rtgh

ದೇಶದ ಕೋಟ್ಯಾಂತರ ಮಹಿಳೆಯರಿಗೆ ಲಾಟ್ರಿ.! ಬಜೆಟ್‌ನಲ್ಲಿ ಘೋಷಣೆಯಾಯ್ತು ಲಕ್ಷಾಧಿಪತಿಯಾಗುವ ಯೋಜನೆ

ಹಲೋ ಸ್ನೇಹಿತರೇ, ದೇಶದ ಕೋಟ್ಯಾಂತರ ಮಹಿಳೆಯರ ಕಲ್ಯಾಣ ಸಲುವಾಗಿ ಈ ಯೋಜನೆಯನ್ನು ಘೋಷಿಣೆ ಮಾಡಲಾಗಿದ್ದು, ಈ ಯೋಜನೆಯ ಮೂಲಕ 2025ರ ವೇಳೆಗೆ ಲಕ್ಷಾಂತರ ಮಹಿಳೆಯರನ್ನು ಲಕ್ಷಾಧಿಪತಿಗಳನ್ನಾಗಿ ಮಾಡಲಾಗುತ್ತದೆ ಎಂದು ಭರವಸೆ ನೀಡಿದ್ದಾರೆ. ಇದರ ಬಗ್ಗೆ ಇನ್ನು ಹೆಚ್ಚಿನ ಮಾಹಿತಿಗಾಗಿ ನಮ್ಮ ಲೇಖನವನ್ನು ಓದಿ.

lakhpati didi yojana

ಇಂದು ಕೇಂದ್ರ ಮಧ್ಯಂತರ ಬಜೆಟ್ ಮಂಡಿಸಿದ ಕೇಂದ್ರದ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್, ಈ ಬಾರಿಯ ಬಜೆಟ್‌ನಲ್ಲಿ ಮಹಿಳೆಯರಿಗಾಗಿ ಹಲವು ದೊಡ್ಡ ಘೋಷಣೆಗಳನ್ನು ಮಾಡಿದ್ದಾರೆ. ಬಜೆಟ್ ಮಂಡನೆ ವೇಳೆ ವಿತ್ತ ಸಚಿವರು ಪ್ರಸ್ತಾಪಿಸಿರುವ ‘ಲಖ್ಪತಿ ದೀದಿ ಯೋಜನೆ’ ಇದೀಗ ಎಲ್ಲರ ಗಮನವನ್ನು ಸೆಳೆದಿದೆ. 

ಲಖ್ಪತಿ ದೀದಿ ಯೋಜನೆ: 
ಕೇಂದ್ರ ಸರ್ಕಾರವು ಒಂದು ಪ್ರಮುಖ ಉಪಕ್ರಮವನ್ನು ಆರಂಭಿಸಿದೆ. ಆಗಸ್ಟ್ 15, 2023 ರಂದು ಕೆಂಪು ಕೋಟೆಯಲ್ಲಿ ಮಾತನಾಡುವಾಗ, ಪ್ರಧಾನಿ ನರೇಂದ್ರ ಮೋದಿ ಅವರು ಈ ಲಖ್ಪತಿ ದೀದಿ ಯೋಜನೆಯನ್ನು ಪ್ರಸ್ತಾಪನೆ ಮಾಡಿದ್ದರು.

ಏನಿದು ಲಖ್ಪತಿ ದೀದಿ ಯೋಜನೆ? 
ಇದು ಮಹಿಳೆಯರನ್ನು ಸಬಲೀಕರಣಗೊಳಿಸಲು ಸರ್ಕಾರ ಜಾರಿಗೊಳಿಸಿರುವ ಉತ್ತಮ ಯೋಜನೆಗಳಲ್ಲಿ ಇದು ಒಂದು. ಈ ಯೋಜನೆಯಡಿ, ಮಹಿಳೆಯರು ತಮ್ಮ ಜೀವನೋಪಾಯದ ಉದ್ದೇಶವನ್ನು ಪೂರೈಸಿಕೊಳ್ಳಲು ಸರ್ಕಾರದಿಂದ ಆರ್ಥಿಕ ನೆರವು ಪಡೆದುಕೊಳ್ಳಬಹುದಾಗಿದೆ. ದೇಶಾದ್ಯಂತ 23 ಡಿಸೆಂಬರ್ 2023ರಂದು ಈ ಯೋಜನೆಯನ್ನು ಜಾರಿಗೆ ತರಲಾಗಿದ್ದು ಇದು ಮಹಿಳೆಯರನ್ನು ಆರ್ಥಿಕವಾಗಿ ಸಾಕ್ಷರರಾಗಲು ಸಹಾಯವಾಗಲಿದೆ. ಮಹಿಳೆಯರ ಸಬಲೀಕರಣವು ಈ ಯೋಜನೆಯ ಮುಖ್ಯ ಉದ್ದೇಶವಾಗಿದೆ. ಈ ಯೋಜನೆಯ ಅನುಷ್ಠಾನದಿಂದ ಸ್ವ-ಸಹಾಯ ಗುಂಪುಗಳಿಗೆ ಸಂಬಂಧಿಸಿದ ಕೋಟ್ಯಂತರ ಮಹಿಳೆಯರು ಲಾಭ ಪಡೆಯಲಿದ್ದಾರೆ ಎಂದು ನಿರೀಕ್ಷಣೆ ಮಾಡಲಾಗಿದೆ. 


ಲಖ್ಪತಿ ದೀದಿ ಯೋಜನೆಯ ಪ್ರಯೋಜನ: 
* ಆರ್ಥಿಕವಾಗಿ ಹಿಂದುಳಿದ ಗೃಹಿಣಿಯರಿಗೆ ಸಮಾಜದಲ್ಲಿ ಸ್ವಾವಲಂಬಿಯನ್ನಾಗಿ ಮಾಡಲು ಕಾರ್ಯನಿರ್ವಹಿಸಲಾಗುವುದು. 
* ಲಖ್ಪತಿ ಯೋಜನೆಯಡಿ ಮಹಿಳೆಯರಿಗೆ ಕೌಶಲ್ಯ ಅಭಿವೃದ್ಧಿ ತರಬೇತಿಯನ್ನು ನೀಡಲಾಗುವುದು. 
* ತರಬೇತಿಯ ಮೂಲಕ ಮಹಿಳೆಯರು ಉದ್ಯಮವನ್ನು ಆರಂಭಿಸುವ ಮಾರ್ಗಗಳನ್ನು ಕಲಿಸಲಾಗುತ್ತದೆ.
* ಉದ್ಯಮಿಗಳಾಗಲು ಬಯಸುವ ಮಹಿಳೆಯರಿಗೆ ತಮ್ಮ ವ್ಯಾಪಾರವನ್ನು ಪ್ರಾರಂಭಿಸಲು & ಬೆಳೆಯಲು ಈ ಯೋಜನೆಯಡಿಯಲ್ಲಿ ಮಾರ್ಗದರ್ಶನ ಮತ್ತು ತರಬೇತಿ ಪಡೆಯಬಹುದಾಗಿದೆ. 
* ಕಡಿಮೆ ವೆಚ್ಚದಲ್ಲಿ ವಿಮಾ ರಕ್ಷಣೆಯನ್ನು ಒದಗಿಸುತ್ತದೆ. 
* ಈ ಯೋಜನೆಯಡಿ, ಡಿಜಿಟಲ್ ಬ್ಯಾಂಕಿಂಗ್ ಸೇವೆ, ಮೊಬೈಲ್ ವ್ಯಾಲೆಟ್‌ಗಳು & ಇತರ ಡಿಜಿಟಲ್ ಪ್ಲಾಟ್‌ಫಾರ್ಮ್‌ ಹೇಗೆ ಬಳಸುವುದು ಎಂಬುದನ್ನು ಕಲಿಯಲು ಮಹಿಳೆಯರನ್ನು ಪ್ರೋತ್ಸಾಹಿಸಲಾಗುವುದು.
* ಈ ಕಾರ್ಯಾಗಾರಗಳು ಬಜೆಟ್, ಉಳಿತಾಯ, ಹೂಡಿಕೆ & ಹಣಕಾಸಿನ ಆಯ್ಕೆಗಳನ್ನು ಅರ್ಥಮಾಡಿಕೊಳ್ಳುವ ವಿಷಯವನ್ನು ಒಳಗೊಂಡಿದೆ.

ಯೋಜನೆಯ ಲಾಭವನ್ನು ಯಾರು ಪಡೆದುಕೊಳ್ಳುತ್ತಾರೆ?
ಯೋಜನೆಯ ಲಾಭ ಪಡೆಯಲು ಮಹಿಳೆಯು ಸಂಬಂಧಪಟ್ಟ ರಾಜ್ಯದ ಖಾಯಂ ನಿವಾಸಿಯಾಗಿರಬೇಕು ಮತ್ತು ಮಹಿಳೆಯರು ಸ್ವಸಹಾಯ ಸಂಘದಲ್ಲಿರಬೇಕು.

ಸ್ವಂತ ಮನೆ ಕಟ್ಟಲು ಸರ್ಕಾರದ ಸಹಾಯ ಹಸ್ತ.! ಕೂಡಲೇ ಅಪ್ಲೇ ಮಾಡಿ

2 ಲಕ್ಷಕ್ಕಿಂತ ಕಡಿಮೆಯಿರುವ ಎಲ್ಲಾ ರೈತರ ಸಾಲ ಮನ್ನಾ! ಸರ್ಕಾರದ ಮಹತ್ವದ ಘೋಷಣೆ

Leave a Comment