rtgh

ಗೃಹಲಕ್ಷ್ಮಿಯರ ಖಾತೆಗೆ ಒಟ್ಟಿಗೆ ಜಮೆ ಆಗಲಿದೆ 6 ಸಾವಿರ..! ಲಕ್ಷ್ಮಿ ಹೆಬ್ಬಾಳ್ಕರ್ ಭರವಸೆ

ನಮಸ್ಕಾರ ಸ್ನೇಹಿತರೇ, ಇಂದಿನ ನಮ್ಮ ಈ ಲೇಖನಕ್ಕೆ ನಿಮಗೆಲ್ಲರಿಗೂ ಆತ್ಮೀಯವಾದ ಸ್ವಾಗತ, ನಮ್ಮ ಈ ಲೇಖನದ ಮೂಲಕ ನಿಮಗೆಲ್ಲರಿಗೂ ಉಪಯುಕ್ತವಾಗುವ ವಿಷಯದ ಬಗ್ಗೆ ಮಾಹಿತಿಯನ್ನು ನೀಡುತ್ತಿದ್ದೇವೆ. ಇನ್ನು ಮುಂದೆ ರಾಜ್ಯದ ಪ್ರತಿ ಗ್ರಾಮಗಳಲ್ಲಿ ಪಂಚಾಯಿತಿ ಮಟ್ಟದಲ್ಲಿ ಗೃಹಲಕ್ಷ್ಮಿ ಅದಾಲತ್‌ ನಡೆಯಲಿದೆ. ಈ ಗೃಹಲಕ್ಷ್ಮಿ ಅದಾಲತ್‌ ಎಂದರೆ ಇದುವರೆಗೂ ಅನೇಕ ಮಹಿಳೆಯರಿಗೆ ಗೃಹಲಕ್ಷ್ಮಿ ಹಣ ಖಾತೆಗೆ ಜಮಾ ಆಗದೆಯಿರುವ ಕಾರಣ, ಅಂತಹ ತೊಂದರೆಗಳನ್ನು ಬಗೆಹರಿಸಿ ಎಲ್ಲಾ ಮನೆಯ ಯಜಮಾನಿಯರಿಗೆ ತಲುಪುವಂತೆ ಮಾಡುವುದು. ಈ ವಿಷಯದ ಬಗ್ಗೆ ಸಂಪೂರ್ಣ ಮಾಹಿತಿಯನ್ನು ತಿಳಿಯಲು ಬಯಸಿದರೆ ನಮ್ಮ ಈ ಲೇಖನವನು ತಪ್ಪದೇ ಕೊನೆವರೆಗೂ ಓದಿ.

karnataka gruha lakshmi yojana

ಇಲ್ಲಿಯವರೆಗೂ ಗೃಹಲಕ್ಷ್ಮಿ ಯೋಜನೆಗೆ 1.17 ಕೋಟಿ ಫಲಾನುಭವಿಗಳು ನೋಂದಣಿಯಾಗಿದ್ದಾರೆ. ಅದರಲ್ಲಿ, 1.10 ಕೋಟಿ ಗೃಹಲಕ್ಷ್ಮಿಯರಿಗೆ ಡಿಬಿಟಿ ಮೂಲಕ ನೆರಹಣವನ್ನು ವರ್ಗಾವಣೆ ಮಾಡಲಾಗಿದೆ. ಆದರೆ ಅದರಲ್ಲಿ 2 ಲಕ್ಷ ಫಲಾನುಭವಿಗಳಿಗೆ ಕೆಲವು ತೊಂದರೆಗಳಿಂದ ಹಣ ವರ್ಗಾವಣೆ ಆಗುತ್ತಿಲ್ಲ, ಆ ತೊಂದರೆಗಳನ್ನು ಬಗೆಹರಿಸುವ ಪ್ರಕ್ರಿಯೆ ಸರ್ಕಾರದಿಂದ ನಡೆಯುತ್ತಿದೆ. ಬ್ಯಾಂಕ್ ಖಾತೆ ಮಾಹಿತಿ ಸಮಸ್ಯೆ, ಬ್ಯಾಂಕ್‌ ಖಾತೆ ಸಂಖ್ಯೆಗೆ ಆಧಾರ್‌ ಲಿಂಕ್‌ ಆಗದಿರುವುದು ಮೊದಲಾದ ಕಾರಣಗಳಿಂದಾಗಿ ಹಣ ವರ್ಗಾವಣೆಗೆ ತೊಂದರೆಯಾಗಿದೆ. ಅಂಗನವಾಡಿ ಕಾರ್ಯಕರ್ತೆಯರನ್ನು ಬ್ಯಾಂಕಿಗೇ ಕರೆದೊಯ್ದು ಸಮಸ್ಯೆ ಬಗೆಹರಿಸಲಾಗುತ್ತಿದೆ ಎಂದು ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ಹಾಗೂ ಅಧಿಕಾರಿಗಳು ಮುಖ್ಯಮಂತ್ರಿಗಳಿಗೆ ಮಾಹಿತಿ ನೀಡಿದರು. ಡಿಸೆಂಬರ್ ಒಳಗಾಗಿ ಈ ಎಲ್ಲಾ ಕುಂದುಕೊರತೆಗಳನ್ನು ಬಗೆಹರಿಸಿ ಎಲ್ಲಾ ಗೃಹಲಕ್ಷ್ಮಿಯರಿಗೂ ಕೂಡ ಗ್ಯಾರೆಂಟಿ ಹಣವನ್ನು ಖಾತೆಗೆ ಬರುವಂತೆ ಮಾಡಲಾಗುವುದು ಎಂದು ಸಿದ್ದರಾಮಯ್ಯನವರು ತಿಳಿಸಿದ್ದಾರೆ.

ಇದನ್ನೂ ಸಹ ಓದಿ: PPF ಖಾತೆದಾರರಿಗೆ ಭರ್ಜರಿ ನ್ಯೂಸ್..!‌ ಪ್ರತಿ ತಿಂಗಳು 5ನೇ ತಾರೀಖಿನಂದು ಸಿಗಲಿದೆ ಸರ್ಕಾರದಿಂದ ಈ ಪ್ರಯೋಜನ

ನಿನ್ನೆ ಅಂದರೆ ಬುಧವಾರ ನಡೆದ ಗೃಹಲಕ್ಷ್ಮಿ ಯೋಜನೆಯ ಸಭೆಯಲ್ಲಿ, ಸಿದ್ದರಾಮಯ್ಯನವರು ಅಧ್ಯಕ್ಷತೆಯನ್ನು ವಹಿಸಿದ್ದರು ಹಾಗೂ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ಸಚಿವೆಯಾದ ಲಕ್ಷ್ಮಿ ಹೆಬ್ಬಾಳ್ಕರ್ ಅವರು ಕೂಡ ಸಭೆಯಲ್ಲಿದ್ದರು. ಇತರ ಸಮಸ್ಯೆಗಳಿಂದ ಗೃಹಲಕ್ಷ್ಮಿ ಹಣ ಖಾತೆಗೆ ಬರದಿದ್ದರೆ ಅಂತಹ ಸಮಸ್ಯೆಗಳನ್ನು ಗ್ರಾಮ ಮಟ್ಟದಲ್ಲಿ ಅದಾಲತ್ ನಡಸಿ ಡಿಸೆಂಬರ್ ಒಳಗೆ ಅವುಗಳೆಲ್ಲವುಗಳನ್ನು ಬಗೆಹರಿಸಬೇಕು ಎಂದು ಸೂಚನೆ ನೀಡಿದರು. ಎಲ್ಲಾ ಫಲಾನುಭವಿ ಮಹಿಳೆಯರಿಗೂ ಗೃಹಲಕ್ಷ್ಮಿ ಯೋಜನೆಯ ಹಣ ಡಿಸೆಂಬರ್ ಒಳಗಾಗಿ ಖಾತೆಗೆ ಬಂದು ಜಮಾ ಆಗಲಿದೆ ಎಂದಿದ್ದಾರೆ.


ಇದುವರೆಗೂ ಗೃಹಲಕ್ಷ್ಮಿ ಹಣ ಬರದೇ ಇದ್ದವರ ಖಾತೆಗೆ ಆಗಸ್ಟ್ 15 ರೊಳಗೆ ನೋಂದಣಿ ಮಾಡಿಕೊಂಡು ಮೂರು ತಿಂಗಳ ಒಟ್ಟು ಬಾಕಿಯಾದ 6000 ರೂಪಾಯಿಯನ್ನು ಸಂಪೂರ್ಣವಾಗಿ ಖಾತೆಗೆ ಜಮಾ ಮಾಡಲಾಗುತ್ತದೆ ಎಂದು ಭರವಸೆ ನೀಡಿದರು. ಮುಂದಿನ 15 ದಿನಗಳೊಳಗೆ ಎಲ್ಲಾ ಫಲಾನುಭವಿಗಳಿಗೆ ಹಣ ಖಾತೆಗೆ ಜಮಾ ಆಗುವಂತೆ ನೋಡಿಕೊಳ್ಳಲಾಗುವುದು ಎಂದರು. ಈ ಕಾರಣಕ್ಕೆ ಅಧಿಕಾರಿಗಳಿಗೆ ಟ್ರೈನಿಂಗ್ ನೀಡಲಾಗುತ್ತಿದ್ದು, ಇನ್ನು 10 ದಿನದಲ್ಲಿ ಗೃಹಲಕ್ಷ್ಮಿ ಗೊಂದಲ ಕ್ಲಿಯರ್ ಆಗಲಿದೆ ಎಂದು ತಿಳಿಸಿದರು. ಇದರ ಜೊತೆಗೆ ‘1902’ ಹೆಲ್ಪ್ ಲೈನ್ ನಂಬರ್ ಇದ್ದು, ಇದಕ್ಕೆ ಕೆರೆ ಮಾಡಿ ಮಹಿಳೆಯರು ಮಾಹಿತಿಯನ್ನ ಪಡೆದುಕೊಳ್ಳಬಹುದು.

ಇತರೆ ವಿಷಯಗಳು:

ಎಲ್ಲಾ ರೈತರಿಗೂ ಸರ್ಕಾರದಿಂದ ಭರ್ಜರಿ ಉಡುಗೊರೆ: ಪ್ರತಿ ಕೃಷಿ ಉಪಕರಣಗಳ ಮೇಲೆ ಭಾರಿ ಸಬ್ಸಿಡಿ!

ಗೃಹಲಕ್ಷ್ಮೀ ಹಣ ತಲುಪಿಸಲು ಸರ್ಕಾರದ ಮೆಗಾ ಪ್ಲಾನ್!!‌ ಡಿಸೆಂಬರ್ 31ರ ಒಳಗೆ ಫಲಾನುಭವಿಗಳಿಗೆ ಹಣ ಜಮೆಗೆ ಸೂಚನೆ

Leave a Comment