ಬೆಂಗಳೂರು: ಸಿಡಬ್ಲ್ಯುಆರ್‌ಸಿ ನಿರ್ದೇಶನದಂತೆ ನೆರೆಯ ತಮಿಳುನಾಡಿಗೆ ನೀರು ಬಿಡಲು ರಾಜ್ಯದ ಅಸಮರ್ಥತೆಯನ್ನು ಕರ್ನಾಟಕದ ಉಪಮುಖ್ಯಮಂತ್ರಿ ಡಿಕೆ ಶಿವಕುಮಾರ್ ವ್ಯಕ್ತಪಡಿಸಿದ್ದು, ಕಾವೇರಿ ಜಲಾನಯನ ಪ್ರದೇಶದಲ್ಲಿ ಸಮರ್ಪಕ ನೀರು ಇಲ್ಲ ಎಂದು ಹೇಳಿದ್ದಾರೆ.
ನವೆಂಬರ್ 1 ರಿಂದ 15 ದಿನಗಳ ಕಾಲ ತಮಿಳುನಾಡಿಗೆ ಪ್ರತಿದಿನ 2,600 ಕ್ಯೂಸೆಕ್ ನೀರು ಬಿಡುವಂತೆ ಕಾವೇರಿ ನೀರು ನಿಯಂತ್ರಣ ಸಮಿತಿ (ಸಿಡಬ್ಲ್ಯುಆರ್‌ಸಿ) ಸೋಮವಾರ ಕರ್ನಾಟಕಕ್ಕೆ ಶಿಫಾರಸು ಮಾಡಿದ ನಂತರ ಡಿಕೆ ಶಿವಕುಮಾರ್ ಅವರು ತಮಿಳುನಾಡಿಗೆ ನೀರು ಬಡಲು ಸಾಧ್ಯಲಿಲ್ಲ ಎಂಬ ಈ ಹೇಳಿಕೆ ನೀಡಿದ್ದಾರೆ.
ಇದನ್ನೂ ಸಹ ಓದಿ: ಮಹಿಳೆಯರ ಖಾತೆಗೆ ನೇರ ₹25,000..! ಕಛೇರಿಗೆ ಈ ದಾಖಲೆ ಸಲ್ಲಿಸಿದರೆ ಸಾಕು
ಜಲಸಂಪನ್ಮೂಲ ಖಾತೆ ಹೊಂದಿರುವ ಶಿವಕುಮಾರ್, ಕೃಷ್ಣರಾಜ ಸಾಗರ ಅಣೆಕಟ್ಟಿನ ಒಳಹರಿವು ನೆರೆ ರಾಜ್ಯಕ್ಕೆ ನೀರು ಬಿಡಲು ಸಾಕಾಗುತ್ತಿಲ್ಲ. ಕೆಆರ್ ಎಸ್ ಅಣೆಕಟ್ಟೆಯಲ್ಲಿ ಒಳ ಹರಿವು ಶೂನ್ಯವಾಗಿದೆ. ನಮಗೆ ನೀರು ಬಿಡುವ ಶಕ್ತಿ ಇಲ್ಲ,” ಎಂದು ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕೆಆರ್‌ಎಸ್ ಮತ್ತು ಕಬಿನಿ ಅಣೆಕಟ್ಟುಗಳಿಂದ 815 ಕ್ಯೂಸೆಕ್ ನೀರು ನೈಸರ್ಗಿಕವಾಗಿ ತಮಿಳುನಾಡಿಗೆ ಹರಿದು ಬರುತ್ತಿದೆ ಎಂದಿದ್ದಾರೆ.
ತಮಿಳುನಾಡು ಪ್ರತಿನಿತ್ಯ 13,000 ಕ್ಯೂಸೆಕ್ ನೀರು ಹರಿಸುವಂತೆ ಬೇಡಿಕೆ ಇಟ್ಟಿತ್ತು. ”ಕಾವೇರಿ ಜಲಾನಯನ ಪ್ರದೇಶದಲ್ಲಿ ಕೇವಲ 51 ಟಿಎಂಸಿ ನೀರು ಮಾತ್ರ ಉಳಿದಿದೆ. ಸದ್ಯ ಕುಡಿಯುವ ನೀರಿನ ಅಗತ್ಯತೆ ಪೂರೈಸಲು ಸಂಗ್ರಹವಾಗಿರುವ ನೀರು ಅಗತ್ಯವಾಗಿದೆ’ ಎಂದು ಶಿವಕುಮಾರ್ ಹೇಳಿದ್ದಾರೆ.
ಇತರೆ ವಿಷಯಗಳು:
ಬೆಲೆ ಏರಿಕೆ ಮಧ್ಯೆ ಜನತೆಗೆ ದೀಪಾವಳಿ ಬಂಪರ್ ಗಿಫ್ಟ್.! ಆಧಾರ್ ಕಾರ್ಡ್ ತೋರಿಸಿದ್ರ ಸಾಕು, ಸಿಗಲಿದೆ 1 ಕೆಜಿ ಈರುಳ್ಳಿ
ಅನ್‌ಲೈನ್ ಪೇಮೆಂಟ್ ಮಾಡುವವರಿಗೆ ಗುಡ್ ನ್ಯೂಸ್..! ಖಾತೆಯಲ್ಲಿ ಹಣ ಇಲ್ಲದಿದ್ದರೂ ಮಾಡಬಹುದು UPI ಪಾವತಿ