ನಮಸ್ಕಾರ ಸ್ನೇಹಿತರೇ, ಕರ್ನಾಟಕ ಸರ್ಕಾರ ಮಹಿಳೆಯರಿಗೆ ಆರ್ಥಿಕ ಸಹಕಾರ ನೀಡುವ ಸಲುವಾಗಿ ಗೃಹಲಕ್ಷ್ಮೀ ಯೋಜನೆಯನ್ನು ಜಾರಿಗೆ ತಂದಿದೆ. ಈ ಯೋಜನೆಯ ಮೂಲಕ ಪ್ರತಿಯೊಬ್ಬ ಮಹಿಳೆಯರ ಬ್ಯಾಂಕ್ ಖಾತೆಗೂ ಕೂಡ ಪ್ರತೀ ತಿಂಗಳು 2,000 ರೂಪಾಯಿಗಳನ್ನು ವರ್ಗಾವಣೆ ಮಾಡಲಾಗುತ್ತದೆ. ಇದುವರೆಗೂ ಗೃಹಲಕ್ಷ್ಮೀ ಯೋಜನೆಯ ಹಣ ಸಿಗದೇ ಇರುವವರಿಗೆ ಕಾಂಗ್ರೇಸ್ ಸರ್ಕಾರ ಇದೀಗ ಗುಡ್‌ನ್ಯೂಸ್ ಒಂದನ್ನು ಕೊಟ್ಟಿದೆ.

ಸರ್ಕಾರದ ಗೃಹಲಕ್ಷ್ಮೀ ಯೋಜನೆಯ ಮೂಲಕ ಈಗಾಗಲೇ ಒಟ್ಟು 3 ಕಂತುಗಳಲ್ಲಿ ಮಹಿಳೆಯರ ಖಾತೆಗೆ ಪ್ರತೀ ತಿಂಗಳು 2,000 ರೂಪಾಯಿಯಂತೆ ಇದುವರೆಗೆ ಒಟ್ಟು 6000 ರೂಪಾಯಿಗಳನ್ನು ವರ್ಗಾವಣೆ ಮಾಡಲಾಗಿದ್ದು. ಆದರೂ ಸುಮಾರು 5 ಲಕ್ಷಕ್ಕೂ ಅಧಿಕ ಮಹಿಳೆಯರಿಗೆ ಇದುವರೆಗೂ ಗೃಹಲಕ್ಷ್ಮೀ ಯೋಜನೆಯ ಹಣ ಖಾತೆಗೆ ಜಮೆ ಆಗಿಲ್ಲ ಎಂದು ದೂರಿದ್ದಾರೆ.
ಕರ್ನಾಟಕದ ಎಲ್ಲಾ ಮಹಿಳೆಯರಿಗೆ ಗೃಹಲಕ್ಷ್ಮೀ ಯೋಜನೆಯಡಿ ನೀಡುವ ಹಣ ದೊರಕಬೇಕು ಎನ್ನುವ ಕಾರಣಕ್ಕೆ ರಾಜ್ಯ ಸರ್ಕಾರ ಹಲವು ಕ್ರಮ ಕೈಗೊಂಡಿದೆ. ಆಧಾರ್ ಸೀಡಿಂಗ್ ಆಗದ ಕಾರಣಕ್ಕೆ ಈಗಾಗಲೇ ಬಹುತೇಕ ಮಹಿಳೆಯರ ಖಾತೆಗಳಿಗೆ ಗೃಹಲಕ್ಷ್ಮೀ ಯೋಜನೆಯ ಹಣ ಬಂದಿರುವುದಿಲ್ಲ. ಇದರೊಂದಿಗೆ ಕೆಲ ಮಹಿಳೆಯರ ಖಾತೆಯಲ್ಲಿಯೇ ತೊಂದರೆ ಇರುವುದರಿಂದ ಅವರ ಖಾತೆಗೆ ಹಣ ಬಂದಿಲ್ಲ ಎನ್ನುವುದನ್ನು ಸ್ಪಷ್ಟಪಡಿಸಿದ್ದಾರೆ.
ಇಷ್ಟು ಜಮೀನು ಹೊಂದಿದವರಿಗೆ ಪಿಎಂ ಆವಾಸ್ ಯೋಜನೆ!! ಫಲಾನುಭವಿಗಳಿಗೆ ಹೆಚ್ಚು ಹಣ ನೀಡಲು ಸರ್ಕಾರದ ನಿರ್ಧಾರ
ತಾಂತ್ರಿಕ ಸಮಸ್ಯೆ, ಆಧಾರ್ ಸೀಡಿಂಗ್ ಮತ್ತು ರೇಷನ್ ಕಾರ್ಡ್ ಜೊತೆಗೆ ಆಧಾರ್ ಲಿಂಕ್, ಬ್ಯಾಂಕ್ ಖಾತೆಯ ಜೊತೆಗೆ ಆಧಾರ್ ಲಿಂಕ್ ಮಾಡುವುದು, ರೇಷನ್ ಕಾರ್ಡ್ ತಿದ್ದುಪಡಿ ಸೇರಿದಂತೆ ಸರ್ಕಾರ ಹಲವು ಬಾರಿ ಅವಕಾಶ ನೀಡಿದೆ. ಆದರೂ ಕೂಡ ಇನ್ನು ಲಕ್ಷಾಂತರ ಮಹಿಳೆಯರ ಖಾತೆಗೆ ಗೃಹಲಕ್ಷ್ಮೀ ಯೋಜನೆಯ ಹಣ ಬಂದಿರುವುದಿಲ್ಲ.
ಇದೀಗ ರಾಜ್ಯ ಸರಕಾರ ಗೃಹಲಕ್ಷ್ಮೀ ಯೋಜನೆಯ ಹಣ ದೊರಕದೇ ಇರುವ ಗೃಹಿಣಿಯರ ಖಾತೆಯ ಬದಲು ಎರಡನೇ ಹಿರಿಯ ಸದಸ್ಯನ ಖಾತೆಗೆ (ಗಂಡನ ಖಾತೆ) ಹಣ ವರ್ಗಾವಣೆ ಮಾಡಲು ಯೋಜನೆ ರೂಪಿಸಿದೆ. ಒಂದೊಮ್ಮೆ ಗಂಡ ಇಲ್ಲವಾದರೆ ಮನೆಯ ಎರಡನೇ ಹಿರಿಯ ಸದಸ್ಯನ ಖಾತೆಗೆ ಈ ಹಣ ವರ್ಗಾವಣೆಯಾಗಲಿದೆ.
ಪ್ರತಿ ತಿಂಗಳು ಮೊದಲ ಅಥವಾ ಎರಡನೇ ವಾರದಲ್ಲಿ ಗೃಹಲಕ್ಷ್ಮೀ ಯೋಜನೆಯ ಹಣವನ್ನು ಸರ್ಕಾರ ವರ್ಗಾವಣೆ ಮಾಡುತ್ತಿದೆ. ನಿಮಗೆ ಒಂದೊಮ್ಮೆ ಹಣ ಜಮೆ ಆಗಿರುವ ಕುರಿತ ಎಸ್‌ಎಂಎಸ್ ಬಾರದೇ ಇದ್ದಲ್ಲಿ ನೀವು ನೇರವಾಗಿ ಬ್ಯಾಂಕ್ ಖಾತೆಗೆ ಭೇಟಿ ನೀಡುವ ಮೂಲಕ ಹಣ ಜಮೆ ಆಗಿದೆಯಾ ಇಲ್ಲವೇ ಅಂತಾ ಪರಿಶೀಲಿಸಿಕೊಳ್ಳುವುದು ಉತ್ತಮ.
ಇತರೆ ವಿಷಯಗಳು:
IPL 2024 ರ ಬಿಗ್ ಅಪ್ಡೇಟ್: RCB ಗೆ ವಿರಾಟ್ ಕೊಹ್ಲಿ ಗುಡ್‌ಬೈ!! ಹೊಸ ನಾಯಕನ ಎಂಟ್ರಿ
ರಾಷ್ಟ್ರೀಯ ಪಿಂಚಣಿ ಯೋಜನೆಯಲ್ಲಿ ದೊಡ್ಡ ಬದಲಾವಣೆ..! ಪಿಂಚಣಿದಾರರಿಗೆ ಈಗ ಸಿಗಲಿದೆ ಹೆಚ್ಚು ಹೆಚ್ಚು ಲಾಭ