rtgh

1000 ಕ್ಕೂ ಹೆಚ್ಚು ಅಂಗನವಾಡಿ ಹುದ್ದೆಗಳ ನೇಮಕ.! ಇಂದಿನಿಂದಲೇ ಅರ್ಜಿ ಸ್ವೀಕಾರ

ಹಲೋ ಸ್ನೇಹಿತರೇ, ಕರ್ನಾಟಕದ 6 ಜಿಲ್ಲೆಗಳಲ್ಲಿ ಅಂಗನವಾಡಿ ಹುದ್ದೆಗಳನ್ನು ಭರ್ತಿ ಮಾಡಲು ಮಹಿಳಾ & ಮಕ್ಕಳ ಅಭಿವೃದ್ಧಿ ಇಲಾಖೆಯು ನೇಮಕಾತಿ ಅಧಿಸೂಚನೆಯನ್ನು ಬಿಡುಗಡೆ ಮಾಡಿದೆ. SSLC ಹಾಗೂ PUC ಪಾಸಾದವರು ಈ ಹುದ್ದೆಗಳಿಗೆ ಅರ್ಹರಾಗಿರುತ್ತಾರೆ, ಸರ್ಕಾರಿ ಹುದ್ದೆಗಳಲ್ಲಿ ಆಸಕ್ತಿ ಇರುವವರು ಅರ್ಜಿ ಸಲ್ಲಿಸಬಹುದಾಗಿದೆ. ಹೇಗೆ ಮತ್ತು ಎಲ್ಲಿ ಎಂಬುದನ್ನು ಲೇಖನದಲ್ಲಿ ತಿಳಿಯಿರಿ.

karnataka anganwadi recruitment

ಮಹಿಳಾ & ಮಕ್ಕಳ ಅಭಿವೃದ್ಧಿ ಇಲಾಖೆಯು SSLC / ತತ್ಸಮಾನ ವಿದ್ಯಾರ್ಹತೆ, PUC ಹಾಗೂ ತತ್ಸಮಾನ ವಿದ್ಯಾರ್ಹತೆ ಜತೆಗೆ ಟೀಚಿಂಗ್ ಕೋರ್ಸ್‌ಗಳನ್ನು ಪಾಸ್‌ ಮಾಡಿದ ಮಹಿಳಾ ಅಭ್ಯರ್ಥಿಗಳಿಗಾಗಿ ಭರ್ಜರಿ ಜಾಬ್‌ ಆಫರ್‌ ನೀಡಲಾಗಿದೆ. ಈಗ ವಿವಿಧ 6 ಜಿಲ್ಲೆಗಳಲ್ಲಿ ಅಂಗನವಾಡಿ ಕಾರ್ಯಕರ್ತೆಯರು ಹಾಗೂ ಸಹಾಯಕಿಯರ ಹುದ್ದೆಗಳ ಭರ್ತಿಗೆ ನೇಮಕಾತಿ ಅಧಿಸೂಚನೆಯನ್ನು ಬಿಡುಗಡೆ ಮಾಡಲಾಗಿದೆ.

ಯಾವ್ಯಾವ ಜಿಲ್ಲೆಯಲ್ಲಿ ಅಂಗನವಾಡಿ ಹುದ್ದೆಗಳ ನೇಮಕಾತಿ ಇಲ್ಲಿದೆ ಲಿಸ್ಟ್‌

  • ಬೆಂಗಳೂರು ಗ್ರಾಮೀಣ ಜಿಲ್ಲೆ.
  • ಬೆಂಗಳೂರು ನಗರ ಜಿಲ್ಲೆ.
  • ಬೆಳಗಾವಿ.
  • ಬೀದರ್.
  • ಹಾವೇರಿ.
  • ತುಮಕೂರು.

ಈ ಮೇಲಿನ ಎಲ್ಲಾ ಜಿಲ್ಲೆಯಲ್ಲಿ ಸೇರಿದಂತೆ 1000 ಅಧಿಕ ಹುದ್ದೆಗಳು ಇದ್ದು, ಆಸಕ್ತರು ಅರ್ಜಿಯನ್ನು ಸಲ್ಲಿಸಬಹುದು.


ಹುದ್ದೆಗಳ ಪದನಾಮ

  • ಅಂಗನವಾಡಿ ಕಾರ್ಯಕರ್ತೆ.
  • ಅಂಗನವಾಡಿ ಸಹಾಯಕ.

ಅರ್ಜಿ ಸಲ್ಲಿಸಲು ಕನಿಷ್ಠ 18 ವರ್ಷ ಗರಿಷ್ಠ 35 ವರ್ಷ ವಯಸ್ಸು ಮೀರಿರಬಾರದು.

ಆನ್‌ಲೈನ್‌ ಅಪ್ಲಿಕೇಶನ್ ಅರ್ಜಿ ಸಲ್ಲಿಸುವ ವಿಧಾನ
– ವೆಬ್‌ ವಿಳಾಸ https://karnemakaone.kar.nic.in ಕ್ಕೆ ಭೇಟಿ ಮಾಡಿ.
– ಉದ್ಯೋಗವನ್ನು ಬಯಸುವ ಜಿಲ್ಲೆ – ಶಿಶು ಅಭಿವೃದ್ಧಿ ಯೋಜನೆ – ನೇಮಕಾತಿ ಬಯಸುವ ಹುದ್ದೆಗಳನ್ನು ಕ್ರಮವಾಗಿ ಆಯ್ಕೆ ಮಾಡಿ.
– ನಂತರ ನೀವು ಅರ್ಜಿ ಸಲ್ಲಿಸಲು ಬಯಸುವ ಅಂಗನವಾಡಿ ಕೇಂದ್ರವನ್ನು ಆಯ್ಕೆ ಮಾಡಿಕೊಳ್ಳಿ.
– ಆನ್‌ಲೈನ್‌ ಅರ್ಜಿ ಫಾರ್ಮ್‌ OPEN ಆಗುತ್ತದೆ.
– ಅಗತ್ಯ ಮಾಹಿತಿಯನ್ನು ನೀಡಿ ಅರ್ಜಿಯನ್ನು ಸಲ್ಲಿಸಬಹುದು.
– ಅಗತ್ಯ ದಾಖಲೆಗಳನ್ನು ಆಯಾ ಹೆಸರಿನ ಮುಂದೆ ಇರುವ ಆಯ್ಕೆ button ಕ್ಲಿಕ್‌ ಮಾಡಿ upload ಮಾಡಬೇಕು.

ಅರ್ಜಿ ಹಾಕಲು ಬೇಕಾದ ಅಗತ್ಯ ದಾಖಲೆಗಳು
1. ಜನನ ಪ್ರಮಾಣ ಪತ್ರ / ಜನ್ಮ ದಿನಾಂಕ ಇರುವ SSLC PUC ಅಂಕಪಟ್ಟಿ.
2. ವಾಸಿಸುವಸ್ಥಳದ ದೃಢೀಕರಣ ಪತ್ರ.
3. ವಿದ್ಯಾರ್ಹತೆಯ ಬಗ್ಗೆ ಪ್ರಮಾಣ ಪತ್ರ.
4. ವಿಕಲಚೇತನರಿಗೆ 10 ವರ್ಷ ವಯೋಮಿತಿ ಸಡಿಲಿಕೆ ನೀಡಲಾಗಿದೆ, ಅಂಥಹ ಅಭ್ಯರ್ಥಿಗಳಾಗಿದ್ದಲ್ಲಿ ಪ್ರಮಾಣ ಪತ್ರ ಸಲ್ಲಿಕೆ.
5. ಮೀಸಲಾತಿ & ಜಾತಿ ಪ್ರಮಾಣ ಪತ್ರ.
6. ವಿಧವೆಯಾಗಿದ್ದಲ್ಲಿ ಗಂಡನ ಮರಣ ಪ್ರಮಾಣ ಪತ್ರ.
7. ಆತ್ಮಹತ್ಯೆ ಮಾಡಿಕೊಂಡ ರೈತನ ಪತ್ನಿಯಾಗಿದ್ದರೆ ಉಪವಿಭಾಗಾಧಿಕಾರಿಗಳಿಂದ ಪಡೆದ ಪ್ರಮಾಣ ಪತ್ರ.
8. ಯೋಜನಾ ನಿರಾಶ್ರಿತರಾಗಿದ್ದಲ್ಲಿ ಅದರ ಪ್ರಮಾಣ ಪತ್ರ.
9. ವಿಚ್ಛೇದಿತರಾಗಿದ್ದಲ್ಲಿ ಅದರ ಪ್ರಮಾಣ ಪತ್ರ.

ನೌಕರರಿಗೆ ಒಲಿದ DA ಭಾಗ್ಯ! ಈ ದಿನ ನಿಮ್ಮ ಖಾತೆಗೆ ಜಮಾ ಆಗಲಿದೆ 2 ಲಕ್ಷ 18 ಸಾವಿರ

PUC ಪಾಸಾದವರಿಗೆ ಭಾರತೀಯ ನೌಕಾಪಡೆಯಲ್ಲಿ ನೇಮಕಾತಿ: ಅರ್ಜಿ ಸಲ್ಲಿಸಲು ಎರಡು ದಿನ ಬಾಕಿ

Leave a Comment