rtgh

ಗೃಹಲಕ್ಷ್ಮಿ ಹಣ ಬರಲಿಲ್ವಾ? ನಾಳೆಯೇ ಗ್ರಾಮ ಪಂಚಾಯಿತಿಗೆ ಹೋಗಿ ಇದನ್ನು ಮಾಡಿ

ಹಲೋ ಸ್ನೇಹಿತರೇ ನಮಸ್ಕಾರ, ನಿಮಗೆಲ್ಲರಿಗೂ ನಮ್ಮ ಲೇಖನಕ್ಕೆ ಸ್ವಾಗತ, ಗೃಹಲಕ್ಷ್ಮಿ ಹಣ ಪಡೆಯದೇ ಇದ್ದವರಿಗೆ ಹೊಸ ಮಾರ್ಗ ಸೂಚಿಯನ್ನು ಸರ್ಕಾರ ಬಿಡುಗಡೆ ಮಾಡಿದೆ. ಗೃಹಲಕ್ಷ್ಮಿ ಯೋಜನೆಯನ್ನು ಪ್ರಿತಶತ 100% ರಷ್ಟು ಯಶಸ್ವಿಯಾಗಿಸಲು ರಾಜ್ಯ ಸರ್ಕಾರ ನಿರ್ಧರಿಸಿದ್ದು, ಈಗಲೇ ಮಾನ್ಯ ಮುಖ್ಯಮಂತ್ರಿಯವರ ನೇತೃತ್ವದಲ್ಲಿ ಪರಿಶೀಲನೆ ಸಭೆ ನಡೆಸಿ ಮಹಿಳೆಯರಿಗೆ ಗೃಹಲಕ್ಷ್ಮಿ ಪ್ರತಿ ಕಂತಿನ ಹಣ ಜಮೆ ಮಾಡಲು ಹೊಸ ಪ್ಲಾನ್‌ ಅನ್ನು ಸರ್ಕಾರ ಮಾಡಿದೆ. ಈ ಹೊಸ ಪ್ಲಾನ್‌ ಏನೆಂದು ನಾವು ಇಂದಿನ ಲೇಖನದಲ್ಲಿ ತಿಳಿಸಿದ್ದೇವೆ.

Grilahakshmi Camp in Gram Panchayat

ಗ್ರಾಮ ಪಂಚಾಯಿತಿ ಮಟ್ಟದಲ್ಲಿ ಕ್ಯಾಂಪ್:‌

ಅರ್ಜಿ ಸಲ್ಲಿಸಿದ ಎಲ್ಲಾ ಮಹಿಳೆಯರಿಗೆ ಹಣ ವರ್ಗಾವಣೆ ಮಾಡಲಾಗಿದೆ. ಆದರೆ ಕೆಲವು ತಾಂತ್ರಿಕ ದೋಷಗಳಿಂದ ಎಲ್ಲರ ಖಾತೆಗೆ ಹಣ ಜಮೆ ಆಗುತ್ತಿಲ್ಲ. ಈ ಕಾರಣಕ್ಕಾಗಿ ಡಿಸೆಂಬರ್‌ ಅಂತ್ಯದೊಳಗೆ ಹಣವನ್ನು ಬಿಡುಗಡೆ ಮಾಡಲು ಸರ್ಕಾರ ನಿರ್ಧರಿಸಿದ್ದು, ಇದಕ್ಕಾಗಿ ಗ್ರಾಮ ಮಟ್ಟದಲ್ಲಿ ಕ್ಯಾಂಪ್‌ ಒಂದನ್ನು ನಡೆಸಿ ಮಹಿಳೆಯರಿಗೆ ಖಾತೆಗೆ ಸಂಬಂಧಿಸಿದ ಯಾವುದೇ ಸಮಸ್ಯೆ ಇದ್ದರೆ ಇದನ್ನು ಪರಿಹರಿಸಲು ಗೃಹಲಕ್ಷ್ಮಿ ಯೋಜನೆಗೆ ಸಂಬಂಧಿಸಿದ ಅಧಿಕಾರಿಗಳು ಪರಿಹರಿಸಬೇಕೆಂದು ತೀರ್ಮಾನಿಸಲಾಗಿದೆ.

ಕ್ಯಾಂಪ್‌ನ ಮುಖ್ಯ ಅಂಶಗಳು:

ಗ್ರಾಮ ಮಟ್ಟದಲ್ಲಿ ಗ್ರಾಮ ಪಂಚಾಯಿತಿ ಅಧಿಕಾರಿಗಳ ನೇತೃತ್ವದಲ್ಲಿ ಕ್ಯಾಂಪ್‌ ನಡೆಯುತ್ತದೆ. ಗೃಹಲಕ್ಷ್ಮಿ ಯೋಜನೆಗೆ ಸಂಬಂಧಿಸಿದ ಎಲ್ಲಾ ತಾಂತ್ರಿಕ ದೋಷಗಳು ಹಾಗೂ ಬ್ಯಾಂಕಿಂಗ್‌ ಸಮಸ್ಯೆಗಳನ್ನು ಪರಿಹರಿಸಲು ಈ ಕ್ಯಾಂಪ್‌ ಅನ್ನು ಆಯೋಜಿಸಲಾಗಿದೆ. ಇಂಡಿಯಾ ಪೋಸ್ಟ್‌ ಪೇಮೆಂಟ್ ಬ್ಯಾಂಕ್‌ IPPB ಸಿಬ್ಬಂದಿ ಹಾಗೂ ಇತರೆ ಬ್ಯಾಂಕ್‌ ಸಿಬ್ಬಂದಿ ಕ್ಯಾಂಪ್‌ನಲ್ಲಿ ಭಾಗವಹಿಸಲಿದ್ದಾರೆ.

ಇದನ್ನು ಸಹ ಓದಿ: ರೇಷನ್‌ ಕಾರ್ಡುದಾರರಿಗೆ ಹೊಸ ನಿಯಮ!! ಜನವರಿ 1 ರಿಂದ ದೇಶಾದ್ಯಂತ ಜಾರಿ


ಕ್ಯಾಂಪ್‌ನಿಂದ ಮಹಿಳೆಯರಿಗೆ ಏನು ಉಪಯೋಗ:

  • ಹಳೆಯ ಬ್ಯಾಂಕ್‌ ಖಾತೆಗೆ ಕೆವೈಸಿ ಮಾಡಿಸುವುದು.
  • ಹೊಸ ಬ್ಯಾಂಕ್‌ ಖಾತೆ ತೆರೆಯುವುದು.
  • ಆಧಾರ್‌ ಲಿಂಕ್‌ ಮಾಡಿಸುವುದು.
  • ಗೃಹಲಕ್ಷ್ಮಿ ಯೋಜನೆಯ ಅರ್ಜಿ ಸ್ಥಿತಿ ಪರಿಶೀಲಿಸುವುದು.
  • ಗೃಹಲಕ್ಷ್ಮಿ ಯೋಜನೆಗೆ ಸಂಬಂಧಿಸಿದಂತೆ ಹಣ ಬಾರದೇ ಇರುವುದಕ್ಕೆ ಇತರ ಸಮಸ್ಯೆಗಳನ್ನು ಪರಿಹರಿಸುವುದು.

ಕ್ಯಾಂಪ್‌ ನಡೆಯುವ ದಿನಾಂಕ ಮತ್ತು ಸಮಯ;

  • 2023, ಡಿಸೆಂಬರ್‌ 27, 28, 29
  • ಬೆಳಿಗ್ಗೆ 9 ಗಂಟೆಯಿಂದ ಸಂಜೆ 5 ಗಂಟೆಯವರೆಗೆ ನಡೆಯಲಿದೆ.

ಸರ್ಕಾರ ಕೈಗೊಂಡಿರುವ ಎಲ್ಲಾ ಕ್ರಮಗಳಿಂದಾಗಿ ಡಿಸೆಂಬರ್‌ 31, 2023 ರೊಳಗೆ ಬಹುತೇಕ ಎಲ್ಲಾ ಮಹಿಳೆಯರ ಖಾತೆಗೆ ಹಣವನ್ನು ಜಮಾ ಮಾಡಲಾಗುವುದು. ಕ್ಯಾಂಪ್‌ ಗೆ ಭಾಗವಹಿಸುವವರು ನಿಮ್ಮ ಮೊಬೈಲ್‌, ಆಧಾರ್‌ ಕಾರ್ಡ್‌, ರೇಷನ್‌ ಕಾರ್ಡ್‌, ಲಿಂಕ್‌ ಮಾಡಿದ ಬ್ಯಾಂಕ್‌ ಪಾಸ್‌ ಬುಕ್‌ ಅನ್ನು ತೆಗೆದುಕೊಂಡು ಹೋಗಬೇಕು.

ಇತರೆ ವಿಷಯಗಳು:

ಶಾಲಾ ಮಕ್ಕಳಿಗೆ ರಜೆಯ ಸುರಿಮಳೆ!! 14 ದಿನಗಳವರೆಗೆ ಎಲ್ಲಾ ಶಾಲೆಗಳು ಕ್ಲೋಸ್

ಎಲ್ಲಾ ಶಾಲಾ ಮಕ್ಕಳಿಗೆ ಚಳಿಗಾಲದ ರಜೆ ಘೋಷಣೆ!! ಈ ಜಿಲ್ಲೆಗಳ ಶಾಲೆಗಳನ್ನು ಮುಚ್ಚಲು ಸರ್ಕಾರದಿಂದ ಆದೇಶ

Leave a Comment