rtgh

HDFC Scholarship: ವಿದ್ಯಾರ್ಥಿಗಳಿಗೆ ಬಂಪರ್‌ ಆಫರ್, 75000 ವರೆಗೆ ಉಚಿತ ಸ್ಕಾಲರ್‌ಶಿಪ್‌, ಕೊನೆಯ ದಿನಾಂಕ ಕೂಡಲೆ ತಿಳಿಯಿರಿ

ಹಲೋ ಸ್ನೇಹಿತರೇ ಬಡ ಕುಟುಂಬದ ಮಕ್ಕಳಿಗೆ, ವಿವಿಧ ಕಾರಣಗಳಿಂದ ಶಿಕ್ಷಣವನ್ನು ಅರ್ಧಕ್ಕೆ ನಿಲ್ಲಿಸುವಂತ ವಿದ್ಯಾರ್ಥಿಗಳಿಗೆ ತಮ್ಮ ಶಿಕ್ಷಣವನ್ನು ಮುಂದುವರೆಸಲು ನೆರವು ನೀಡುವ ಸಲುವಾಗಿ ಹೆಚ್‌ಡಿಎಫ್‌ಸಿ ಬ್ಯಾಂಕ್ ಪರಿವರ್ತನಾ ಇಸಿಎಸ್‌ಎಸ್‌ ಸ್ಕಾಲರ್‌ಶಿಪ್‌ ಯೋಜನೆಯನ್ನು ಜಾರಿಗೆ ತಂದಿದೆ. ಈ ವಿಧ್ಯಾರ್ಥಿವೇತನದ ಲಾಭವನ್ನು ಪ್ರತೀಯೊಬ್ಬರೂ ಕೋಡ ಪಡೆಯಬಹುದಾಗಿದೆ ಹಾಗಾಗಿ ಈ ಯೋಜನೆಯ ಲಾಭವನ್ನು ಪಡೆಯಲು ನಮ್ಮ ಈ ಲೇಖನವನ್ನು ಸಂಪೂರ್ಣವಾಗಿ ಓದಿ.

Free scholarship for students

ಹೆಚ್‌ಡಿಎಫ್‌ ಬ್ಯಾಂಕ್‌ ಪರಿವರ್ತನಾ ಇಸಿಎಸ್‌ಎಸ್‌ ಪ್ರೋಗ್ರಾಮ್‌ 2023-24 ಹೆಚ್‌ಡಿಎಫ್‌ಸಿ ಬ್ಯಾಂಕ್‌ನ ಒಂದು ಸ್ಕಾಲರ್‌ಶಿಪ್‌ ಪ್ರೋಗ್ರಾಮ್. ಇದರ ಪ್ರಮುಖ ಉದ್ದೇಶ ಸಮಾಜದ ಹಿಂದುಳಿದ ವರ್ಗಗಳಿಗೆ ಸೇರಿದ ಪ್ರತಿಭಾವಂತ ವಿದ್ಯಾರ್ಥಿಗಳು ಹಾಗೂ ಹಣಕಾಸು ತೊಂದರೆ ಇಂದ ಶಿಕ್ಷಣವನ್ನು ಅರ್ಧಕ್ಕೆ ಬಿಡುವ ವಿದ್ಯಾರ್ಥಿಗಳಿಗೆ ಸಹಾಯಧನ ನೀಡಿ ಪ್ರೋತ್ಸಾಹಿಸುವ, ಸಹಾಯ ಮಾಡುವ ಉದ್ದೇಶ ಹೊಂದಿದೆ. ಈ ಸ್ಕಾಲರ್‌ಶಿಪ್‌ ಅನ್ನು 1ನೇ ತರಗತಿಯಿಂದ 12ನೇ ತರಗತಿವರೆಗಿನ ವಿದ್ಯಾರ್ಥಿಗಳಿಗೆ, ಡಿಪ್ಲೊಮ, ಐಟಿಐ, ಪಾಲಿಟೆಕ್ನಿಕ್, ಯುಜಿ, ಪಿಜಿ ಓದುವವರಿಗೆ ನೀಡಲಾಗುತ್ತದೆ. ತಮ್ಮ ಶಿಕ್ಷಣಕ್ಕಾಗಿ ಹಣಕಾಸು ತೊಂದರೆ ಎದುರಿಸುವ ವಿದ್ಯಾರ್ಥಿಗಳು ಈ ವಿದ್ಯಾರ್ಥಿವೇತನಕ್ಕೆ ಕೂಡಲೇ ಅರ್ಜಿ ಸಲ್ಲಿಸಬಹುದು. ಈ ವಿದ್ಯಾರ್ಥಿವೇತನಕ್ಕೆ ಅರ್ಜಿ ಸಲ್ಲಿಸಲು ಕೊನೆಯ ದಿನಾಂಕವೆಂದರೆ 31-12-2023

ಯಾರಿಗೆ ಎಷ್ಟು ಸ್ಕಾಲರ್‌ಶಿಪ್‌ ಸಿಗಲಿದೆ

ಸ್ವಾಮಿ ದಯಾನಂದ ಸ್ಕಾಲರ್‌ಶಿಪ್‌ಗೆ ಅರ್ಜಿ ಆಹ್ವಾನ: ಡಿಗ್ರಿ ಓದುವವರಿಗೆ ರೂ.2 ಲಕ್ಷವರೆಗೆ ವಿದ್ಯಾರ್ಥಿವೇತನ

ಸ್ಕಾಲರ್‌ಶಿಪ್‌ಗೆ ಅರ್ಜಿ ಸಲ್ಲಿಸಲು ಇರಬೇಕಾದ ಅರ್ಹತೆ

  • ವಿದ್ಯಾರ್ಥಿಗಳು ಕಡ್ಡಾಯವಾಗಿ ಪದವಿ ಕೋರ್ಸ್‌ಗಳಾದ – ಬಿ.ಕಾಂ, ಬಿಎಸ್ಸಿ, ಬಿಎ, ಬಿಸಿಎ, ಇತರೆ ವೃತ್ತಿಪರ ಕೋರ್ಸ್‌ಗಳಾದ ಬಿ.ಟೆಕ್, ಎಂಬಿಬಿಎಸ್, ಎಲ್‌ಎಲ್‌ಬಿ, ಬಿ.ಆರ್ಚ್‌, ನರ್ಸಿಂಗ್ ಓದುತ್ತಿರಬೇಕು.
  • ಹಿಂದಿನ ಶಿಕ್ಷಣವನ್ನು ಕನಿಷ್ಠ ಶೇಕಡ.55 ಅಂಕಗಳೊಂದಿಗೆ ಪಾಸ್‌ ಮಾಡಿರಬೇಕು.
  • ವಾರ್ಷಿಕ ಕುಟುಂಬದ ಆದಾಯ ರೂ.2.5 ಲಕ್ಷ ಮೀರಿರಬಾರದು.

ಸ್ಕಾಲರ್‌ಶಿಪ್‌ ಎಷ್ಟು?

ವೃತ್ತಿಪರ ಪದವಿ ಕೋರ್ಸ್‌ ಓದುತ್ತಿರುವವರಿಗೆ ವಾರ್ಷಿಕ ರೂ.50,000.
ಇತರೆ ಸಾಮಾನ್ಯ ಪದವಿ ಕೋರ್ಸ್‌ಗಳನ್ನು ಓದುತ್ತಿರುವವರಿಗೆ ವಾರ್ಷಿಕ ರೂ.30000. ಸೆನ್ಸೋಡೈನ್ ಶೈನಿಂಗ್ ಸ್ಟಾರ್ ಸ್ಕಾಲರ್‌ಶಿಪ್‌ಗೆ ಅರ್ಜಿ ಹಾಕಿ, ಪಡೆಯಿರಿ ವರ್ಷಕ್ಕೆ ರೂ.1,05,000.


ಅರ್ಹತೆ

  • 1-12ನೇ ತರಗತಿ, ಐಟಿಐ, ಡಿಪ್ಲೊಮ, ಇತರೆ ಪಾಲಿಟೆಕ್ನಿಕ್ ಕೋರ್ಸ್‌ ಓದುತ್ತಿರಬೇಕು.
  • ಅರ್ಜಿ ಸಲ್ಲಿಸುವವರು ತಮ್ಮ ಹಿಂದಿನ ಶಿಕ್ಷಣವನ್ನು ಕನಿಷ್ಠ ಶೇಕಡ.55 ಅಂಕಗಳೊಂದಿಗೆ ಪಾಸ್‌ ಮಾಡಿರಬೇಕು.
  • ಕುಟುಂಬದ ವಾರ್ಷಿಕ ಆದಾಯ ರೂ.2.5 ಲಕ್ಷ ಮೀರಿರಬಾರದು.

ಸ್ಕಾಲರ್‌ಶಿಪ್‌ ಎಷ್ಟು?

1 ರಿಂದ 6 ನೇ ತರಗತಿವರೆಗಿನ ವಿದ್ಯಾರ್ಥಿಗಳಾಗಿದ್ದಲ್ಲಿ ವಾರ್ಷಿಕ ರೂ.15,000.
7 ರಿಂದ 12ನೇ ತರಗತಿವರೆಗಿನ ಹಾಗೂ ಡಿಪ್ಲೊಮ, ಐಟಿಐ, ಪಾಲಿಟೆಕ್ನಿಕ್ ವಿದ್ಯಾರ್ಥಿಗಳಾಗಿದ್ದಲ್ಲಿ ವಾರ್ಷಿಕ ರೂ.18,000.

ಅರ್ಜಿ ಸಲ್ಲಿಸಲು ಬೇಕಾದ ದಾಖಲೆ

  • ಅರ್ಜಿ ಸಲ್ಲಿಸುವವರ ಹಿಂದಿನ ಶೈಕ್ಷಣಿಕ ಅರ್ಹತೆಯ ಅಂಕಪಟ್ಟಿ, ಪಾಸ್‌ ಸರ್ಟಿಫಿಕೇಶನ್.
  • ಆಧಾರ್‌ ಕಾರ್ಡ್‌ ಅಥವಾ ಸರ್ಕಾರಿ ಗುರುತಿನ ಚೀಟಿ.
  • ಆದಾಯ ಪ್ರಮಾಣ ಪತ್ರ.
  • ಪ್ರಸ್ತುತ ಶಿಕ್ಷಣಕ್ಕೆ ಪ್ರವೇಶ ಪಡೆದಿರುವ ಕುರಿತು ಪೂರಕ ದಾಖಲೆ.
  • ಶಿಕ್ಷಣ ಪಡೆಯಲು ಆರ್ಥಿಕ ಸಮಸ್ಯೆ, ಇತರೆ ಸಮಸ್ಯೆ ಎದುರಿಸಿದ ಕುರಿತು ಪೂರಕ ದಾಖಲೆ.

ಅರ್ಜಿ ಸಲ್ಲಿಸುವುದು ಹೇಗೆ?

HDFC ಪರಿವರ್ತನಾ ICSS ಸ್ಕಾಲರ್‌ಶಿಪ್‌ಗೆ ಅರ್ಜಿ ಸಲ್ಲಿಸಲು ಡಿಸೆಂಬರ್ 31 ರವರೆಗೆ ಅವಕಾಶ ಇದೆ. ಅರ್ಜಿ ಸಲ್ಲಿಸಲು ಕೆಳಗಿನ ಲಿಂಕ್ ಕ್ಲಿಕ್ ಮಾಡಿ. ತೆರೆದ ವೆಬ್‌ಪೇಜ್‌ನಲ್ಲಿ ‘Apply Now’ ಎಂದಿರುವಲ್ಲಿ ಕ್ಲಿಕ್ ಮಾಡಿ. ಗೂಗಲ್‌, ಇಮೇಲ್‌, ಮೊಬೈಲ್‌ ನಂಬರ್ ಯಾವುದಾದರು ಒಂದು ಮಾರ್ಗದ ಮೂಲಕ ರಿಜಿಸ್ಟ್ರೇಷನ್‌ ಪಡೆದು ಅರ್ಜಿ ಸಲ್ಲಿಸಬಹುದಾಗಿದೆ.

ಇತರೆ ವಿಷಯಗಳು

Leave a Comment