ನಮಸ್ಕಾರ ಸ್ನೇಹಿತರೆ ಇವತ್ತಿನ ಲೇಖನದಲ್ಲಿ ರಾಜ್ಯ ಸರ್ಕಾರ ಹಾಗೂ ಕೇಂದ್ರ ಸರ್ಕಾರಗಳು ಎರಡು ರಾಜ್ಯದ ರೈತರಿಗಾಗಿ ಕೆಲವೊಂದು ಹೊಸ ಹೊಸ ಯೋಜನೆಗಳನ್ನು ಜಾರಿಗೆ ತರುತ್ತಿದ್ದು ಆ ಯೋಜನೆಗಳ ಬಗ್ಗೆ ತಿಳಿಸಲಾಗುತ್ತಿದೆ. ಮಳೆಯಾಶ್ರಿತ ರೈತರ ಜೀವನ ಮಟ್ಟವನ್ನು ಕೃಷಿಭಾಗ್ಯ ಯೋಜನೆಯ ಸುಧಾರಿಸುವುದರೊಂದಿಗೆ ಬರ ಉಪ ಶಮನ ದ ಮುಖ್ಯ ಗುರಿಯನ್ನು ಈ ಯೋಜನೆಯ ಹೊಂದಿದೆ. ರೈತರ ಹಿತ ದೃಷ್ಟಿಯಿಂದ ರಾಜ್ಯದ ಐದು ಒಣ ಹವಾಮಾನ ವಲಯಗಳ 24 ಬರಪೀಡಿತ ಜಿಲ್ಲೆಗಳಲ್ಲಿನ 106 ತಾಲೂಕುಗಳಲ್ಲಿ ಪ್ರಸಕ್ತ ಆಯವ್ಯಯದಲ್ಲಿ ಕೃಷಿಭಾಗ್ಯ ಯೋಜನೆಯನ್ನು ಮರುಜಾರಿ ಮಾಡಲಾಗಿರುತ್ತದೆ.

ರಕ್ಷಣಾತ್ಮಕ ನೀರಾವರಿ ಒದಗಿಸುವುದು :
ಬರಪೀಡಿತ ಜಿಲ್ಲೆಗಳ ಮಳೆಯ ಶ್ರೀತ ಕೃಷಿಯನ್ನು ಸುಸ್ಥಿರ ಕೃಷಿ ಯನ್ನಾಗಿ ರೂಪಾಂತರಗೊಳಿಸುವುದು ಈ ಯೋಜನೆಯ ಮುಖ್ಯ ಉದ್ದೇಶವಾಗಿದ್ದು ಇದರ ಜೊತೆಗೆ ಉಪಯುಕ್ತ ಬಳಕೆ ಪದ್ಧತಿಯಿಂದ ಕೃಷಿ ಉತ್ಪಾದಕತೆಯನ್ನು ಉತ್ತಮಪಡಿಸುವುದು ಹಾಗೂ ಸಮರ್ಪಕ ಮಳೆ ನೀರಿನ ಸಂಗ್ರಹಣೆ, ಆದಾಯ ಹೆಚ್ಚಿಸುವುದು ಆಯ್ದ ಸ್ಥಳಗಳಲ್ಲಿ ಮಳೆ ನೀರನ್ನು ವ್ಯರ್ಥ ಮಾಡದೆ ಕೃಷಿ ಹೊಂಡ ತೆಗೆದು ನೀರನ್ನು ಸಂಗ್ರಹಿಸಿ ಸಂದಿದ್ದ ಹಂತಗಳಲ್ಲಿ ಬೆಳೆಗಳಿಗೆ ರಕ್ಷಣಾತ್ಮಕ ನೀರಾವರಿ ಒದಗಿಸುವುದು ಈ ಯೋಜನೆಯ ಮುಖ್ಯ ಉದ್ದೇಶವಾಗಿದೆ.
ಕೃಷಿಭಾಗ್ಯ ಯೋಜನೆಯ ಅಡಿಯಲ್ಲಿ ದೊರೆಯುವ ಸೌಲಭ್ಯಗಳು :
ಶೇಕಡ 80ರಷ್ಟು ಸಾಮಾನ್ಯ ವರ್ಗಕ್ಕೆ ಶೇಕಡ 90ರಷ್ಟು ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಗಳಿಗೆ ಕ್ಷೇತ್ರ ಬದು ನಿರ್ಮಾಣಕ್ಕೆ ಸಹಾಯಧನವನ್ನು ನೀಡಲಾಗುತ್ತದೆ. ಸಾಮಾನ್ಯ ವರ್ಗಕ್ಕೆ 80ರಷ್ಟು ಹಾಗೂ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಗಳಿಗೆ 90ರಷ್ಟು, ನೀರು ಸಂಗ್ರಹಣ ರಚನೆ ಅಂದರೆ ಕೃಷಿ ಹೊಂಡ ನಿರ್ಮಾಣಕ್ಕೆ ಸಹಾಯಧನವನ್ನು ನೀಡಲಾಗುತ್ತದೆ. ಹೀಗೆ ಈ ಯೋಜನೆಯಡಿಯಲ್ಲಿ ನೀರು ಇಂಗದಂತೆ ತಡೆಯಲು ಪಾಲಿಥಿನ್ಹೊದಿಕೆ ಕೃಷಿಹೊಂಡದ ಸುತ್ತಲೂ ತಂತಿ ಬೇಲಿ ನಿರ್ಮಿಸುವುದು ಸೋಲಾರ್ ಪಂಪ್ ಸೆಟ್ ವಿತರಣೆ ನೀರನ್ನು ಬೆಳಗ್ಗೆ ಹಾಯಿಸಲು ಸೂಕ್ಷ್ಮ ನೀರಾವರಿ ಘಟಕ ವಿತರಣೆ ಹೀಗೆ ಕೆಲವೊಂದು ಸೌಲಭ್ಯಗಳನ್ನು ಈ ಯೋಜನೆಯ ಮೂಲಕ ಪಡೆಯಬಹುದು.
ಇದನ್ನು ಓದಿ : ಎಲ್ಲಾ ವಿದ್ಯಾರ್ಥಿಗಳಿಗೆ ಉಚಿತ ಸ್ಕಾಲರ್ಶಿಪ್: ಡಿಸೆಂಬರ್ 31 ರೊಳಗೆ ಈ ಅಪ್ಲೇ ಮಾಡಿ
ಕೃಷಿ ಭಾಗ್ಯ ಯೋಜನೆ :
ಪ್ಯಾಕೇಜ್ ಮಾದರಿಯಲ್ಲಿ ಕೃಷಿ ಭಾಗ್ಯ ಯೋಜನೆಯನ್ನು ಅನುಷ್ಠಾನ ಮಾಡಲಾಗುತ್ತದೆ. ಎಲ್ಲಾ ಆರು ಘಟಕಗಳನ್ನು ಮಾರ್ಗಸೂಚಿ ಅನ್ವಯ ಫಲಾನುಭವಿಗಳು ಕಡ್ಡಾಯವಾಗಿ ಅಳವಡಿಸಿಕೊಳ್ಳಬೇಕಾಗಿರುತ್ತದೆ. ಒಟ್ಟು ಸಾಗುವಳಿ ಕ್ಷೇತ್ರದ ಒಂದು ಸರ್ವೇ ನಂಬರ್ ನಲ್ಲಿ ಆಯ್ಕೆಯಾಗುವ ರೈತರು ಕನಿಷ್ಠ ಒಂದು ಎಕರೆ ವಿಸ್ತೀರ್ಣ ಹೊಂದಿರಬೇಕು. ಹಿಂದಿನ ಸಾಲುಗಳಲ್ಲಿ ಅರ್ಜಿ ಸಲ್ಲಿಸುವ ರೈತರು ಕೃಷಿಭಾಗ್ಯ ಯೋಜನೆಯ ಅಥವಾ ಇನ್ನು ಯಾವುದೇ ಯೋಜನೆಯ ಅಡಿಯಲ್ಲಿ ಕೃಷಿ ಹೊಂಡ ಫಲಾನುಭವಿಗಳಾಗಿದ್ದರೆ ಪ್ರಸ್ತುತ ಈ ಯೋಜನೆಗೆ ಅರ್ಹತೆಯನ್ನು ಪಡೆಯುವುದಿಲ್ಲ.
ಹೆಚ್ಚಿನ ಮಾಹಿತಿಗಾಗಿ :
ಕೃಷಿ ಭಾಗ್ಯ ಯೋಜನೆಗೆ ಡಿಸೆಂಬರ್ 31ರ ಒಳಗಾಗಿ ಆಸಕ್ತಿಯುಳ್ಳ ರೈತರು ಅರ್ಜಿಗಳನ್ನು ಸಲ್ಲಿಸಬಹುದಾಗಿತ್ತು ರೈತ ಸಂಪರ್ಕ ಕೇಂದ್ರಗಳಿಗೆ ಭೇಟಿ ನೀಡಿ ಅರ್ಜಿಯನ್ನು ಸಲ್ಲಿಸಬಹುದಾಗಿದೆ. ಅದರಂತೆ ಹೆಚ್ಚಿನ ಮಾಹಿತಿಗಾಗಿ ಸಹಾಯಕ ಕೃಷಿ ನಿರ್ದೇಶಕರ ಕಛೇರಿ ಮಾಗಡಿ 8277932406, ಕನಕಪುರ ಮತ್ತು ಹಾರೋಹಳ್ಳಿ8277932446, ಚನ್ನಪಟ್ಟಣ 8277932403, ಹಾಗೂ ರಾಮನಗರ 8277932404 ಈ ಸಂಖ್ಯೆಗೆ ಸಂಪರ್ಕಿಸುವಂತೆ ಪ್ರಕಟಣೆಯಲ್ಲಿ ಜಂಟಿ ಕೃಷಿ ನಿರ್ದೇಶಕರು ಮಾಹಿತಿ ನೀಡಿದ್ದಾರೆ.
ಹೀಗೆ ರಾಜ್ಯ ಸರ್ಕಾರವು ರೈತರಿಗೆ ಉಪಯೋಗವಾಗುವ ಉದ್ದೇಶದಿಂದ ಕೃಷಿ ಭಾಗ್ಯ ಯೋಜನೆಯನ್ನು ಜಾರಿಗೆ ತಂದಿದ್ದು ಈ ಯೋಜನೆಯ ಮೂಲಕ ಹೆಚ್ಚಿನ ಸೌಲಭ್ಯವನ್ನು ರಾಜ್ಯದಲ್ಲಿರುವ ರೈತರು ಪಡೆಯಬಹುದಾಗಿದೆ. ಹಾಗಾಗಿ ಈ ಮಾಹಿತಿಯನ್ನು ನಿಮಗೆ ತಿಳಿದಿರುವ ರೈತ ಸ್ನೇಹಿತರು ಹಾಗೂ ಬಂಧು ಮಿತ್ರರಿಗೆ ಶೇರ್ ಮಾಡಿ ಧನ್ಯವಾದಗಳು.
ಇತರೆ ವಿಷಯಗಳು :
- ಆಧಾರ್ ಕಾರ್ಡ್ ಲಾಕ್ : ತಕ್ಷಣ ಈ ಕೆಲಸ ಎಲ್ಲರು ಮಾಡಲೇಬೇಕು ಸರ್ಕಾದ ಸೂಚನೆ
- ಕಾರ್ಯಕರ್ತೆಯರ ಸ್ಮಾರ್ಟ್ ಫೋನ್ ಗೆ ಉಚಿತ ಕರೆನ್ಸಿ ಭಾಗ್ಯ.! ನೀವು ಪಡೆದುಕೊಳ್ಳಿ