rtgh

ಗೃಹಲಕ್ಷ್ಮಿ ಜಿಲ್ಲಾವಾರು ಪಟ್ಟಿ ಬಿಡುಗಡೆ: 4ನೇ ಕಂತಿನ ಪೆಂಡಿಂಗ್ ಹಣ ಕೂಡ ಜಮಾ!

ಹಲೋ ಸ್ನೇಹಿತರೇ, ಇಂದಿನ ನಮ್ಮ ಲೇಖನದಲ್ಲಿ ನಾವು ನಿಮಗೆ ತಿಳಿಸುವಂತಹ ಮಾಹಿತಿ ಏನೆಂದರೆ, ಮಹಿಳೆಯರು ಆರ್ಥಿಕವಾಗಿ ತಮ್ಮ ದೈನಂದಿನ ಖರ್ಚುಗಳನನು ನಿಭಾಯಿಸಲು ಸಹಾಯವಾಗಲಿ ಎಂಬ ಉದ್ದೇಶಕ್ಕಾಗಿ ಸರ್ಕಾರದಿಂದ ಗೃಹಲಕ್ಷ್ಮಿ ಯೋಜನೆಯ ಮೂಲಕ ಕಂತುಗಳ ರೂಪದಲ್ಲಿ ಮಹಿಳೆಯರ ಹಿತದೃಷ್ಟಿಯನ್ನು ಕಾಪಾಡಲು ಸರ್ಕಾರ ಮಹಿಳೆಯರಿಗೆ 2 ಸಾವಿರ ಹಣವನ್ನು ಪ್ರತಿ ತಿಂಗಳು ಸರ್ಕಾರದ ಗ್ಯಾರಂಟೀ ಯೋಜನೆಯಲ್ಲಿ ಒಂದಾದ ಗೃಹಲಕ್ಷ್ಮಿ ಅಡಿಯಲ್ಲಿ ನೇರವಾಗಿ ಫಲಾನುಭವಿಗಳ ಖಾತೆಗೆ ಹಣವನ್ನು ಜಮಾ ಮಾಡಲಾಗುತ್ತಿದೆ.

Gruha lakshmi scheme

ಗೃಹಲಕ್ಷ್ಮಿ ಯೋಜನೆಯ ಮೂರು ದಿನಗಳ ಕ್ಯಾಂಪ್ ಯಶಸ್ವಿ!

ಗೃಹಲಕ್ಷ್ಮಿ ಯೋಜನೆಯ ಹಣವನ್ನು ಪಡೆಯಲು ರಾಜ್ಯದಲ್ಲಿ ಕೋಟ್ಯಾಂತರ ಮಹಿಳೆಯರು ಅರ್ಜಿ ಸಲ್ಲಿಸಿದ್ದರು. ಈಗಾಗಲೇ 3 ಕಂತುಗಳನ್ನು ಬಹುತೇಕ ಮಹಿಳೆಯರ ಖಾತೆಗಳಿಗೆ ವರ್ಗಾವಣೆಯನ್ನು ಮಾಡಲಾಗಿದೆ.

ಇನ್ನೂ ಲಕ್ಷಾಂತರ ಜನರ ಖಾತೆಗೆ ಹಣವನ್ನು ವರ್ಗಾವಣೆ ಆಗದೇ ಇರುವುದನ್ನು ಗಮನಿಸಿದ ಸರ್ಕಾರ 3 ದಿನಗಳ ಗ್ರಾಮೀಣ ಮಟ್ಟದ ಕ್ಯಾಂಪ್‌ ಗಳನ್ನು ಆಯೋಜನೆ ಮಾಡಿತ್ತು. ಈ ಯೋಜನೆಗೆ ಸಂಬಂಧಪಟ್ಟ ಎಲ್ಲಾ ಅಧಿಕಾರಿಗಳು ಕೂಡ ಈ ಶಿಬಿರದಲ್ಲಿ ಭಾಗವಹಿಸಿದ ಸಾಕಷ್ಟು ಮಹಿಳೆಯರ ಖಾತೆಯಲ್ಲಿ ಇರುವಂತಹ ಸಮಸ್ಯೆಗಳನ್ನು ಪರಿಹಾರ ಮಾಡಲಾಗಿದೆ.

ಮಹಿಳೆಯರ ಬ್ಯಾಂಕ್‌ ಖಾತೆಗೆ ಆಧಾರ್ ಲಿಂಕ್‌ ಆಗಿರಲಿಲ್ಲ. KYC ಮಾಡಿಸಿಕೊಳ್ಳದೆ ಇರುವಂತಹ ಮಹಿಳೆಯರ ಖಾತೆಗೆ ಹಣವನ್ನು ಬ್ಯಾಂಕ್‌ ಖಾತೆಗೆ ವರ್ಗಾವಣೆ ಮಾಡಿಲ್ಲ. ಆಧಾರ್‌ ಕಾರ್ಡ್‌ ಬ್ಯಾಂಕ್‌ ಖಾತೆ ಮತ್ತು ರೇಷನ್‌ ಕಾರ್ಡ್‌ ಮಹಿಳೆಯರ ಹೆಸರು ಹೊಂದಾಣಿಕೆ ಆಗುತ್ತಿರಲಿಲ್ಲ.


ಇದನ್ನು ಸಹ ಓದಿ: 10 ನೇ ತರಗತಿ ಪಾಸ್‌ ಆದವರಿಗೆ ರೈಲ್ವೇ ಇಲಾಖೆಯಲ್ಲಿ ಉದ್ಯೋಗ! ಹೆಚ್ಚು ಸಂಬಳ ಕಡಿಮೆ ದಾಖಲೆಗಳು ಸಾಕು!

ಇಂತಹ ಸಮಸ್ಯೆಗಳ ಜೊತೆಗೆ ಒಂದಷ್ಟು ತಾಂತ್ರಿಕ ದೋಷಗಳು ಕೂಡ ಮಹಿಳೆಯರ ಖಾತೆಗೆ ಗೃಹಲಕ್ಷ್ಮಿ ಹಣವು ಅವರ ಖಾತೆಗೆ ವರ್ಗಾವಣೆ ಆಗದೇ ಇರುವುದಕ್ಕೆ ಕಾರಣಗಳಾಗಿವೆ.

ಇದೀಗ ಇವೆಲ್ಲಾ ಸಮಸ್ಯೆಗಳನ್ನು ಮಹಿಳೆಯರು ಪರಿಹರಿಸಿಕೊಳ್ಳಲು ಸಾಧ್ಯವಾಗಿದ್ದು 4 ನೇ ಕಂತಿನ ಹಣವು ಬಹುತೇಕ 100% ಎಲ್ಲಾ ಮಹಿಳೆಯರ ಖಾತೆಗೆ ಜಮಾವಾಗಿದೆ. ಎಂದೇ ಹೇಳಬಹುದು. ಇನ್ನು ಹೆಚ್ಚಿನ ಮಾಹಿಳೆಯರ ಖಾತೆಗೆ ಜಮಾ ಆಗಲಿದೆ ಎಂದು ರಾಜ್ಯ ಸರ್ಕಾರ ತಿಳಿಸಿದೆ.

ನಾಲ್ಕನೇ ಕಂತಿನ ಹಣ ನಿಮ್ಮ ಖಾತೆಗೆ ಜಮಾ ಆಗಿದೆಯಾ ಇಲ್ವಾ ಅನ್ನೋದನ್ನ ತಿಳಿದುಕೊಳ್ಳಿ!

ಜನವರಿ 20 ನೇ ತಾರೀಖಿನ ಒಳಗೆ ಪ್ರತಿಯೊಬ್ಬರ ಖಾತೆಗೂ ಕೂಡ 4 ನೇ ಕಂತಿನ ಹಣ ಜಮಾವಾಗುವ ನಿರೀಕ್ಷೆ ಇದೆ. ಆರಂಭದಲ್ಲಿಯೇ 15 ಜಿಲ್ಲೆಗಳಿಗೆ 4 ನೇ ಕಂತಿನ ಹಣ ಬಿಡುಗಡೆಯಾಗಿದ್ದು ನಿನ್ನೆ ಅಂದರೆ 3 ಜನವರಿ 2024 ರಂದು ಕೆಲವು ಜಿಲ್ಲೆಗಳ ಮಹಿಳೆಯರಿಗೆ ಗೃಹಲಕ್ಷ್ಮಿ ಹಣ ವರ್ಗಾವಣೆಯಾಗಿದೆ.

ನಿಮಗೆ 2 ಸಾವಿರ ಹಣ ಜಮಾ ಆಗಿದೆಯಾ ಎಂಬುದರ ಬಗ್ಗೆ ಮೊಬೈಲ್‌ ಗೆ ಸಂದೇಶ ಬರದಿದ್ದರೆ ತಕ್ಷಣವೇ ಬ್ಯಾಂಕ್‌ಗೆ ಹೋಗಿ ನಿಮ್ಮ ಖಾತೆಯನ್ನು ಪರಿಶೀಲನೆ ಮಾಡಿ ಅಥವಾ ಕರ್ನಾಟಕ ಸರ್ಕಾರದ ಅಧಿಕೃತ ಮೊಬೈಲ್‌ ಅಪ್ಲೀಕೇಶನ್‌ ಮೂಲಕ ನೀವು ಚೆಕ್‌ ಮಾಡಬಹುದಾಗಿದೆ.

ನಂತರ ಆಧಾರ್‌ ಸಂಖ್ಯೆಯನ್ನು ನಮೂದಿಸಿ ಮೊಬೈಲ್‌ ಗೆ OTP ಕಳುಹಿಸಲಾಗುತ್ತದೆ. ಅದನ್ನು ಬಾಕ್ಸ್‌ ಒಳಗೆ ನಮೂದಿಸಿ ಬಳಿಕ ಲಾಗಿನ್‌ ಆಗಿ. ಸರ್ಕಾರದ ಯಾವುದೇ ಯೋಜನೆಯು ಡಿಬಿಟಿ ಮೂಲಕ ಹಣ ನಿಮ್ಮ ಖಾತೆಗೆ ಬಂದಿದೆಯೋ ಇಲ್ಲವೋ ಎಂಬುದನ್ನು ಚೆಕ್‌ ಮಾಡಬಹುದಾಗಿದೆ.

ಇತರೆ ವಿಷಯಗಳು:

ಟ್ರ್ಯಾಕ್ಟರ್ ಖರೀದಿಯ ಮೇಲೆ 2.50 ಲಕ್ಷ ರೂ. ಸಬ್ಸಿಡಿ ಲಭ್ಯ, ಈ ಪ್ರಯೋಜನಗಳನ್ನು ಪಡೆಯಿರಿ

16 ಜಿಲ್ಲೆಗಳ ರೈತರಿಗೆ ಶೇ.75 ರಷ್ಟು ಬೆಳೆ ವಿಮೆ ಬಿಡುಗಡೆ..! ಸರ್ಕಾರದಿಂದ ಹೊಸ ಸುದ್ದಿ

Leave a Comment