ನಮಸ್ಕಾರ ಸ್ನೇಹಿತರೇ, ಇಂದಿನ ನಮ್ಮ ಈ ಲೇಖನಕ್ಕೆ ನಿಮಗೆಲ್ಲರಿಗೂ ಆತ್ಮೀಯವಾದ ಸ್ವಾಗತ, ರಾಜ್ಯ ಸರ್ಕಾರದ ಮಹತ್ವಕಾಂಕ್ಷೆ ಯೋಜನೆಗಳಲ್ಲಿ ಹೆಚ್ಚು ಅನುದಾನವನ್ನು ಪಡೆದುಕೊಂಡು ಜಾರಿಗೊಳಿಸಲಾಗಿರುವ ಯೋಜನೆ ಎಂದರೇ ಅದು ಗೃಹಲಕ್ಷ್ಮಿ ಯೋಜನೆ(Gruha lakshmi scheme). ಮಹಿಳೆಯರು ಸಾಮಾನ್ಯವಾಗಿ ತಮ್ಮ ದೈನಂದಿನ ಖರ್ಚಿನ ಹೊರೆಯನ್ನು ಸ್ವಲ್ಪವಾದರು ಕಡಿಮೆ ಮಾಡಬೇಕು ಎನ್ನುವ ದೃಷ್ಟಿಯಿಂದ ಸರ್ಕಾರ ಮಹಿಳೆಯರಿಗೆ ಈ ಯೋಜನೆಯಡಿ 2 ಸಾವಿರ ರೂಪಾಯಿಗಳನ್ನು ಪ್ರತಿ ತಿಂಗಳು ಖಾತೆಗೆ ಜಮಾ ಮಾಡುತ್ತಿದೆ.
ಗೃಹಲಕ್ಷ್ಮಿ ಯೋಜನೆಯ ಮೂರು ದಿನಗಳ ಕ್ಯಾಂಪ್ ಯಶಸ್ವಿ!
ರಾಜ್ಯದ ಕೋಟ್ಯಂತರ ಮಹಿಳೆಯರು ಗೃಹಲಕ್ಷ್ಮಿ ಯೋಜನೆಯ ಹಣ ಪಡೆದುಕೊಳ್ಳಲು ಅರ್ಜಿ ಸಲ್ಲಿಸಿದ್ದರು. ಬಹುತೇಕ ಮಹಿಳೆಯರಿಗೆ ಈಗಾಗಲೇ 3 ಕಂತಿನ ಹಣ ಖಾತೆಗೆ ವರ್ಗವಣೆಯಾಗಿದೆ(Money Transfer).
ಆದರೆ ಇನ್ನೂ ಲಕ್ಷಾಂತರ ಮಹಿಳೆಯರ ಖಾತೆಗೆ ಹಣ ಬಂದಿರದೆ ಇರುವುದನ್ನು ಗಮನಿಸಿದ ಸರ್ಕಾರ 3 ದಿನಗಳ ಗ್ರಾಮೀಣ ಮಟ್ಟದ ಕ್ಯಾಂಪ್ ಆಯೋಜನೆ ಮಾಡಿತ್ತು. ಈ ಯೋಜನೆಗೆ ಸಂಬಂಧ ಪಟ್ಟ ಎಲ್ಲಾ ಅಧಿಕಾರಿಗಳು ಕೂಡ ಈ ಶಿಬಿರಕ್ಕೆ ಭಾಗವಹಿಸಿದ್ದು, ಅನೇಕ ಮಹಿಳೆಯರ ಖಾತೆಗೆಯಲ್ಲಿ ಇರುವ ಎಲ್ಲಾ ಸಮಸ್ಯಗಳನ್ನು ಪರಿಹಾರ ಮಾಡಲು ಮಾರ್ಗ ಸೂಚಿಗಳನ್ನು ನೀಡಿದ್ದಾರೆ.
ಮಹಿಳೆಯರ ಬ್ಯಾಂಕ್ ಖಾತೆಗೆ ಆಧಾರ್ ಲಿಂಕ್ ಮಾಡಿಸಿರಲಿಲ್ಲ, ಕೆವೈಸಿ ಮಾಡಿಸಿಕೊಳ್ಳದೆ ಇರುವ ಫಲಾನುಭವಗಳ ಖಾತೆಗೆ ಹಣ ಜಮಾ ಆಗಿಲ್ಲ. ಬ್ಯಾಂಕ್ ಖಾತೆ, ಆಧಾರ್ ಕಾರ್ಡ್ ಹಾಗೂ ರೇಷನ್ ಕಾರ್ಡ್ ನಲ್ಲಿ ಮಹಿಳೆಯರ ಹೆಸರು ಮ್ಯಾಚ್ ಆಗುತ್ತಿರಲಿಲ್ಲ. ಈ ಎಲ್ಲಾ ಸಮಸ್ಯಗಳ ಜೊತೆಗೆ ಇನ್ನಷ್ಟು ತಾಂತ್ರಿಕ ದೋಷಗಳು ಸಹ ಗೃಹಲಕ್ಷ್ಮಿ ಹಣ ಖಾತೆಗೆ ಬರದೆ ಇರುವುದಕ್ಕೆ ಕಾರಣವಾಗಿದೆ.
ಇದೇಲ್ಲ ಸಮಸ್ಯೆಗಳನ್ನು ಹಣ ಬರದೆ ಇರುವ ಮಹಿಳೆಯರು ಪರಿಹರಿಸಿಕೊಂಡರೆ 4 ನೇ ಕಂತಿನ ಹಣ ಬಹುತೇಕ 100% ಮಹಿಳೆರಿಗೆ ಗೃಹಲಕ್ಷ್ಮಿ ಹಣ ಖಾತೆಗೆ ಜಮಾ ಆಗುವುದ ಎಂದು ಸರ್ಕಾರ ತಿಳಿಸಿದೆ.
ಇದನ್ನೂ ಸಹ ಓದಿ: ಮುಂದಿನ 4 ದಿನಗಳ ಕಾಲ ರಾಜ್ಯದಲ್ಲಿ ವರುಣಾರ್ಭಟ.! IMD ಮುನ್ಸೂಚನೆ
ನಾಲ್ಕನೇ ಕಂತಿನ ಹಣ ನಿಮ್ಮ ಖಾತೆಗೆ ಜಮಾ ಆಗಿದೆಯಾ ಇಲ್ವಾ ಅನ್ನೋದನ್ನ ತಿಳಿದುಕೊಳ್ಳಿ!
ಗೃಹಲಕ್ಷಿ ಫಲಾನುಭವಿಗಳಿಗೆ ಪ್ರತಿ ತಿಂಗಳು 20 ನೇ ತಾರೀಖಿನ ಒಳಗೆ ಖಾತೆಗೆ ಹಣ ಜಮಾ ಆಗುತ್ತದೆ. ಅದೇ ರೀತಿ 4ನೇ ಕಂತಿನ ಹಣ ಜನವರಿ 20ನೇ ತಾರೀಖಿನ ಒಳಗೆ ಪ್ರತಿಯೊಬ್ಬರ ಖಾತೆಗೆ ಜಮಾ ಆಗುವ ನಿರೀಕ್ಷೆ ಇದೆ. ಆರಂಭದಲ್ಲಿ 15 ಜಿಲ್ಲೆಗಳಲ್ಲಿ ಈಗಾಗಲೇ 4 ನೇ ಕಂತಿನ ಹಣ ಜಮಾ ಆಗಿದೆ.
ಗೃಹಲಕ್ಷ್ಮಿ ಹಣ 2000 ಖಾತೆಗೆ ಜಮಾ ಆಗಿರುವ ಸಂದೇಶ ಖಾತೆಗೆ ಬಾರದೆ ಇದ್ದರೆ ತಕ್ಷಣವೇ ಬ್ಯಾಂಕ್ಗೆ ಹೋಗಿ ನಿಮ್ಮ ಖಾತೆಯನ್ನು ಚೆಕ್ ಮಾಡಿಕೊಳ್ಳಿ. ಅಥವಾ ಕರ್ನಾಟಕ ಸರ್ಕಾರದ ಅಧಿಕೃತ ಮೊಬೈಲ್ ಅಪ್ಲಿಕೇಶನ್ (mobile application) DBT Karnataka) ನಲ್ಲಿ ಪರಿಶೀಲಿಸಿ, ನಿಮ್ಮ ಮೊಬೈಲ್ ನಲ್ಲಿ ಅಪ್ಲಿಕೇಶನ್ ಡೌನ್ಲೋಡ್ ಮಾಡಿಕೊಳ್ಳಿ.
ನಂತರ ಆಧಾರ್ ನಂಬರ್ ನಮೂದಿಸಿ ಮೊಬೈಲ್‌ಗೆ ಒಂದು OTP ಕಳುಹಿಸಲಾಗುತ್ತದೆ. ಅನ್ನು ನಮೂದಿಸಿ ನಂತರ ಲಾಗಿನ್ ಆಗಿ. ಈಗ ಸರ್ಕಾರದ ಯಾವುದೇ ಯೋಜನೆಯ ಡಿ ಬಿ ಟಿ ಹಣ ನಿಮ್ಮ ಖಾತೆಗೆ ತಲುಪಿದೆಯೋ ಇಲ್ಲವೋ ಎನ್ನುವುದನ್ನು ಚೆಕ್ ಮಾಡಬಹುದು.
ಇತರೆ ವಿಷಯಗಳು:
ರಾಜ್ಯದ 20ಕ್ಕೂ ಹೆಚ್ಚು ಜಿಲ್ಲೆಗಳಲ್ಲಿ ಭಾರಿ ಮಳೆಯಾಗಲಿದೆ : ರಾಜ್ಯದ ಜನತೆಗೆ ಎಚ್ಚರಿಕೆ
ಪ್ರತಿ 1 ಗ್ರಾಂ ಚಿನ್ನಕ್ಕೆ 3 ಸಾವಿರ ಇಳಿಕೆ!! ಅಗ್ಗವಾದ ಚಿನ್ನ! ಬಂಗಾರ ಕೊಳ್ಳೋರಿಗೆ ಬಿಗ್ ಬಂಪರ್!!