ಹಲೋ ಸ್ನೇಹಿತರೇ, ಗೃಹಲಕ್ಷ್ಮಿ ಯೋಜನೆ ಜಾರಿಯಾಗಿ ಈ ತಿಂಗಳಿಗೆ ಹೆಚ್ಚು ಕಡಿಮೆ ಮೂರು ಕಂತುಗಳು ಜಮಾ ಅಗುವಷ್ಟು ದಿನಗಳು ಕಳೆದಿವೆ ಇನ್ನು ಹಲವು ಅರ್ಹ ಫಲಾನುಭವಿಗಳಿಗೆ ಈ ಯೋಜನೆ ಹಣ ಒಂದು ಕಂತನ್ನು ಪಡೆಯಲು ಅಗಿರುವುದಿಲ್ಲ ಅಂತಹ ಅರ್ಜಿದಾರರು ಈ ಅಂಕಣದಲ್ಲಿ ವಿವರಿಸಿರುವ ಮಾಹಿತಿಯನ್ನು ಸರಿಯಾಗಿ ತಿಳಿದು ಅಗತ್ಯ ಕ್ರಮಗಳನ್ನು ಅನುಸರಿಸಿದರೆ ತಪ್ಪದೇ ನಿಮಗೆ ಮುಂದಿನ ಕಂತಿನಿಂದ ಹಣ ವರ್ಗಾವಣೆಯಾಗುತ್ತದೆ.

ಮುಖ್ಯವಾಗಿ ಇಲ್ಲಿಯವರೆಗೆ ಅರ್ಜಿ ಸಲ್ಲಿಸಿದ ಬಳಿಕವು ಹಣ ಬಂದಿರದೇ ಇರುವ ಫಲಾನುಭವಿಗಳ ತಾಂತ್ರಿಕ ಸಮಸ್ಯೆಯನ್ನು ಪರಿಶೀಲಿಸಿದಾಗ ಸಂಬಂಧಪಟ್ಟ ಇಲಾಖೆ ಅಧಿಕಾರಿಗಳು ಹಂಚಿಕೊಂಡ ಸೂಕ್ತ ಕಾರಣ ಮತ್ತು ಪರಿಹಾರ ಮಾರ್ಗಗಳು ಈ ಕೆಳಗಿನಂತಿವೆ.
CDPO ಲಾಗಿನ್ ಅಲ್ಲಿ ಪರಿಶೀಲನೆಗೆ ಬಾಕಿಯಿರುವುದು:
ಎಲ್ಲಾ ಅಗತ್ಯ ದಾಖಲಾತಿಗಳನ್ನು ಸಲ್ಲಿಸಿ ಯಶಸ್ವಿಯಾಗಿ ಅರ್ಜಿ ಸಲ್ಲಿಕೆಯಾದ ಬಳಿಕವು ಹಣ ಬಂದಿರದ ಕೆಲವು ಫಲಾನುಭವಿಗಳ ಅರ್ಜಿಗಳು ಮರುಪರಿಶೀಲನೆಗೆ ನಿಮ್ಮ ತಾಲ್ಲೂಕಿನ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ಮುಖ್ಯಸ್ಥರ(CDPO) ಲಾಗಿನ್ ಗೆ ಹೋಗಿರುತ್ತವೆ ಈ ರೀತಿಯಾಗಿವು ನಿಮಗೆ ಇಲ್ಲಿಯವರೆಗೆ ಹಣ ಬಂದಿರದೇ ಇರಬವುದು ಒಮ್ಮೆ ಈ ಲಿಂಕ್ ಮೇಲೆ ಕ್ಲಿಕ್ ಮಾಡಿ ನಿಮ್ಮ ತಾಲ್ಲೂಕಿನ CDPO ಕಚೇರಿಯ ವಿಳಾಸ ಪಡೆದು ಆ ಕಚೇರಿಯನ್ನು (ಅಧಾರ್ ಕಾರ್ಡ್, ಬ್ಯಾಂಕ್ ಪಾಸ್ ಬುಕ್, ರೇಷನ್ ಕಾರ್ಡ್ ದಾಖಲಾತಿಗಳೊಂದಿಗೆ) ಭೇಟಿ ಮಾಡಿ ನಿಮ್ಮ ಅರ್ಜಿ ಸ್ಥಿತಿಯನ್ನು ಚೆಕ್ ಮಾಡಿಕೊಳ್ಳಿ.
CDPO ಲಾಗಿನ್ ಅಲ್ಲಿ ಪರಿಶೀಲನೆಗೆ ಹೋಗಲು ಕಾರಣಗಳು:
- ಆಧಾರ್ ಮತ್ತು ಬ್ಯಾಂಕ್ ಖಾತೆ ಹೆಸರುಗಳು ತಾಳೆ ಅಗಿದಿದಲ್ಲಿ ಈ ರೀತಿ ಮರುಪರಿಶೀಲನೆಗೆ ಹೋಗುತ್ತದೆ.
- ಆಧಾರ್ ಮತ್ತು ರೇಷನ್ ಕಾರ್ಡ್ ಹೆಸರು ಹೊಂದಾಣಿಕೆ ಅಗದಿರುವ ಪಕ್ಷದಲ್ಲಿ ಹೀಗೆ ಆಗಬಹುದು.
- ಇತರೆ ದಾಖಲಾತಿಗಳಲ್ಲಿ ವಿವರಗಳ ಬದಲಾವಣೆಯಿಂದಾಗಿ ಈ ಲಾಗಿನ್ ಅಲ್ಲಿ ಮರುಪರಿಶೀಲನೆಗೆ ಉಳಿದುಕೊಂಡಿರುತ್ತವೆ.
NPCI mapping- ಬ್ಯಾಂಕ್ ಖಾತೆಗೆ NPCI ಮ್ಯಾಪಿಂಗ್ ಅಗದಿರುವುದು:
ಇನ್ನು ಹಲವು ಫಲಾನುಭವಿಗಳು ತಮ್ಮ ಬ್ಯಾಂಕ್ ಖಾತೆಗೆ ಆಧಾರ್ ಲಿಂಕ್ ಮಾಡಿಸಿಲ್ಲದೇ ಇರುವುದು ಸಹ ಗೃಹಲಕ್ಷ್ಮಿ ಯೋಜನೆ ಹಣ ವರ್ಗಾವಣೆ ಅಗದಿರಲು ಒಂದು ಕಾರಣವಾಗಿದೆ ನಿಮ್ಮ ಹಳ್ಳಿಯಿಂದ ನೀವು ದೂರದ ಪಟ್ಟಣ ಹೋಗಿ ರಾಷ್ಟ್ರೀಕೃತ ಬ್ಯಾಂಕ್ ನಲ್ಲಿ ವ್ಯವಹಾರ ಮಾಡುವುದು ಇತ್ಯಾದಿ ಸೇವೆಗಳನ್ನು ಪಡೆಯುವುದು ನಿಮಗೆ ಕಷ್ಟಕರವಾದಲ್ಲಿ ನಿಮ್ಮ ಹತ್ತಿರದ ಅಂಚೆ ಕಚೇರಿ/ಪೋಸ್ಟ್ ಅಪೀಸ್ ನಲ್ಲಿ ಒಂದು ಉಳಿತಾಯ ಖಾತೆಯನ್ನು ತೆರೆಯುವುದರಿಂದ ಬ್ಯಾಂಕ್ ಖಾತೆಗೆ NPCI ಮ್ಯಾಪಿಂಗ್ ತಾಂತ್ರಿಕ ಸಮಸ್ಯೆಯು ಬಗ್ಗೆಹರಿಯುತ್ತದೆ ಮತ್ತು ಹಳ್ಳಿಯಿಂದ ದೂರದ ಪಟ್ಟಣಕ್ಕೆ ಬ್ಯಾಂಕ್ ವ್ಯವಹಾರ ಮಾಡುವುದಕ್ಕೆ ಅಲೆದಾಡುವುದು ತಪ್ಪುತ್ತದೆ.
ಇದನ್ನೂ ಸಹ ಓದಿ : ಪಿಂಚಣಿದಾರರಿಗೆ ಬಿಗ್ ಅಪ್ಡೇಟ್: ನವೆಂಬರ್ 30 ರೊಳಗೆ ಈ ಕೆಲಸ ಪೂರ್ಣಗೊಳಿಸಿ, ಇಲ್ಲದಿದ್ದರೆ ಪಿಂಚಣಿ ಸಿಗಲ್ಲ.!!
NPCI ಮ್ಯಾಪಿಂಗ್ ಸಮಸ್ಯೆಯಿಂದ ಹಣ ಬರದ ಹಲವು ಜನರು ಈ ರೀತಿ ಪೋಸ್ಟ್ ಅಪೀಸ್/ಅಂಚೆ ಕಚೇರಿಯಲ್ಲಿ ಉಳಿತಾಯ ಖಾತೆ ತೆರೆದ ಬಳಿಕ ಹಣ ಜಮಾ ಅಗಿದೆ ಎಂದು ತಿಳಿಸಿರುತ್ತಾರೆ.
ನಿಮ್ಮ ಅರ್ಜಿ ಸ್ಥಿತಿಯನ್ನು ಒಮ್ಮೆ ಚೆಕ್ ಮಾಡಿಕೊಳ್ಳಿ:
ಗೃಹಲಕ್ಷ್ಮಿ ಯೋಜನೆಗೆ ಅರ್ಜಿ ಸಲ್ಲಿಸಿದೆವೆ ಇನ್ನು ನಮಗೆ ಹಣ ಬಂದಿಲ್ಲ ಎಲ್ಲಿ ಈ ಕುರಿತು ವಿಚಾರಿಸಬೇಕು? ನಮ್ಮ ಅರ್ಜಿ ಯಾವ ಹಂತದಲ್ಲಿದೆ? ಏನು ಕಥೆ? ಎಂದು ಅನೇಕ ಜನರಿಗೆ ಯಾವ ಕಚೇರಿಯನ್ನು ಭೇಟಿ ಮಾಡಬೇಕು? ಆ ಕಚೇರಿ ನಮ್ಮ ತಾಲ್ಲೂಕಿನಲ್ಲಿ ಎಲ್ಲಿ ಇದೆ ಎಂದು? ತಿಳಿದಿರುವುದಿಲ್ಲ.
ಅದ ಕಾರಣ ಇಲ್ಲಿಯವರೆಗೆ ಅರ್ಜಿ ಸಲ್ಲಿಸಿದ ಬಳಿಕವು ಹಣ ಜಮಾ ಅಗದಿರುವ ಫಲಾನುಭವಿಗಳು ಇಲ್ಲಿ ಕ್ಲಿಕ್ ಮಾಡಿ> CDPO office address ನಿಮ್ಮ ತಾಲ್ಲೂಕಿನ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ(CDPO office) ಕಚೇರಿಯನ್ನು ಅಗತ್ಯ ದಾಖಲಾತಿಗಳೊಂದಿಗೆ(ಅಧಾರ್ ಕಾರ್ಡ, ಬ್ಯಾಂಕ್ ಪಾಸ್ ಬುಕ್, ರೇಷನ್ ಕಾರ್ಡ, ಮೊಬೈಲ್ ಸಂಖ್ಯೆ) ಭೇಟಿ ಮಾಡಿ ನಿಮ್ಮ ಅರ್ಜಿ ಯಾವ ಹಂತದಲ್ಲಿದೆ ನಿಮಗೆ ಹಣ ಜಮಾ ಅಗದಿರುವ ಕಾರಣವೇನು? ಎಂದು ತಿಳಿದು ಅರ್ಜಿ ಸರಿಪಡಿಸಲು ಯಾವ ಕ್ರಮ ಅನುಸರಿಸಬೇಕು ಎಂದು ಮಾಹಿತಿ ತಿಳಿದುಕೊಂಡು ನಿಮ್ಮ ಅರ್ಜಿಯನ್ನು ಸರಿಪಡಿಸಿಕೊಳ್ಳಿ.
ಈ ಅಂಕಣದಲ್ಲಿ ವಿವರಿಸಿರುವ ಮಾಹಿತಿಯು ನಿಮಗೆ ಉಪಯುಕ್ತ ಅನಿಸಿದಲ್ಲಿ ತಪ್ಪದೇ ನಿಮ್ಮ ಬಳಿಯಿರುವ ವಾಟ್ಸಾಪ್ ಗುಂಪುಗಳಿಗೆ ಶೇರ್ ಮಾಡಿ ಈ ಯೋಜನೆಯಡಿ ಇಲ್ಲಿಯವರೆಗೆ ಹಣ ಪಡೆಯದೇ ಇರುವ ಅರ್ಜಿದಾರರಿಗೆ ಈ ಮಾಹಿತಿ ನೆರವಾಗುತ್ತದೆ. ಎಲ್ಲಾರಿಗೂ ಈ ಯೋಜನೆಯಡಿ ಅರ್ಥಿಕ ನೆರವು ಸಿಗುವಂತಾಗಲಿ ಧನ್ಯವಾದಗಳು ಶುಭ ದಿನ.
ಅಂಗನವಾಡಿ ಕಾರ್ಯಕರ್ತೆಯರ ಬಳಿ ಪಟ್ಟಿ:
ರಾಜ್ಯಾದ್ಯಂತ ಗೃಹಲಕ್ಷ್ಮಿ ಯೋಜನೆಯಡಿ ಅರ್ಜಿ ಸಲ್ಲಿಸಿ ತಾಂತ್ರಿಕ ಸಮಸ್ಯೆಯಿಂದ ಹಣ ಬರದವರ ಹಳ್ಳಿವಾರು ಪಟ್ಟಿಯನ್ನು ಗ್ರಾಮ ಮಟ್ಟದಲ್ಲಿ ಕೆಲಸ ಮಾಡುವ ಅಂಗನವಾಡಿ ಕಾರ್ಯಕರ್ತೆಯರ ಬಳಿ ಈಗಾಗಲೇ ಸಂಬಂಧಪಟ್ಟ ಇಲಾಖೆಯಿಂದ ನೀಡಲಾಗಿದ್ದು ಒಮ್ಮೆ ಗೃಹಲಕ್ಷ್ಮಿ ಯೋಜನೆಯಡಿ ಹಣ ಬರದವರು ನಿಮ್ಮ ಹಳ್ಳಿಯ ಅಂಗನವಾಡಿ ಕಾರ್ಯಕರ್ತೆಯರನ್ನು ಭೇಟಿ ಮಾಡಿ ಆ ಪಟ್ಟಿಯಲ್ಲಿ ನಿಮ್ಮ ಹೆಸರಿರುವುದನ್ನು ಚೆಕ್ ಮಾಡಿಕೊಳ್ಳಿ.
ಇತರೆ ವಿಷಯಗಳು:
RCB ಐಪಿಎಲ್ 2024: ಹರಾಜಿಗೆ ಮೊದಲು ಈ ಅಗ್ರ ಆಟಗಾರನನ್ನು ಕೈಬಿಟ್ಟ ಬಿಸಿಸಿಐ; RCB ಫಾನ್ಸ್‌ಗೆ ನಿರಾಸೆ.?
ಈ ಕಾರ್ಡ್ ಇದ್ದವರ ಖಾತೆಗೆ ಸರ್ಕಾರ ರೂ. 1000 ಜಮಾ!! ಹೊಸ ಪಟ್ಟಿ ಬಿಡುಗಡೆ, ಇಲ್ಲಿಂದ ಪರಿಶೀಲಿಸಿ
ಸಂಗೀತಾ ಶೃಂಗೇರಿ ಸಾಮಾಜಿಕ ಮಾಧ್ಯಮದಲ್ಲಿ ಹಿನ್ನಡೆ; ಟೀಮ್ ಚೇಂಜ್ ಮಾಡಿದ್ದೆ ಮುಳುವಾಯ್ತಾ?