್ಷ ಜನವರಿಯಲ್ಲಿ ಸಭೆ?

ಹಾಲಿನ ದರ ಏರಿಕೆಗೆ ಸಂಬಂಧ ಪಟ್ಟಂತೆ ಮುಂದಿನ ವರ್ಷ ಎಂದರೆ ಜನವರಿ 2024 ರಲ್ಲಿ 14 ಹಾಲು ಒಕ್ಕೂಟಗಳ ಸಭೆಯನ್ನು ಕರೆಯಲು ಕರ್ನಾಟಕದ ಹಾಲು ಮಾರಾಟ ಮಹಾಮಂಡಳಿ ಚಿಂತನೆಯನ್ನು ನಡೆಸಿದೆ. ಎಲ್ಲಾ ವಿಚಾರಗಳನ್ನು ಸರಿಯಾದ ರೀತಿಯಲ್ಲಿ ಗಮನಿಸಿ ಬೆಲೆ ಏರಿಕೆಯ ಬಗ್ಗೆ ತೀರ್ಮಾನವನ್ನು ಮಾಡಲಾಗುತ್ತದೆ. ಹಾಗಾಗಿ ಹಾಲಿನ ಬೆಲೆ ಏರಿಕೆಯಾಗುವ ವರೆಗು ಈಗಿರುವ ಬೆಲೆಯಲ್ಲಿ ಗ್ರಾಹಕರಿಗೆ ನಂದಿನಿ ಹಾಲು ಮಾರುಕಟ್ಟೆಯನ್ನು ದೊರೆಯುತ್ತದೆ.


ಇತರರಿಗೆ ಚೆಕ್‌ ನೀಡುವ ಮುನ್ನಾ ಹೊಸ ನಿಯಮ ತಿಳಿಯಿರಿ!! ಚೆಕ್ ಬೌನ್ಸ್ ಗೆ ಸರ್ಕಾರದಿಂದ ಕಠಿಣ ಕ್ರಮ ಜಾರಿ

ರಕ್ತ ಯಾಕೆ ಕೆಂಪಾಗಿದೆ ಗೊತ್ತಾ? ನೀಲಿ ಅಥವಾ ಕಪ್ಪು ಯಾಕಿಲ್ಲ; ಇದಕ್ಕೆ ಕಾರಣ ತಿಳಿಸಿದ್ರೂ ವಿಜ್ಞಾನಿಗಳು

Leave a Comment