ಹಲೋ ಫ್ರೆಂಡ್ಸ್, ಹೊಸ ಲೇಖನಕ್ಕೆ ನಿಮಗೆ ಸ್ವಾಗತ. ಇವತ್ತಿನ ಲೇಖನದಲ್ಲಿ ನಾವು ತಿಳಿಸುವಂತಹ ಮಾಹಿತಿ ಏನೆಂದರೆ, ನಾವು ನಮ್ಮ ಉಳಿತಾಯಗಳನ್ನು ಹೆಚ್ಚಾಗಿ ಬ್ಯಾಂಕ್ ನಲ್ಲಿಯೇ ಇಡಲು ಬಯಸುತ್ತೇವೆ. ಅಲ್ಲಿ ಹಣ ಇಟ್ಟರೆ ಯಾವುದೇ ಹಾನಿಯಾಗುವುದಿಲ್ಲ ಹಾಗೂ ನಾವು ಇಟ್ಟಂತಹ ಹಣಕ್ಕೆ ಬಡ್ಡಿ ಕೂಡ ಸಿಗುತ್ತದೆ ಎಂಬ ಉದ್ದೇಶವನ್ನಿಟ್ಟುಕೊಂಡು ಬ್ಯಾಂಕ್ ನಲ್ಲಿ ಹಣವನ್ನು ಇಡುತ್ತೇವೆ. ಆದರೆ ಈ ಬ್ಯಾಂಕಿನ ಗ್ರಾಹಕರಿಗೆ ಕಾದಿದೆ ಬಿಗ್ ಶಾಕ್! ಅದು ಯಾವ ಬ್ಯಾಂಕ್, ಏನು ಎಂಬ ಸಂಪೂರ್ಣ ಮಾಹಿತಿಯನ್ನು ಈ ಲೇಖನದಲ್ಲಿ ನೀಡಲಾಗಿದೆ ಕೊನೆಯವರೆಗೂ ಓದಿ.
ದೇಶದ ಪ್ರಮುಖ ಬ್ಯಾಂಕ್‌ಗಳಲ್ಲಿ ಒಂದಾಗಿ ಮುಂದುವರೆದಿರುವ ಖಾಸಗಿ ವಲಯದ ಎಚ್‌ಡಿಎಫ್‌ಸಿ ಬ್ಯಾಂಕ್ ತನ್ನ ಗ್ರಾಹಕರಿಗೆ ಶಾಕ್ ನೀಡಿದೆ. ಬ್ಯಾಂಕಿನ ಇತ್ತೀಚಿನ ನಿರ್ಧಾರವು ಸಾಲಗಾರರ ಮೇಲೆ ನಕಾರಾತ್ಮಕ ಪರಿಣಾಮ ಬೀರುತ್ತದೆ ಎಂದು ಹೇಳಬಹುದು.
HDFC Bank : ಎಚ್‌ಡಿಎಫ್‌ಸಿ ಬ್ಯಾಂಕ್ ಮಹತ್ವದ ನಿರ್ಧಾರ ಕೈಗೊಂಡಿದೆ. ಇದು ಅನೇಕ ಜನರ ಮೇಲೆ ನಕಾರಾತ್ಮಕ ಪರಿಣಾಮ ಬೀರುವ ಸಾಧ್ಯತೆಯಿದೆ. ಹಾಗಾದರೆ HDFC ಬ್ಯಾಂಕ್ ತೆಗೆದುಕೊಂಡ ನಿರ್ಧಾರವೇನು? ಇದು ಯಾರ ಮೇಲೆ ಹೇಗೆ ಪರಿಣಾಮ ಬೀರುತ್ತದೆ? ಎಂಬ ಅಂಶಗಳನ್ನು ತಿಳಿದುಕೊಳ್ಳೋಣ. ಎಚ್‌ಡಿಎಫ್‌ಸಿ ಬ್ಯಾಂಕ್ ಇತ್ತೀಚೆಗೆ ಮಾರ್ಜಿನಲ್ ಕಾಸ್ಟ್ ಆಫ್ ಫಂಡ್ಸ್ ಬೇಸ್ಡ್ ಲೆಂಡಿಂಗ್ ದರವನ್ನು ಹೆಚ್ಚಿಸಿದೆ. ಈ ಹೆಚ್ಚಳವು ನವೆಂಬರ್ 7 ರಿಂದ ಜಾರಿಗೆ ಬಂದಿದೆ. ರಾತ್ರೋರಾತ್ರಿಯೇ MCLR 5 ಬೇಸಿಸ್ ಪಾಯಿಂಟ್‌ಗಳನ್ನು ಹೆಚ್ಚಳ ಮಾಡಿದೆ.
ಇದನ್ನು ಸಹ ಓದಿ: ಸತತ 6 ದಿನಗಳ ಕಾಲ ಬ್ಯಾಂಕ್ ರಜೆ ಘೋಷಣೆ: ಈ ದಿನಾಂಕದೊಳಗೆ ನಿಮ್ಮ ಕೆಲಸ ಮುಗಿಸಲು ಅವಕಾಶ!
ಇದರೊಂದಿಗೆ ದರ ಶೇ.8.6ರಿಂದ ಶೇ.8.65ಕ್ಕೆ ಏರಿಕೆಯಾಗಿದೆ. ಅಲ್ಲದೆ, ಒಂದು ತಿಂಗಳ ಎಂಸಿಎಲ್‌ಆರ್ ಕೂಡ 5 ಬೇಸಿಸ್ ಪಾಯಿಂಟ್‌ಗಳಷ್ಟು ಹೆಚ್ಚಾಗಿದೆ. ಇದರೊಂದಿಗೆ ಈ ದರವೂ ಶೇ.8.65ರಿಂದ ಶೇ.8.7ಕ್ಕೆ ಏರಿಕೆಯಾಗಿದೆ.
3 ತಿಂಗಳ ಎಂಸಿಎಲ್‌ಆರ್‌ಗೆ ಬಂದರೆ, ಇದು ಕೂಡ 5 ಬೇಸಿಸ್ ಪಾಯಿಂಟ್‌ಗಳಷ್ಟು ಏರಿಕೆಯನ್ನು ಕಾಣುತ್ತದೆ. ಈ ಪ್ರಮಾಣ ಶೇ.8.85ರಿಂದ ಶೇ.8.9ಕ್ಕೆ ಏರಿಕೆಯಾಗಿದೆ. ಅಲ್ಲದೆ, ಆರು ತಿಂಗಳ ಎಂಸಿಎಲ್‌ಆರ್ ದರ ಶೇ.9.1ರಿಂದ ಶೇ.9.15ಕ್ಕೆ ಜಿಗಿದಿದೆ. ಇನ್ನೂ, ಒಂದು ವರ್ಷದ ಎಂಸಿಎಲ್ಆರ್ ದರವು 9.2 ಪ್ರತಿಶತದಲ್ಲಿ ಮುಂದುವರಿಯುತ್ತದೆ. 2 ವರ್ಷಗಳ MCLR ಶೇಕಡಾ 9.25 ಹಾಗೂ 3 ವರ್ಷಗಳ ಎಂಸಿಎಲ್ಆರ್ ಶೇಕಡಾ 9.3 ರಷ್ಟು ಆಗಿದೆ.
ಹೆಚ್ ಡಿ ಎಫ್ ಸಿ ಬ್ಯಾಂಕ್ ವಿಶೇಷ ಠೇವಣಿ ಯೋಜನೆಯು ನವೆಂಬರ್ 7 ರಂದು ಮುಕ್ತಾಯಗೊಂಡಿದೆ. ಈ ಯೋಜನೆಯು ಇನ್ನು ಮುಂದೆ ಲಭ್ಯವಿಲ್ಲದಿರಬಹುದು. HDFC ಬ್ಯಾಂಕ್ ಹಿರಿಯ ನಾಗರಿಕರಿಗಾಗಿ ಪ್ರತ್ಯೇಕವಾಗಿ ಹಿರಿಯ ನಾಗರಿಕರ ಆರೈಕೆ Fixed Deposit ಯೋಜನೆಯನ್ನು ನೀಡುತ್ತದೆ.
ಈ ಯೋಜನೆಯು ನವೆಂಬರ್ ರಂದು ಕೊನೆಗೊಂಡಿತು. ಈ ಯೋಜನೆಯಡಿಯಲ್ಲಿ, ಠೇವಣಿದಾರರು ಗರಿಷ್ಠ 7.75 ಶೇಕಡಾ ಬಡ್ಡಿದರವನ್ನು ಪಡೆಯುತ್ತಾರೆ. ಈ ಯೋಜನೆಯು 2020 ರಿಂದ ಲಭ್ಯವಿದೆ. ಅಂದಿನಿಂದ ಬ್ಯಾಂಕ್ ಹಲವಾರು ಬಾರಿ ಯೋಜನೆಯನ್ನು ವಿಸ್ತರಿಸಿದೆ.
ಆದರೆ ಈ ಯೋಜನೆ ನಿನ್ನೆಯಿಂದ ಮುಕ್ತಾಯಗೊಂಡಿದೆ. ಈ ಬಗ್ಗೆ ಮುಂದೆ ಬ್ಯಾಂಕ್ ಯಾವ ನಿರ್ಧಾರ ತೆಗೆದುಕೊಳ್ಳುತ್ತದೆ ಎಂಬುದನ್ನು ಕಾದು ನೋಡಬೇಕಿದೆ. ಈ ಯೋಜನೆಯಡಿ ನೀವು ಹಣವನ್ನು ಉಳಿಸಲು ಬಯಸಿದರೆ, ನೀವು ಐದರಿಂದ ಹತ್ತು ವರ್ಷಗಳ ಅವಧಿಯನ್ನು ಪಡೆಯಬಹುದು. ಇದು 60 ವರ್ಷ ಮೇಲ್ಪಟ್ಟವರಿಗೆ ಅನ್ವಯಿಸುತ್ತದೆ. ಬ್ಯಾಂಕ್ ಈ ಯೋಜನೆಯನ್ನು (FD Scheme) ಮತ್ತೆ ವಿಸ್ತರಿಸುತ್ತದೆಯೇ? ಇಲ್ಲವೇ ನೋಡಬೇಕಿದೆ.
ಇತರೆ ವಿಷಯಗಳು:
ಚಿಂದಿ ಆಯುವವರ ಅದೃಷ್ಟ ಬದಲಿಸಿದ ಕಸದ ರಾಶಿ..! ಕಣ್ಣೆದುರೆ ಪ್ರತ್ಯಕ್ಷವಾಯ್ತು ₹ 25 ಕೋಟಿ
ಬಿಗ್ ಬಾಸ್ ಸಂಗೀತಾ- ಕಾರ್ತಿಕ್ ನಡುವೆ ಇರೋದು ಸ್ನೇಹಾನಾ? ಪ್ರೀತಿನಾ? ರಕ್ಷಕ್ ಈ ರೀತಿ ಹೇಳಿದ್ದೇಕೆ..!