ನಮಸ್ಕಾರ ಸ್ನೇಹಿತರೆ ಇವತ್ತಿನ ಲೇಖನದಲ್ಲಿ ತಿಳಿಸುತ್ತಿರುವ ವಿಷಯ ಏನೆಂದರೆ ರಾಜ್ಯದ ಹವಾಮಾನದ ಬಗ್ಗೆ ಭಾರತೀಯ ಹವಾಮಾನ ಇಲಾಖೆಯು ಮುನ್ಸೂಚನೆ ನೀಡಿರುವುದರ ಬಗ್ಗೆ. ಜನವರಿ 9 ರವರೆಗೆ ರಾಜ್ಯದ 22ಕ್ಕೂ ಹೆಚ್ಚು ಜಿಲ್ಲೆಗಳಲ್ಲಿ ಮಳೆಯಾಗಲಿದೆ ಎಂಬುದರ ಮಾಹಿತಿಯನ್ನು ಹವಾಮಾನ ಇಲಾಖೆ ತಿಳಿಸಿದೆ. ಕರ್ನಾಟಕದ ಅತ್ಯಂತ ಶೀತಗಾಳಿ ಬೀಸುತ್ತಿದ್ದು ಜನವರಿ 7 ರಿಂದ ಜನವರಿ 9 ರವರೆಗೆ ಎರಡು ದಿನಗಳ ಕಾಲ ಧಾರವಾಡ ಕಲಬುರಗಿ ಕೊಪ್ಪಳ ಬೀದರ್, ಬೆಳಗಾವಿ ಬಾಗಲಕೋಟೆ ಗದಗ ವಿಜಯಪುರ ರಾಯಚೂರು ಜಿಲ್ಲೆಗಳಲ್ಲಿ ಮಳೆಯಾಗುವ ಸಾಧ್ಯತೆ ಇದೆ ಹಾಗೂ ಐದಾರು ದಿನಗಳ ಕಾಲ ಹಿಂದಿನಿಂದ ಉತ್ತರ ಕನ್ನಡ ದಕ್ಷಿಣ ಕನ್ನಡ ಉಡುಪಿ ಜಿಲ್ಲೆಗಳಲ್ಲಿ ಮಳೆ ಯಾಗಲಿದೆ.

ಮೂರು ದಿನಗಳ ಕಾಲ ಈ ಜಿಲ್ಲೆಗಳಲ್ಲಿ ಭಾರಿ ಮಳೆ :
ಜನವರಿ ಆರರಿಂದ ಮೂರು ದಿನಗಳ ಕಾಲ ದಕ್ಷಿಣ ಒಳನಾಡಿನ ಜಿಲ್ಲೆಗಳಾದ ಕೊಡಗು ಮಂಡ್ಯ ಚಾಮರಾಜನಗರ ಹಾಸನ ಶಿವಮೊಗ್ಗ ತುಮಕೂರು ಹಾಗೂ ದಾವಣಗೆರೆ ರಾಮನಗರ ವಿಜಯನಗರ ಬೆಂಗಳೂರು ನಗರ ಚಿಕ್ಕಬಳ್ಳಾಪುರ ಕೋಲಾರ ಜಿಲ್ಲೆಗಳಲ್ಲಿ ಮಳೆಯಾಗಲಿದೆ ಎಂಬ ಮುನ್ಸೂಚನೆಯನ್ನು ಹವಾಮಾನ ಇಲಾಖೆ ತಿಳಿಸಿದೆ. ಇಂದು ನಸುಕಿನ ವೇಳೆ ಮಳೆ, ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲೆಗಳ ಬಹುತೇಕ ಕಡೆಗಳಲ್ಲಿ ಸುರಿದಿರುವುದು ವರದಿಯಾಗಿದೆ. ಮಂಗಳವಾರ ಮುಸ್ಸಂಜೆಯಿಂದಲೇ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಮೋಡಕವಿದ ವಾತಾವರಣ ಕಂಡುಬಂದಿತ್ತು.
ಇದನ್ನು ಓದಿ : ರೈತರಿಗೆ ಖಾತೆಗೆ ಸರ್ಕಾರದಿಂದ ₹50 ಲಕ್ಷ ಜಮಾ.! ಇಂದು ಅಪ್ಲೇ ಮಾಡಿದವರಿಗೆ ಮಾತ್ರ
ರಾಜ್ಯದಲ್ಲಿ ಉಷ್ಣಾಂಶ :
11.1 ಡಿಗ್ರಿ ಸೆಲ್ಸಿಯಸ್ ಅತ್ಯಂತ ಕನಿಷ್ಠ ಉಷ್ಣಾಂಶ ವಿಜಯಪುರದಲ್ಲಿ ದಾಖಲಾಗಿದೆ. ಹಗುರ ಮಳೆ ಕರಾವಳಿ ಹಾಗೂ ದಕ್ಷಿಣ ಒಳನಾಡಿನ ಒಂದೆರಡು ಕಡೆಗಳಲ್ಲಿ ಆಗಲಿದೆ ಎಂಬ ಮುನ್ಸೂಚನೆ ತಿಳಿಸಿದೆ ಜೊತೆಗೆ ಒಣ ಹಾವೇ ಉತ್ತರ ಒಳನಾಡಿನಲ್ಲಿ ಇರಲಿದೆ. ಇಂದು ಬೆಳಗ್ಗೆ ನಗರ ಹೊರವಲಯದ ಕೊಣಜಿ ಮುಡಿಪು ಉಳ್ಳಾಲ ಸೇರಿದಂತೆ ಹಲವೆಡೆ ಮಳೆಯಾಗಿರುವುದು ವರದಿಯಾಗಿದೆ.
ಹೀಗೆ ರಾಜ್ಯಾದ್ಯಂತ ಮಳೆಯ ವಾತಾವರಣವಿದ್ದು ಮೂರು ದಿನಗಳವರೆಗೆ ಮಳೆಯಾಗುವ ಸಾಧ್ಯತೆ ಇದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ. ಹಾಗಾಗಿ ಈ ಮಾಹಿತಿಯನ್ನು ನಿಮ್ಮ ಸ್ನೇಹಿತರೆಲ್ಲರಿಗೂ ಶೇರ್ ಮಾಡಿ ಧನ್ಯವಾದಗಳು.
ಇತರೆ ವಿಷಯಗಳು :
- ಅಪ್ರಾಪ್ತ ಮಕ್ಕಳು ವಾಹನ ಚಾಲನೆ ಮಾಡಿ ಸಿಕ್ಕಿಬಿದ್ದರೆ 3 ವರ್ಷ ಜೈಲು, ಹಾಗೂ 25 ಸಾವಿರ ದಂಡ
- ಸರ್ಕಾರದಿಂದ ಉಚಿತ ಸೋಲಾರ್ ಪ್ಯಾನೆಲ್.! ಅರ್ಜಿ ಸಲ್ಲಿಸಲು ಇನ್ನು ಕೆಲವೇ ದಿನ ಬಾಕಿ