rtgh

ರೈತರಿಗೆ ಈ ಯೋಜನೆಯಲ್ಲಿ ಸಿಗುತ್ತೆ 6 ಲಾಭಗಳು! ಡಿ. 31 ರೊಳಗೆ ರೈತರ ಸಂಪರ್ಕ ಕೇಂದ್ರಕ್ಕೆ ಭೇಟಿ ನೀಡಿ

ಹಲೋ ಸ್ನೇಹಿತರೇ ನಮಸ್ಕಾರ, ನಿಮಗೆಲ್ಲರಿಗೂ ನಮ್ಮ ಲೇಖನಕ್ಕೆ ಸ್ವಾಗತ, ಕರ್ನಾಟಕ ಸರ್ಕಾರವು ರೈತರಿಗೆ ಭರ್ಜರಿ ಕೊಡುಗೆಯನ್ನು ನೀಡಿದೆ. ರೈತರಿಗೆ ವಿವಿಧ ಸೌಲಭ್ಯಗಳನ್ನು ಪಡೆಯಲು ಅತಿ ಬೇಗನೆ ರ್ಯತರ ಸಂಪರ್ಕ ಕೇಂದ್ರಕ್ಕೆ ಬೇಟಿ ನೀಡಬೇಕು. ಈ ಕುರಿತು ವಿವರವಾದ ಮಾಹಿತಿಯನ್ನು ನಾವು ಇಂದಿನ ಲೇಖನದಲ್ಲಿ ತಿಳಿಸಿದ್ದೇವೆ.

Krishi Bhagya Yojana Karnataka

ಕರ್ನಾಕಟ ಸರ್ಕಾರವು ರೈತರಿಗಾಗಿ ಹೊಸ ಹೊಸ ಯೋಜನೆಗಳನ್ನು ಜಾರಿಗೆ ತಂದಿದ್ದು, ಈ ಎಲ್ಲಾ ಯೋಜನೆಗಳಿಗೆ ಅರ್ಜಿ ಪ್ರಕ್ರಿಯೆ ಆರಂಭವಾಗಿದ್ದು, ಎಲ್ಲಾ ರೈತರು ಈ ಎಲ್ಲಾ ಯೋಜನೆಗಳ ಲಾಭವನ್ನು ಪಡೆಯಬೇಕು. ಪ್ರತಿಯೊಬ್ಬರೂ ಕೂಡ ಇದೇ ಡಿಸೆಂಬರ್‌ 31 ರೊಳಗೆ ಅರ್ಜಿ ಸಲ್ಲಿಸಬೇಕು.

ಕೃಷಿ ಭಾಗ್ಯ ಯೋಜನೆ:

ಅರ್ಜಿ ಸಲ್ಲಿಸುವ ರೈತ ಫಲಾನುಭವಿಗಳಿಗೆ ಮಾತ್ರ ರಾಜ್ಯ ಸರ್ಕಾರದಿಂದ ಉಚಿತವಾಗಿ ಕೃಷಿ ಭಾಗ್ಯ ಯೋಜನೆಯಡಿಯಲ್ಲಿ ವಿವಿಧ ಸೌಲಭ್ಯಗಳನ್ನು ಪಡೆದುಕೊಳ್ಳಬಹುದು. ಕರ್ನಾಟಕ ರಾಜ್ಯ ಸರಕಾರದಿಂದ ವಿವಿಧ ಸೌಲಭ್ಯಗಳನ್ನು ಪಡೆದುಕೊಳ್ಳಲು ರೈತರಿಂದ ಹೊಸ ಅರ್ಜಿಗಳು ಆರಂಭವಾಗಿವೆ. 2023 -24 ನೇ ಸಾಲಿನಲ್ಲಿ ಕೃಷಿ ಭಾಗ್ಯ ಯೋಜನೆಗೆ ರೈತ ಬಾಂದವರು ಡಿಸೆಂಬರ್‌ 31 ರೊಳಗೆ ಸಂಬಂಧಪಟ್ಟ ಕೇಂದ್ರಕ್ಕೆ ಭೇಟಿ ನೀಡಿ ಅರ್ಜಿ ಸಲ್ಲಿಸಲು ಅವಕಾಶ ಕಲ್ಪಿಸಲಾಗಿದೆ. ಅರ್ಜಿಯ ನಮೂನೆಗಳು ಸಮೀಪದ ರೈತರ ಸಂಪರ್ಕಕೇಂದ್ರದಲ್ಲಿ ಲಭ್ಯವಿರುತ್ತವೆ.

ಇದನ್ನು ಸಹ ಓದಿ: ಹಳೆಯ ಪಿಂಚಣಿ ಯೋಜನೆ ಮರುಸ್ಥಾಪನೆ: ಸುಪ್ರಿಂ ಕೋರ್ಟಿನಿಂದ ಬಂತು ಮಹತ್ವದ ತೀರ್ಪು


ಪ್ರಯೋಜನಗಳು:

  • ರೈತರು ಕನಿಷ್ಠ 1 ಎಕರೆ ಒಣ ಜಮೀನನ್ನು ಹೊಂದಿರಬೇಕು.
  • ಸದರಿ ಯೋಜನೆಯು ಒಣ ವಲಯದ ಕ್ಷೇತ್ರಕ್ಕೆ ಮಾತ್ರ ಸಂಬಂಧಿಸಿರುತ್ತದೆ.
  • ಕ್ಷೇತ್ರ ಬದು ನಿರ್ಮಾಣ ಕೃಷಿ ಹೊಂಡ ನೀರು ಇಂಗದಂತೆ ತಡೆಯಲು ಪಾಲಿಥಿನ್‌ ಹೊದಿಕೆ.
  • ಕೃಷಿ ಹೊಂಡದ ಸುತ್ತಲೂ ತಂತಿ ಬೇಲಿ ನಿರ್ಮಿಸುವುದು.
  • ಕೃಷಿ ಹೊಂಡದಿಂದ ನೀರು ಎತ್ತಲು ಡೀಸೆಲ್‌ ಅಥವಾ ಪೆಟ್ರೋಲ್‌ ಪಂಪ್ಸೆಟ್‌ ವ್ಯವಸ್ಥೆ ಕಲ್ಪಿಸುವುದು.

ನೀರನ್ನು ಬೆಳೆಗೆ ಹಾಯಿಸುಲು ಸೂಕ್ಷ್ಮ ನೀರಾವರಿ ಸೇರಿದಂತೆ ನಾನಾ ಸೌಲಭ್ಯಗಳನ್ನು ನಿಯಮಾನುಸಾರವಾಗಿ ನೀಡಲಾಗುವುದು. ಒಂದು ವೇಳೆ ಸಂಬಂಧಪಟ್ಟ ತಾಲೂಕಿಗೆ ಅಥವಾ ಹೋಬಳಿಗೆ ನಿಗದಿ ಪಡಿಸಿದ ಗುರಿಗಿಂತ ಹೆಚ್ಚು ಅರ್ಜಿಗಳು ಸ್ವೀಕೃತವಾದರೆ ಲಾಟ್ರಿ ಎತ್ತುವ ಮೂಲಕ ಫಲಾನುಭವಿಳನ್ನು ಆಯ್ಕೆ ಮಾಡಲಾಗುವುದು.

ರೈತರು ತಮ್ಮ ಜಮೀನುಗಳಲ್ಲಿ ಕೃಷಿ ಹೊಂಡವನ್ನು ನಿರ್ಮಿಸಲು ಮಳೆ ನೀರನ್ನು ಸಂಗ್ರಹಿಸಿ ಬೆಳೆಗಳ ಸಂದಿಗ್ಧ ಹಂತದಲ್ಲಿ ರಕ್ಷಣಾತ್ಮಕ ನೀರಾವರಿ ಒದಗಿಸುವುದು ಕೃಷಿ ಭಾಗ್ಯ ಯೋಜನೆಯ ಉದ್ದೇಶವಾಗಿದೆ. ಮೇಲೆ ತಿಳಿಸಿದ ಎಲ್ಲಾ ಘಟಕಗಳನ್ನು ಕಡ್ಡಾಯವಾಗಿ ಅನುಷ್ಠಾನ ಮಾಡಬೇಕೆಂದು ಜಂಟಿ ಕೃಷಿ ನಿರ್ದೇಶಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಇತರೆ ವಿಷಯಗಳು:

2024 ರಲ್ಲಿ ರಜೆಗಳದ್ದೇ ಸುರಿಮಳೆ! ಹೊಸ ವರ್ಷದ ಸಂಪೂರ್ಣ ಹಾಲಿಡೇ ಲಿಸ್ಟ್‌ ಇಲ್ಲಿದೆ

ರೇಷನ್‌ ಕಾರ್ಡುದಾರರಿಗೆ ಹೊಸ ನಿಯಮ!! ಜನವರಿ 1 ರಿಂದ ದೇಶಾದ್ಯಂತ ಜಾರಿ

Leave a Comment