ಹಲೋ ಸ್ನೇಹಿತರೇ, ಭೂಮಾಪನ ಕಂದಾಯ ಇಲಾಖೆ ಭೂ ವ್ಯವಸ್ಥೆ ಯೋಜನೆ ಅಡಿಯಲ್ಲಿ ನೀವು ನಿಮ್ಮ ಜಮೀನಿನ ದಾಖಲೆಯನ್ನು ಇಟ್ಟುಕೊಂಡಿದ್ದರೆ ಅದರ ಮೂಲಕ ಮೊಬೈಲ್ ನಲ್ಲಿಯೇ ನಿಮ್ಮ ಜಮೀನಿನ ಸುತ್ತಲಿನ ಪ್ರದೇಶ ಅಥವಾ ಜಮೀನು ಯಾರದ್ದು ಎಂದು ತಿಳಿದುಕೊಳ್ಳುವುದು ಮಾತ್ರವಲ್ಲದೆ ಜಮೀನಿಗೆ ಹಾದು ಹೋಗುವ ಕಾಲುದಾರಿ ಅಥವಾ ಬಂಡಿದಾರಿ ಬಗೆಗಿನ ವಿವರಗಳನ್ನು ಕೂಡ ತಿಳಿಯಬಹುದು.

ರೈತರು ಎಷ್ಟೋ ಬಾರಿ ತಮ್ಮ ಜಮೀನಿನ ಸುತ್ತ ಮುತ್ತ ಯಾರ ಜಮೀನು ಇದೆ? ತಮ್ಮ ಜಮೀನಿಗೆ ಹಾದು ಹೋಗುವ ಕಾಲುದಾರಿ ಮತ್ತು ಬಂಡಿದಾರಿ ವ್ಯಾಪ್ತಿ ಎಷ್ಟು ಎನ್ನುವುದರ ಬಗ್ಗೆ ಸರಿಯಾದ ಮಾಹಿತಿ ಇಲ್ಲದೆ ಕೆಲವು ವ್ಯಾಜ್ಯಗಳಲ್ಲಿ ಸಿಲುಕಿ ಕೊಳ್ಳುತ್ತಿದ್ದಾರೆ.
ಆದರೆ ಇನ್ನು ಮುಂದೆ ಈ ಸಮಸ್ಯೆ ಇಲ್ಲ ನೀವು ಕೇವಲ ಮೊಬೈಲ್ ನಲ್ಲಿ ಸರ್ವೆ ನಂಬರ್ ಮೂಲಕ ಜಮೀನಿಗೆ ಸಂಬಂಧಪಟ್ಟ ಯಾವುದೇ ಮಾಹಿತಿಯನ್ನು ಕೂಡ ಕ್ಷಣಮಾತ್ರದಲ್ಲಿ ತಿಳಿದುಕೊಳ್ಳಬಹುದಾಗಿದೆ.
ಮೊಬೈಲ್ ನಲ್ಲಿ ಭೂ ವಿವರಣೆ ತಿಳಿದುಕೊಳ್ಳುವುದು ಹೇಗೆ?
ನಿಮ್ಮ ಮೊಬೈಲ್ ನಲ್ಲಿ ಗೂಗಲ್ ವೆಬ್ ಬ್ರೌಸರ್ ತೆರೆಯಿರಿ. ವೆಬ್ ಬ್ರೌಸರ್ ನಲ್ಲಿ ಕಂದಾಯ ಇಲಾಖೆಯ ಅಧಿಕೃತ ವೆಬ್ ಸೈಟ್ landrecords.karnataka.gov.in ಲಿಂಕ್ ಓಪನ್ ಮಾಡಿಸಿ. ಈಗ ಕಂದಾಯ ಇಲಾಖೆಯ ಮುಖಪುಟವು ತೆರೆದುಕೊಳ್ಳುತ್ತದೆ. ಅಲ್ಲಿ ರೆವೆನ್ಯೂ ನಕ್ಷೆಗಳು ಎನ್ನುವುದರ ಮೇಲೆ ಕ್ಲಿಕ್ ಮೂಲಕ ಚೆಕ್ ಮಾಡಿ.
ರೆವೆನ್ಯೂ ಮ್ಯಾಪ್ ಆನ್ಲೈನ್ ಎನ್ನುವ ಮತ್ತೊಂದು ಪುಟ ತೆರೆದುಕೊಳ್ಳುತ್ತದೆ. ಈಗ ರೆವೆನ್ಯೂ ಮ್ಯಾಪ್ ನಲ್ಲಿ ನಿಮ್ಮ ಜಿಲ್ಲೆ ಮತ್ತು ತಾಲೂಕು, ಹೋಬಳಿ ಮೊದಲಾದ ವಿವರಗಳನ್ನು ನೀಡಬೇಕು.
ಮುಂದೆ maps types ಎನ್ನುವ ಆಪ್ಷನ್ ನಲ್ಲಿ Cadastrial ಮ್ಯಾಪ್ ಎನ್ನುವುದರ ಮೇಲೆ ಕ್ಲಿಕ್ ಮಾಡಿ. ಈಗ ನೀವು ಆಯ್ಕೆ ಮಾಡಿದ ತಾಲೂಕು ಹೋಬಳಿ ಆಧಾರದ ಮೇಲೆ ಪಿಡಿಎಫ್ ನಕ್ಷೆ ತೆರೆದುಕೊಳ್ಳುತ್ತದೆ ಅದನ್ನು ನೀವು ಡೌನ್ಲೋಡ್ ಮಾಡಿಕೊಳ್ಳಬಹುದು.
ಪಡಿತರ ಚೀಟಿದಾರರಿಗೆ ಬೃಹತ್ ಲಾಭ! APL BPL ಕಾರ್ಡುದಾರರಿಗೆ ಮಾತ್ರ ಈ ಅವಕಾಶ
ಮೆನು ಬಾರ್ ನಲ್ಲಿ ಫೈಂಡ್ ಇನ್ ಡಾಕ್ಯುಮೆಂಟ್ಸ್ ಎನ್ನುವ ಆಯ್ಕೆಯು ಇರುತ್ತದೆ ಆಗ ನೀವು ಸರ್ವೇ ನಂಬರ್ ನಮೂದಿಸಿ ನಕ್ಷೆಯನ್ನು ನೋಡಬಹುದು. ಮೊಬೈಲ್ ನಲ್ಲಿ PDF ರೀಡರ್ ಇದ್ದರೆ ಮಾತ್ರ ನೀವು ನಕ್ಷೆಯನ್ನು ತೆರೆದು ನೋಡಿಕೊಳ್ಳಬಹುದು. ಹಾಗಾಗಿ ಪಿಡಿಎಫ್ ರೀಡರ್ ಇಲ್ಲದೆ ಇದ್ದರೆ ಅದನ್ನು ಕೂಡ ಮೊಬೈಲ್ ನಲ್ಲಿ ಡೌನ್ಲೋಡ್ ಮಾಡಿಕೊಳ್ಳಿ.
ಈಗ ನೀವು ನಮೂದಿಸಿದ ಸರ್ವೇ ನಂಬರ್ ಅಡಿಯಲ್ಲಿ ನಿಮ್ಮ ಜಮೀನಿನ ನಕ್ಷೆ ತೆರೆದುಕೊಳ್ಳುತ್ತದೆ. ಇಲ್ಲಿ ಕೆಲವು ಚಿಹ್ನೆಗಳ ಮೂಲಕ ಕಾಲುದಾರಿ, ಬಂಡಿ ದಾರಿ, ಇತರ ಸರ್ವೆ ನಂಬರ್, ದೇವಾಲಯಗಳು, ರಸ್ತೆಗಳು, ನೀರಾವರಿ ಪ್ರದೇಶ, ಕೆ ಪ್ರತಿಯೊಂದು ವಿವರಗಳನ್ನು ಕೂಡ ಕಾಣಬಹುದು.
ಬೇರೆ ಬೇರೆ ಬಣ್ಣದಲ್ಲಿ ಸಿಂಬಲ್ ಗಳನ್ನು ಕೊಟ್ಟಿರಲಾಗುತ್ತದೆ. ಆ ಮೂಲಕ ನೀವು ಮಾಹಿತಿ ತಿಳಿಯಬಹುದು.
ಕಂದಾಯ ಇಲಾಖೆ ರೈತರಿಗೆ ಅನುಕೂಲವಾಗಲಿ ಎನ್ನುವ ಕಾರಣಕ್ಕೆ ಈ ನಕ್ಷೆ ಆಯ್ಕೆಯನ್ನು ಬಿಡುಗಡೆ ಮಾಡಿದ್ದು ಅಗತ್ಯ ಇರುವವರು ಪ್ರಯೋಜನ ಪಡೆದುಕೊಳ್ಳಬಹುದು.
ಇತರೆ ವಿಷಯಗಳು:
ಹೊಸ ಶಿಕ್ಷಣ ನೀತಿ: 1ನೇ ತರಗತಿ ಪ್ರವೇಶದ ವಯೋಮಿತಿಯನ್ನು ಕಡ್ಡಾಯಗೊಳಿಸಿದ ಇಲಾಖೆ
ಇನ್ಮುಂದೆ 50 ವರ್ಷ ಮೇಲ್ಪಟ್ಟವರಿಗೂ ಪಿಂಚಣಿ ಸೌಲಭ್ಯ! ಸರ್ಕಾರದ ದಿಢೀರ್ ಆದೇಶ