rtgh

ಜ. 15 ಕ್ಕೆ ರೈತರಿಗೆ ಹಕ್ಕು ಪತ್ರ ವಿತರಣೆ.! ಗುಡ್ ನ್ಯೂಸ್ ಕೊಟ್ಟ ಸಿದ್ದು ಸರ್ಕಾರ

ನಮಸ್ಕಾರ ಸ್ನೇಹಿತರೇ, ಇಂದಿನ ನಮ್ಮ ಈ ಲೇಖನಕ್ಕೆ ನಿಮಗೆಲ್ಲರಿಗೂ ಆತ್ಮೀಯವಾದ ಸ್ವಾಗತ, ರಾಜ್ಯಾದ್ಯಂತ ಸರ್ಕಾರ ಗೋಮಾಳ (Government Property) ಅಥವಾ ಸರ್ಕಾರದ ಇತರ ಜಮೀನುಗಳಲ್ಲಿ ಭೂ ರಹಿತ ರೈತರು ಹಲವಾರು ವರ್ಷಗಳಿಂದ ಸಾಗುವಳಿ ಮಾಡಿಕೊಂಡು ಬಂದಿದ್ದಾರೆ.

Government Property

ಇಂಥವರಿಗೆ ಸರ್ಕಾರ ಈಗ ಅಕ್ರಮ ಸಕ್ರಮ ಯೋಜನೆಯಡಿ ಹಕ್ಕುಪತ್ರ ವಿತರಣೆ (hakku Patra distribution) ಮಾಡಲು ಯಾವುದೇ ಕ್ರಮ ಕೈಗೊಂಡಿರಲಿಲ್ಲ. ಇದೀಗ ಹಕ್ಕು ಪತ್ರ ವಿತರಣೆಗೆ ಸಂಬಂಧ ಪಟ್ಟಂತೆ ರಾಜ್ಯ ಸರ್ಕಾರ ಮಹತ್ವದ ನಿರ್ಧಾರ ಕೈಗೊಂಡಿದೆ.

ಈ ಭಾಗದ ರೈತರಿಗೆ ಹಕ್ಕು ಪತ್ರ ವಿತರಣೆ!

ರಾಜ್ಯದಲ್ಲಿ ಮಲೆನಾಡು ಮತ್ತು ಕರಾವಳಿ ಭಾಗಗಳಲ್ಲಿ ಕಳೆದ ಕೆಲವು ವರ್ಷಗಳಿಂದ ಹಕ್ಕು ಪತ್ರ ವಿತರಣೆ ಮಾಡದೆ ಈ ಕೆಲಸ ನೆನೆಗುದುಗೆ ಬಿದ್ದಿದೆ. ಕರಾವಳಿ ಹಾಗೂ ಮಲೆನಾಡು ವಿಭಾಗದಲ್ಲಿ ಇಲ್ಲಿಯಬರೆಗೆ ಸರಿ ಸುವಮಾರು 13,750 ಅರ್ಜಿಗಳು ಸಲ್ಲಿಕೆ ಆಗಿದ್ದುಅರಣ್ಯ ಇಲಾಖೆ ಸಚಿವರು ಇವುಗಳ ವಿತರಣೆಯ ಬಗ್ಗೆ ಕ್ರಮ ಕೈಗೊಳ್ಳುವುದಾಗಿ ತಿಳಿಸಿದ್ದಾರೆ.

ಇದನ್ನೂ ಸಹ ಓದಿ: ಸರ್ಕಾರದಿಂದ ಉಚಿತ ಸೋಲಾರ್ ಪ್ಯಾನೆಲ್‌.! ಅರ್ಜಿ ಸಲ್ಲಿಸಲು ಇನ್ನು ಕೆಲವೇ ದಿನ ಬಾಕಿ


ಒಟ್ಟು 31,864 ಎಕರೆಯ ಭೂಮಿಗೆ ಹಕ್ಕು ಪತ್ರ ನೀಡಲು ಅರ್ಜಿಗಳು ಸಲ್ಲಿಕೆ ಆಗಿತ್ತು. ಇದರಲ್ಲಿ ಸರ್ಕಾರ ಈಗ 7 ಸಾವಿರ ಹಕ್ಕು ಪತ್ರ ವಿತರಣೆ ಮಾಡಲು ಮುಂದಾಗಿದೆ. 3 ಎಕರೆಗಿಂತ ಹೆಚ್ಚಿನ ಭೂಮಿಗೆ ಹಕ್ಕು ಪತ್ರ ವಿತರಣೆ ಮಾಡಲು ಸಾಧ್ಯವಿಲ್ಲ ಎಂದು ಸಚಿವ ಈಶ್ವರ್‌ ಖಂಡ್ರೆ ಮಾಹಿತಿ ನೀಡಿದ್ದಾರೆ, ಏಕೆಂದರೆ ಈಗಾಗಲೇ ಸರ್ಕಾರಿ ಭೂಮಿ ಕೊರತೆ ಉಂಟಾಗಿರುವುದರಿಂದ, ಈ ನಿರ್ಧಾರ ಕೈಗೊಳ್ಳಲಾಗಿದೆ.

ಯಾರಿಗೆ ಸಿಗಲಿದೆ ಹಕ್ಕು ಪತ್ರ?

ಅರಣ್ಯ ಸಂರಕ್ಷಣಾ ಕಾಯ್ದೆ (forest conservation act) 1980 ಕ್ಕೂ ಮೊದಲು ಅರಣ್ಯ ಭಾಗದಲ್ಲಿ ಸಾಗುವಳಿ ಮಾಡುತ್ತಿದ್ದ ರೈತರಿಗೆ ಮಾತ್ರ ಈ ಹಕ್ಕು ಪತ್ರ ನೀಡಲಾಗುವುದು. ಹಕ್ಕು ಪತ್ರ ವಿತರಣೆ ಹಂತ ಆರಂಭವಾಗಿದ್ದು, ಜನವರಿ ಅಂತ್ಯದೊಳಗೆ ಸುಮಾರು 7 ಸಾವಿರ ಅರ್ಜಿಗಳನ್ನು ವಲೇವಾರಿ ನಡೆಯಲಿದೆ.

ಅಪ್ರಾಪ್ತ ಮಕ್ಕಳು ವಾಹನ ಚಾಲನೆ ಮಾಡಿ ಸಿಕ್ಕಿಬಿದ್ದರೆ 3 ವರ್ಷ ಜೈಲು, ಹಾಗೂ 25 ಸಾವಿರ ದಂಡ

ರೈತರಿಗಾಗಿ ಸರ್ಕಾರದ ಹೊಸ ಪ್ಲಾನ್.!!‌ ನಿಮ್ಮ ಜಮೀನು ಇನ್ಮುಂದೆ ಫುಲ್‌ ಸೇಫ್

Leave a Comment