ಹಲೋ ಸ್ನೇಹಿತರೇ, ವಿದ್ಯಾವಂತ ಯುವಕರು, ಕೃಷಿ ಪದವೀಧರರು, ಈಗಾಗಲೇ ಕೃಷಿ ಚಟುವಟಿಕೆಯಲ್ಲಿ ತೊಡಗಿಕೊಂಡಿರುವವರು, ಕೃಷಿಯ ಬಗ್ಗೆ ಬಲ್ಲ ಹಾಗೂ ತಾಂತ್ರಿಕವಾಗಿ ಕೃಷಿ ಅಭಿವೃದ್ಧಿ ಮಾಡಲು ಬಯಸುವ ಯುವಕರು ಈ ಯೋಜನೆಯ ಅಡಿಯಲ್ಲಿ ಕೃಷಿ ಚಟುವಟಿಕೆಗಳಿಗಾಗಿ ಸರ್ಕಾರದಿಂದ ಐದರಿಂದ 50 ಲಕ್ಷ ರೂಪಾಯಿಗಳ ವರೆಗೆ ಸಹಾಯಧನ ಪಡೆಯಬಹುದು.

ಕೃಷಿ ನವೋದ್ಯಮ ಯೋಜನೆ
ಇತ್ತೀಚಿನ ದಿನಗಳಲ್ಲಿ ಯುವಕರು ಕೂಡ ಕೃಷಿ ಚಟುವಟಿಕೆಗಳ ಬಗ್ಗೆ ಹೆಚ್ಚಿನ ಗಮನ ಹರಿಸುತ್ತಿದ್ದಾರೆ. ಕೃಷಿ ಮಾಡಿ ಹೆಚ್ಚು ಸಂಪಾದನೆ ಮಾಡಬಹುದು ಎಂಬುದನ್ನು ಅರಿತಿದ್ದಾರೆ. ಈ ಹಿನ್ನೆಲೆಯಲ್ಲಿ ಕೃಷಿ ಚಟುವಟಿಕೆಗಳಿಗಾಗಿ ಅಥವಾ ಕೃಷಿ ಉದ್ಯಮ ಆರಂಭಿಸುವುದಕ್ಕಾಗಿ ಯುವಕರಿಗೆ, ಸರ್ಕಾರ ಸಹಾಯಧನ ನೀಡುವ ಮೂಲಕ ಕೃಷಿ ಚಟುವಟಿಕೆಯನ್ನು ಉತ್ತೇಜಿಸುತ್ತಿದೆ.
ಕೃಷಿ ನವೋದ್ಯಮ ಯೋಜನೆಯ ಅಡಿಯಲ್ಲಿ ಆರ್ಥಿಕ ಸೌಲಭ್ಯ
ಕೃಷಿ ಕ್ಷೇತ್ರದಲ್ಲಿ ಉದ್ಯಮಶೀಲತೆಯನ್ನು ಹೆಚ್ಚಿಸಲು, ಕೃಷಿಯಲ್ಲಿ ನಾವಿನ್ಯತೆ ಹಾಗೂ ತಾಂತ್ರಿಕತೆ ಬಳಸಲು ಆಸಕ್ತಿ ಹೊಂದಿರುವ ಯುವಕರಿಗೆ ಕೃಷಿ ನವೋದ್ಯಮದ ಮೂಲಕ ಆರ್ಥಿಕ ನೆರವು ನೀಡುವುದು ಸರ್ಕಾರದ ಉದ್ದೇಶ.
ಗ್ರಾಮೀಣ ಭಾಗದಲ್ಲಿ ಯುವಕರು ಕೃಷಿಯಲ್ಲಿಯೇ ಉದ್ಯೋಗ ಕಂಡುಕೊಳ್ಳಲು ಈ ಯೋಜನೆ ಸಹಾಯಕವಾಗಲಿದೆ. ಕೃಷಿ ವಿಶ್ವವಿದ್ಯಾಲಯಗಳಲ್ಲಿ ಹಾಗೂ ಇತರ ಸಂಶೋಧನೆಗಳಲ್ಲಿ ವಾಣಿಜ್ಯೀಕರಣವನ್ನು ಉತ್ತೇಜಿಸುವ ಮೂಲಕ ಕೃಷಿ ನವೋದ್ಯಮ ಹೆಚ್ಚಿಸುವುದು ಸರ್ಕಾರದ ಉದ್ದೇಶ.
ಪಡಿತರ ಚೀಟಿದಾರರಿಗೆ ಬೃಹತ್ ಲಾಭ! APL BPL ಕಾರ್ಡುದಾರರಿಗೆ ಮಾತ್ರ ಈ ಅವಕಾಶ
ಪಡೆಯಿರಿ 50 ಲಕ್ಷ ರೂಪಾಯಿಗಳ ವರೆಗೆ ಸಹಾಯಧನ
ಕೃಷಿ ನವೋದ್ಯೋಮಿಗಳಿಗೆ ಬ್ಯಾಂಕ್ ಮೂಲಕ ಐದರಿಂದ 20 ಲಕ್ಷ ರೂಪಾಯಿಗಳ ವರೆಗೆ ಸಾಲ ಸೌಲಭ್ಯ ಒದಗಿಸಲಾಗುವುದು. ಇದರಲ್ಲಿ 50% ನಷ್ಟು ಸಹಾಯಧನ ಸರ್ಕಾರ ಒದಗಿಸುತ್ತದೆ.
ಅದೇ ರೀತಿ ಈಗಾಗಲೇ ಆರಂಭಿಸಿರುವ ಕೃಷಿ ಉದ್ಯಮವನ್ನು ಅಭಿವೃದ್ಧಿಪಡಿಸಲು 50 ಲಕ್ಷ ರೂಪಾಯಿಗಳವರೆಗೆ ಸಾಲ ಸೌಲಭ್ಯ ಹಾಗೂ 50% ನಷ್ಟು ಸಹಾಯಧನ ಪಡೆಯಬಹುದು. ಕೃಷಿ ಉದ್ದಿಮೆಗಳಿಗೆ ಕೃಷಿ ಇಲಾಖೆ, ಕೃಷಿ ವಿಶ್ವವಿದ್ಯಾಲಯಗಳು ಹಾಗೂ ಸಂಶೋಧನಾ ತಂಡದಿಂದ ತರಬೇತಿಯನ್ನು ನೀಡಲಾಗುತ್ತದೆ.
ಅರ್ಜಿ ಸಲ್ಲಿಸುವುದು ಹೇಗೆ?
ಕೃಷಿ ಇಲಾಖೆಯ ಕಿಸಾನ್ ವೆಬ್ಸೈಟ್ https://www.mofpi.gov.in/pmfme ಹೆಚ್ಚಿನ ಮಾಹಿತಿ ಪಡೆದುಕೊಂಡು ಅರ್ಜಿ ಸಲ್ಲಿಸಿ. ಕೃಷಿ ಯೋಜನೆಯ ಬಗೆಗಿನ ಇನ್ನಷ್ಟು ಮಾಹಿತಿಯನ್ನು ಪಡೆದುಕೊಳ್ಳಲು ಹತ್ತಿರದ ಕೃಷಿ ಇಲಾಖೆಯನ್ನು ಸಂಪರ್ಕಿಸಿ.
ಇತರೆ ವಿಷಯಗಳು:
ಹೊಸ ಶಿಕ್ಷಣ ನೀತಿ: 1ನೇ ತರಗತಿ ಪ್ರವೇಶದ ವಯೋಮಿತಿಯನ್ನು ಕಡ್ಡಾಯಗೊಳಿಸಿದ ಇಲಾಖೆ
ಇನ್ಮುಂದೆ 50 ವರ್ಷ ಮೇಲ್ಪಟ್ಟವರಿಗೂ ಪಿಂಚಣಿ ಸೌಲಭ್ಯ! ಸರ್ಕಾರದ ದಿಢೀರ್ ಆದೇಶ