ನಮಸ್ಕಾರ ಸ್ನೇಹಿತರೇ ಇವತ್ತಿನ ಲೇಖನದಲ್ಲಿ ಕೆಲವೊಂದು ಹೊಸ ನಿಯಮಗಳು ಹೊಸ ವರ್ಷದಲ್ಲಿ ಜಾರಿಯಾಗುತ್ತಿರುವುದರ ಬಗ್ಗೆ ತಿಳಿಸಲಾಗುತ್ತಿದೆ. ಈ ಹೊಸ ನಿಯಮಗಳಲ್ಲಿ ನಿಮ್ಮ ಗೂಗಲ್ ಖಾತೆಯಲ್ಲಿ ಇರುವಂತಹ ಎಲ್ಲಾ ಫೋಟೋಸ್ಗಳು ಡಿಲೀಟ್ ಆಗುವಂತಹ ಸಾಧ್ಯತೆ ಹೆಚ್ಚಿದೆ. 2023ರ ಡಿಸೆಂಬರ್ 31 ಡೆಡ್ ಲೈನ್ ಸಮೀಪಿಸುತ್ತಿದ್ದು ಹೀಗಾಗಿ ಗೂಗಲ್ ಫೋಟೋಸ್ ನಿಂದ ನಿಮ್ಮ ಅಮೂಲ್ಯ ಫೋಟೋಸ್ಗಳು ಡಿಲೀಟ್ ಆಗುವ ಮುನ್ನ ಈ ಕೂಡಲೇ ಎಚ್ಚೆತ್ತುಕೊಳ್ಳಿ.

ಗೂಗಲ್ ಫೋಟೋ ಆಪ್ :
ಗೂಗಲ್ ಫೋಟೋ ಆಪ್ ಗೂಗಲ್ ಕ್ಯಾಲೆಂಡರ್ ಜಿಮೇಲ್ ಡ್ರೈ ಮೀಟ್ ಸೇರಿದಂತೆ ಹಲವು ಗೂಗಲ್ ಆಪ್ ಗಳು ಪ್ರತಿಯೊಬ್ಬರ ಫೋನ್ಗಳಲ್ಲಿ ನೋಡಬಹುದು. ಇವೆಲ್ಲವೂ ಕೂಡ ಅತ್ಯಂತ ಮುಖ್ಯವಾಗಿದ್ದು ಅವುಗಳಲ್ಲಿ ಗೂಗಲ್ ಫೋಟೋ ಆಪ್ ಹಲವು ಸ್ಮರಣೀಯ ಹಾಗೂ ಅತಿ ಮುಖ್ಯ ಫೋಟೋಗಳ ಸಂಗ್ರಹವಾಗಿದೆ ಎಂದು ಹೇಳಬಹುದು. ನಿಮ್ಮ ಫೋನ್ ಮೂಲಕ ತೆಗೆದಂತಹ ಫೋಟೋಸ್ ವಾಟ್ಸಪ್ ಮೂಲಕ ಬಂದಂತಹ ಫೋಟೋಸ್ಗಳೆಲ್ಲವೂ ಕೂಡ ನೀವು ಲಾಗಿನ್ ಆಗಿರುವ ಗೂಗಲ್ ಫೋಟೋ ಆಪ್ ನಲ್ಲಿ ಭದ್ರವಾಗಿ ಸಂಗ್ರಹಿಸಿ ಇಟ್ಟುಕೊಳ್ಳಬಹುದಾಗಿದೆ. ನಿಮ್ಮ ಮೊಬೈಲ್ ಫೋನ್ ಏನಾದರೂ ಹಳೆಯದಾದರೆ ಅಥವಾ ಬದಲಾಯಿಸಿದರೆ ಹಳೆ ಫೋಟೋಗಳು ಗೂಗಲ್ ಖಾತೆಯಲ್ಲಿ ಹಾಗೆ ಇರುತ್ತವೆ.
ಇದನ್ನು ಓದಿ : ಇನ್ಮುಂದೆ ಚಾಲಕರು ಟೋಲ್ ಟ್ಯಾಕ್ಸ್ ಕಟ್ಟಬೇಕಿಲ್ಲ!! ಸಿಹಿ ಸುದ್ದಿ ನೀಡಿದ ಸರ್ಕಾರ
2023 ಡಿಸೆಂಬರ್ 31ಕ್ಕೆ ಗೂಗಲ್ ನೀಡಿರುವ ಡೆಡ್ ಲೈನ್ :
ಗೂಗಲ್ ನೀಡಿರುವ ಡೆಡ್ ಲೈನ್ ಡಿಸೆಂಬರ್ 31 2023ಕ್ಕೆ ಅಂತ್ಯಗೊಳ್ಳುತ್ತಿದ್ದು ಹೀಗಾಗಿ ಗೂಗಲ್ ನಿಮ್ಮ ಅಮೂಲ್ಯ ಫೋಟೋಗಳನ್ನು ಹೊಸ ವರ್ಷದಿಂದ ಡಿಲೀಟ್ ಮಾಡುವಂತಹ ಸಾಧ್ಯತೆ ಹೆಚ್ಚಾಗಿದೆ. ಏಕೆಂದರೆ ಗೂಗಲ್ ಕ್ಲೋವ್ಡ್ ಸ್ಪೇಸ್ ಸಮಸ್ಯೆಯನ್ನು ಗೂಗಲ್ ಸುಲಭವಾಗಿ ನಿವಾರಿಸುವ ಸಲುವಾಗಿ ಮಹತ್ವದ ನಿರ್ಧಾರವನ್ನು ಗೂಗಲ್ ತೆಗೆದುಕೊಂಡಿದೆ. ಅದರಲ್ಲಿ ಎರಡು ವರ್ಷದಿಂದ ಗೂಗಲ್ ಫೋಟೋ ಆಪ್ ಗಳನ್ನು ನಿಷ್ಕ್ರಿಯದಿಂದ ಇರುವಂತಹ ಆಪ್ ಅನ್ನು ಗೂಗಲ್ ಡಿಲೀಟ್ ಮಾಡಲು ನಿರ್ಧರಿಸಿದೆ.
ಆಟೋಮೆಟಿಕ್ ಡಿಲೀಟ್ ಆದರೆ ಗೂಗಲ್ ಫೋಟೋಸ್ ನಿಮ್ಮ ಎಲ್ಲಾ ಫೋಟೋಸ್ಗಳು ಮತ್ತೆ ಸಿಗುವುದಿಲ್ಲ ಹಾಗಾಗಿ ಇನ್ನೇನು ಕೆಲವೇ ದಿನಗಳು ಬಾಕಿ ಇರುವ ಕಾರಣ ಈಗಲೇ ನಿಷ್ಕ್ರಿಯೆ ಗೊಂಡಿರುವ ನಿಮ್ಮ ಗೂಗಲ್ ಖಾತೆ ಆಪ್ ಗಳನ್ನು ಸಕ್ರಿಯೆ ಮಾಡುವುದರ ಮೂಲಕ ನಿಮ್ಮ ಹಳೆಯ ಫೋಟೋಸ್ಗಳು ಇರುವ ಹಾಗೆ ನೋಡಿಕೊಳ್ಳಿ.
ಹೀಗೆ ಗೂಗಲ್ ತನ್ನ ಆಪ್ ಅನ್ನು ಅಪ್ಡೇಟ್ ಮಾಡಲು ಗ್ರಾಹಕರಿಗೆ 2023 ಡಿಸೆಂಬರ್ 31ರವರೆಗೆ ಅವಕಾಶ ಕಲ್ಪಿಸಿದ್ದು ಈ ಕೂಡಲೇ ನಿಷ್ಕ್ರಿಯವಾಗಿರುವ ಆಪ್ ಅನ್ನು ಸಕ್ರಿಯಗೊಳಿಸಿ ಧನ್ಯವಾದಗಳು.
ಇತರೆ ವಿಷಯಗಳು :
- ಸರ್ಕಾರದಿಂದ ಮನೆ ಮನೆಗೆ ಉಚಿತ ಸೋಲಾರ್ ಪ್ಯಾನೆಲ್ ಘೋಷಣೆ..! ಜನವರಿ 1 ರಂದು ವಿತರಣೆ
- ಇಂದಿನಿಂದ 4 ದಿನಗಳ ಕಾಲ ಶಾಲಾ ಮಕ್ಕಳಿಗೆ ರಜೆ! ಅನೇಕ ರಾಜ್ಯಗಳಿಗೆ ವಿಸ್ತರಣೆ