ಹಲೋ ಸ್ನೇಹಿತರೇ ನಮ್ಮ ಈ ಲೇಖನಕ್ಕೆ ಸ್ವಾಗತ, ರೈತರಿಗೆ ಓಂದು ರೀತಿ ಸಿಹಿ ಸುದ್ದಿ ಹಾಗು ಓಂದಿ ರೀತಿ ಎಚ್ಚರಿಕೆ ಸುದ್ದಿ ಎಂದೇ ಹೇಳಬಹುದು ಏಕೆಂದರೆ ರೈತರು ಅಡಿಕೆ ಬೆಳೆಯನ್ನು ಕೊಯ್ಲು ಮಾಡಿ ಒಣಗಿಸುವ ಸಮಯ ಇದಾಗಿದೆ ಈಗ ಮಳೆ ಬಂದರೆ ಅಡಿಕೆಯಲ್ಲಾ ನೆನೆದು ಹೋಗುತ್ತದೆ ಹಾಗೆ ತೋಟ ಜಮೀನುಗಳಿಗೆ ನೀರು ಹಾಯಿಸುವವರಿಗೆ ಇದು ಶುಭ ಸುದ್ದಿ ಎಂದೇ ಹೇಳಬಹುದು ಯಾಕೆಂದು ತಿಳಿಯಲು ಹವಮಾನ ಇಲಾಖೆ ಏನನ್ನು ಹೇಳಿದೆ ಎಂದು ತಿಳಿಯಲು ಈ ಲೇಖನವನ್ನು ಓದಿ.

ಕರ್ನಾಟಕದ ವಿವಿಧ ಜಿಲ್ಲೆಗಳಲ್ಲಿ ಚಳಿಯ ವಾತಾವರಣವಿದ್ದು, ಮಳೆ ಆಗುವ ಸಾಧ್ಯತೆ ಇದೆ. ಮಳೆಯ ಕುರಿತು ದೈನಂದಿನ ವರದಿ ಬಿಡುಗಡೆ ಮಾಡಿರುವ ಭಾರೆತೀಯ ಹವಾಮಾನ ಇಲಾಖೆಯ ಬೆಂಗಳೂರು ಪ್ರಾದೇಶಿಕ ಕೇಂದ್ರ, ಕರ್ನಾಟಕ ರಾಜ್ಯದ ವಿವಿಧ ಜಿಲ್ಲೆಗಳಲ್ಲಿ ಇಂದಿನಿಂದ ಜನವರಿ 8 ರ ವರೆಗೆ ಆರು ದಿನ ಮಳೆ ಆಗುವ ಸಾಧ್ಯತೆ ಇದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ.
ಕರ್ನಾಟಕ ಹವಾಮಾನ ವರದಿ
ಬೆಂಗಳೂರಿನಲ್ಲಿ ಇಂದು ರಾತ್ರಿ ವೇಳೆ ಚಳಿ ಇರಲಿದೆ. ವಿವಿಧೆಡೆ ಮುಂಜಾನೆ ಸಮಯದಲ್ಲಿ ಮಂಜು ಮುಸುಕಿದ ವಾತಾವರಣ ಇರಲಿದ್ದು, ಚಳಿಯ ತೀವ್ರತೆಯನ್ನು ಹೆಚ್ಚಿಸಲಿದೆ. ಹಗಲು ವೇಳೆ ಒಣಹವೆ ಮುಂದುವರಿಯಲಿದೆ. ಮುಂದಿನ 24 ಗಂಟೆ ಅವಧಿಯಲ್ಲಿ ಬೆಂಗಳೂರು ನಗರ ಮತ್ತು ಬೆಂಗಳೂರು ಗ್ರಾಮಾಂತರ ಪ್ರದೇಶಗಳಲ್ಲಿ ಭಾಗಶಃ ಮೋಡ ಕವಿದ ವಾತಾವರಣ ಇರಲಿದೆ. ಹಗಲು ಹೊತ್ತಿನಲ್ಲಿ ಒಣಹವೆ ಮುಂದುವರಿಯಲಿದೆ. ಜನವರಿ 2 ರಿಂದ 8 ರವರೆಗೆ ಕರಾವಳಿಯ ಎಲ್ಲಾ ಜಿಲ್ಲೆಗಳಲ್ಲಿ ಸಾಧಾರಣ ಮಳೆಯಾಗಲಿದೆ. ಜನವರಿ 5 ಮತ್ತು ಜನವರಿ 6 ರಂದು ಉತ್ತರ ಒಳನಾಡು ಮತ್ತು ದಕ್ಷಿಣ ಒಳನಾಡಿನ ಎಲ್ಲಾ ಜಿಲ್ಲೆಗಳಲ್ಲಿ ಹಗುರದಿಂದ ಕೂಡಿದ ಸಾಧಾರಣ ಮಳೆಯಾಗಲಿದೆ ಎಂದು ಹವಾಮಾನ ಇಲಾಖೆ ಮಾಹಿತಿ ನೀಡಿದೆ.
ಇದನ್ನೂ ಸಹ ಓದಿ: ಪಡಿತರ ಚೀಟಿದಾರರಿಗೆ ಬೃಹತ್ ಲಾಭ! APL BPL ಕಾರ್ಡುದಾರರಿಗೆ ಮಾತ್ರ ಈ ಅವಕಾಶ
2024 ರಲ್ಲಿ ಮಳೆಯ ಭವಿಷ್ಯ
ಕರ್ನಾಟಕ ರಾಜ್ಯದಲ್ಲಿ ಕಳೆದ ವರ್ಷ ನಿರೀಕ್ಷೆಯಂತೆ ಮಳೆಯಾಗದೆ ಇರುವ ಕಾರಣ ತೀರ್ವ ಬರಗಾಲ ಉಂಟಾಯಿತು. ಆದರೆ 2024ರಲ್ಲಿ ಒಳ್ಳೆಯ ಮಳೆ ಬೀಳುವ ಸಾಧ್ಯತೆ ಇದೆ ಎಂದು ಹೇಳಲಾಗುತ್ತಿದೆ. ಇದೇ ಮಾರ್ಚ್ ಎಲ್ ನಿನೋ ಪ್ರಭಾವ ತಗ್ಗಿ ಮುಂಗಾರು ಉತ್ತಮವಾಗಲಿದೆ. ಹೌದು 2023 ಜನವರಿ 1 ರಿಂದ ಡಿಸೆಂಬರ್ 31ರವರೆಗೆ ರಾಜ್ಯದಲ್ಲಿ ವಾಡಿಕೆಯ ಪ್ರಕಾರ, 1153 ಮಿ.ಮೀ. ಮಳೆ ಸುರಿಯಬೇಕು. ಆದರೆ, ಕೇವಲ 872 ಮಿ.ಮೀ. ಮಾತ್ರ ಮಳೆಯಾಗಿದೆ. 19 ಜಿಲ್ಲೆಗಳಲ್ಲಿ ಮಳೆ ಕೊರತೆ ಉಂಟಾದರೆ, 12 ಜಿಲ್ಲೆಗಧಿಳಲ್ಲಿಸಾಮಾನ್ಯ ಮಳೆ ಕೊರತೆ ಉಂಟಾಗಿದೆ. ಅತಿ ಹೆಚ್ಚು ಮಳೆಯಾಗುವ ಕರಾವಳಿಯಲ್ಲಿ ಶೇ. 19ರಷ್ಟು ಹಾಗೂ ಮಲೆನಾಡಿನ ಜಿಲ್ಲೆಗಳಲ್ಲಿ ಶೇ.35ರಷ್ಟು ಮಳೆ ಕೊರತೆ ಉಂಟಾಗಿದೆ.
ಇತರೆ ವಿಷಯಗಳು
ಸಾಲ ಬಾದೆಯಿಂದ ಮುಕ್ತಿ ಹಾಗೂ ಔಷಧೀಯ ಗುಣವನ್ನು ಹೊಂದಿದ ಆ ಓಂದೇ ಗಿಡ ಯಾವುದು?
ಕೃಷಿಕರಿಗೆ ಹೊಸ ಯೋಜನೆ! ನಿಮಗೆ ಸಿಗಲಿದೆ 2 ಲಕ್ಷ ಹಣ, ಜನವರಿ 15 ಕೊನೆಯ ದಿನಾಂಕ