rtgh

ಕೃಷಿ ನವೋದ್ಯಮ ಯೋಜನೆ: ಎಲ್ಲಾ ಯುವಕರಿಗೆ ಗರಿಷ್ಠ 20 ಲಕ್ಷ‌ ರೂ. ಸಹಾಯಧನ.! ಕೃಷಿ ಉನ್ನತಿಗೆ ಹೊಸ ಹೆಜ್ಜೆ

ಹಲೋ ಸ್ನೇಹಿತರೇ, ಕೃಷಿ ಕ್ಷೇತ್ರದ ಉದ್ಯಮಶೀಲತೆ ಹೆಚ್ಚುವರಿ ಹಾಗೂ ಗ್ರಾಮೀಣ ಭಾಗದ ಯುವಕರಿಗೆ ಉದ್ಯೋಗ ಸೃಜಿಸುವ ನಿಟ್ಟಿನಲ್ಲಿ ರಾಜ್ಯ ಸರ್ಕಾರವು ಕೃಷಿ ನವೋದ್ಯಮ ಹೊಸ ಯೋಜನೆ ಜಾರಿಗೊಳಿಸಿದೆ, ಇದಕ್ಕಾಗಿ ಗರಿಷ್ಠ 20 ಲಕ್ಷ‌ ರೂ. ಸಹಾಯಧನವನ್ನು ನೀಡಲಾಗುತ್ತದೆ ಎಂದು ಜಂಟಿ ಕೃಷಿ ನಿರ್ದೇಶಕ ಸಮದ್ ಪಟೇಲ್ ತಿಳಿಸಿದ್ದಾರೆ. ಇದರ ಬಗ್ಗೆ ಇನ್ನು ಹೆಚ್ಚಿನ ಮಾಹಿತಿಯನ್ನು ತಿಳಿಯಲು ನಮ್ಮ ಲೇಖನವನ್ನು ಸಂಪೂರ್ಣವಾಗಿ ಕೊನೆಯವರೆಗು ಓದಿ.

krishi navodyama scheme

ಕೃಷಿ ವಲಯಲ್ಲಿನ ನೂತನ ತಾಂತ್ರಿಕತೆ, ಆವಿಷ್ಕಾರ ಹಾಗೂ ನವೀನ ಪರಿಕಲ್ಪನೆಯ ಸೇವೆಗಳನ್ನು ಒಳಗೊಂಡ ವಾಣಜ್ಯೀಕರಣ ಉತ್ತೇಜಿಸುವ ಗುರಿಯೊಂದಿಗೆ ನೂತನ ಯೋಜನೆ ಅನುಷ್ಠಾನಗೊಳಿಸಲಾಗಿದೆ. ಕೃಷಿ ಪದವೀಧರರು ಹಾಗೂ ವಿದ್ಯಾವಂತ ಯುವಕರು, ಆಸಕ್ತ ಪ್ರಗತಿ ಪರರೈತರು ಹೊಸದಾಗಿ ಕೃಷಿಯಲ್ಲಿ ನವೋದ್ಯಮ ಸ್ಥಾಪಿಸಲು ಮುಂದೆ ಬರುವವರಿಗೆ ಸ್ಟಾರ್ಟಪ್ ಯೋಜನೆಯ ವರದಿ ಶೇ.50 ರಷ್ಟು ಅಂದರೆ 5 ರಿಂದ‌ 20 ಲಕ್ಷ ರೂ. ವರೆಗೂ ಸಹಾಯಧನ ನೀಡಲಾಗುವುದು.

ಅಲ್ಲದೆ ಈಗಾಗಾಲೇ ಸ್ಥಾಪಿಸಲಾದ ನವೋದ್ಯಮಗಳ ವಿಸ್ತರಣೆ/ಮೇಲ್ದರ್ಜೆಗೇರಿಸಲು ಶೇ.50 ರಷ್ಟು ಸಹಾಯಧನ (20 ರಿಂದ ಗರಿಷ್ಠ 50 ಲಕ್ಷ.) ವರೆಗೆ  ಬ್ಯಾಂಕ್ನಿಂದ ಸಾಲದ ಮೂಲಕ ಸಬ್ಸಿಡಿ ನೀಡಲಾಗುವುದು. ಜಿಲ್ಲಾ ಮಟ್ಟದ ತಾಂತ್ರಿಕ ಸಮಿತಿ ಹಾಗೂ ಅನುಷ್ಠಾನ ಸಮಿತಿಯ ಒಪ್ಪಿಗೆಯ ನಂತರ ರಾಜ್ಯ ಮಟ್ಟದಲ್ಲಿ ಅನುಮೋದನೆ ಪಡೆದ ನಂತರ ಈ ಸಹಾಯಧನ ನೀಡಲಾಗುವುದು.

ಈ ಕುರಿತು ಹೆಚ್ಚಿನ ಮಾಹಿತಿಗಾಗಿ ಹತ್ತಿರದ ತಾಲೂಕು ಸಹಾಯಕ ಕೃಷಿ ನಿರ್ದೇಶಕರನ್ನು/ ಕಲಬುರಗಿ ಜಂಟಿ ಕೃಷಿ ನಿರ್ದೇಶಕರ ಕಚೇರಿಯನ್ನು ಭೇಟಿ ನೀಡಿ ಇಲ್ಲವೆ ಸಂಪರ್ಕ ಮಾಡಿ.


LPG ಗ್ಯಾಸ್ E-KYC: ಸಾಲಿನಲ್ಲಿ ನಿಲ್ಲುವ ಅಗತ್ಯವಿಲ್ಲ; ಮನೆಯಿಂದಲೇ ಮಾಡಿ, ನೇರ ಲಿಂಕ್ ಇಲ್ಲಿದೆ

99 ರೂ.ಗೆ ಸ್ಮಾರ್ಟ್‌ ವಾಚ್!‌ ಫ್ಲಿಪ್‌ಕಾರ್ಟ್ ನಲ್ಲಿ ಭರ್ಜರಿ ಆಫರ್‌, ಕೆಲವೇ ಗಂಟೆಗಳಲ್ಲಿ ಪ್ರಾರಂಭ

Leave a Comment