rtgh

ವಿದ್ಯುತ್‌ ಇಲಾಖೆಯಿಂದ ಗ್ರಾಹಕರಿಗೆ ಶಾಕ್: ಕರೆಂಟ್‌ ಬಿಲ್‌ ಮತ್ತೆ ಹೆಚ್ಚಳ!

ನಮಸ್ಕಾರ ಸ್ನೇಹಿತರೇ, ಇಂದಿನ ನಮ್ಮ ಈ ಲೇಖನಕ್ಕೆ ನಿಮಗೆಲ್ಲರಿಗೂ ಆತ್ಮೀಯವಾದ ಸ್ವಾಗತ, ಹೊಸ ವರ್ಷದಲ್ಲಿ ಸ್ವಲ್ಪವಾದರೂ ಬೆಲೆ ಇಳಿಕೆಯಾಗಲಿ ಎಂದು ಜನರು ಬಯಸಿದರೆ, ರಾಜ್ಯ ಸರ್ಕಾರ ಗ್ರಾಹಕರಿಗೆ ಶಾಕ್‌ ನೀಡಿದೆ. ಮತ್ತೆ ವಿದ್ಯುತ್‌ ಬಿಲ್‌ ಹೆಚ್ಚಾಗುವ ಸಾಧ್ಯತೆ ಇದೆ. ಇದರ ಬಗ್ಗೆ ನಾವು ನಿಮಗೆ ಈ ಲೇಖನದಲ್ಲಿ ಸಂಪೂರ್ಣ ಮಾಹಿತಿಯನ್ನು ನೀಡುತ್ತೇವೆ, ಮಿಸ್‌ ಮಾಡದೆ ಕೊನೆಯವರೆಗೂ ಓದಿ.

Gruha jyothi scheme 2024

ಕರ್ನಾಟಕ ವಿದ್ಯುತ್‌ ಶಕ್ತಿ ನಿಯಂತ್ರಣ ಮಂಡಳಿ ಮತ್ತೊಮ್ಮೆ ಎಲೆಕ್ಟ್ರಿಸಿಟಿ ಬೆಲೆ (electricity price revision) ಪರಿಷ್ಕರಣೆ ಮಾಡಿದೆ. ನಮಗೆಲ್ಲಾ ಗೊತ್ತಿರುವಂತೆ 2023ರಲ್ಲಿ ಗೃಹಜ್ಯೋತಿ ಯೋಜನೆಯ (Gruha jyothi scheme) ಅಡಿಯಲ್ಲಿ ಹಲವಾರು ಕುಟುಂಬಗಳು ಉಚಿತ ವಿದ್ಯುತ್‌ ಪಡೆದುಕೊಳ್ಳುತ್ತಿವೆ.

ಇದರ ಜೊತೆಗೆ ಯೋಜನೆಯ ಲಾಭ ಪಡೆಯದವರು ಹೆಚ್ಚುವರಿ ವಿದ್ಯುತ್‌ ಬಿಲ್‌ ಪಾವತಿಸುತ್ತಿದ್ದರೆ. ಇದೀಗ ಮತ್ತೆ ವಿದ್ಯುತ್‌ ದರ ಹೆಚ್ಚಿಸುವ ಬಿಸಿ ರಾಜ್ಯದ ಜನರಿಗೆ ತಟ್ಟಲಿದೆ.

ವಿದ್ಯುತ್ ದರ ಹೆಚ್ಚಳಕ್ಕೆ ಸರ್ಕಾರದ ಚಿಂತನೆ!

ಇದು ನಿಜಕ್ಕೂ ರಾಜ್ಯದ ಜನರನ್ನು ಸಂಕಷ್ಟಕ್ಕೆ ತಳ್ಳಬಹುದು. ಗೃಹಜ್ಯೋತಿ ಯೋಜನೆಯಡಿಯಲ್ಲಿ 200 ಯೂನಿಟ್‌ ಉಚಿತ ವಿದ್ಯುತ್‌ ಅನ್ನು ಎಲ್ಲಾ ಫಲಾನುಭವಿಗಳಿಗೆ ನೀಡಲಾಗುತ್ತದೆ, ಇದರಿಂದ ಎಸ್ಕಾಂ, ಮೆಸ್ಕಾಂ, ಬೆಸ್ಕಾಂ, ಜೆಸ್ಕಾಂ ಮೊದಲದ ವಿದ್ಯುತ್ ಸರಬರಾಜು ಕಂಪನಿಗಳು ತಮ್ಮ ಕ್ಷೇತ್ರ ಹೆಚ್ಚು ನಷ್ಟ ಅನುಭವಿಸುತ್ತಿದೆ ಎಂದು ವಿದ್ಯುತ್‌ ಬೆಲೆ ಹೆಚ್ಚಿದುವುದಾಗಿ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಿವೆ. ಎಸ್ಕಾಂ ಸಲ್ಲಿಸಿರುವ ಪ್ರಸ್ತಾವನೆಯ ಮೇಲೆ ಕೆಇಆರ್‌ಸಿ ಹೊಸ ದರ ನಿಗದಿ ಪಡಿಸುವ ಸಾಧ್ಯತೆ ಇದೆ ಎಂದು ಹೇಳಲಾಗಿದೆ.


ಇದನ್ನೂ ಸಹ ಓದಿ: ಚಿನ್ನಾಭರಣ ಪ್ರಿಯರಿಗೆ ಗುಡ್‌ ನ್ಯೂಸ್‌: ಸಂಕ್ರಾಂತಿಗೂ ಮುನ್ನ ಚಿನ್ನದ ಬೆಲೆ ಇಳಿಕೆ!

ಲೋಕಸಭಾ ಚುನಾವಣೆಯಿಂದ ಆಗಬಹುದು ದೊಡ್ಡ ಬದಲಾವಣೆ!

ಸಾರ್ವಜನಿಕ ಅದಾಲತ್‌ ನಡೆಸುವುದರ ಮೂಲಕ ವಿದ್ಯುತ್‌ ಬೆಲೆ ಪರಿಷ್ಕರಣೆ ಮಾಡಲಾಗುವುದು ಎನ್ನಲಾಗಿದೆ. ಇದರ ಜೊತೆಗೆ ಸದ್ಯದಲ್ಲಿಯೇ ಲೋಕಸಭ ಚುನಾವಣೆ ನಡೆಯಲ್ಲಿದ್ದು, ಹೊಸ ಬೆಲೆ ಹೊರೆ ಸ್ವಲ್ಪ ವಿಳಂಬ ಆಗಬಹುದು.

ಏಪ್ರಿಲ್ ಮತ್ತು ಮೇ ತಿಂಗಳುಗಳಲ್ಲಿ ಲೋಕಸಭಾ ಚುನಾವಣೆ ದಿನಾಂಕ ಘೋಷಣೆಯಾದರೆ ಸರ್ಕಾರ ಹೊಸ ಬೆಲೆ ಪರಿಷ್ಕರಣೆ ಕಾರ್ಯವನ್ನು ತಾತ್ಕಾಲಿಕವಾಗಿ ಸ್ಥಗಿತಗೊಳಿಸಬಹುದು. ಹೀಗಾಗಿ ಹೊಸ ಬೆಲೆ ಪರಿಷ್ಕರಣೆ ಕಾರ್ಯ ಮುಂದುವರೆದರೆ ಕೆಲವು ತಿಂಗಳುಗಳ ಕಾಲ ವಿದ್ಯುತ್ ದರದಲ್ಲಿ ಸ್ಥಿರತೆ ಕಾಯ್ದುಕೊಳ್ಳಬಹುದು.

ಬ್ಯಾಂಕ್ ಖಾತೆಗೆ ಸಂಬಂಧಿಸಿದಂತೆ RBI ನ ಹೊಸ ನಿಯಮ! ಬ್ಯಾಂಕ್‌ ಗ್ರಾಹಕರಿಗೆ ಗುಡ್‌ ನ್ಯೂಸ್!‌

ಕೇಂದ್ರದಿಂದ ಈ ಜನರಿಗೆ ಸಿಗಲಿದೆ 3 ಲಕ್ಷ! ಜೊತೆಗೆ ಉಚಿತ ಟೂಲ್‌ ಕಿಟ್‌ ವಿತರಣೆ

Leave a Comment