ರಾಜ್ಯದಲ್ಲಿ ಇದೀಗ ಈ ಹೊಸ ಸುದ್ದಿಯೊಂದು ಹರಿದಾಡುತ್ತಿದೆ ಅದುವೇ ಬಿಜೆಪಿ ಮತ್ತು ಜೆಡಿಎಸ್ ಸರ್ಕಾರಗಳ ಮೈತ್ರಿಕೂಟ. ಹೌದು ಕೇಂದ್ರ ಸರ್ಕಾರ ಇದೀಗ ಇದೊಂದು ಹೊಸ ನಿರ್ಧಾರವನ್ನು ಕೈಗೊಂಡಿದೆ. ಈ ರೀತಿ ಮೈತ್ರಿ ಮಾಡಿಕೊಳ್ಳಲು ಕಾರಣ ಏನು ಎನ್ನುವುದನ್ನು ನಾವು ನಿಮಗೆ ತಿಳಿಸಲಿದ್ದೇವೆ, ಅದಕ್ಕಾಗಿ ಕೊನೆವರೆಗೂ ಓದಿ.
20 ಸೀಟುಗಳ ಟಾರ್ಗೆಟ್ ಅನ್ನು ಈಗಾಗಲೇ ಕಾಂಗ್ರೆಸ್ ಮತ್ತು ಬಿಜೆಪಿ ಪಳಾಯಗಳು ಇಟ್ಟುಕೊಂಡಿದೆ ಎಂದರು ತಪ್ಪಾಗುವುದಿಲ್ಲ. ಇದರೊಂದಿಗೆ ಇತ್ತಕಡೆ ಬಿಜೆಪಿ ಮತ್ತು ದಳಪತಿಗಳಾದ ಜೆಡಿಎಸ್ ಪಕ್ಷಗಳು ತಮ್ಮ ಆಟಕ್ಕೆ ಅಂಗಣವನ್ನು ಸಿದ್ದ ಮಾಡುವಲ್ಲಿ ತನ್ನನ್ನು ತಾನು ತೊಡಗಿಸಿಕೊಂಡಿದೆ. ಕುರುಕ್ಷೇತ್ರದಲ್ಲಿ ಕರ್ಣ ಹೇಳಿದಂತೆ ಶತ್ರುವಿನ ಶತ್ರು ನನಗೂ ಶತ್ರು, ಮಿತ್ರನ ಮಿತ್ರ ನಮಗೂ ಮಿತ್ರ ಎನ್ನುವ ಹಾಗೇ ಇದೀಗ ಕರ್ನಾಟಕದಲ್ಲಿಯು ಕೂಡ ನಡಯುತ್ತಿರುವುದು ನಮಗೆ ಕಂಡು ಬರುತ್ತದೆ. ಹೌದು ಇದೀಗ ರಾಜ್ಯದಲ್ಲಿ ಮೈತ್ರಿ ಕೂಟ ಸೃಷ್ಠಿಯಾಗುವ ಸಾಧ್ಯತೆ ಇದೆ.
ದೆಹಲಿಯಲ್ಲಿ ಕಮಲಪಡೆ ಮತ್ತು ಜೆಡಿಎಸ್ ಪಡೆಗಳ ದಳನಾಯಕರು ಸಭೆ ಸೇರಿದ್ದಾರೆ, ಈ ಮೂಲಕ ರಾಜ್ಯದಲ್ಲಿ ಹೊಸ ಕೋಲಹಲ ಸೃಷ್ಠಿಸಲು ಸಕಲ ಸಿದ್ದತೆಗಳನ್ನು ಮಾಡಿಕೊಂಡಂತೆ ಕಾಣಿಸುತ್ತಿದೆ. ಜೆಡಿಎಸ್ ಕಲಿಗಳು ಈಗಾಗಲೇ ಸಭೆ ಸೇರಿದ್ದಾರೆ ಮತ್ತೆ ಮುಂದಿನ ರಾಜಕೀಯ ಜೀವನದ ಬಗ್ಗೆಯು ಸಮಾಲೋಚನ ನಡೆಸುತ್ತಿದ್ದಾರೆ. ಮೈತ್ರಿ ಮಾತುಕತೆಯ ದೃಷ್ಠಿಯಿಂದ ಎರಡು ದಿನಗಳಿಂದ ದೆಹಲಿಯಲ್ಲಿ ಬೀಡು ಬಿಟ್ಟಿರುವ ದಳಪತಿ ಕುಮಾರಸ್ವಾಮಿ, ಶುಕ್ರವಾರ ಅಮಿತ್ ಶಾ ಅವರನ್ನು ಭೇಟಿ ಮಾಡಿದ್ದಾರೆ. ಇನ್ನು ಬಿಜೆಪಿ-ಜೆಡಿಎಸ್ ಮಹಾಮೈತ್ರಿಯ ಬಗ್ಗೆ ಟ್ವೀಟ್ ಮಾಡಿರೋ ಬಿಜೆಪಿ ರಾಷ್ಟ್ರಾಧ್ಯಕ್ಷ ಜೆ.ಪಿ ನಡ್ಡಾ, ಜೆಡಿಎಸ್ಸನ್ನು ಎನ್.ಡಿ.ಎ ಮೈತ್ರಿಕೂಟಕ್ಕೆ ಸ್ವಾಗತಿಸಿದ್ದಾರೆ. ಈ ಮೂಲಕ ಮೈತ್ರಿಕೂಟಕ್ಕೆ ಸಹಿ ಮಾಡಿದ್ದಾರೆ.