ಹಲೋ ಸ್ನೇಹಿತರೇ, ಉನ್ನತ ಶಿಕ್ಷಣಕ್ಕೆ ಹೋಗುವವರಿಗೆ ಟಾಟಾ ಗ್ರೂಪ್ 10 ಲಕ್ಷ ರೂ.ವರೆಗೆ ಲೋನ್ ವಿದ್ಯಾರ್ಥಿವೇತನ ನೀಡುತ್ತದೆ. ಅರ್ಹ ಮತ್ತು ಆಸಕ್ತ ಅಭ್ಯರ್ಥಿಗಳು ಅರ್ಜಿಯನ್ನು ಸಲ್ಲಿಸಬಹುದಾಗಿದೆ.
ಜೆಎನ್ ಟಾಟಾ ಎಂಡೋಮೆಂಟ್ ಮೆರಿಟ್ ಆಧಾರಿತ ಲೋನ್ ವಿದ್ಯಾರ್ಥಿವೇತನ ನೀಡುತ್ತಿದೆ, ಅರ್ಹ & ಆಸಕ್ತ ಅಭ್ಯರ್ಥಿಗಳಿಂದ ಆನ್‌ಲೈನ್ ಮೂಲಕವಾಗಿ ಅರ್ಜಿಯನ್ನು ಆಹ್ವಾನಿಸಿದೆ. ಭಾರತೀಯ ವಿದ್ಯಾರ್ಥಿಗಳು ಅಬ್ರಾಡ್‌ನಲ್ಲಿ ಉನ್ನತ ಶಿಕ್ಷಣ ಪಡೆದುಕೊಳ್ಳಲು ಈ ಸೌಲಭ್ಯ ನೀಡುತ್ತಿದೆ, ವಿಜ್ಞಾನ ವಿಭಾಗದ ವಿವಿಧ ವಿಷಯ, ಕಾನೂನು, ಮ್ಯಾನೇಜ್ಮೆಂಟ್, ಕಾಮರ್ಸ್, ಫೈನ್ ಆರ್ಟ್ಸ್ ಪದವಿ, PG ಓದುತ್ತಿರುವವರು ಅರ್ಜಿ ಸಲ್ಲಿಸಬಹುದಾಗಿದೆ.
ಸ್ಕಾಲರ್‌ಶಿಪ್ ಹೆಸರು : JN ಟಾಟಾ ಎಂಡೋಮೆಂಟ್ ಲೋನ್ ಸ್ಕಾಲರ್‌ಶಿಪ್ 2024
ಸ್ಕಾಲರ್‌ಶಿಪ್ ಮೌಲ್ಯ : 10,00,000
ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ : 15-03-2024
ಸ್ಕಾಲರ್‌ಶಿಪ್ ನೀಡುವ ಸಂಸ್ಥೆ : ಟಾಟಾ ಗ್ರೂಪ್
ಅರ್ಹತೆಗಳು
- ಗರಿಷ್ಠ 45 ವರ್ಷ ಮೀರಿರಬಾರದು.
- ಪದವಿ, ಸ್ನಾತಕೋತ್ತರ ಪದವಿಯಲ್ಲಿ ಕನಿಷ್ಠ 60%ಅಂಕಗಳನ್ನು ಪಡೆದು ಪಾಸಾಗಿರಬೇಕು.
- ಜುಲೈನಿಂದ ಲೋನ್ ಸ್ಕಾಲರ್‌ಶಿಪ್ ನೀಡಲಾಗುತ್ತದೆ.
- ಈಗಾಗಲೇ ವಿದೇಶಗಳಲ್ಲಿ ಸ್ನಾತಕ ಪದವಿ, ಸ್ನಾತಕೋತ್ತರ ಪದವಿ ಅನ್ನು 2ನೇ ವರ್ಷ, 3ನೇ ವರ್ಷದಲ್ಲಿ ಓದುತ್ತಿರುವವರು ಅರ್ಜಿ ಸಲ್ಲಿಸಬಹುದು.
- 2024-25ನೇ ಸಾಲಿನಲ್ಲಿ ಇನ್ನು ಯಾವುದೇ PG/UG ಕೋರ್ಸ್‌ಗೆ ಪ್ರವೇಶ ಪಡೆಯದ ವಿದ್ಯಾರ್ಥಿಗಳು ಅರ್ಜಿ ಸಲ್ಲಿಸಬಹುದು.
- ಭಾರತದಲ್ಲಿ ಸ್ನಾತಕ & ಸ್ನಾತಕೋತ್ತರ ಪದವಿ ಓದಲು ನಿರ್ಧರಿಸಿರುವವರು ಅರ್ಜಿ ಸಲ್ಲಿಸಲು ಅರ್ಹರಾಗಿರುವುದಿಲ್ಲ.
ವಿಶೇಷ ಸೂಚನೆ
ಈ ಸ್ಕಾಲರ್‌ಶಿಪ್ Program ಒಟ್ಟು 4 ಹಂತಗಳಲ್ಲಿ ಹೊಂದಿದೆ. ಪ್ರತಿ ಹಂತದ ಕೊನೆಯಲ್ಲಿ ಅಪ್ಲಿಕೇಶನ್ ಸ್ಥಿತಿಯ ಕುರಿತು ಅಭ್ಯರ್ಥಿಗೆ ಮಾಹಿತಿ ನೀಡಲಾಗುವುದು.
ಹಂತ-1 : ಮಾರ್ಚ್ 15, 2024 ಅರ್ಜಿಗೆ ಕೊನೆಯ ದಿನ.
ಹಂತ-2 : ಆನ್‌ಲೈನ್ ಪರೀಕ್ಷೆಗಳು.
ಹಂತ-3 : ವಿಷಯ ತಜ್ಞರೊಂದಿಗೆ ಸಂದರ್ಶನ.
ಹಂತ-4 : ಅಂತಿಮ ಆಯ್ಕೆಯಾಗುವ ಪ್ರಕ್ರಿಯೆ.
ಅರ್ಜಿ ಸಲ್ಲಿಸಲು ಬೇಕಾದ ದಾಖಲೆಗಳು
- ಆಧಾರ್ ಕಾರ್ಡ್
- ಪಾಸ್‌ಪೋರ್ಟ್‌ನ ಮೊದಲ & ಕೊನೆ ಪೇಜ್ ಫೋಟೋಕಾಪಿ.
- ಅಂಕಪಟ್ಟಿ
- ಲೋನ್ ವಿದ್ಯಾರ್ಥಿವೇತನ ಉದ್ದೇಶದ ಪ್ರಮಾಣ ಪತ್ರ.
ಅರ್ಜಿ ಸಲ್ಲಿಸುವ ವಿಧಾನ
ಮೇಲಿನ ಲಿಂಕ್ ಕ್ಲಿಕ್ ಮಾಡಿ. ಪಾಪಪ್ ವೆಬ್‌ಪೇಜ್ ಒಂದು ತೆರೆಯುತ್ತದೆ. ಈ ಹಂತದಲ್ಲಿ email / gmail / mobile number ಮೂಲಕ ರಿಜಿಸ್ಟ್ರೇಷನ್ ಪಡೆಯಿರಿ. ನಂತರ ಮತ್ತೆ ಲಾಗಿನ್ ಆಗುವ ಮೂಲಕ ಅರ್ಜಿ ಸಲ್ಲಿಸಿ.
ಇತರೆ ವಿಷಯಗಳು
ಎಲ್ಲಾ ಆಶಾ & ಅಂಗನವಾಡಿ ಕಾರ್ಯಕರ್ತೆಯರಿಗೆ 5 ಲಕ್ಷ.! ಇಂದೇ ಜಾರಿಯಾಯ್ತು ಹೊಸ ಸೌಲಭ್ಯ
ವಸತಿ ಯೋಜನೆ: ಬಡ ಕುಟುಂಬಗಳಿಗೆ 36 ಸಾವಿರ ಮನೆಗಳ ಹಂಚಿಕೆ.! ಫಲಾನುಭವಿಗಳಿಗೆ ಹಸ್ತಾಂತರ ಮಾಡಿದ ಸಿಎಂ