rtgh

Gruha Lakshmi New Update: ಮನೆ ಲಕ್ಷ್ಮಿಯರಿಗೆ 5ನೇ ಕಂತಿನ ಹಣಕ್ಕೆ ಹೊಸ ರೂಲ್ಸ್: ಸರ್ಕಾರದ ಕಡಕ್‌ ಆದೇಶ

ಹಲೋ ಸ್ನೇಹಿತರೇ ನಮ್ಮ ಈ ಲೇಖನಕ್ಕೆ ಸ್ವಾಗತ, ಕಾಂಗ್ರೆಸ್‌ ಸರ್ಕಾರ 5 ಪಂಚ ಯೋಜನೆಗಳನ್ನು ಜಾರಿಗೆ ತಂದಿದೆ ಈ ಯೋಜನೆಯಲ್ಲಿ ಈಗಾಗಲೇ 8000 ರೂಗಳನ್ನು ಕೆಲವರು ಪಡೆದಿದ್ದಾರೆ ಆದರೆ ಹಲವಾರು ಮಹಿಳೆಯರಿಗೆ ಗೃಹಲಕ್ಷ್ಮಿ ಯೋಜನೆಯ ಹಣ ಇನ್ನುವರೆಗೂ ಬಂದಿಲ್ಲ ಯಾಕೆ ಬಂದಿಲ್ಲ ಎಂದು ತಿಳಿದು ಕೂಡಲೆ ಹಣ ಪಡೆಯಲು ಈ ಲೇಖವನ್ನು ಓದಿ.

Grilahakshmi Yojana New Rules

ಯಾರಿಗೆಲ್ಲ ಗೃಹಲಕ್ಷ್ಮಿ ಯೋಜನೆಯ ಹಣ ಜಮಾ ಆಗಿಲ್ಲವೋ, ಅವರಿಗೆ ಹಣ ಬರುವಂತೆ ಮಾಡಲು ರಾಜ್ಯ ಸರ್ಕಾರ ಈಗಾಗಲೇ ಗೃಹಲಕ್ಷ್ಮಿ ಅದಾಲತ್ ಗೃಹಲಕ್ಷ್ಮಿ ಕ್ಯಾಂಪ್ ಮೊದಲಾದ ಉಪಕ್ರಮ ಗಳ ಮೂಲಕ ಖಾತೆಗೆ ಹಣ ಜಮಾ ಮಾಡಲು ಪ್ರಯತ್ನಿಸಿದೆ.

ಗೃಹಲಕ್ಷ್ಮಿ ಯೋಜನೆಯ ಹಣ ಪ್ರತಿ ತಿಂಗಳು ನಿಮ್ಮ ಖಾತೆಗೆ ಜಮಾ ಆಗಬೇಕು ಅಂದ್ರೆ ಸರ್ಕಾರದ ಕೆಲವು ನಿಯಮಗಳನ್ನು ಪಾಲಿಸಲೇಬೇಕು. ಈಗಾಗಲೇ ಸರ್ಕಾರ ನಿಗದಿಪಡಿಸಿರುವ ನಿಯಮಗಳನ್ನು ಪಾಲಿಸದೆ ಇದ್ದರೆ ಅಂತವರ ಖಾತೆಗೆ ಮುಂದಿನ ತಿಂಗಳ ಹಣ ಜಮಾ ಆಗುವುದಿಲ್ಲ ಎಂದು ಸರ್ಕಾರ ತಿಳಿಸಿದೆ.

ಈ ನಿಯಮ ಕಡ್ಡಾಯ

ಗೃಹಿಣಿಯರು 5ನೇ ಕಂತಿನ ಹಣ ತನ್ನ ಖಾತೆಗೆ ಬರಬೇಕು ಎಂದಾದರೆ, ಕಡ್ಡಾಯವಾಗಿ ಈ ಕೆ ವೈ ಸಿ ಮಾಡಿಸಿಕೊಳ್ಳಲೇಬೇಕು. ಈಗಾಗಲೇ ಸರ್ಕಾರ ಹೊರಡಿಸಿರುವ ಮತ್ತೊಂದು ಸುತ್ತೋಲೆಯ ಪ್ರಕಾರ ಗೃಹಲಕ್ಷ್ಮಿ ಯೋಜನೆಯ ಹಣ ಬರಲು ಯಾರ ಹೆಸರಿಗೆ ತೆರೆಯಲಾಗಿದೆಯೋ ಅವರ ಖಾತೆಗೆ ಮಾತ್ರವಲ್ಲದೆ ರೇಷನ್ ಕಾರ್ಡ್ ನಲ್ಲಿ ಹೆಸರು ಇರುವ ಪ್ರತಿಯೊಬ್ಬ ಸದಸ್ಯರು ಕೂಡ ಕೆವೈಸಿ (E-KYC) ಮಾಡಿಸಿಕೊಳ್ಳುವುದು ಕಡ್ಡಾಯವಾಗಿದೆ.


ಇದನ್ನೂ ಸಹ ಓದಿ: 999 ಕ್ಕೆ 5g ಹೊಸ ಸ್ಮಾರ್ಟ್‌ ಫೋನ್: ಹೊಸ ವರ್ಷದ ಮೊದಲ ತಿಂಗಳಲ್ಲಿಯೇ ಗ್ರಾಹಕರಿಗೆ ಜಿಯೋದಿಂದ ಭರ್ಜರಿ ಗಿಫ್ಟ್

ನಿಮ್ಮ ಬ್ಯಾಂಕ್ ಖಾತೆಗೆ ಇಕೆವೈಸಿ ಆಗಿದ್ಯೋ ಇಲ್ಲವೋ ಎಂದು ಚೆಕ್ ಮಾಡುವುದು ಹೇಗೆ?

  • ಮೊದಲು https://ahara.kar.nic.in/Home/EServices ಈ ವೆಬ್ ಸೈಟ್ ಲಿಂಕ್ ಮೇಲೆ ಕ್ಲಿಕ್ ಮಾಡಿ.
  • ಮೂರು ಲೈನ್ ಗಳ ಮೇಲೆ ಕ್ಲಿಕ್ ಮಾಡಿ, ಮೂರನೇ ಆಯ್ಕೆಯಾಗಿರುವ ಈ ಸ್ಥಿತಿಯನ್ನು ಆಯ್ಕೆ ಮಾಡಿ.
  • ಈ ಸ್ಥಿತಿ ಮೇಲೆ ಕ್ಲಿಕ್ (click) ಮಾಡಿದ ನಂತರ, ಹೊಸ ಅಥವಾ ಚಾಲ್ತಿಯಲ್ಲಿರುವ ರೇಷನ್ ಕಾರ್ಡ್ (Ration Card) ತಿದ್ದುಪಡಿ ಸ್ಥಿತಿ ಎನ್ನುವ ಆಯ್ಕೆಯನ್ನು ಕಾಣುತ್ತೀರಿ. ಅದರ ಮೇಲೆ ಕ್ಲಿಕ್ ಮಾಡಿ.
  • ಕ್ಲಿಕ್ ಮಾಡಿದರೆ ನಿಮಗೆ ಹೊಸ ಪುಟ ತೆರೆದುಕೊಳ್ಳುತ್ತದೆ. ಅಲ್ಲಿ ಮೂರು ಲಿಂಕ್ ಗಳನ್ನು ಕಾಣಬಹುದು. ಆ ಲಿಂಕ್ ಗಳ ಕೆಳಗೆ ಕೊಡಲಾಗಿರುವ ಜಿಲ್ಲೆಗಳನ್ನು ನೋಡಿ ನಿಮ್ಮ ಜಿಲ್ಲೆ ಯಾವುದು ಎಂಬುದನ್ನು ಆಯ್ಕೆ ಮಾಡಿ ಅದರ ಮೇಲಿರುವ ಲಿಂಕ್ ಮೇಲೆ ಕ್ಲಿಕ್ ಮಾಡಿ.
  • ಈಗ ಹೊಸ ಪುಟ ತೆರೆದುಕೊಳ್ಳುತ್ತದೆ. ಇಲ್ಲಿ ನೀವು ಓಟಿಪಿ ಅಥವಾ ವಿಥೌಟ್ ಓಟಿಪಿ (without OTP) ಎನ್ನುವ ಆಯ್ಕೆ ಮೇಲೆ ಕ್ಲಿಕ್ ಮಾಡಿ ಲಾಗಿನ್ ಆಗಬೇಕು.
  • ವಿಥ್ ಓಟಿಪಿ ಎಂದು ಆಯ್ಕೆ ಮಾಡಿಕೊಳ್ಳಿ. ನೀವು ನಿಮ್ಮ ರೇಷನ್ ಕಾರ್ಡ್ ಸಂಖ್ಯೆಯನ್ನು ಹಾಕಿದ್ರೆ ನಿಮ್ಮ ಮೊಬೈಲ್ ಸಂಖ್ಯೆಗೆ ಒಂದು ಒಟಿಪಿ ಕಳುಹಿಸಲಾಗುತ್ತದೆ. ನಂತರ ಮೊಬೈಲ್ ಗೆ ಬಂದಿರುವ ಓಟಿಪಿಯನ್ನು ನಮೂದಿಸಿ, ಗೊ (GO) ಎನ್ನುವ ಆಯ್ಕೆಯ ಮೇಲೆ ಕ್ಲಿಕ್ ಮಾಡಿ.
  • ಈಗ ನಿಮ್ಮ ರೇಷನ್ ಕಾರ್ಡ್ ನಲ್ಲಿ ಇರುವ ಯಾರ ಹೆಸರಿಗೆ ಈಕೆವೈಸಿ ಆಗಿದೆ, ಎಂಬುದನ್ನು ಚೆಕ್ ಮಾಡಲು ಸದಸ್ಯರ ಹೆಸರಲ್ಲಿ ಯಾರ ಹೆಸರು ಬೇಕೋ ಆ ಹೆಸರನ್ನು ಆಯ್ಕೆ ಮಾಡಿ.
  • ಬಳಿಕ ನಿಮ್ಮ ಆಯ್ಕೆಯ ಹೆಸರಿಗೆ, ಉಳಿದ ಸದಸ್ಯರ ಹೆಸರಿಗೆ ಕೆವೈಸಿ ಆಗಿದೆಯೋ ಇಲ್ಲವೋ ಎಂದು ತಿಳಿಯಬಹುದು. ಆಗಿದ್ದರೆ ಎಸ್ ಎನ್ನುವ ಸಂದೇಶ ಕಾಣುತ್ತೀರಿ.

ಈ ರೀತಿ ನೀವು ಕೆವೈಸಿ ಮಾಹಿತಿ ಪಡೆದುಕೊಳ್ಳಿ. ಒಂದು ವೇಳೆ ನಿಮ್ಮ ಕೆವೈಸಿ ಆಗದೇ ಇದ್ದರೆ, ಬ್ಯಾಂಕ್ (Bank) ಗೆ ಹೋಗಿ ಕೂಡಲೇ ಈ ಕೆ ವೈ ಸಿ, ಮಾಡಿಸಿಕೊಳ್ಳಿ. ಒಂದು ವೇಳೆ ಕೆವೈಸಿ ಆಗದೆ ಇದ್ದರೆ, ಮುಂದಿನ ತಿಂಗಳ ಗೃಹ ಲಕ್ಷ್ಮಿ ಹಣ ಫಲಾನುಭವಿ ಮಹಿಳೆಯ ಖಾತೆಗೆ ಬರುವುದಿಲ್ಲ ಎಂದು ತಿಳಿದು ಬಂದಿದೆ.

ಇತರೆ ವಿಷಯಗಳು:

Leave a Comment