ಹಲೋ ಸ್ನೇಹಿತರೇ, ಭಾರತವು ನಾಲ್ಕು ಅಪರೂಪದ ಕಾಯಿಲೆಗಳಿಗೆ ಔಷಧಿಗಳನ್ನ ಈಗಾಗಲೇ ತಯಾರಿಸಿದೆ. ಮೊದಲು ಇದರ ಬೆಲೆ ಕೋಟಿಯ ಗಡಿಯನ್ನು ದಾಟಿತ್ತು ಆದ್ರೆ ಇದೀಗ ಈ ಔಷಧಿ ಕೆಲವೇ ಲಕ್ಷಗಳಲ್ಲಿ ಸಿಗಲಿದೆ. ಇದಲ್ಲದೇ ಕುಡಗೋಲು ರೋಗಕ್ಕೆ ಸಿರಪ್ ಕೂಡ ತಯಾರಿಸಿದ್ದಾರೆ. ಒಂದು ವರ್ಷದ ಹಿಂದೆ ಭಾರತವು 13 ರೀತಿಯ ಅಪರೂಪದ ಕಾಯಿಲೆಗಳಿಗೆ ಔಷಧ ತಯಾರಿಸುವ ಕೆಲಸವನ್ನು ಪ್ರಾರಂಭಿಸಿತ್ತು, ಇದೀಗ ನಾಲ್ಕು ಕಾಯಿಲೆಗಳಿಗೆ ಔಷಧ ತಯಾರಿಸಿ ಯಶಸ್ಸನ್ನು ಕಂಡಿದೆ.
ಭಾರತದ ಈ ಪ್ರಯತ್ನ ಮತ್ತು ಯಶಸ್ಸಿನಿಂದ ಕೋಟ್ಯಂತರ ರೂಪಾಯಿ ಮೌಲ್ಯದ ಔಷಧಗಳು ಇನ್ನು ನಮಗೆ ಕೆಲವೇ ಲಕ್ಷ ರೂಪಾಯಿಗಳಿಗೆ ದೇಶದಲ್ಲಿ ಲಭ್ಯವಿದೆ. ಭಾರತದಲ್ಲಿ ಸುಮಾರು 8.4 ಕೋಟಿಯಿಂದ 10 ಕೋಟಿ ಅಪರೂಪದ ರೋಗಿಗಳು ಇದ್ದಾರೆ. 80% ಅಪರೂಪದ ಕಾಯಿಲೆಗಳು ಆನುವಂಶಿಕವಾಗಿಯೇ ಬರುತ್ತದೆ. ಕೇವಲ ಒಂದೇ ವರ್ಷದಲ್ಲಿ ನಾಲ್ಕು ಅಪರೂಪದ ಕಾಯಿಲೆಗಳಿಗೆ ಔಷಧಿಯನ್ನು ತಯಾರಿಸುವಲ್ಲಿ ಭಾರತ ತನ್ನ ಪ್ರಯತ್ನದ ಮೂಲಕ ಯಶಸ್ಸನ್ನು ಸಾಧಿಸಿದೆ. ಈ ಔಷಧಿಗಳನ್ನು ಜನೌಷಧಿ ಕೇಂದ್ರಕ್ಕೂ ತಲುಪಿಸುವ ಭಾರತ ಸರ್ಕಾರ ಸಿದ್ದವಾಗಿದೆ.
ಭಾರತವು ಈ ನಾಲ್ಕು ಅಪರೂಪದ ಕಾಯಿಲೆಗಳಿಗೆ ಔಷಧಿಗಳನ್ನ ತಯಾರಿಸಿದೆ
- ಟೈರೋಸೆನೆಮಿಯಾ ಟೈಪ್ 1: ಈ ಔಷಧಿಯ ವಾರ್ಷಿಕ ವೆಚ್ಚವು ಮೊದಲು ಸುಮಾರು 3.5 ಕೋಟಿ ರೂ.ಗಳಷ್ಟಿತ್ತು, ಆದ್ರೆ ಈಗ ಸುಮಾರು 2.5 ಲಕ್ಷ ರೂ ಆಗಿದೆ.
- ಗೌಚರ್: ಈ ಮೊದಲು 2.5 ರಿಂದ 6.5 ಕೋಟಿ ರೂ. ಇತ್ತು, ಆದ್ರೆ ಇದೀಗ ಅದರ ಬೆಲೆ 2.5 ಲಕ್ಷ ರೂ. ಗಳಾಗಿವೆ.
- ವಿಲ್ಸನ್: ವಾರ್ಷಿಕ 1.8 ರಿಂದ 3.6 ಕೋಟಿ ರೂ.ವರೆಗೆ ವೆಚ್ಚವಾಗುತ್ತಿತ್ತು, ಆದರೆ ಈಗ ವೆಚ್ಚ 3.5 ಲಕ್ಷ ರೂಪಾಯಿ.
- ಡ್ರಾವೆಟ್: ಬೆಲೆ ವಾರ್ಷಿಕವಾಗಿ 6 ರಿಂದ 20 ಲಕ್ಷ ರೂ., ಇದೀಗ 1 ರಿಂದ 5 ಲಕ್ಷ ರೂಪಾಯಿ ಆಗಿದೆ.
ಈ ನಾಲ್ಕು ರೋಗಗಳಿಗೆ ತಯಾರಿಸಲಾದ ಔಷಧಿಗಳೆಂದರೆ,
1. ನಿಟಿಸಿನೋನ್
2. ಎಲಿಗ್ಲುಸ್ಯಾಟ್ (3 ಕೋಟಿಯಿಂದ 2.5 ಲಕ್ಷ)
3. ಟ್ರಿಯೆಂಟೈನ್ (2.2 ಕೋಟಿಯಿಂದ ಈಗ 2.2 ಲಕ್ಷ)
4. ಕ್ಯಾನಬಿಡಿಯಾಲ್ (7 ರಿಂದ 34 ಲಕ್ಷ ರೂ. ಈಗ 1 ರಿಂದ 5 ಲಕ್ಷ ರೂ.)
ಈ ರೋಗಗಳಿಗೆ ಔಷಧಗಳನ್ನ ತಯಾರಿಸುವ ಕೆಲಸ ಮುಂದುವರಿದಿದೆ:
1. ಫೆನಿಲ್ಕೆಟೋನೂರಿಯಾ
2. ಹೈಪರ್ಮಮೋನೆಮಿಯಾ
3. ಸೈಟಿಕ್ ಫೈಬ್ರೋಸಿಸ್
4. ಕುಡಗೋಲು ಕೋಶ
ಇನ್ನು ಕೆಲವೇ ತಿಂಗಳಲ್ಲಿ ನಾಲ್ಕು ಔಷಧಗಳು ಬರಲಿವೆ
ಸಿಕಲ್ ಸೆಲ್ ಅನೀಮಿಯಾ: ಇದು ಆನುವಂಶಿಕ ಕಾಯಿಲೆಯಾಗಿದ್ದು, ಬಾಲ್ಯದಲ್ಲಿ, ಮಕ್ಕಳಿಗೆ 5 ವರ್ಷ ವಯಸ್ಸಿನವರೆಗೆ ಮಾತ್ರೆಗಳನ್ನು ತೆಗೆದುಕೊಳ್ಳಲು ಕಷ್ಟವಾಗುತ್ತದೆ, ಆದ್ದರಿಂದ ಸಿರಪ್ನಲ್ಲಿ ಕೆಲಸ ಮಾಡಲಾಗುತ್ತಿದೆ.
ಇತರೆ ವಿಷಯಗಳು:
ಟ್ರಾಫಿಕ್ ಮತ್ತು ಶಬ್ದದ ಪರಿಹಾರಕ್ಕೆ ಹೊಸ ಪ್ಲಾನ್..! ಶೀಘ್ರದಲ್ಲೇ ದೇಶದಾದ್ಯಂತ ಏರ್ ಟ್ಯಾಕ್ಸಿ ಪ್ರಾರಂಭ
ಸರ್ಕಾರದ ಮಹತ್ವಾಕಾಂಕ್ಷೆಯ ಶಕ್ತಿ ಯೋಜನೆ ಯಶಸ್ವಿ..! 100 ಕೋಟಿ ದಾಟಿದ ಮಹಿಳಾ ಪ್ರಯಾಣಿಕರ ಸಂಖ್ಯೆ