ಹಲೋ ಸ್ನೇಹಿತರೇ, ಮಹಿಳೆಯೊಬ್ಬರು ಸಾರಿಗೆ ಸಂಸ್ಥೆಯ ಬಸ್ನಲ್ಲಿ ಮಗುವಿಗೆ ಜನ್ಮ ನೀಡಿದ್ದು, ಆ ಮಗುವಿಗೆ ಜೀವನಪೂರ್ತಿ ಬಸ್ ಸಂಚಾರಕ್ಕೆ ಉಚಿತ ಬಸ್ ಪಾಸ್ ನೀಡಲಾಗಿದೆ. ಇಂಥದೊಂದು ಅಚ್ಚರಿಯ ಘಟನೆ ತೆಲಂಗಾಣದ ಆದಿಲಾಬಾದ್ನಲ್ಲಿ ನಡೆದಿದೆ. ಈ ಘಟನೆ ಏನು ಎನ್ನುವುದನ್ನು ಅನಾವು ನಿಮಗೆ ಈ ಲೇಖನದ ಮೂಲಕ ತಿಳಿಸಿಕೊಡಲಿದ್ದೇವೆ..

ಮಹಾರಾಷ್ಟ್ರದ ಕಿನ್ವತ್ ತಾಲೂಕಿನ ಸಿಂಗಾರಿವಾಡಾ ನಿವಾಸಿಯಾದ ಮದಾವಿ ರತ್ನಮಾಲಾ ಹೆಸರಿನ ಗರ್ಭಿಣಿ ಇಂದ್ರವೆಲ್ಲಿಯಲ್ಲಿ ವಾಸಿಸುತ್ತಿದ್ದರು. ಅವರು ಭಾನುವಾರದಂದು ತಮ್ಮ ಕುಟುಂಬಸ್ಥರೊಂದಿಗೆ ಇಂದ್ರವೆಲ್ಲಿಯಿಂದ ಆದಿಲಾಬಾದ್ಗೆ ಬಸ್ನಲ್ಲಿ ಪ್ರಯಾಣ ಬೆಳೆಸಿದ್ದರು. ರತ್ನಮಾಲಾರವರೊಗೆ ಹೆರಿಗೆ ನೋವು ಕಾಣಿಸಿಕೊಂಡಿದ್ದ ಕಾರಣದಿಂದ ಗುಡಿಹಾತನೂರ್ ವಲಯದ ಮಾಣಕಾಪುರ ಎಂಬಲ್ಲಿ ಬಸ್ ನಿಲ್ಲಿಸಲಾಗಿತ್ತು. ಆದ್ರೆ 108 ಆ್ಯಂಬುಲೆನ್ಸ್ ಸಕಾಲಕ್ಕೆ ಬಾರದೆ ಇತುಬ ಕಾರಣ ಅವರಿಗೆ ಬಸ್ನಲ್ಲಿಯೇ ಮಗುವು ಕೂಡ ಆಗಿದೆ.
ಈ ಸಂದರ್ಭದಲ್ಲಿ ಬಸ್ ಡ್ರೈವರ್ ಸ್ವತಃ ವೈದ್ಯರ ಪಾತ್ರ ನಿರ್ವಹಿಸಿದ್ದರು. ನಂತರ ಬಸ್ ಅನ್ನು ಅದೆ ತಕ್ಷಣದಲ್ಲಿ ಗುಡಿಹಾತನೂರ್ ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ (ಆಸ್ಪತ್ರೆ) ಕೊಂಡೊಯ್ಯಲಾಗಿತ್ತು. ಆರೋಗ್ಯ ಕೇಂದ್ರಕ್ಕೆ ದಾಖಲಾದ ತಾಯಿ-ಮಗುವನ್ನು ಪರೀಕ್ಷಿಸಿದ ವೈದ್ಯರು, ಇಬ್ಬರೂ ಆರೋಗ್ಯವಾಗಿದ್ದಾರೆ ಎನ್ನುವ ಸಂತಸದ ಸುದ್ದಿಯನ್ನು ತಿಳಿಸಿದ್ದಾರೆ. ಸಾರಿಗೆ ನಿಗಮದ ಡಿವಿಎಂ ಮಧುಸೂದನ್ ಹಾಗೂ ಡಿಎಂ ವಿಜಯ್ ರವರು
ಆಸ್ಪತ್ರೆಗೆ ಆಗಮಿಸಿ ತಾಯಿ – ಮಗು ಇಬ್ಬರ ಆರೋಗ್ಯವನ್ನು ವಿಚಾರಿಸಿದ್ದಾರೆ ಮತ್ತು ಇದಕ್ಕೆ ಬೇಕಾದ ಖರ್ಚು ವೆಚ್ಚವನ್ನು ಭರಿಸುವುದಾಗಿ ತಿಳಿಸಿದ್ದಾರೆ.
ಸಾರಿಗೆ ಸಂಸ್ಥೆಯ ಬಸ್ನಲ್ಲಿ ಜನಿಸಿದ ಮಗುವಿನ ಜೀವನಪೂರ್ತಿ ಉಚಿತ ಬಸ್ ಪಾಸ್ ನೀಡಲಾಗುವುದು ಎಂದು ಸಾರಿಗೆ ಇಲಾಖೆಯ ಎಂಡಿ ಸಜ್ಜನರ್ ಹೇಳಿಕೆಯನ್ನು ನೀಡಿದ್ದಾರೆ. ತಾಯಿ ಹಾಗೂ ಮಗುವನ್ನು ಸುರಕ್ಷಿತವಾಗಿ ಆಸ್ಪತ್ರೆಗೆ ಕರೆದುಕೊಂಡು ಬಂತರುವ ಬಸ್ ಚಾಲಕಿ ಎಂ. ಅಂಜನಾ ಹಾಗೂ ಕಂಡಕ್ಟರ್ ಸಿಎಚ್ ಗಬ್ಬರ್ ರವರಿಗೆ ಸಾರಿಗೆ ಸಂಸ್ಥೆಯ ಚೇರಮನ್ ಬಾಜಿರೆಡ್ಡಿ ಗೋವರ್ತನರೆಡ್ಡಿ ಹಾಗೂ ಎಂಡಿ ಸಜ್ಜನರ್ ಧನ್ಯವಾದಗಳನ್ನು ತಿಳಿಸುವ ಮೂಲಕ ಜನರ ರಕ್ಷಣೆಗೆ ನಾವು ಇದ್ದೇವೆ ಎಂದು ತಿಳಿಸಿದ್ದಾರೆ.
ಇತರೆ ವಿಷಯಗಳು:
ಸಾವಿನಲ್ಲೂ ಸಾರ್ಥಕತೆ ಮೆರೆದ ಅರ್ಜುನ!! ಕಾಡಾನೆ ದಾಳಿಗೆ ಕ್ಯಾಪ್ಟನ್ ಸಾವು
ಹಣಕಾಸು ಸಚಿವರಿಂದ ದೊಡ್ಡ ಘೋಷಣೆ!! ಬ್ಯಾಂಕ್ ಗ್ರಾಹಕರಿಗೆ ಗುಡ್ ನ್ಯೂಸ್ ನೀಡಿದ RBI